ETV Bharat / sports

ಸೊನ್ನೆಗೆ ಔಟಾದಾಗ ನಕ್ಕಿದ್ದ ಯುವರಾಜ್​ ಸಿಂಗ್​: ಶತಕವೀರ ಅಭಿಷೇಕ್​ ಶರ್ಮಾ ಹೀಗೆ ಹೇಳಿದ್ಯಾಕೆ? - ABHISHEK SHARMA - ABHISHEK SHARMA

2ನೇ ಟಿ-20 ಪಂದ್ಯದಲ್ಲಿ ಶತಕ ಬಾರಿಸಿ ಎಲ್ಲರ ಗಮನ ಸೆಳೆದಿರುವ ಉದಯೋನ್ಮುಖ ಕ್ರಿಕೆಟರ್​ ಅಭಿಷೇಕ್​ ಶರ್ಮಾ ಎಲ್ಲರ ಗಮನ ಸೆಳೆದಿದ್ದಾರೆ. ಜಿಂಬಾಬ್ವೆ ವಿರುದ್ಧ 3ನೇ ಟಿ20 ಪಂದ್ಯ ಜುಲೈ 10 ರಂದು ನಡೆಯಲಿದೆ.

ಅಭಿಷೇಕ್​ ಶರ್ಮಾ
ಅಭಿಷೇಕ್​ ಶರ್ಮಾ (AP)
author img

By ETV Bharat Karnataka Team

Published : Jul 8, 2024, 6:25 PM IST

ಹರಾರೆ (ಜಿಂಬಾಬ್ವೆ): 17ನೇ ಆವೃತ್ತಿಯ ಐಪಿಎಲ್​​ನಿಂದ ಕ್ರಿಕೆಟ್​ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿರುವ ಹೆಸರು ಅಭಿಷೇಕ್​ ಶರ್ಮಾ. ಬಿರುಸಾದ ಬ್ಯಾಟಿಂಗ್​ನಿಂದ ಗುರುತಿಸಿಕೊಂಡಿರುವ ಅಭಿಷೇಕ್​ ಭಾರತ ರಾಷ್ಟ್ರೀಯ ಕ್ರಿಕೆಟ್​ ತಂಡಕ್ಕೂ ಪದಾರ್ಪಣೆ ಮಾಡಿ, ಶತಕ ಬಾರಿಸಿ ಸೈ ಎನಿಸಿಕೊಂಡಿದ್ದಾರೆ. ಯುವರಾಜ್​ ಸಿಂಗ್​ರ ಗರಡಿಯಲ್ಲಿ ಪಳಗಿರುವ ಎಡಗೈ ಬ್ಯಾಟರ್​, ಚೊಚ್ಚಲ ಪಂದ್ಯದಲ್ಲಿ ಸೊನ್ನೆಗೆ ಔಟಾದರೆ, 2ನೇ ಪಂದ್ಯದಲ್ಲಿ ಶತಕ ಸಾಧನೆ ಮಾಡಿದ್ದಾರೆ.

ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ-20 ಸರಣಿಯ 2ನೇ ಪಂದ್ಯವನ್ನು ಭಾರತ 100 ರನ್​ ಅಂತರದಿಂದ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಆರಂಭಿಕನಾಗಿ ಬಂದ ಅಭಿಷೇಕ್​ ಶರ್ಮಾ ಗಳಿಸಿದ್ದು ಕೂಡ 100 ರನ್​. ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಅಬ್ಬರದಿಂದ ಪ್ರಾರಂಭಿಸಲು ಬಯಸಿದ ಅಭಿಷೇಕ್​ಗೆ ಚೊಚ್ಚಲ ಪಂದ್ಯದಲ್ಲೇ ನಿರಾಸೆ ಕಾದಿತ್ತು. ಅವರು ಸೊನ್ನೆಗೆ ನಿರ್ಗಮಿಸಿದ್ದರು.

ಸೊನ್ನೆಗೆ ಔಟಾದಾಗ ನಕ್ಕಿದ್ದರು: ಭಾರತ ಕ್ರಿಕೆಟ್​ ತಂಡದ ಮಾಜಿ ಸ್ಟಾರ್​ ಆಲ್​ರೌಂಡರ್​ ಯುವರಾಜ್​ ಸಿಂಗ್​ರ ಶಿಷ್ಯರಾಗಿರುವ ಅಭೀಷೇಕ್​ ಶರ್ಮಾ ಶತಕದ ಬಳಿಕ ಗುರುವಿಗೆ ಫೋನ್​ ಕರೆ ಮಾಡಿ ಮಾತನಾಡಿದ್ದರು. ಮೊದಲ ಪಂದ್ಯದಲ್ಲಿ ಸೊನ್ನೆಗೆ ಔಟಾದಾಗಲೂ ಕರೆ ಮಾಡಿದ್ದಾಗ ಯುವರಾಜ್​ ಸುಮ್ಮನೆ ನಕ್ಕಿದ್ದರು. ಇದನ್ನು ಶರ್ಮಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ಬಿಸಿಸಿಐ ಎಕ್ಸ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

"ಜಿಂಬಾಬ್ವೆ ವಿರುದ್ಧ ನಡೆದ ಟಿ-20 ಚೊಚ್ಚಲ ಪಂದ್ಯದಲ್ಲಿ ಡಕ್​ಔಟ್​ ಆದಾಗ ತಮ್ಮ ಮೆಂಟರ್ ಆಗಿರುವ ಯುವರಾಜ್ ಸಿಂಗ್ ಸಂತೋಷದಿಂದಲೇ ನಕ್ಕಿದ್ದರು. ಇದು ಉತ್ತಮ ಆರಂಭ ಎಂದಿದ್ದರು. ಇದೀಗ ಶತಕ ಸಾಧನೆ ಮಾಡಿದ್ದೇನೆ. ಇದನ್ನು ನೋಡಿ ಅವರು ನಿಜಕ್ಕೂ ಸಂತಸಗೊಂಡಿರುತ್ತಾರೆ. ನನ್ನ ಕುಟುಂಬ ಸಹ ತುಂಬಾ ಸಂತೋಷ ಮತ್ತು ಹೆಮ್ಮೆಪಡುತ್ತಿದೆ" ಎಂದು ಅಭಿಷೇಕ್ ಹೇಳಿದ್ದಾರೆ.

"ಇದೆಲ್ಲವೂ ಯುವರಾಜ್​ ಸಿಂಗ್​ ಮಾರ್ಗದರ್ಶನ ಮತ್ತು ಮೂರು ವರ್ಷದ ಕಠಿಣ ಪರಿಶ್ರಮದ ಫಲವಾಗಿದೆ. ಯುವರಾಜ್​ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೇ ವೈಯಕ್ತಿಕ ಜೀವನದಲ್ಲೂ ಶ್ರಮಿಸಿದ್ದಾರೆ. ಎರಡನೇ ಪಂದ್ಯದಲ್ಲಿ ಶತಕದ ಬಳಿಕ ಸಿಂಗ್ ಜೊತೆ ಮಾತನಾಡಿದಾಗ, ನಿನ್ನ ಸಾಧನನೆ ಬಗ್ಗೆ ತುಂಬಾ ಹೆಮ್ಮೆ ಇದೆ. ನೀನು ಅದಕ್ಕೆ ಅರ್ಹ. ಇಂತಹ ಹಲವು ಇನಿಂಗ್ಸ್​​ಗಳು ಬಾಕಿ ಇವೆ ಎಂದಿದ್ದಾರೆ" ಎಂದು ಅಭಿಷೇಕ್ ಹೇಳಿದ್ದಾರೆ.

ಮೊದಲ ಆಟಗಾರ: ವೃತ್ತಿ ಜೀವನದ 2ನೇ ಇನಿಂಗ್ಸ್​​ನಲ್ಲೇ ಶತಕ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಎಂಬ ದಾಖಲೆಗೆ 23ರ ಹರೆಯದ ಅಭಿಷೇಕ್​ ಪಾತ್ರರಾದರು. ಇದಕ್ಕೂ ಮೊದಲು ದೀಪಕ್​ ಹೂಡಾ ತಮ್ಮ ಮೂರನೇ ಪಂದ್ಯದಲ್ಲಿ ಅವರು ಶತಕ ಬಾರಿಸಿದ್ದರು. ಕೆಎಲ್​ ರಾಹುಲ್​ 4ನೇ ಪಂದ್ಯದಲ್ಲಿ ಶತಕ ಗಳಿಸಿದ್ದರು. ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಭಾರತ 1-1 ರಲ್ಲಿ ಸಮಬಲ ಸಾಧಿಸಿದೆ. ಮೊದಲ ಪಂದ್ಯವನ್ನು 13 ರನ್​ಗಳಿಂದ ಸೋತಿತ್ತು.

ಇದನ್ನೂ ಓದಿ : 2ನೇ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲೇ ಅಭಿಷೇಕ್​ ಶರ್ಮಾ ಶತಕ: ಜಿಂಬಾಬ್ವೆಗೆ 235 ರನ್​ ಗೆಲುವಿನ ಗುರಿ! - IND VS ZIM T20I Series

ETV Bharat Logo

Copyright © 2024 Ushodaya Enterprises Pvt. Ltd., All Rights Reserved.