ETV Bharat / sports

ಟೆಸ್ಟ್​ ಸರಣಿಗೂ ಮುನ್ನ ದುಲೀಪ್​ ಟ್ರೋಫಿ ಆಡಲು ನಿರಾಕರಿಸಿದ್ರು ಕೊಹ್ಲಿ, ರೋಹಿತ್​, ಬುಮ್ರಾ: ಇದೇ ಸೋಲಿಗೆ ಕಾರಣವಾಯ್ತಾ? - DULEEP TROPHY

ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಸರಣಿಗೂ ಮುನ್ನ ದುಲೀಪ್​ ಟ್ರೋಫಿ ಆಡಲು ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ಬುಮ್ರಾ, ಅಶ್ವಿನ್​ ನಿರಾಕರಿಸಿದ್ದರು.

ರೋಹಿತ್​, ಕೊಹ್ಲಿ, ಬುಮ್ರಾ
ರೋಹಿತ್​, ಕೊಹ್ಲಿ, ಬುಮ್ರಾ (IANS)
author img

By ETV Bharat Sports Team

Published : Nov 4, 2024, 3:01 PM IST

ಹೈದರಾಬಾದ್​: ತವರಿನಲ್ಲಿ ನಡೆದ ನ್ಯೂಜಿಲೆಂಡ್​ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಕಳೆದುಕೊಂಡಿದೆ. 92 ವರ್ಷಗಳ ಭಾರತೀಯ ಕ್ರಿಕೆಟ್​ ಇತಿಹಾಸದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ 3 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ವೈಟ್​ವಾಶ್​ ಆಗಿದೆ. ಇದರ ಬೆನ್ನಲ್ಲೇ ಹಿರಿಯ ಆಟಗಾರರ ವಿರುದ್ಧ ಜನ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಸರಣಿಯಲ್ಲಿ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ, ಬುಮ್ರಾ ಹೇಳಿಕೊಳ್ಳುವ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಈ ವೈಫಲ್ಯಕ್ಕೆ ಕಾರಣ ದುಲೀಪ್​ ಟ್ರೋಫಿ ಆಡದೇ ಇರುವುದು ಎನ್ನಲಾಗುತ್ತಿದೆ.

ದುಲೀಪ್​ ಟ್ರೋಫಿ ನಿರಾಕರಿಸಿದ ಹಿರಿಯ ಆಟಗಾರರು: ಸೆಪ್ಟೆಂಬರ್​ ತಿಂಗಳಿನಲ್ಲಿ ಬೆಂಗಳೂರು ಮತ್ತು ಅನಂತಪುರದಲ್ಲಿ ದುಲೀಪ್​ ಟ್ರೋಫಿ ನಡೆದಿತ್ತು. ಹಲವು ಅಂತಾರಾಷ್ಟ್ರೀಯ ಕ್ರಿಕೆಟಿಗರೂ ಈ ಸರಣಿಯಲ್ಲಿ ಆಡಿದ್ದರು. ಆದರೆ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ಜಸ್ಪ್ರೀತ್​ ಬುಮ್ರಾ ಮಾತ್ರ ಆಡಿರಲಿಲ್ಲ. ಈ ಮೂವರಿಗೆ ದುಲೀಪ್​ ಟ್ರೋಫಿ ಆಡುವಂತೆ ಬಿಸಿಸಿಐ ಕೂಡ ತಿಳಿಸಿತ್ತು. ಸರಣಿ ಆರಂಭಕ್ಕೂ ಮುನ್ನ ದುಲೀಪ್​ ಟ್ರೋಫಿ ಆಡುವುದಾಗಿ ಒಪ್ಪಿಕೊಂಡಿದ್ದ ವಿರಾಟ್​, ರೋಹಿತ್​, ಅಶ್ವಿನ್​ ನಂತರ ಸರಣಿ ಆರಂಭವಾದ ವೇಳೆ ವಿಶ್ರಾಂತಿ ಪಡೆಯುವುದಾಗಿ ಹೇಳಿ ಆಡಲು ನಿರಾಕರಿಸಿದರು.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ (IANS)

ಇದರಿಂದಾಗಿ ಸರಿಯಾದ ಅಭ್ಯಾಸವಿಲ್ಲದೆ ಹಿರಿಯ ಆಟಗಾರರು ನೇರವಾಗಿ ಕಿವೀಸ್​ ವಿರುದ್ಧ ಸರಣಿಗಿಳಿದು ವಿಫಲರಾಗಿದ್ದಾರೆ. ದುಲೀಪ್​ ಟ್ರೋಫಿಯಲ್ಲಿ ಆಡಿದ್ದರೇ ಈ ಪರಿಸ್ಥಿತಿ ಬರ್ತಿರಲಿಲ್ಲ ಎಂದು ಕ್ರಿಕೆಟ್​ ಪಂಡಿತರು ಟೀಕಿಸಿದ್ದಾರೆ. ಯಾವುದೇ ಸರಣಿ ಮುಗಿದ ನಂತರ ವಿರಾಮ ಪಡೆದ ಮೇಲೆ ಮುಂದಿನ ಪಂದ್ಯಗಳಿಗಾಗಿ ಅಭ್ಯಾಸ ಪಂದ್ಯಗಳಲ್ಲಿ ಭಾಗಿಯಾಗುವುದು ಉತ್ತಮ ಎಂದಿದ್ದಾರೆ.

ಸುನೀಲ್​ ಗವಾಸ್ಕರ್​: ಬಾಂಗ್ಲಾದೇಶದ ಮೇಲೆ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ ಕಿವೀಸ್​ ವಿರುದ್ಧವೂ ಗೆಲ್ಲಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೇ ಕಿವೀಸ್​ ಅತ್ಯುತ್ತಮ ಪ್ರದರ್ಶನ ತೋರಿ ಗೆಲುವು ಸಾಧಿಸಿದೆ. ಐಪಿಎಲ್​ನಲ್ಲಿ ಆಡಿರುವ ಅವರು ಇಲ್ಲಿನ ಪಿಚ್​ಗಳ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡಿದ್ದಾರೆ. ಮತ್ತೊಂದೆಡೆ ಭಾರತ ಸ್ಪಿನ್​ ದಾಳಿಯನ್ನು ಎದುರಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಸರಿಯಾದ ತಯಾರಿಯ ಕೊರತೆಯೇ ಕಾರಣ ಎಂದು ಮಾಜಿ ಕ್ರಿಕೆಟಿಗ ಸುನೀಲ್​ ಗವಾಸ್ಕರ್​ ಕೂಡ ಅಭಿಪ್ರಾಯಪಟ್ಟಿದ್ದಾರೆ.

ರೋಹಿತ್​ ಶರ್ಮಾ
ರೋಹಿತ್​ ಶರ್ಮಾ (IANS)

ರೋಹಿತ್​ ಶರ್ಮಾ: ಕಿವೀಸ್​ ವಿರುದ್ಧ ಸರಣಿ ಸೋಲಿನ ಬಳಿಕ ಅದಕ್ಕೆ ಜವಾಬ್ದಾರಿ ವಹಿಸಿಕೊಂಡಿರುವ ನಾಯಕ ರೋಹಿತ್ ಶರ್ಮಾ, ಸ್ಪಿನ್​ ಬೌಲಿಂಗ್​ ಎದುರಿಸುವಲ್ಲಿ ನಾವು ವಿಫಲವಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ​.

ಇದನ್ನೂ ಓದಿ: ಕೊಹ್ಲಿ, ರೋಹಿತ್​​, ಜಡೇಜಾ, ಅಶ್ವಿನ್​ ವಿರುದ್ಧ ಬಿಸಿಸಿಐ ಗಂಭೀರ ಕ್ರಮದ ಮುನ್ಸೂಚನೆ: ಆಸ್ಟ್ರೇಲಿಯಾ ಪ್ರವಾಸದಲ್ಲೂ ಫೇಲ್​ ಆದ್ರೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.