ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ 2024ರ ಎರಡನೇ ದಿನದಂದು ಭಾರತದ ಕ್ರೀಡಾಪಟುಗಳು ಶೂಟಿಂಗ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಟೇಬಲ್ ಟೆನ್ನಿಸ್ ಮತ್ತು ಬಿಲ್ಲುಗಾರಿಕೆ ಸ್ಪರ್ಧೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಭಾನುವಾರ ಭಾರತದಿಂದ ಯಾವ ಆಟಗಾರರು ಯಾವ ಕ್ರೀಡೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಇಲ್ಲಿ ತಿಳಿಯಿರಿ.
Each #Olympics has been different for @Pvsindhu1. 💪🏸#Paris2024 #Badminton pic.twitter.com/SkpRCMvMWS
— BWF (@bwfmedia) July 27, 2024
ಭಾರತದ ಸ್ಪರ್ಧೆಗಳು
ರೋಯಿಂಗ್: ರೋಯಿಂಗ್ ಸ್ಪರ್ಧೆಯಲ್ಲಿ ಇಂದು ನಾಲ್ಕನೇ ಸ್ಥಾನ ಪಡೆದಿರುವ ಬಲರಾಜ್ ಪನ್ವಾರ್ ನಾಳೆಯ ಈವೆಂಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಯಿಂಗ್‌ನಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ರೆಪಿಚೇಜ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಇಂದು ನಡೆದ ಸ್ಫರ್ಧೆಯಲ್ಲಿ ಬಾಲರಾಜ್ 7:07.11 ನಿಮಿಷದಲ್ಲಿ ಗುರಿ ತಲುಪಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಇದೀಗ ಅವರು ಕಂಚಿನ ಪದಕಕ್ಕೆ ಸೆಣಸಲಿದ್ದಾರೆ.
- ಪುರುಷರ ಸಿಂಗಲ್ಸ್ ಸ್ಕಲ್ಸ್ ರೆಪೆಚೇಜ್ ರೌಂಡ್ (ಬಾಲರಾಜ್ ಪನ್ವಾರ್ - ಭಾರತ) - 12:30 PM
ಶೂಟಿಂಗ್: ಎಲವೆನಿಲ್ ವಲರಿವನ್ ಮತ್ತು ರಮಿತಾ ಜಿಂದಾಲ್ ನಾಳೆ 10 ಮೀಟರ್ ಏರ್ ರೈಫಲ್ ಶೂಟಿಂಗ್ ಮಹಿಳೆಯರ ಅರ್ಹತಾ ಪಂದ್ಯದಲ್ಲಿ ಸ್ಪರ್ಧಿಸಲಿದ್ದಾರೆ. ಬಳಿಕ ಪುರುಷರ ಅರ್ಹತ ಪಂದ್ಯದಲ್ಲಿ ಸಂದೀಪ್ ಸಿಂಗ್ ಮತ್ತು ಅರ್ಜುನ್ ಬಾಬುತಾ ಭಾಗವಹಿಸಲಿದ್ದಾರೆ. ನಂತರ ಫೈನಲ್ ಪಂದ್ಯಗಳು ನಡೆಯಲಿವೆ.
- 10 ಮೀ ಏರ್ ರೈಫಲ್ (ಮಹಿಳೆಯರ ಅರ್ಹತೆ) - ಮಧ್ಯಾಹ್ನ 12:45
- 10 ಮೀ ಏರ್ ಪಿಸ್ತೂಲ್ (ಪುರುಷರ ಅರ್ಹತೆ) - ಮಧ್ಯಾಹ್ನ 1 ಗಂಟೆಗೆ
- 10ಮೀ ಏರ್ ರೈಫಲ್ (ಪುರುಷರ ಫೈನಲ್) - ಮಧ್ಯಾಹ್ನ 2:45
- 10ಮೀ ಏರ್ ಪಿಸ್ತೂಲ್ (ಮಹಿಳೆಯರ ಫೈನಲ್) - ಮಧ್ಯಾಹ್ನ 3:30
The first round of #Boxing matches have been released for our 🇮🇳 boxers! 🥊
— SAI Media (@Media_SAI) July 26, 2024
Let’s get ready to enjoy the action packed moments at #ParisOlympics2024 ✅#Paris2024
Let's support the boxers and #Cheer4Bharat. #OlympicsOnJioCinema pic.twitter.com/72aR2rP7ln
ಬ್ಯಾಡ್ಮಿಂಟನ್: ಪ್ಯಾರಿಸ್ ಒಲಿಂಪಿಕ್ಸ್‌ನ ಎರಡನೇ ದಿನ ಭಾರತಕ್ಕೆ ಬ್ಯಾಡ್ಮಿಂಟನ್‌ನಲ್ಲಿ ಆ್ಯಕ್ಷನ್ ಪ್ಯಾಕ್ಡ್ ದಿನವಾಗಲಿದೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿವಿ ಸಿಂಧು ಜರ್ಮನಿಯ ರೋತ್ ಫ್ಯಾಬಿಯನ್ ಅವರೊಂದಿಗೆ ಸೆಣಸಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಎಚ್‌ಎಸ್ ಪ್ರಣಯ್ ಕಾಣಿಸಿಕೊಳ್ಳಲಿದ್ದಾರೆ.
ಮಹಿಳಾ ಸಿಂಗಲ್ಸ್ - ಪಿವಿ ಸಿಂಧು: ಮಧ್ಯಾಹ್ನ 12
ಪುರುಷರ ಸಿಂಗಲ್ಸ್ - ಎಚ್.ಎಸ್.ಪ್ರಣೋಯ್: ಸಂಜೆ 5.30
ಟೇಬಲ್ ಟೆನಿಸ್: ಭಾರತಕ್ಕಾಗಿ ಟೇಬಲ್ ಟೆನಿಸ್‌ನಲ್ಲಿ, ಮಹಿಳಾ ಸಿಂಗಲ್ಸ್ ಅಕುಲಾ ಶ್ರೀಜಾ ಸ್ವೀಡನ್‌ನ ಕಲ್ಬರ್ಗ್ ಕ್ರಿಸ್ಟಿನಾ ಅವರೊಂದಿಗೆ ಆಡಲಿದ್ದಾರೆ. ಭಾರತದ ಮಣಿಕಾ ಬಂಟ್ರಾ ಅವರು ಗ್ರೇಟ್ ಬ್ರಿಟನ್‌ನ ಹರ್ಸಿ ಅನ್ನಾ ಅವರೊಂದಿಗೆ 64ರ ಮಹಿಳೆಯರ ಸುತ್ತಿನಲ್ಲಿ ಆಡಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಅಚಂತಾ ಶರತ್ ಕಮಲ್ ಸ್ಲೊವೇನಿಯಾದ ಕೊಝುಲ್ ಡೆನಿ ಅವರೊಂದಿಗೆ ತಮ್ಮ ಪಂದ್ಯವನ್ನು ಆಡಲಿದ್ದಾರೆ.
ಟೇಬಲ್ ಟೆನಿಸ್ - ಮಹಿಳೆಯರ 64ರ ಸುತ್ತಿನ ಪಂದ್ಯ - 2:15 pm
ಟೇಬಲ್ ಟೆನಿಸ್ - ಪುರುಷರ 64ರ ಸುತ್ತಿನ ಪಂದ್ಯ - 3 PM
ಟೇಬಲ್ ಟೆನಿಸ್ - ಮಹಿಳೆಯರ 64ರ ಸುತ್ತಿನ ಪಂದ್ಯ - 4:30 pm
ಬಾಕ್ಸಿಂಗ್: ಭಾರತದ ಕುಸ್ತಿಪಟು ನಿಖತ್ ಜರೀನ್ ಅವರು ಮಹಿಳೆಯರ 50 ಕೆಜಿ ವಿಭಾಗದ 32ನೇ ಸುತ್ತಿನಲ್ಲಿ ಜರ್ಮನಿಯ ಕ್ಲೋಟ್ಜರ್ ಮ್ಯಾಕ್ಸಿ ಕ್ಯಾರಿನಾ ಅವರೊಂದಿಗೆ ಆಡಲಿದ್ದಾರೆ.
- ಮಹಿಳೆಯರ 50 ಕೆಜಿ ಪಂದ್ಯ - ಮಧ್ಯಾಹ್ನ 3:50ಕ್ಕೆ
ಆರ್ಚರಿ: ಭಾರತ ತಂಡವು ದೀಪಿಕಾ ಕುಮಾರಿ ನಾಯಕತ್ವದಲ್ಲಿ ಆರ್ಚರಿಯಲ್ಲಿ ಮಹಿಳೆಯರ ಟೀಮ್ ಈವೆಂಟ್‌ನ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡಲಿದೆ. ಅಂಕಿತಾ ಭಕ್ತ, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಈ ಪಂದ್ಯದಲ್ಲಿ ಇರಲಿದ್ದಾರೆ
ಮಹಿಳಾ ತಂಡ- ಆರ್ಚರಿ- ಸಂಜೆ 5.45ಕ್ಕೆ