ಹೈದರಾಬಾದ್: ಭಾರತ ಕ್ರಿಕೆಟ್ನ ಯಶಸ್ವಿ ನಾಯಕರಲ್ಲಿ ಎಮ್ ಎಸ್ ಧೋನಿ ಕೂಡ ಒಬ್ಬರು. ಕ್ಯಾಪ್ಟನ್ ಕೂಲ್ ಹೆಸರಿನಿಂದಲೇ ಖ್ಯಾತಿ ಪಡೆದಿರುವ ಧೋನಿ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ವಿಶ್ವದ ಏಕೈಕ ನಾಯಕರಾಗಿ ದಾಖಲೆಯನ್ನು ಬರೆದಿದ್ದಿದ್ದಾರೆ. ಇದಷ್ಟೇ ಅಲ್ಲದೆ ಕ್ರಿಕೆಟ್ನಲ್ಲಿ ಬ್ಯಾಟಿಂಗ್ ಮತ್ತು ವಿಕೇಟ್ ಕೀಪಿಂಗ್ ಮೂಲಕ ಹಲವಾರು ದಾಖಲೆಗಳನ್ನು ಬರೆದಿದ್ದಾರೆ.
2020ರಲ್ಲಿ ಕ್ರಿಕೆಟ್ಗೆ ನಿವೃತ್ತಿ ಪಡೆದಿರುವ ಧೋನಿ ಸಧ್ಯ ಐಪಿಎಲ್ನಲ್ಲಿ ಸಕ್ರಿಯರಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಸರಿದು 4 ವರ್ಷಗಳು ಕಳೆದರು ಅವರ ಮಾರುಕಟ್ಟೆ ಮೌಲ್ಯದ ಮೇಲೆ ಮಾತ್ರ ಯಾವುದೇ ಪ್ರಭಾವ ಬೀರಿಲ್ಲ.
ಹೌದು, ಧೋನಿ ಈಗ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳ ಮೂಲಕ ಗಮನ ಸೆಳೆದಿದ್ದಾರೆ. ಬ್ರಾಂಡ್ ಒಪ್ಪಂದಗಳಿಗೆ ಸಹಿ ಹಾಕುವಲ್ಲಿ ಧೋನಿ, ಜನಪ್ರಿಯ ಬಾಲಿವುಡ್ ತಾರೆಗಳಾದ ಶಾರುಖ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಅವರನ್ನು ಹಿಂದಿಕ್ಕಿದ್ದಾರೆ.
ಬ್ರಾಂಡ್ ಎಂಡಾರ್ಸ್ಮೆಂಟ್ನಲ್ಲಿ ಧೋನಿ ಟಾಪ್
ಮಾಧ್ಯಮ ವರದಿಗಳ ಪ್ರಕಾರ, ಕ್ಯಾಪ್ಟನ್ ಕೂಲ್ 2024ರ ಮೊದಲ ಆರು ತಿಂಗಳಲ್ಲಿ 42 ಬ್ರಾಂಡ್‌ಗಳೊಂದಿಗಿನ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಇದಲ್ಲದೆ, ಬ್ರಾಂಡ್‌ಗಳನ್ನು ಅನುಮೋದಿಸುವಲ್ಲಿ ಅವರು ಶಾರುಖ್ ಖಾನ್ ಮತ್ತು ಅಮಿತಾಬ್ ಬಚ್ಚನ್‌ಗಿಂತ ಮುಂದಿದ್ದಾರೆ. ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಈ ವರ್ಷದ ಮೊದಲ ಆರು ತಿಂಗಳಲ್ಲಿ 41 ಬ್ರಾಂಡ್‌ಗಳೊಂದಿಗಿನ ಒಪ್ಪಂದಗಳಿಗೆ ಸಹಿ ಹಾಕಿದ್ದರೇ, ಇದೇ ವೇಳೆ ಶಾರುಖ್ ಖಾನ್ 34 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಆದರೇ ಈ ಇಬ್ಬರು ದಿಗ್ಗಜ ನಟರು ಎಂಎಸ್ ಧೋನಿಯನ್ನು ಹಿಂದಿಕ್ಕುವಲ್ಲಿ ವಿಫಲರಾಗಿದ್ದಾರೆ.
ಜಾರ್ಖಂಡ್‌ನಲ್ಲಿ ಮತದಾರರಿಗೆ ಶಿಕ್ಷಣ ನೀಡುವುದರಿಂದ ಹಿಡಿದು ಆಟೋಮೊಬೈಲ್ ಬ್ರಾಂಡ್‌ಗಳ ಪ್ರಚಾರದವರೆಗೆ ಧೋನಿಯ ಪ್ರಭಾವ ಮುಂದುವರಿದಿದೆ. ಸಧ್ಯ ಐಪಿಎಲ್ ಮಾತ್ರ ಆಡುತ್ತಿರುವ ಧೋನಿಯ ಕ್ರೇಜ್ ಕಡಿಮೆ ಆಗಿಲ್ಲ. ಇವರೊಂದಿಗೆ ಬೆರೆತು ತಮ್ಮ ಬ್ರಾಂಡ್‌ಗಳ ಪ್ರಚಾರ ಮಾಡಲು ಹಲವಾರು ಕಂಪನಿಗಳು ಎದುರುನೋಡುತ್ತಿವೆ. ಧೋನಿಯ ಜಾಹೀರಾತು ಸ್ಕ್ರೀನಿಂಗ್ ಸಮಯವು ಇತರ ಸ್ಟಾರ್‌ಗಳ ಜಾಹೀರಾತು ಸಮಯಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಆದರೆ, ಅವರ ಬ್ರ್ಯಾಂಡ್ ಮೌಲ್ಯ ಮಾತ್ರ ನಿರಂತರವಾಗಿ ಹೆಚ್ಚುತ್ತಿದೆ. ಅಲ್ಲದೇ ಈ ವರ್ಷ ಧೋನಿ ಅನೇಕ ಪ್ರಸಿದ್ಧ ಬ್ರಾಂಡ್‌ಗಳೊಂದಿಗಿನ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.
ಧೋನಿ ಒಂಪಂದ ಮಾಡಿಕೊಂಡಿರುವ ಪ್ರಮುಖ ಕಂಪನಿಗಳು
ಸಿಟ್ರೊಯೆನ್, ಡ್ರೋನ್ ಸ್ಟಾರ್ಟ್ಅಪ್ ಗರುಡಾ ಏರೋಸ್ಪೇಸ್, ಫ್ಲಿಪ್‌ಕಾರ್ಟ್ ಒಡೆತನದ ಕ್ಲಿಯರ್‌ಟ್ರಿಪ್, ಪೆಪ್ಸಿಕೋ, ಇಮೊಟೊರಾಡ್, ಮಾಸ್ಟರ್‌ಕಾರ್ಡ್, ಗಲ್ಫ್ ಆಯಿಲ್, ಓರಿಯಂಟ್ ಎಲೆಕ್ಟ್ರಿಕ್ ಮತ್ತು ಎಕ್ಸ್ಪ್ಲೋಸಿವ್ ವೇ ಆಗಿದೆ. ಇತ್ತೀಚೆಗೆ ಯೂರೋಗ್ರಿಪ್ ಟೈರ್ಸ್‌ನೊಂದಿಗೂ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
2025ರ ಐಪಿಎಲ್ ಆಡಲಿರುವ ಧೋನಿ
ಈ ಬಾರಿಯೂ ಐಪಿಎಲ್ನಲ್ಲಿ ಧೋನಿ ಅವರ ಆಟವನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳ ಬಹುದಾಗಿದೆ. ಅನ್ ಕ್ಯಾಪ್ಡ್ ಆಟಗಾರನಾಗಿ ಆಡಲಿದ್ದಾರೆ. ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಅವರನ್ನು 4 ಕೋಟಿ ರೂಪಾಯಿ ಕೊಟ್ಟು ತಂಡದಲ್ಲಿ ಉಳಿಸಿಕೊಂಡಿದೆ.
ಇದನ್ನೂ ಓದಿ: IPLನಲ್ಲಿ ಬಿಕರಿಯಾಗದ ಆಟಗಾರರ ಮೇಲೆ ಪಾಕ್ ಕಣ್ಣು: ಸ್ಟಾರ್ ಆಟಗಾರರಿಗೆ ಬಂಪರ್ ಆಫರ್!