ETV Bharat / sports

ಪ್ಯಾರಿಸ್ ಒಲಿಂಪಿಕ್ಸ್‌ 2024: ಭದ್ರತೆಗೆ ಭಾರತೀಯ ಕೆ9 ಶ್ವಾನ ಪಡೆ - Paris Olympics

author img

By ETV Bharat Karnataka Team

Published : Jul 19, 2024, 8:17 PM IST

ಜುಲೈ 26ರಿಂದ ಆರಂಭವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್ 2024ಕ್ಕೆ ಭದ್ರತೆ ಒದಗಿಸುವ ಸಲುವಾಗಿ ಇದೇ ಮೊದಲ ಬಾರಿಗೆ ಭಾರತದ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಗೆ ಸಂಬಂಧಿಸಿದಂತೆ ವಿಶೇಷ ತರಬೇತಿ ಪಡೆದಿರುವ ಕೆ9 ಶ್ವಾನದಳ ತೆರಳಿದೆ. ಚುರುಕು ಮತ್ತು ಚಾಣಾಕ್ಷತನದ ಶ್ವಾನಗಳು ಇವಾಗಿದ್ದರಿಂದ ಇವುಗಳಿಗೆ ವಿಶೇಷ ರೀತಿಯ ಆದ್ಯತೆ ನೀಡಲಾಗಿದೆ. ಅಲ್ಲದೇ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರೀ ಪ್ರಮಾಣದ ಮೊತ್ತ ವ್ಯಯ ಮಾಡುತ್ತಿರುವ ಬಗ್ಗೆ ವರದಿಯಾಗುತ್ತಿದೆ.

Security at Paris Olympics
ಪ್ಯಾರಿಸ್ ಒಲಿಂಪಿಕ್ಸ್‌ 2024 (AP)

ನವದೆಹಲಿ/ಫ್ರಾನ್ಸ್​: ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್​ ಭಾರಿ ಬಿಗಿ ಭದ್ರತೆಯಲ್ಲಿ ನಡೆಯಲಿವೆ. ದೇಶದ ಗೌರವ ಮತ್ತು ಕ್ರೀಡಾಪಟುಗಳ ಭದ್ರತಾ ದೃಷ್ಟಿಯಿಂದ ಒಂದು ಹೆಜ್ಜೆ ಮುಂದೆ ಹೋಗಿರುವ ಫ್ರಾನ್ಸ್ ದೇಶವು, ಭಾರತ ಸೇರಿದಂತೆ ಹಲವು ದೇಶಗಳ ಸಹಾಯ ಕೋರಿದೆ. ಇದಕ್ಕೆ ಭಾರತ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ. ಮೂರನೇ ಬಾರಿಗೆ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲಿರುವುದರಿಂದ ಭದ್ರತೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಫೆಬ್ರವರಿ 29, 2024 ರಲ್ಲಿ, ಫ್ರಾನ್ಸ್ ಮತ್ತು ಕತಾರ್ 2024ರ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲು ಹಲವು ಒಪ್ಪಂದಗಳಿಗೆ ಸಹಿ ಕೂಡ ಹಾಕಿರುವುದನ್ನು ಇಲ್ಲಿ ಗಮನಿಸಬಹುದು.

2024 ಜು. 26ರಿಂದ ಈ ಪ್ಯಾರಿಸ್ ಒಲಿಂಪಿಕ್ಸ್ ಪ್ರಾರಂಭವಾಗಲಿದ್ದು, ಫ್ರಾನ್ಸ್ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಫ್ರಾನ್ಸ್ ದೇಶದ ಈ ಮನವಿ ಮೇರಿಗೆ ಭಾರತವು ಒಲಿಂಪಿಕ್ಸ್‌ನ ಭದ್ರತೆಗಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಆಯ್ದ ಶ್ವಾನದಳ ಕೆ9 ತಂಡಗಳನ್ನು (ಪೋಲೀಸ್ ಶ್ವಾನ ಘಟಕ) ಕಳುಹಿಸಿಕೊಟ್ಟಿದೆ. ತರಬೇತಿ ಪಡೆದ ಬೆಲ್ಜಿಯನ್ ಶೆಫರ್ಡ್ ಮಾಲಿನೋಯಿಸ್ ವ್ಯಾಸ್ಟ್ ಮತ್ತು ಡೆನ್‌ಬಿ ಎಂಬ ಕ್ರಮವಾಗಿ 5 ಮತ್ತು 3 ವರ್ಷದ ನುರಿತ ಶ್ವಾನಗಳು ಭದ್ರತಾ ಸೇವೆಯ ನೇತೃತ್ವ ವಹಿಸಿವೆ.

ಕ್ರೀಡಾಕೂಟಕ್ಕೆ ಭದ್ರತೆಯ ವೆಚ್ಚ: 9/11ರ ಅಮೆರಿಕ ದಾಳಿಯ ನಂತರ ಭದ್ರತಾ ವೆಚ್ಚಗಳು ದುಪ್ಪಟ್ಟುಗೊಂಡಿವೆ. 2000ರಲ್ಲಿ ಸಿಡ್ನಿಯಲ್ಲಿ ನಡೆದ ಕ್ರೀಡಾಕೂಟಕ್ಕೆ 250 ಮಿಲಿಯನ್ ಡಾಲರ್​ ಖರ್ಚು ಮಾಡಲಾಗಿತ್ತು. ಅದೇ 2004ರಲ್ಲಿ ಅಥೆನ್ಸ್ ಕ್ರೀಡಾಕೂಟಕ್ಕೆ ಭದ್ರತೆಯ ವೆಚ್ಚವು 1.5 ಬಿಲಿಯನ್​ ಡಾಲರ್​ಗೂ ಮೀರಿತ್ತು. ಹಾಗೆಯೇ, ಕ್ರೀಡಾಕೂಟಗಳ ವೆಚ್ಚಗಳು 1ರಿಂದ 2 ಬಿಲಿಯನ್ ಡಾಲರ್​ವರೆಗೂ ವ್ಯಯಿಸಲಾಗುತ್ತಿದೆ. ಇದಕ್ಕೆ ನಿದರ್ಶನ ಎಂದರೆ 2022ರಲ್ಲಿ ಕೋವಿಡ್​ ಸಾಂಕ್ರಾಮಿಕ ಸಂದರ್ಭ. ಈ ಸಮಯದಲ್ಲಿ ಇದರ ವೆಚ್ಚು ಇನ್ನೂ ಹೆಚ್ಚಾಗಿತ್ತು. ಆಗ ಟೋಕಿಯೊ ಕ್ರೀಡಾಕೂಟದಲ್ಲಿ ಕೋವಿಡ್​ ತಡೆಗಟ್ಟುವಿಕೆಗಾಗಿ ಮಾತ್ರವೇ 2.8 ಬಿಲಿಯನ್​ ಡಾಲರ್​ ಖರ್ಚು ಮಾಡಿರುವ ಬಗ್ಗೆ ವರದಿಗಳು ಆಗಿದ್ದವು.

Security at Paris Olympics
ಶ್ವಾನ ಪಡೆಯೊಂದಿಗೆ ಭದ್ರತಾ ಪಡೆ (AP)

ಬೆಲ್ಜಿಯನ್ ಶೆಫರ್ಡ್​​ಗೆ ಆದ್ಯತೆ: ಒಲಿಂಪಿಕ್ಸ್ ಭದ್ರತೆಗಾಗಿ ಬೆಲ್ಜಿಯನ್ ಮಾಲಿನೊಯಿಸ್ ತಳಿಯ ಬೆಲ್ಜಿಯನ್ ಶೆಫರ್ಡ್ ಶ್ವಾನಗಳಿಗೆ ಹೆಚ್ಚು ​​ಆದ್ಯತೆ ನೀಡಲಾಗಿದೆ. ಅದಕ್ಕೆ ಬಲವಾದ ಕಾರಣವೂ ಇದೆ. ಚುರುಕು ಮತ್ತು ಚಾಣಾಕ್ಷತನದ ಶ್ವಾನಗಳು ಇವಾಗಿದ್ದರಿಂದ ಇವುಗಳಿಗೆ ವಿಶೇಷ ರೀತಿಯ ಆದ್ಯತೆ ನೀಡಲಾಗಿದೆ. 2011ರಲ್ಲಿ ದಾಳಿಕೋರ ಒಸಾಮಾ ಬಿನ್ ಲಾಡೆನ್ ಅಡಗುತಾಣವನ್ನು ಪತ್ತೆಹಚ್ಚುವಲ್ಲಿ ಅಮೆರಿಕ ವಿಶೇಷ ಪಡೆಗಳಿಗೆ ಸಹಾಯ ಮಾಡುವಲ್ಲಿ ಈ ಬೆಲ್ಜಿಯನ್ ಶೆಫರ್ಡ್ ತಳಿಗಳು ಪ್ರಮುಖ ಪಾತ್ರ ವಹಿಸಿದ್ದವು. ಭದ್ರತಾ ಪಡೆಗಳಲ್ಲಿ ಉನ್ನತ ತರಬೇತಿ ಪಡೆದ ಈ ಚುರುಕುತನದ ಶ್ವಾನಗಳು, ಅನುಮಾನಾಸ್ಪದ ವ್ಯಕ್ತಿಯಿಂದ ಹಿಡಿದು, ಸುಧಾರಿತ ಸ್ಫೋಟಕ ಸಾಧನಗಳ ವರೆಗೆ ನಿಖರವಾಗಿ ಪತ್ತೆಹಚ್ಚುತ್ತವೆ. ಬೊಗಳದೇ ವಿಷಯ ತಿಳಿಸುವ ಸೂಕ್ಷ್ಮತೆ ಕೂಡ ಈ ಶ್ವಾನಗಳಿಗೆ ಕರಗತವಾಗಿದೆ.

ಸ್ಕ್ವಾಡ್ K-9: ಫ್ರಾನ್ಸ್‌ನ ಕೋರಿಕೆಯ ಮೇರೆಗೆ ಭಾರತ ಸರ್ಕಾರ ವಿಶೇಷ ತರಬೇತಿ ಪಡೆದ 10 ಕೆ9 ಶ್ವಾನ ಪಡೆಯನ್ನು ಕ್ರೀಡಾಕೂಟಕ್ಕೆ ಈಗಾಗಲೇ ಕಳುಹಿಸಿಕೊಟ್ಟಿದೆ. ವಿವಿಧ ತಳಿಗಳ 10 ನಾಯಿಗಳನ್ನು ಒಳಗೊಂಡಿರುವ ಈ ಪಡೆ, ಫ್ರಾನ್ಸ್​ನ ಭದ್ರತೆಯ ಹೊಣೆ ಹೊತ್ತಿದೆ. ಇವುಗಳಲ್ಲಿ 6 ಬೆಲ್ಜಿಯನ್, 3 ಜರ್ಮನ್ ಶೆಫರ್ಡ್ ತಳಿ ಮತ್ತು 1 ಲ್ಯಾಬ್ರಡಾರ್ ರಿಟ್ರೈವರ್ ತಳಿಯ ಶ್ವಾಗಳು ಸೇರಿವೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF), ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP), ಸಶಸ್ತ್ರ ಸೀಮಾ ಬಾಲ್ (SSB), ಅಸ್ಸಾಂ ರೈಫಲ್ಸ್ ಸೇರಿದಂತೆ ವಿವಿಧ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಂದ (CAPFs) K9 ತಂಡದ 10 ನಾಯಿಗಳು ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG) ಜೊತೆಗೆ 17 ಸಿಬ್ಬಂದಿ ನಿಯೋಜಿಸಲಾಗಿದೆ.

ಪೊಲೀಸ್ ಅಧಿಕಾರಿಗಳ ನಿಯೋಜನೆ: ಈ ಮಹಾ ಕ್ರೀಡಾಕೂಟಕ್ಕಾಗಿ ಫ್ರಾನ್ಸ್ ದೇಶವು ಪ್ರತಿ ದಿನ ಸುಮಾರು 30,000 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಿದೆ. ಸೀನ್ ನದಿಯಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಸುಮಾರು 45,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ವರದಿ ಮಾಡಿವೆ. ಅಪಾರ ಪ್ರಮಾಣದ ನುರಿತ ಭದ್ರತಾ ಪಡೆ ಒಲಿಂಪಿಕ್ ಕ್ರೀಡಾಕೂಟದ ಉಸ್ತುವಾರಿ ವಹಿಸಿಕೊಳ್ಳಲಿದೆ. ನೂರಾರು ಡ್ರೋನ್‌ಗಳು ಭದ್ರತೆ ಒದಗಿಸಲಿವೆ.

ಭದ್ರತಾ ವಿನ್ಯಾಸ: ಇತ್ತೀಚಿನ ವರ್ಷಗಳಲ್ಲಿ ಭಯೋತ್ಪಾದನೆ ಮತ್ತು ಹಿಂಸಾತ್ಮಕ ದಾಳಿಯ ಸಮಸ್ಯೆ ಎದುರಿಸುತ್ತಿರುವ ರಾಷ್ಟ್ರಗಳಲ್ಲಿ ಫ್ರಾನ್ಸ್​ ಕೂಡ ಒಂದು. ಇದನ್ನು ಮಟ್ಟ ಹಾಕಲು ಹಲವು ಸುಧಾರಿತ ಕ್ರಮಗಳನ್ನು ಕೈಗೊಂಡಿರುವುದು ಗಮನಾರ್ಹ. ಭಯೋತ್ಪಾದನೆಯಂತಹ ಚಟುವಟಿಕೆಗಳ ಬಗ್ಗೆ ಅರಿಯಲು ಇಲ್ಲಿನ ಗುಪ್ತಚರ ಸಂಸ್ಥೆಗಳು ಮತ್ತು ಭದ್ರತಾ ಪಡೆಗಳು ಯಾವಾಗಲೂ ಎಚ್ಚರದಿಂದಲೇ ಇರುತ್ತವೆ. 2015ರ ಐಸಿಸ್ ದಾಳಿ ಬಳಿಕ ಭದ್ರತೆ ವಿಷಯದಲ್ಲಿ ಹೆಚ್ಚು ಮುತುವರ್ಜಿ ವಹಿಸುವ ಫ್ರಾನ್ಸ್​ ದೇಶವು, ಭಯೋತ್ಪಾದಕ ದಾಳಿಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟುವಲ್ಲಿ ಯಶ ಕಂಡಿದೆ. ಸದ್ಯ ಭದ್ರತಾ ದೃಷ್ಟಿಯಿಂದ ಜುಲೈ 18 ರಿಂದ 26ರವರೆಗೆ ಸೀನ್ ಸುತ್ತಲೂ ಸಂಚಾರ ನಿಷೇಧಿಸಲಾಗಿದೆ.

Security at Paris Olympics
ಶ್ವಾನ ಪಡೆಯೊಂದಿಗೆ ಭದ್ರತಾ ಪಡೆ (AP)

AI ಕಣ್ಗಾವಲು: ಈ ಮಹಾ ಕ್ರೀಡಾ ಜಾತ್ರೆಗಾಗಿ ಕೃತಕ ಬುದ್ಧಿಮತ್ತೆ(ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌-ಎಐ) ತಂತ್ರಜ್ಞಾನದ ನೆರವು ಕೂಡ ಪಡೆಯಲಾಗಿದೆ. ವಿಶ್ವಾದ್ಯಂತ ಸಾವಿರಾರು ಕ್ರೀಡಾಪಟುಗಳು ಆಗಮಿಸಲಿದ್ದಾರೆ. ಸಾವಿರಾರು ಸಂದರ್ಶಕರು ಭಾಗಿಯಾಗಲಿದ್ದಾರೆ. ಕ್ರೀಡಾಪಟುಗಳ ಜೊತೆಗೆ ಈ ಮಹಾ ಕ್ರೀಡೋತ್ಸವನ್ನು ಕಣ್ತುಂಬಿಕೊಳ್ಳಲೆಂದೇ ಕೋಟ್ಯಂತರ ಕ್ರೀಡಾಭಿಮಾನಿಗಳು ಫ್ರಾನ್ಸ್​ಗೆ ಲಗ್ಗೆ ಇಡಲಿದ್ದಾರೆ. ಹಾಗಾಗಿ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವು ಪಡೆಯಲಾಗಿದೆ.

ಕ್ರೀಡೆಗಳಿಗೂ ಮೊದಲು ಮತ್ತು ನಡೆಯುವ ಸಮಯ ಹಾಗೂ ನಂತರದಲ್ಲೂ ವ್ಯಾಪಕ ಹಾಗೂ ನಿರಂತರ ಕಣ್ಗಾವಲು ಇಡಲು ಸರ್ಕಾರ ಮತ್ತು ಖಾಸಗಿ ಕಂಪನಿಗಳು ಸುಧಾರಿತ ಎಐ ಪರಿಕರಗಳ ಜೊತೆ ಇತರ ಕಣ್ಗಾವಲು ತಂತ್ರಜ್ಞಾನವನ್ನು ಬಳಸುತ್ತವೆ. ಒಲಂಪಿಕ್ ವಿಶ್ವ ವೇದಿಕೆ ಮತ್ತು ಅಂತಾರಾಷ್ಟ್ರೀಯ ಜನಸಮೂಹದ ಹೆಚ್ಚಿದ ಭದ್ರತೆಯು ಎಷ್ಟು ಮಹತ್ವದ್ದಾಗಿದೆ ಎಂದರೆ, ಇತ್ತೀಚಿನ ವರ್ಷಗಳಲ್ಲಿ 'ಯುದ್ಧದ ಹೊರತಾದ ವಿಶ್ವದ ಅತಿದೊಡ್ಡ ಭದ್ರತಾ ಕಾರ್ಯಾಚರಣೆ' ಎಂದು ವಿಮರ್ಶಕರು ಒಲಿಂಪಿಕ್ಸ್ಅನ್ನು ವಿಶ್ಲೇಷಿಸುತ್ತಿದ್ದಾರೆ.

ದೊಡ್ಡ ದೊಡ್ಡ ಪ್ರಮಾಣದ ದಾಳಿಯಿಂದ ಹಿಡಿದು ಬೆದರಿಕೆ, ಅಪರಾಧ ಕೃತ್ಯ, ಆರ್ಥಿಕವಾಗಿ ಪ್ರೇರೇಪಿತ ದಾಳಿ, ಅಪಪ್ರಚಾರ, ಸಣ್ಣ-ಪುಟ್ಟ ಕಳ್ಳತನವರೆಗೂ ಹೆಚ್ಚು ನಿಗಾ ವಹಿಸಲು ಸೂಚಿಸಲಾಗಿದೆ. ಆರೋಗ್ಯದ ದೃಷ್ಟಿಯಿಂದಲೂ ಕೋವಿಡ್​ ಮತ್ತು ಡೆಂಗ್ಯೂ ಜ್ವರದಂತಹ ರೋಗ ಹರಡುವಿಕೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ.

ಕ್ರೀಡಾಕೂಟದಲ್ಲಿ ಭಾರತದ ಸ್ಪರ್ಧಿಗಳು: ಇನ್ನು ಈ ಕ್ರೀಡಾ ಜಾತ್ರೆಗೆ ಭಾರತ ಕ್ರೀಡಾ ಸಚಿವಾಲಯ ಈಗಾಗಲೇ ತನ್ನ ಮುದ್ರೆ ಹಾಕಿದ್ದು, ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಒಟ್ಟು 117 ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ. 70 ಪುರುಷ ಮತ್ತು 47 ಮಹಿಳಾ ಕ್ರೀಡಾಪಟುಗಳಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ 29, ಶೂಟಿಂಗ್ ಸ್ಪರ್ಧೆಯಲ್ಲಿ 21 ಆಟಗಾರರು ಭಾಗಿಯಾಗಲಿದ್ದಾರೆ. ಇವರೊಂದಿಗೆ 140 ಮಂದಿ ಸಹಾಯಕ ಸಿಬ್ಬಂದಿ ಹಾಗೂ ಅಧಿಕಾರಿಗಳು ಕೂಡ ಹಾಜರಿರಲಿದ್ದಾರೆ.

ಇದನ್ನೂ ಓದಿ: 'ಪ್ಯಾರಿಸ್ ಒಲಿಂಪಿಕ್ಸ್ 2024': ತಯಾರಿ ಜೋರು; ಪಟಾಕಿಗಳಿಂದಲೇ ಬೆಳಗಿದ ಐಫೆಲ್ ಟವರ್ - Paris Olympics 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.