ETV Bharat / sports

ಫೆಡರೇಷನ್​ ಕಪ್​​: ಚಿನ್ನ ಗೆದ್ದ ನೀರಜ್​ ಚೋಪ್ರಾ - Neeraj Chopra - NEERAJ CHOPRA

ಫೆಡರೇಷನ್​ ಕಪ್​ನ ಪುರುಷರ ಜಾವೆಲಿನ್​ ಥ್ರೋ ಸ್ಪರ್ಧೆಯಲ್ಲಿ ನೀರಜ್​ ಚೋಪ್ರಾ ಚಿನ್ನದ ಪದಕ ಗೆದ್ದಿದ್ದಾರೆ.

ನೀರಜ್​ ಚೋಪ್ರಾ
ನೀರಜ್​ ಚೋಪ್ರಾ (IANS)
author img

By PTI

Published : May 16, 2024, 10:17 AM IST

ಭುವನೇಶ್ವರ್​: ಒಲಿಪಿಂಕ್​ ಚಿನ್ನದ ಪದಕ ವಿಜೇತ ನೀರಜ್​ ಚೋಪ್ರಾ ಅವರು ಫೆಡರೇಷನ್​ ಕಪ್​ನ ಪುರುಷರ ಜಾವೆಲಿನ್​ ಥ್ರೋ ಸ್ಪರ್ಧೆಯಲ್ಲಿ ನಿರೀಕ್ಷೆಯಂತೆ ಚಿನ್ನದ ಪದಕ ಗೆದ್ದರು. ಬುಧವಾರ ಒಡಿಶಾದ ಕಳಿಂಗ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 82.27 ಮೀಟರ್ ದೂರ ಭರ್ಜಿ ಎಸೆದು ಈ ಸಾಧನೆ ಮಾಡಿದ್ದಾರೆ.

ಮೂರು ವರ್ಷದ ಬಳಿಕ ನೀರಜ್ ​ತವರು ನೆಲದಲ್ಲಿ ಆಡಿದ ಮೊದಲ ಟೂರ್ನಿ ಇದು. 26 ವರ್ಷದ ಸ್ಟಾರ್​ ಅಥ್ಲೀಟ್​ ಈ ಸ್ಪರ್ಧೆಯಲ್ಲಿ ಲಯಕ್ಕೆ ಮರಳಲು ಸಮಯ ತೆಗೆದುಕೊಂಡರು. ಆರಂಭದ ಮೂರು ಸುತ್ತುಗಳ ಬಳಿಕ ಎರಡನೇ ಸ್ಥಾನಕ್ಕೆ ತಲುಪಿದ್ದು, 4ನೇ ಮತ್ತು ಅಂತಿಮ ಸುತ್ತಿನಲ್ಲಿ 82.27 ಮೀಟರ್ ಎಸೆತದೊಂದಿಗೆ ಮೊದಲ ಸ್ಥಾನಕ್ಕೇರಿದರು. ಮೊದಲ ಮೂರು ಸುತ್ತಿನಲ್ಲಿ ಪ್ರಬಲ ಪೈಪೋಟಿ ನೀಡಿದ ಕರ್ನಾಟಕದ ಡಿ.ಪಿ.ಮನು 82.06 ಮೀಟರ್ ದೂರ ಭರ್ಜಿ ಎಸೆದು ಬೆಳ್ಳಿಗೆ ತೃಪ್ತಿಪಟ್ಟರು.

ಮೂರು ವರ್ಷದ ಬಳಿಕ ನೀರಜ್​ ಫೆಡರೇಷನ್​ ಕಪ್​ನಲ್ಲಿ ಆಡಿದ್ದಾರೆ. 2021ರಲ್ಲಿ ಕೊನೆಯ ಬಾರಿಗೆ ಈ ಟೂರ್ನಿಯಲ್ಲಿ ಭಾಗಿಯಾಗಿದ್ದ ಅವರು 87.80 ಮೀಟರ್​ ದೂರ ಭರ್ಜಿ ಎಸೆದು ಚಿನ್ನಕ್ಕೆ ಕೊರಳೊಡ್ಡಿದ್ದರು. ಇದಕ್ಕೆ ಹೋಲಿಸಿದರೆ ಈ ಬಾರಿ ನೀರಜ್​ ಪ್ರಯತ್ನ ಹೇಳಿಕೊಳ್ಳುವ ಮಟ್ಟದಲ್ಲಿರಲಿಲ್ಲ.

ಪಂದ್ಯಾವಳಿ ನಂತರ ತಮ್ಮ ಪ್ರದರ್ಶನದ ಬಗ್ಗೆ ಚೋಪ್ರಾ ಪ್ರತಿಕ್ರಿಯಿಸಿ, "ಟೂರ್ನಿಯಲ್ಲಿ ಭಾಗಿಯಾಗಿದ್ದಕ್ಕೆ ಸಂತೋಷವಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಎಸೆಯಲು ಸಾಧ್ಯವಾಗಲಿಲ್ಲ. ದೋಹಾದಲ್ಲಿ ನಡೆದ ಡೈಮಂಡ್​ ಲೀಗ್​ ಟೂರ್ನಿಯಲ್ಲಿ ಭಾಗಿಯಾಗಿ ದೇಶಕ್ಕೆ ಹಿಂತಿರುಗಿದ್ದೆ. ಅಭ್ಯಾಸಕ್ಕಾಗಿ ಹೆಚ್ಚಿನ ಸಮಯ ಸಿಗಲಿಲ್ಲ" ಎಂದು ತಿಳಿಸಿದರು.

ಕಳೆದ ಶುಕ್ರವಾರ ದೋಹಾ ಡೈಮಂಡ್ ಲೀಗ್​ನಲ್ಲಿ ಭಾಗಿಯಾಗಿದ್ದ ಚೋಪ್ರಾ ಎರಡನೇ ಸ್ಥಾನ ಪಡೆದು ಬೆಳ್ಳಿಗೆ ತೃಪ್ತಿಪಟ್ಟಿದ್ದರು. ಈ ಲೀಗ್‌ನಲ್ಲಿ ತಮ್ಮ ಆರನೇ ಪ್ರಯತ್ನದಲ್ಲಿ 88.36 ಮೀಟರ್‌ ದೂರ ಜಾವೆಲಿನ್ ಎಸೆದಿದ್ದರು. ಇದು ಅವರ ಅತ್ಯುತ್ತಮ ಎಸೆತವಾಗಿತ್ತು. ಜೆಕ್ ಗಣರಾಜ್ಯದ ಜೇಕಬ್ ವಾಡ್ಲೆಚ್ 88.38 ಮೀಟರ್ ದೂರ ಭರ್ಜಿ ಚಿನ್ನ ಗೆದ್ದಿದ್ದರು.

ಇದನ್ನೂ ಓದಿ: IPL: ಪಂಜಾಬ್​ ವಿರುದ್ಧದ ಔಪಚಾರಿಕ ಪಂದ್ಯದಲ್ಲೂ ಎಡವಿದ ರಾಜಸ್ಥಾನ್​, ಸತತ 4ನೇ ಸೋಲು - PBKS Beat RR

ETV Bharat Logo

Copyright © 2025 Ushodaya Enterprises Pvt. Ltd., All Rights Reserved.