ETV Bharat / sports

Ind vs Eng 3ನೇ ಟೆಸ್ಟ್​: ರೋಹಿತ್​, ಜಡೇಜಾ ಶತಕ ವೈಭವ; ಪಾದಾರ್ಪಣೆ ಪಂದ್ಯದಲ್ಲೇ ಸರ್ಫರಾಜ್ ಅಬ್ಬರ - India vs England 3rd Test

ಇಂಗ್ಲೆಂಡ್​ ವಿರುದ್ಧ ಮೂರನೇ ಟೆಸ್ಟ್‌ ಪಂದ್ಯದ ಮೊದಲ ದಿನ ಭಾರತ ತಂಡದ ನಾಯಕ ರೋಹಿತ್​ ಶರ್ಮಾ, ರವೀಂದ್ರ ಜಡೇಜಾ ಅವರು ಭರ್ಜರಿ ಶತಕ ಹಾಗೂ ಸರ್ಫರಾಜ್ ಖಾನ್ ಅರ್ಧಶತಕ ಸಿಡಿಸಿ ಮಿಂಚಿದರು.

rohit-jadeja-centuries-take-india-to-326-slash-5-on-opening-day-vs-england
3ನೇ ಟೆಸ್ಟ್​ ಪಂದ್ಯ: ರೋಹಿತ್​, ಜಡೇಜಾ ಭರ್ಜರಿ ಶತಕ; ಪಾದಾರ್ಪಣೆ ಪಂದ್ಯದಲ್ಲೇ ಸರ್ಫರಾಜ್ ಅಬ್ಬರ
author img

By PTI

Published : Feb 15, 2024, 6:31 PM IST

ರಾಜ್​ಕೋಟ್(ಗುಜರಾತ್​): ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ಇಂದಿನಿಂದ ಆರಂಭವಾಗಿರುವ ಮೂರನೇ ಟೆಸ್ಟ್​ ಪಂದ್ಯದ ಮೊದಲ ದಿನದಾಟ ಮುಕ್ತಾಯವಾಗಿದೆ. ಇಂಗ್ಲೆಂಡ್​ ಬೌಲರ್​ಗಳೊಡ್ಡಿದ ಆರಂಭಿಕ ಆಘಾತವನ್ನು ಭಾರತದ ಬ್ಯಾಟರ್​ಗಳು ಮೆಟ್ಟಿನಿಂತರು. ನಾಯಕ ರೋಹಿತ್​ ಶರ್ಮಾ, ರವೀಂದ್ರ ಜಡೇಜಾ ಅವರ ಭರ್ಜರಿ ಶತಕ ಹಾಗೂ ಪಾದಾರ್ಪಣೆ ಪಂದ್ಯದಲ್ಲೇ ಸರ್ಫರಾಜ್ ಖಾನ್ ಅಬ್ಬರದ ಬ್ಯಾಟಿಂಗ್​ ನೆರವಿನಿಂದ ಟೀಂ ಇಂಡಿಯಾ ಬೃಹತ್​ ಮೊತ್ತ ಪೇರಿಸುವತ್ತ ದಿಟ್ಟ ಹೋರಾಟ ನಡೆಸಿದೆ. ತಂಡ ದಿನದಾಟದಂತ್ಯಕ್ಕೆ 5 ವಿಕೆಟ್​ ಕಳೆದುಕೊಂಡು 326 ರನ್​ ಗಳಿಸಿದೆ. ನಾಳೆಗೆ (ಶುಕ್ರವಾರ) ಶತಕವೀರ ಜಡೇಜಾ ಮತ್ತು ಕುಲ್​ದೀಪ್​ ಯಾದವ್​ ಕ್ರೀಸ್​ ಕಾಯ್ದುಕೊಂಡಿದ್ದಾರೆ.

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದು ಸಮಬಲ ಸಾಧಿಸಿವೆ. ಇದೀಗ ಮೂರನೇ ಪಂದ್ಯ ಗೆದ್ದು ಸರಣಿಯಲ್ಲಿ ಮುನ್ನಡೆ ಕಾಯ್ದುಕೊಳ್ಳುವತ್ತ ಎರಡೂ ತಂಡಗಳು ತಮ್ಮ ಚಿತ್ತ ನೆಟ್ಟಿವೆ.

ಇಂದು ಟಾಸ್​ ಗೆದ್ದ ನಾಯಕ ರೋಹಿತ್​ ಶರ್ಮಾ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡರು. ಆದರೆ, ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ಮಾರಕ ಬೌಲಿಂಗ್​ ಎದುರಿಸುವಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ವಿಫಲರಾದರು. ಕಳೆದ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದ ಯಶಸ್ವಿ ಜೈಸ್ವಾಲ್ (10) ಮತ್ತು ಶುಭಮನ್ ಗಿಲ್ (0) ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಪೆವಿಲಿಯನ್​ ಸೇರಿದರು. ಇಬ್ಬರನ್ನು ಮಾರ್ಕ್ ವುಡ್ ಔಟ್‌ ಮಾಡುವಲ್ಲಿ ಯಶ ಕಂಡರು.

ರೋಹಿತ್‌ ಶರ್ಮಾ, ಜಡೇಜಾ ಶತಕದ ಸೊಗಸು: ಮತ್ತೊಂದೆಡೆ, ಎಡಗೈ ಸ್ಪಿನ್ನರ್ ಟಾಮ್ ಹಾರ್ಟ್ಲಿ ಅವರಿಗೆ ರಜತ್ ಪಾಟಿದಾರ್ (5) ವಿಕೆಟ್​ ಒಪ್ಪಿಸಿದರು. ಹೀಗಾಗಿ 9 ಓವರ್​ಗಳಲ್ಲಿ ಕೇವಲ 33 ರನ್​ಗಳಿಗೆ ಪ್ರಮುಖ ಮೂರು ವಿಕೆಟ್​ಗಳನ್ನು ಟೀಂ ಇಂಡಿಯಾ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ನಡುವೆ ರೋಹಿತ್​ ಶರ್ಮಾ ಮತ್ತು ಆಲ್​ರೌಂಡರ್​ ರವೀಂದ್ರ ಜಡೇಜಾ ಒಂದಾಗಿ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ನಾಲ್ಕನೇ ವಿಕೆಟ್​ಗೆ 329 ಎಸೆತಗಳನ್ನು ಎದುರಿಸಿ 204 ರನ್​ಗಳ ಭರ್ಜರಿ ಜೊತೆಯಾಟ ನೀಡಿದರು. 27 ರನ್ ಗಳಿಸಿದ್ದಾಗ ಜೋ ರೂಟ್ ಅವರಿಂದ ಜೀವದಾನ ಪಡೆದ ರೋಹಿತ್, ಅದರ ಪರಿಪೂರ್ಣ ಲಾಭ ಗಳಿಸಿದರು. ಅಲ್ಲದೇ, ಟೆಸ್ಟ್​ ಕ್ರಿಕೆಟ್​ನ 11ನೇ ಶತಕ ಬಾರಿಸಿದರು. ಒಟ್ಟಾರೆ 196 ಎಸೆತಗಳಲ್ಲಿ 14 ಬೌಂಡರಿ, ಮೂರು ಸಿಕ್ಸರ್‌ಸಮೇತ 131 ರನ್ ಗಳಿಸಿ ವಿಕೆಟ್​ ಒಪ್ಪಿಸಿದರು.

ಪಾದಾರ್ಪಣೆ ಪಂದ್ಯದಲ್ಲೇ ಸರ್ಫರಾಜ್‌ ಅಬ್ಬರ: ಮತ್ತೊಂದೆಡೆ, 5ನೇ ಸ್ಥಾನಕ್ಕೆ ಬಡ್ತಿ ಪಡೆದು ಬಂದ ರವೀಂದ್ರ ಜಡೇಜಾ ಸಹ ಅದ್ಭುತವಾದ ಬ್ಯಾಟಿಂಗ್​ ಪ್ರದರ್ಶಿಸಿ ತಮ್ಮ ಮೂರನೇ ಶತಕ ದಾಖಲಿಸಿದರು. ದಿನದಾಟ ಅಂತ್ಯಕ್ಕೆ ಜಡೇಜಾ 212 ಎಸೆತಗಳಲ್ಲಿ 110 ರನ್ ಗಳಿಸಿ ಅಜೇಯರಾಗುಳಿದ್ದಾರೆ. ರೋಹಿತ್​ ನಂತರ ಬ್ಯಾಟಿಂಗ್​ ಬಂದ ಸರ್ಫರಾಜ್ ಖಾನ್ ತಮ್ಮ ಪಾದಾರ್ಪಣೆ ಪಂದ್ಯದಲ್ಲೇ ಬಿರುಸಿನ ಬ್ಯಾಟಿಂಗ್ ಮಾಡಿದರು. 48 ಎಸೆತಗಳಲ್ಲಿ 50 ರನ್​ಗಳ ಗಡಿ ದಾಟಿದ ಸರ್ಫರಾಜ್, ತಮ್ಮ ಸ್ಕೋರ್​ 62​ ಆಗಿದ್ದಾಗ ರನೌಟ್ ಆಗಿ ಇನ್ನಿಂಗ್ಸ್ ಮುಗಿಸಿದರು. ಇಂಗ್ಲೆಂಡ್ ಪರ ಮಾರ್ಕ್ ವುಡ್ ಮೂರು ವಿಕೆಟ್​ ಪಡೆದರೆ, ಟಾಮ್ ಹಾರ್ಟ್ಲಿ ಒಂದು ವಿಕೆಟ್​ ಪಡೆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.