ETV Bharat / sports

ರಿಂಕುಗೆ ದೀಪಾವಳಿಯ ಭರ್ಜರಿ ಬೋನಸ್: 55 ಲಕ್ಷದಿಂದ 13 ಕೋಟಿ ರೂ.ಗೆ ಏರಿಕೆ

IPL ರಿಟೇನ್​​​- ರಿಂಕುಗೆ ಭಾರಿ ಬೆಲೆ ನೀಡಿದ KKR - ಕ್ರಿಕೆಟಿಗನ ಭಾವನಾತ್ಮಕ ವಿಡಿಯೋ ಪೋಸ್ಟ್

ರಿಂಕುಗೆ ದೀಪಾವಳಿಯ ಭರ್ಜರಿ ಬೋನಸ್:  55 ಲಕ್ಷದಿಂದ 13 ಕೋಟಿ ರೂ. ಏರಿಕೆ
ರಿಂಕುಗೆ ದೀಪಾವಳಿಯ ಭರ್ಜರಿ ಬೋನಸ್: 55 ಲಕ್ಷದಿಂದ 13 ಕೋಟಿ ರೂ. ಏರಿಕೆ (Rinku Singh IPL (Source: AP (Left), Getty Images (Right))
author img

By ETV Bharat Sports Team

Published : 2 hours ago

2025 IPL ಆ್ಯಕ್ಷನ್​​ ಬಗ್ಗೆ ಸ್ಪಷ್ಟತೆ ಸಿಕ್ಕಿದೆ. ಎಲ್ಲಾ ಫ್ರಾಂಚೈಸಿಗಳು ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಇನ್ನು ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಯುವ ಆಟಗಾರ ರಿಂಕು ಸಿಂಗ್ ಅವರನ್ನು 13 ಕೋಟಿ ರೂ.ಗಳ ಬೃಹತ್ ಮೊತ್ತ ನೀಡಿ ತನ್ನಲ್ಲೇ ಉಳಿಸಿಕೊಂಡಿದೆ. ಈ ನಡುವೆ ಕೆಕೆಆರ್ ತಂಡ ತನ್ನನ್ನು ಉಳಿಸಿಕೊಂಡಿದ್ದಕ್ಕೆ ರಿಂಕು ಸಿಂಗ್​ ಭಾವುಕರಾಗಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ.

ಈಗಷ್ಟೇ ಶುರುವಾಗಿದೆ: 'ನಮ್ಮ ಪ್ರೇಮಕಥೆ ಈಗಷ್ಟೇ ಶುರುವಾಗಿದೆ. ಪಿಕ್ಚರ್​​ ಇನ್ನೂ ಬಾಕಿ ಇದೆ’ ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಕೆಕೆಆರ್ ಕುಟುಂಬಕ್ಕೆ ನಮಸ್ತೆ. ನಾನು 7 ವರ್ಷಗಳ ಹಿಂದೆಯೇ ಕೋಲ್ಕತ್ತಾ ಜೆರ್ಸಿಯನ್ನು ಧರಿಸಿದ್ದರೂ, ಇದು ನನ್ನ ಏಕೈಕ ಯಶಸ್ಸಿನ ಕಥೆಯಲ್ಲ. ಪ್ರತಿ ಗೆಲುವು ಮತ್ತು ಸೋಲಿನಲ್ಲಿ ಕೆಕೆಆರ್​ ನನ್ನನ್ನು ಬೆಂಬಲಿಸಿದೆ. ಈ ಪ್ರಯಾಣದಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ಕೆಕೆಆರ್ ನನ್ನ ಮೇಲೆ ನಂಬಿಕೆ ಇಟ್ಟಿತ್ತು. ಆ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ನಾನು ಯಶಸ್ವಿಯಾಗಿದ್ದೇನೆ . ಇದೊಂದು ಹೊಸ ಅಧ್ಯಾಯ' ಎಂದು ಧ್ವನಿ ಸಂದೇಶದೊಂದಿಗೆ ವಿಡಿಯೋ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಅಭಿಮಾನಿಗಳು ವೆಲ್ ಡನ್ ಚಾಂಪಿಯನ್, ಆಲ್ ದಿ ಬೆಸ್ಟ್ ಎಂದು ಕಾಮೆಂಟ್ ಸಹ ಮಾಡುತ್ತಿದ್ದಾರೆ.

ದೀಪಾವಳಿ ಬೋನಸ್!: 2024 ರ ಐಪಿಎಲ್ ಸೀಸನ್‌ಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸ್ ರಿಂಕುಗೆ ಆಗ ಕೇವಲ 55 ಲಕ್ಷ ರೂ. ನೀಡಿತ್ತು. ಆ ಸಮಯದಲ್ಲಿ, KKR ಆಡಳಿತದ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟೀಕೆಗಳು ವ್ಯಕ್ತವಾಗಿದ್ದವು. ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತದ ಆಟಗಾರನಿಗೆ ಕಡಿಮೆ ಶುಲ್ಕ ನೀಡುತ್ತಿದ್ದಾರೆ ಎಂದು ನೆಟಿಜನ್ ಗಳು ಕಿಡಿಕಾರಿದ್ದರು. ಆದರೆ, ಈ ಬಾರಿ ಅವರ ಸಂಭಾವನೆ ಹೆಚ್ಚಾಗಿದೆ. ಈ ಬಾರಿ ಕೆಕೆಆರ್ ರಿಂಕುಗೆ ರೂ. 13 ಕೋಟಿ ರೂ ನೀಡಿದೆ. ಅಂದರೆ ಅವರ ಸಂಬಳ ಸುಮಾರು 2000 ಪ್ರತಿಶತದಷ್ಟು ಹೆಚ್ಚಾಗಿದೆ!

ಬಹಳ ದಿನಗಳ ಕಾಲ ಅವಕಾಶ ಸಿಕ್ಕಿರಲಿಲ್ಲ; ರಿಂಕು ಸಿಂಗ್ 2018 ರ ಋತುವಿನಿಂದ KKR ತಂಡದ ಸದಸ್ಯರಾಗಿದ್ದಾರೆ. ಆದರೆ, ಬಹಳ ದಿನವಾದರೂ ಕಣಕ್ಕೆ ಇಳಿಯುವ ಅವಕಾಶ ಸಿಕ್ಕಿರಲಿಲ್ಲ. ಆದರೆ ರಿಂಕು ಸಿಂಗ್​ ಅವರ ಪ್ರತಿಭೆ 2023 ರಲ್ಲಿ ಬೆಳಕಿಗೆ ಬಂತು. ಆ ಸೀಸನ್ ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಕೊನೆಯ ಓವರ್ ನಲ್ಲಿ 5 ಸಿಕ್ಸರ್ ಬಾರಿಸಿ ಕೆಕೆಆರ್ ಗೆಲುವಿಗೆ ಕಾರಣರಾಗಿದ್ದರು ಸಿಂಗ್​​. ಇದರೊಂದಿಗೆ ರಿಂಕು ಸಿಂಗ್ ಹೆಸರು ಫೇಮಸ್ ಆಯಿತು. ಆ ಪಂದ್ಯದ ನಂತರವೂ ರಿಂಕು ತಮ್ಮ ಶಕ್ತಿ ಪ್ರದರ್ಶಿಸಿದರು. ಆ ಋತುವಿನಲ್ಲಿ ಅವರು 149.52 ಸ್ಟ್ರೈಕ್ ರೇಟ್‌ನೊಂದಿಗೆ 474 ರನ್ ಸಿಡಿಸಿ ಗಮನ ಸೆಳೆದರು. 2023ರ ಐಪಿಎಲ್‌ನಲ್ಲಿ ಪ್ರದರ್ಶನ ಕಂಡು ರಾಷ್ಟ್ರೀಯ ತಂಡಕ್ಕೆ ಕರೆ ಬಂದಿತ್ತು. ಅದೇ ವರ್ಷದಲ್ಲಿ, ರಿಂಕು ಐರ್ಲೆಂಡ್ ಪ್ರವಾಸದೊಂದಿಗೆ ಅಂತಾರಾಷ್ಟ್ರೀಯ ಚೊಚ್ಚಲ ಪ್ರವೇಶ ಪಡೆದುಕೊಂಡರು.

ಇವುಗಳನ್ನೂ ಓದಿ:ಐಪಿಎಲ್ ರಿಟೇನ್ ಲಿಸ್ಟ್: ಯಾವ ತಂಡ ಯಾವ ಆಟಗಾರರನ್ನು ಉಳಿಸಿಕೊಂಡಿದೆ?

ರಿಟೇನ್​ ಲಿಸ್ಟ್​ ಘೋಷಣೆಗೆ ಕ್ಷಣಗಣನೆ: ಕೊಹ್ಲಿ ಉಳಸಿಕೊಳ್ಳಲಿದೆಯಾ RCB?

ಸ್ಟಾರ್ ಕ್ರಿಕೆಟಿಗ ಬೆನ್ ಸ್ಟೋಕ್ಸ್ ಮನೆಯಲ್ಲಿ ದರೋಡೆ: ಆಭರಣ, ಪ್ರಶಸ್ತಿ ಪದಕ ಸೇರಿ ಬೆಲೆ ಬಾಳುವ ವಸ್ತುಗಳ ದರೋಡೆ

ಕ್ರಿಕೆಟ್​ ಅಭಿಮಾನಿಗಳಿಗೆ ಡಬಲ್​ ಧಮಾಕ - ರಿಟೇನ್​ ಲಿಸ್ಟ್​ ಘೋಷಸಲಿರುವ ಐಪಿಎಲ್​ ತಂಡಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.