ETV Bharat / sports

ಒಲಿಂಪಿಕ್ಸ್​ 2024: ಕುಸ್ತಿ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ರಿತಿಕಾ ಹೂಡಾಗೆ ಸೋಲು - Paris Olympics 2024

ಭಾರತದ ಯುವ ಕುಸ್ತಿಪಟು ರಿತಿಕಾ ಹೂಡಾ ಮಹಿಳೆಯರ ಕುಸ್ತಿ 76 ಕೆಜಿ ವಿಭಾಗದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಸೋಲನುಭವಿಸಿದ್ದಾರೆ.

ಕುಸ್ತಿ ಕ್ವಾರ್ಟರ್​ ಫೈನಲ್​ನಲ್ಲಿ ರಿತಿಕಾ ಹೂಡಾಗೆ ಸೋಲು
ಕುಸ್ತಿ ಕ್ವಾರ್ಟರ್​ ಫೈನಲ್​ನಲ್ಲಿ ರಿತಿಕಾ ಹೂಡಾಗೆ ಸೋಲು (AP Photos)
author img

By ETV Bharat Sports Team

Published : Aug 10, 2024, 5:39 PM IST

ಪ್ಯಾರಿಸ್ (ಫ್ರಾನ್ಸ್): ಭಾರತದ ಯುವ ಕುಸ್ತಿಪಟು ರಿತಿಕಾ ಹೂಡಾ ಮಹಿಳೆಯರ ಫ್ರೀಸ್ಟೈಲ್ 76 ಕೆಜಿ ಕುಸ್ತಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ್ದಾರೆ.

ಈ ಪಂದ್ಯದಲ್ಲಿ ಭಾರತದ ಯುವ ಕುಸ್ತಿಪಟು 21 ವರ್ಷದ ರಿತಿಕಾ ಹೂಡಾ ಅವರು ಅಗ್ರ ಶ್ರೇಯಾಂಕದ ಕಿರ್ಗಿಸ್ತಾನ್‌ದ ಅಪೆರ್ ಮೆಡೆಟ್ ಕೈಜಿ ವಿರುದ್ಧ ಪರಾಭವಗೊಂಡರು. ಇದಕ್ಕೂ ಮುನ್ನ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ 2024ರ ಯುರೋಪಿಯನ್ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತೆ ಹಂಗೇರಿಯಾದ ಬೆರ್ನಾಡೆಟ್ ನಾಗಿ ಅವರನ್ನು ಎದುರಿಸಿದ್ದರು. ಮಹಿಳೆಯರ 76 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ರಿತಿಕಾ 8ನೇ ಶ್ರೇಯಾಂಕದ ಹಂಗೇರಿಯ ಬರ್ನಾಡೆಟ್ ನಾಗಿ ಅವರನ್ನು 12-2 ಅಂಕಗಳೊಂದಿಗೆ ಸೋಲಿಸಿ ಕ್ವಾರ್ಟರ್ ಫೈನಲ್ ತಲುಪಿದರು.

ಕಳೆದ ವರ್ಷ 23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಯುವ ಆಟಗಾರ್ತಿ ರಿತಿಕಾ ಚಿನ್ನದ ಪದಕ ಗೆದ್ದಿದ್ದರು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಆದರೇ ಅದು ಸಾಧ್ಯವಾಗಲಿಲ್ಲ.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೋಘ ಆಟವಾಡಿದ ರಿತಿಕಾ ಕಿರ್ಗಿಸ್ತಾನದ ವಿಶ್ವ ಚಾಂಪಿಯನ್ ಕುಸ್ತಿಪಟುವಿಗೆ ಹೆಚ್ಚಿನ ಅವಕಾಶಗಳನ್ನು ನೀಡಲಿಲ್ಲ. ಇಡೀ ಬೌಟ್‌ನಲ್ಲಿ ರಿತಿಕಾ ತನ್ನ ಶಕ್ತಿಯನ್ನು ಪ್ರದರ್ಶಿಸಿದರಾದರೂ ದುರದೃಷ್ಟವಶಾತ್ ಸೋಲನ್ನು ಎದುರಿಸಬೇಕಾಯಿತು.

ಕಂಚಿನ ಪದಕ ಆಸೆ ಜೀವಂತ: 76 ಕೆಜಿ ಕುಸ್ತಿಯಲ್ಲಿ ರಿತಿಕಾ ಇನ್ನೂ ರೆಪಿಚೇಜ್ ಮೂಲಕ ಕಂಚಿನ ಪದಕದ ರೇಸ್‌ನಲ್ಲಿದ್ದಾರೆ. ಆದ್ರೆ ಕ್ವಾರ್ಟರ್​ ಫೈನಲ್​​ ವಿಜೇತೆ ಕೈಜಿ ಈ ಈವೆಂಟ್‌ನಲ್ಲಿ ಫೈನಲ್‌ಗೆ ತಲುಪಿದರೆ ಮಾತ್ರ ರಿತಿಕಾ ಕಂಚಿನ ಪದಕ ಪಂದ್ಯವನ್ನು ಆಡಲಿದ್ದಾರೆ.

ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್ ಪದಕಗಳ ಪಟ್ಟಿ: ಅಗ್ರಸ್ಥಾನದಲ್ಲಿ ಅಮೆರಿಕ, ಭಾರತಕ್ಕೆ ಎಷ್ಟನೇ ಸ್ಥಾನ? - Paris Olympics Medal Tally

ETV Bharat Logo

Copyright © 2024 Ushodaya Enterprises Pvt. Ltd., All Rights Reserved.