ETV Bharat / sports

IPL 2024, DC vs RR: ರಾಜಸ್ಥಾನ ವಿರುದ್ಧ 20 ರನ್‌ಗಳಿಂದ ಗೆದ್ದ ಡೆಲ್ಲಿ; ಪ್ಲೇ ಆಫ್ ರೇಸ್‌ನಲ್ಲಿ ಪಂತ್ ಬಳಗ - Delhi Beat Rajasthan - DELHI BEAT RAJASTHAN

ಮಂಗಳವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದು ಬೀಗಿತು.

ಡೆಲ್ಲಿ ಕ್ಯಾಪಿಟಲ್ಸ್
ಡೆಲ್ಲಿ ಕ್ಯಾಪಿಟಲ್ಸ್ (IANS)
author img

By PTI

Published : May 8, 2024, 7:20 AM IST

Updated : May 8, 2024, 8:26 AM IST

ನವದೆಹಲಿ: ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಿನ್ನೆ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 20 ರನ್‌ಗಳಿಂದ ಗೆಲುವು ಸಾಧಿಸಿತು. ಈ ಮೂಲಕ ರಿಷಬ್ ಪಂತ್ ನೇತೃತ್ವದ ತಂಡ ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್‌ 8 ವಿಕೆಟ್‌ ನಷ್ಟಕ್ಕೆ 221 ರನ್ ಪೇರಿಸಿತು. ಇದಕ್ಕುತ್ತರವಾಗಿ, ರಾಜಸ್ಥಾನ್ ರಾಯಲ್ಸ್ 8 ವಿಕೆಟ್‌ ನಷ್ಟಕ್ಕೆ 201 ರನ್​ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.

ದೆಹಲಿ ತಂಡದ ಬೌಲರ್‌ ಕುಲದೀಪ್ ಯಾದವ್, ಖಲೀಲ್ ಅಹ್ಮದ್ ಮತ್ತು ಮುಖೇಶ್ ಕುಮಾರ್ ತಲಾ 2 ವಿಕೆಟ್ ಉರುಳಿಸಿದರು.

ಈ ಗೆಲುವಿನೊಂದಿಗೆ ಡೆಲ್ಲಿ ತಂಡವು ಪಾಯಿಂಟ್ಸ್​ ಪಟ್ಟಿಯಲ್ಲಿ ತಲಾ 12 ಅಂಕಗಳನ್ನು ಪಡೆದ ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್‌ ತಂಡದ ಸಾಲಿನಲ್ಲಿ ಸೇರಿಕೊಂಡಿದೆ.

ಸಂಕ್ಷಿಪ್ತ ಸ್ಕೋರ್‌ ವಿವರ:

  • ಡೆಲ್ಲಿ ಕ್ಯಾಪಿಟಲ್ಸ್: 8 ವಿಕೆಟ್‌ಗೆ 221 (ಜೇಕ್ ಫ್ರೇಸರ್-ಮೆಕ್‌ಗುರ್ಕ್ 50, ಅಭಿಷೇಕ್ ಪೊರೆಲ್ 65, ರವಿಚಂದ್ರನ್ ಅಶ್ವಿನ್ 3/24).
  • ರಾಜಸ್ಥಾನ್ ರಾಯಲ್ಸ್: 8 ವಿಕೆಟ್‌ಗೆ 201 (ಸಂಜು ಸ್ಯಾಮ್ಸನ್ 86, ಕುಲದೀಪ್ ಯಾದವ್ 2/25, ಖಲೀಲ್ ಅಹ್ಮದ್ 2/47, ಮುಖೇಶ್ ಕುಮಾರ್ 2/30).

IPLನಲ್ಲಿ ಇಂದು: ಸನ್‌ರೈಸರ್ಸ್‌ ಹೈದರಾಬಾದ್ vs ಲಕ್ನೋ ಸೂಪರ್‌ಜೈಂಟ್ಸ್‌

ಸ್ಥಳ: ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನ, ಹೈದರಾಬಾದ್

ಸಮಯ: ಸಂಜೆ 7.30ಕ್ಕೆ

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ 350 ವಿಕೆಟ್​ ಕಿತ್ತ ಮೊದಲ ಭಾರತೀಯ ದಾಖಲೆ ಬರೆದ ಯಜುವೇಂದ್ರ ಚಹಲ್​ - yuzvendra chahal

Last Updated : May 8, 2024, 8:26 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.