ETV Bharat / sports

2028ರ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆಲ್ಲುವುದು ನನ್ನ ಮುಂದಿನ ಗುರಿ: ಶೂಟರ್​ ಸರಬ್ಜೋತ್‌ ಸಿಂಗ್‌ - Shooter Sarabjot Singh - SHOOTER SARABJOT SINGH

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಹೆಮ್ಮೆಯ ಶೂಟರ್‌ ಸರಬ್ಜೋತ್‌ ಸಿಂಗ್‌, ಸ್ಪರ್ಧೆಗೆ ನಡೆಸಿದ ಕಸರತ್ತು, ಪರಿಶ್ರಮ ಹಾಗು ಮುಂದಿನ ಗುರಿಗಳ ಕುರಿತು 'ಈಟಿವಿ ಭಾರತ್' ವಿಶೇಷ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದರು.

ಶೂಟರ್​ ಸರಬ್ಜೋತ್‌ ಸಿಂಗ್‌ ವಿಶೇಷ ಸಂದರ್ಶನ
ಶೂಟರ್​ ಸರಬ್ಜೋತ್‌ ಸಿಂಗ್‌ ವಿಶೇಷ ಸಂದರ್ಶನ (ETV Bharat)
author img

By ETV Bharat Karnataka Team

Published : Aug 4, 2024, 7:11 AM IST

ಒಲಿಂಪಿಕ್ಸ್ ಪದಕ ವಿಜೇತ ಶೂಟರ್‌ ಸರಬ್ಜೋತ್‌ ಸಿಂಗ್​ ವಿಶೇಷ ಸಂದರ್ಶನ (ETV Bharat)

ಡೆಹ್ರಾಡೂನ್(ಉತ್ತರಾಖಂಡ): ಪ್ಯಾರಿಸ್​ ಒಲಿಂಪಿಕ್ಸ್​​​ 2024ರಲ್ಲಿ ಭಾರತ ಇದುವರೆಗೆ 3 ಪದಕ ಸಾಧನೆ ಮಾಡಿದೆ. ಈ ಪದಕಗಳು ಬಂದಿರುವುದು ಶೂಟಿಂಗ್​ ಸ್ಪರ್ಧೆಯಲ್ಲೇ ಎಂಬುದು ವಿಶೇಷ. ಮಹಿಳಾ ವಿಭಾಗದ 10 ಮೀಟರ್‌ ಸಿಂಗಲ್ಸ್‌ ಏರ್ ಪಿಸ್ತೂಲ್‌ ವಿಭಾಗದಲ್ಲಿ ಮನು ಭಾಕರ್​ ಕಂಚಿನ ಪದಕ ಗೆಲ್ಲುವ ಮೂಲಕ ಪದಕಗಳ ಖಾತೆ ತೆರೆದರು. ಬಳಿಕ 10 ಮೀಟರ್‌ ಏರ್‌ ಪಿಸ್ತೂಲ್‌ ಮಿಕ್ಸೆಡ್‌ ವಿಭಾಗದಲ್ಲಿ ಮನು ಭಾಕರ್‌ ಮತ್ತು ಸರಬ್ಜೋತ್‌ ಸಿಂಗ್‌ ಜೊತೆಗೂಡಿ ಕಂಚಿನ ಪದಕ ಸಾಧನೆ ಮಾಡಿದರು.

ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಪದಕ ಪಡೆದು ಈಗಾಗಲೇ ಸ್ವದೇಶಕ್ಕೆ ಮರಳಿದ ಸರಬ್ಜೋತ್‌ ಸಿಂಗ್‌ಗೆ ತವರಿನಲ್ಲಿ ಭವ್ಯ ಸ್ವಾಗತ ದೊರೆತಿದೆ. ಈ ಸಂದರ್ಭದಲ್ಲಿ ಅವರು 'ಈಟಿವಿ ಭಾರತ್' ಉತ್ತರಾಖಂಡದ ಬ್ಯೂರೋ ಮುಖ್ಯಸ್ಥ ಕಿರಣ್ ಕಾಂತ್ ಶರ್ಮಾ ಅವರೊಂದಿಗೆ ಮಾತಿಗೆ ಸಿಕ್ಕರು. ಒಲಿಂಪಿಕ್ಸ್‌ ಪದಕ ಗೆಲ್ಲುವವರೆಗಿನ ತಮ್ಮ ಸುದೀರ್ಘ ಪ್ರಯಾಣದ ಕುರಿತು ಮಾತನಾಡಿದರು.

ಗುರಿ ತಲುಪುವವರೆಗೂ ವಿರಮಿಸಲಾರೆ: "ಪ್ಯಾರಿಸ್‌ನಲ್ಲಿ ನಾನು ನೀಡಿದ ಪ್ರದರ್ಶನದಿಂದ ನನಗೆ ತೃಪ್ತಿಯಿಲ್ಲ. ಗುರಿ ತಲುಪುವವರೆಗೂ ವಿರಮಿಸಲಾರೆ. ಸುಮಾರು 8 ವರ್ಷಗಳ ಕಾಲ ಇದಕ್ಕಾಗಿ ತಯಾರಿ ನಡೆಸಿದ್ದೇನೆ. ವಿಶ್ವ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವುದು ನನ್ನ ಕನಸು. ಶಾಲಾ ದಿನಗಳಲ್ಲಿ ಫುಟ್​ಬಾಲ್​ ಬಗ್ಗೆ ಒಲವಿತ್ತು. ಆದರೆ ಶೂಟಿಂಗ್​ ಕ್ರೀಡೆ ಆಯ್ಕೆ ಮಾಡಿಕೊಳ್ಳುವಂತೆ ಶಿಕ್ಷಕರು ಮಾರ್ಗದರ್ಶನ ನೀಡಿದರು. ಇದರಿಂದಾಗಿ ಶೂಟಿಂಗ್ ಆಯ್ದುಕೊಂಡೆ ಮತ್ತು ಆಸಕ್ತಿ ಬೆಳೆಸಿಕೊಂಡೆ" ಎನ್ನುತ್ತಾ ಸಿಂಗ್‌ ಮಾತು ಶುರು ಮಾಡಿದರು.

2028ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಬೇಟೆ ಮುಂದಿನ ಗುರಿ: "ಶೂಟಿಂಗ್ ಅಭ್ಯಾಸದೊಂದಿಗೆ ಸ್ಪರ್ಧೆಗಳಲ್ಲೂ ಭಾಗವಹಿಸಲು ಆರಂಭಿಸಿದೆ. ಮೊದಲಿನಿಂದಲೂ ನನಗೆ ದೇಶಕ್ಕಾಗಿ ಏನನ್ನಾದರೂ ಮಾಡುವ ತುಡಿತವಿತ್ತು. ಹೀಗಾಗಿ ಶೂಟಿಂಗ್​ ಮೂಲಕ ಅದನ್ನು ಸಾಧಿಸಲು ಬಯಸಿದೆ. ಪದಕ ಗೆದ್ದ ಮೇಲೆ ಇನ್ನೂ ಮಾಡಬೇಕಿರುವುದು ಬಹಳಷ್ಟಿದೆ. ಸದ್ಯಕ್ಕೆ ಕುಟುಂಬದೊಂದಿಗೆ ಕೆಲ ದಿನಗಳನ್ನು ಕಳೆಯಲಿದ್ದೇನೆ. ಬಳಿಕ ರಾಷ್ಟ್ರೀಯ ಕ್ರೀಡಾಕೂಟದ ಅಭ್ಯಾಸಕ್ಕೆ ಸಿದ್ಧತೆ ನಡೆಸಬೇಕಿದೆ. ನನ್ನ ಸಂಪೂರ್ಣ ಗಮನ ಮುಂದಿನ, 2028ರ ಒಲಿಂಪಿಕ್ಸ್‌ ಮೇಲಿದ್ದು ಚಿನ್ನದ ಪದಕ ಗೆಲ್ಲುವುದರೆಡೆಗಿದೆ" ಎಂದರು.

ಪ್ರತಿದಿನವನ್ನೂ ಆನಂದಿಸಿದೆ, ಪ್ರತಿದಿನವೂ ಕಲಿತೆ: "ಒಲಿಂಪಿಕ್ಸ್‌ ಪದಕದ ಹಿಂದೆ ಸಾಕಷ್ಟು ಶ್ರಮವಿದೆ. ಈ ದಿನಕ್ಕಾಗಿ ಹಗಲಿರುಳು ಶ್ರಮಿಸಿದ್ದೇನೆ. 8 ವರ್ಷಗಳಿಂದ ದಿನಚರಿ ಬರೆಯುತ್ತಿದ್ದೇನೆ. ಈ ದಿನಚರಿಯಲ್ಲಿ ಪ್ರತಿದಿನದ ಪ್ರಗತಿ ಮತ್ತು ನೂನ್ಯತೆಗಳನ್ನು ಬರೆದಿದ್ದೇನೆ. ಎಲ್ಲವನ್ನೂ ಅವಲೋಕಿಸಿ ಕೆಲಸ ಮಾಡುತ್ತಿದ್ದೆ. ತರಬೇತಿಯ ಪ್ರತಿದಿನವನ್ನೂ ಆನಂದಿಸಿದೆ ಮತ್ತು ಪ್ರತಿದಿನವೂ ಕಲಿಯುತ್ತಿದ್ದೆ. ಅದರ ಫಲಿತಾಂಶವೇ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸಿಕ್ಕ ಕಂಚಿನ ಪದಕ" ಎಂದು ವಿವರಿಸಿದರು.

ಕಠಿಣ ಪರಿಶ್ರಮವೇ ಯಶಸ್ಸಿನ ಮೂಲ ಮಂತ್ರ: "ಆಟಗಾರನ ಗುರಿ ಯಾವತ್ತೂ ಮುಂದೆ ಇರಬೇಕು. ಆತ ಎಂದಿಗೂ ಹಿಂತಿರುಗಿ ನೋಡಬಾರದು. ಆಟಗಾರನಿಗೆ ಯಶಸ್ಸು ಗಳಿಸಲು ಸಾಧ್ಯವಾಗುತ್ತಿಲ್ಲ ಎಂದನಿಸಿದರೆ ನಿರಂತರವಾಗಿ ಅಭ್ಯಾಸ ಮಾಡುತ್ತಿರಬೇಕು. ಕಠಿಣ ಪರಿಶ್ರಮವೇ ಯಶಸ್ಸಿನ ಮೂಲ ಮಂತ್ರ" ಎಂಬುದು ಸರಬ್ಜೋತ್‌ ಸಿಂಗ್‌ ಸಂದೇಶ.

ಇದನ್ನೂ ಓದಿ: ಕ್ವಾರ್ಟರ್​ ಫೈನಲ್​ಗೆ ಲಗ್ಗೆ ಇಟ್ಟ ಭಾರತ, ಮುಂದಿನ ಪಂದ್ಯ ಯಾರ ವಿರುದ್ಧ? - paris olympics 2024

ETV Bharat Logo

Copyright © 2025 Ushodaya Enterprises Pvt. Ltd., All Rights Reserved.