Strange run out in cricket: ಕ್ರಿಕೆಟ್ನಲ್ಲಿ ಔಟ್ ಮತ್ತು ರನೌಟ್ಗಳ ಬಗ್ಗೆ ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಕೆಲವೊಮ್ಮೆ ಕ್ರಿಕೆಟ್ನಲ್ಲಿ ಬ್ಯಾಟರ್ಗಳು ಅತ್ಯಂತ ವಿಚಿತ್ರ ರೀತಿಯಲ್ಲಿ ಔಟಾಗುತಿರುತ್ತಾರೆ ಇದು ಕೆಲವೊಮ್ಮೆ ವಿಚಿತ್ರ ಎಂದೆನಿಸಿಬಿಡುತ್ತದೆ. ಆದರೆ ಕ್ರಿಕೆಟ್ ಇತಿಹಾಸದಲ್ಲೇ ಎಂದು ನೋಡಿರದ ರೀತಿಯಲ್ಲಿ ಬ್ಯಾಟರ್ವೊಬ್ಬ ಔಟಾಗಿದ್ದಾರೆ. ಕ್ರೀಸ್ ನಿಂದ ಹೊರಬರದಿದ್ದರೂ ರನೌಟಾಗಿ ಪೆವಿಲಿಯನ್ ಸೇರಿದ್ದಾರೆ ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು, ಪಾಕಿಸ್ತಾನದ ದೇಶಿ ಲೀಗ್ ಆದ ಕ್ವೈಡ್-ಎ-ಅಜಮ್ ಟ್ರೋಫಿ (Quaid-e-Azam Trophy) ಪಂದ್ಯಾವಳಿಯಲ್ಲಿ ವಿಚಿತ್ರವಾದ ರನೌಟ್ ಆದ ಘಟನೆ ನಡೆದಿದೆ. ಟೂರ್ನಿಯ ನಿಮಿತ್ತ ಪೇಶಾವರ ಮತ್ತು ಸಿಯಾಲ್ ಕೋಟ್ ಮಧ್ಯೆ ಗುರುವಾರ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಸಿಯಾಲ್‌ಕೋಟ್ ಬ್ಯಾಟ್ಸ್‌ಮನ್ ಮೊಹಮ್ಮದ್ ವಲೀದ್ ದುರದೃಷ್ಟಕರ ರೀತಿಯಲ್ಲಿ ಔಟಾಗಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವಲೀದ್, ಅಮೀರ್ ಖಾನ್ ಎಸೆದ ಚೆಂಡನ್ನು ಸ್ಟ್ರೇಟ್ ಡ್ರೈವ್ನತ್ತ ಆಡಿದ್ದರು. ಆದರೇ ಆ ಚೆಂಡನ್ನು ಬೌಲರ್ ಅಮೀರ್ ತಡೆದಿದ್ದರು.
ತಕ್ಷಣವೇ ಚೆಂಡನ್ನು ಬ್ಯಾಟರ್ ಹಿಂದಿದ್ದ ವಿಕೆಟ್ಗೆ ಎಸೆದಿದ್ದರು. ಈ ವೇಳೆ, ಕ್ರೀಸ್‌ನಲ್ಲಿದ್ದ ವಲೀದ್ ತನ್ನ ಕಾಲಿಗೆ ಚೆಂಡು ತಗುಲಿ ಗಾಯ ಪಡಿಸುತ್ತದೆ ಎಂದು ಗಾಳಿಯಲ್ಲಿ ಹಾರಿದರು. ಆಗ ಚೆಂಡು ನೇರವಾಗಿ ಹೋಗಿ ಸ್ಟಂಪ್‌ಗೆ ತಾಕಿದೆ. ತಕ್ಷಣ ಪೇಶಾವರ ಆಟಗಾರರು ಔಟ್ಗಾಗಿ ಮನವಿ ಸಲ್ಲಿಸಿದರು, ಫೀಲ್ಡ್ ಅಂಪೈರ್ ರನೌಟ್ ಪರಿಶೀಲಿಸಲು ಮೂರನೇ ಅಂಪೈರ್‌ಗೆ ಸೂಚಿಸಿದರು. ಚೆಂಡು ಸ್ಟಂಪ್‌ಗೆ ಬಡಿದಾಗ ವಲೀದ್ ಕಾಲುಗಳು ಗಾಳಿಯಲ್ಲಿದ್ದ ಕಾರಣ ಮೂರನೇ ಅಂಪೈರ್ ಔಟ್ ಎಂದು ಘೋಷಿಸಿದರು. ಇದರಿಂದಾಗಿ ವಲೀದ್ ಕ್ರೀಸ್ನಲ್ಲಿದ್ದರೂ ರನೌಟ್ ಆಗಿ ಪೆವಿಲಿಯನ್ ಸೇರಿದರು.
ಏತನ್ಮಧ್ಯೆ ಸಾಮಾಜಿಕ ಮಾಧ್ಯಮದಲ್ಲಿ ಈ ರನೌಟ್ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಕೆಲವರು ಇದು ತಮಾಷೆಯ ರನೌಟ್ ಎಂದು ಹೇಳಿದರೆ, ಇನ್ನು ಕೆಲವರು ಅಂಪೈರ್ ಇದಕ್ಕೆ ಔಟ್ ನೀಡಿರುವುದು ಸರಿಯಾದ ನಿರ್ಣಯವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Strange dismissal 😲
— Pakistan Cricket (@TheRealPCB) January 3, 2025
Mohammad Waleed gets out in a bizarre manner ❌#QeAT | #SKTvPSH pic.twitter.com/0SEGUaqIC4
'ಚೆಂಡು ತನಗೆ ತಗುಲಿ ನೋವಾಗ ಬಾರದೆಂದು ಬ್ಯಾಟ್ಸ್ ಮನ್ ಹಾಗೆ ಹಾರಿದ್ದಾರೆ, ಇದಕ್ಕೆ ಔಟ್ ನೀಡಬಾರದಿತ್ತು ಎಂದರೆ, ಮತ್ತೆ ಕೆಲವರು 'ಪಾಕಿಸ್ತಾನ ಕ್ರಿಕೆಟ್ನಲ್ಲಿ ಮಾತ್ರ ಇಂತಹ ವಿಚಿತ್ರ ಘಟನೆಗಳು ನಡೆಯುತ್ತವೆ' ಎಂದು ಕಾಮೆಂಟ್ ಮಾಡಿದ್ದಾರೆ.