ETV Bharat / sports

ವಿಶ್ವ ನಂ. 1 ಮ್ಯಾಗ್ನಸ್ ಕಾರ್ಲ್‌ಸೆನ್​ ಮಣಿಸಿದ ಭಾರತದ ಗ್ರ್ಯಾಂಡ್‌ಮಾಸ್ಟರ್ ಪ್ರಗ್ನಾನಂದ - Praggnanandhaa Beats Carlsen - PRAGGNANANDHAA BEATS CARLSEN

ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಗ್ನಾನಂದ ಅವರು ನಾರ್ವೆ ಚೆಸ್ ಟೂರ್ನಿಯಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸೆನ್​ಗೆ ಸೋಲುಣಿಸಿದ್ದಾರೆ.

Praggnanandhaa beats Carlsen
ಮ್ಯಾಗ್ನಸ್ ಕಾರ್ಲ್‌ಸೆನ್, ಪ್ರಗ್ನಾನಂದ (ANI)
author img

By PTI

Published : May 30, 2024, 9:05 AM IST

ಸ್ಟಾವಂಜರ್(ನಾರ್ವೆ): ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಗ್ನಾನಂದ ಇಲ್ಲಿ ನಡೆಯುತ್ತಿರುವ ನಾರ್ವೆ ಚೆಸ್ ಟೂರ್ನಿಯಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ತಮ್ಮ ಚೊಚ್ಚಲ ಕ್ಲಾಸಿಕಲ್ ಗೇಮ್ ಜಯ ಸಾಧಿಸಿದರು. ರ‍್ಯಾಪಿಡ್/ಎಕ್ಸಿಬಿಷನ್ ಗೇಮ್‌ಗಳಲ್ಲಿ ಈ ಹಿಂದೆ ಕಾರ್ಲ್‌ಸೆನ್‌ರನ್ನು ಕೆಲವು ಸಲ ಸೋಲಿಸಿರುವ 18 ವರ್ಷದ ಪ್ರಗ್ನಾನಂದ, ಮೂರು ಸುತ್ತುಗಳ ಬಳಿಕ 5.5 ಅಂಕಗಳೊಂದಿಗೆ ಮೇಲುಗೈ ಪಡೆದರು.

ಪ್ರಗ್ನಾನಂದ ಅವರು ಬಿಳಿ ಕಾಯಿಗಳೊಂದಿಗೆ ಆಡಿದ್ದು, ಅವರ ಗೆಲುವು ತವರಿನ ನೆಚ್ಚಿನ ಆಟಗಾರ ಕಾರ್ಲ್‌ಸೆನ್ ಅವರನ್ನು ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ತಳ್ಳಿತು. ಸ್ಲೋ ಚೆಸ್ ಎಂದೂ ಕರೆಯಲ್ಪಡುವ ಕ್ಲಾಸಿಕಲ್ ಚೆಸ್, ಆಟಗಾರರು ತಮ್ಮ ಚಲನೆಗಳನ್ನು ಮಾಡಲು ಗಮನಾರ್ಹ ಸಮಯಾವಕಾಶ ಸಿಗುತ್ತದೆ. ಸಾಮಾನ್ಯವಾಗಿ ಕನಿಷ್ಠ ಒಂದು ಗಂಟೆ ಅವಕಾಶ ಇರುತ್ತದೆ. ಈ ಸ್ವರೂಪದಲ್ಲಿ ಕಾರ್ಲ್‌ಸೆನ್ ಮತ್ತು ಪ್ರಗ್ನಾನಂದ ನಡುವಿನ ಈ ಹಿಂದಿನ ಮೂರು ಮುಖಾಮುಖಿಗಳೂ ಕೂಡ ಡ್ರಾದಲ್ಲಿ ಅಂತ್ಯಗೊಂಡಿದ್ದವು.

ಮಹಿಳೆಯರ ವಿಭಾಗದಲ್ಲಿ ವೈಶಾಲಿಗೆ ಅಗ್ರಸ್ಥಾನ: ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ಪ್ರಗ್ನಾನಂದಾ ಅವರ ಸಹೋದರಿ ಆರ್.ವೈಶಾಲಿ 5.5 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರು. ಅವರು ಅನ್ನಾ ಮುಜಿಚುಕ್ ವಿರುದ್ಧ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.

ಇತರ ಪಂದ್ಯಗಳಲ್ಲಿ, ವಿಶ್ವದ ಎರಡನೇ ಶ್ರೇಯಾಂಕದ ಯುಎಸ್‌ಎಯ ಫ್ಯಾಬಿಯಾನೊ ಕರುವಾನಾ ಅವರು ಹಾಲಿ ವಿಶ್ವ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಅವರನ್ನು ಮಣಿಸಿದರು. ಈ ಸೋಲಿನಿಂದಾಗಿ 6 ಮಂದಿ ಆಟಗಾರರಿರುವ ಪಾಯಿಂಟ್​ ಪಟ್ಟಿಯಲ್ಲಿ ತಳಭಾಗಕ್ಕೆ ಜಾರಿದ್ದಾರೆ.

ಇನ್ನುಳಿದಂತೆ, ಅಮೆರಿಕನ್ ಹಿಕರು ನಕಮುರಾ ಅವರು ಫ್ರಾನ್ಸ್‌ನ ಅಲಿರೆಜಾ ಫಿರೌಜ್ಜಾ ವಿರುದ್ಧ ತಮ್ಮ ಆರ್ಮಗೆಡ್ಡೋನ್ ಪಂದ್ಯವನ್ನು ಗೆದ್ದು ಹೆಚ್ಚುವರಿ ಅರ್ಧ ಪಾಯಿಂಟ್ ಗಳಿಸಿದರು. ಜೊತೆಗೆ, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದರು. ನಕಮುರಾ ನಾಲ್ಕನೇ ಸುತ್ತಿನಲ್ಲಿ ಪ್ರಗ್ನಾನಂದ ವಿರುದ್ಧ ಸೆಣಸಲಿದ್ದಾರೆ.

ಇದನ್ನೂ ಓದಿ: ನಾರ್ವೆ ಚೆಸ್​ ಟೂರ್ನಿ: ಭಾರತದ ಗ್ರ್ಯಾಂಡ್​ ಮಾಸ್ಟರ್​ ಪ್ರಗ್ನಾನಂದ್​, ಕೊನೇರು ಹಂಪಿಗೆ ಸೋಲು - Norway Chess

ETV Bharat Logo

Copyright © 2024 Ushodaya Enterprises Pvt. Ltd., All Rights Reserved.