IND vs SA 2nd T20: ಟೀಂ ಇಂಡಿಯಾ (Team India) ವಿರುದ್ಧ ನಡೆದ T20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (South Africa) ಭರ್ಜರಿ ಗೆಲುವು ಸಾಧಿಸಿದೆ. ಭಾನುವಾರ ಸೇಂಟ್ ಜಾರ್ಜಸ್ ಕ್ರೀಡಾಂಗಣದಲ್ಲಿ ನಡೆದ ನಾಲ್ಕು ಪಂದ್ಯಗಳ ಟಿ20 ಸರಣಿಯ (T20 Series) ಎರಡನೇ ಪಂದ್ಯದಲ್ಲಿ ಹರಿಣ ಪಡೆ 3 ವಿಕೆಟ್ಗಳಿಂದ ರೋಚಕ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಸರಣಿಯಲ್ಲಿ 1-1 ಸಮಬಲ ಸಾಧಿಸಿತು.
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟ್ ಮಾಡಿದ್ದ ಭಾರತ ಪವರ್ ಪ್ಲೇನಲ್ಲೇ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಘರ್ಜಿಸಿದ್ದ ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲಿ ಖಾತೆ ತೆರೆಯದೆ ಶೂನ್ಯಕ್ಕೆ ನಿರ್ಗಮಿಸಿದರು. ಮತ್ತೊಂದೆಡೆ, ಸತತ ವೈಫಲ್ಯ ಅನುಭವಿಸುತ್ತಿರುವ ಓಪನರ್ ಅಭಿಷೇಕ್ ಶರ್ಮಾ ಈ ಪಂದ್ಯದಲ್ಲೂ ಹೇಳಿಕೊಳ್ಳುವ ಪ್ರದರ್ಶನ ನೀಡಲಿಲ್ಲ. ಹಾರ್ದಿಕ್ ಪಾಂಡ್ಯ (39) ಹೊರತುಪಡಿಸಿ ಉಳಿದ ಬ್ಯಾಟರ್ಗಳು ಹರಿಣ ಪಡೆಯ ಬೌಲಿಂಗ್ ದಾಳಿಗೆ ಸಿಲುಕಿ ಕನಿಷ್ಠ 30ರ ಗಡಿ ತಲುಪಲು ಸಾಧ್ಯವಾಗಲಿಲ್ಲ. ತಿಲಕ್ ವರ್ಮಾ (20), ಅಕ್ಷರ್ ಪಟೇಲ್ (27), ರಿಂಕು ಸಿಂಗ್ (9), ಅರ್ಷದೀಪ್ (7) ಅಲ್ಪಮೊತ್ತಕ್ಕೆ ಪೆವಿಲಿಯನ್ ಸೇರಿದರು.
A thriller in Gqeberha as South Africa win the 2nd T20I by 3 wickets to level the series 1-1#TeamIndia will aim to bounce back in the next match
— BCCI (@BCCI) November 10, 2024
Scorecard - https://t.co/ojROEpNVp6#SAvIND pic.twitter.com/Cjw0ik0m4q
ಬ್ಯಾಟಿಂಗ್ ಲೈನ್ಅಪ್ ಕುಸಿತದಿಂದಾಗಿ ಟೀಂ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 124 ರನ್ ಗಳಿಸಲಷ್ಟೇ ಶಕ್ತವಾಯಿತು.
ಆಪತ್ಪಾಂಧವ ಸ್ಟಬ್ಸ್: ಈ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ಎದ್ದು ಬಿದ್ದು ಗೆಲುವಿನ ದಡ ಸೇರಿತು. ಟ್ರಿಸ್ಟನ್ ಸ್ಟಬ್ಸ್ (47), ಹೆಂಡ್ರಿಕ್ (27) ಬ್ಯಾಟಿಂಗ್ ನೆರವಿನಿಂದ 1 ಓವರ್ ಬಾಕಿ ಇರುವಂತೆಯೇ ಪಂದ್ಯ ಗೆದ್ದುಕೊಂಡಿತು. ಇವರಿಬ್ಬರನ್ನು ಹೊರತುಪಡಿಸಿ ಉಳಿದ ಯಾವುದೇ ಬ್ಯಾಟ್ಸ್ಮನ್ ಎರಡಂಕಿ ದಾಟಲು ಸಾಧ್ಯವಾಗಲಿಲ್ಲ.
🟢🟡Match Result
— Proteas Men (@ProteasMenCSA) November 10, 2024
Superb Cricket from our Proteas!😃🥳🏏
🇿🇦South Africa win by 3 wickets
The series is now level at 1-1.
Next stop, Centurion😉#WozaNawe #BePartOfIt #SAvIND pic.twitter.com/du7zjYW2KZ
ಚಕ್ರವರ್ತಿ ಹೋರಾಟ ವ್ಯರ್ಥ: ಬೌಲಿಂಗ್ನಲ್ಲಿ ಭಾರತದ ಪರ ಕನ್ನಡಿಗ ವರುಣ್ ಚಕ್ರವರ್ತಿ ಭರ್ಜರಿ ಪ್ರದರ್ಶನ ತೋರಿದರು. ನಾಲ್ಕು ಓವರ್ಗಳಲ್ಲಿ 17 ರನ್ ನೀಡಿ 5 ವಿಕೆಟ್ ಉರುಳಿಸಿದರು. ಉಳಿದಂತೆ ರವಿ ಬಿಷ್ಟೋಯ್ ಮತ್ತು ಅರ್ಷದೀಪ್ ಸಿಂಗ್ ತಲಾ 1 ವಿಕೆಟ್ ಪಡೆದರು.
17 ವರ್ಷದ ದಾಖಲೆ ಸೇಫ್: ನಿನ್ನೆ ಸೇಂಟ್ ಜಾರ್ಜ್ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ ತನ್ನ ಹೆಸರಲ್ಲಿರುವ 17 ವರ್ಷಗಳ ದಾಖಲೆಯನ್ನು ಹಾಗೆಯೇ ಉಳಿಸಿಕೊಂಡಿದೆ. ಹೌದು, ಕಳೆದ ಹದಿನೇಳು ವರ್ಷಗಳಿಂದ ಈ ಮೈದಾನದಲ್ಲಿ ನಡೆದಿರುವ ಟಿ20 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಒಂದೇ ಒಂದು ಬಾರಿಯೂ ಸೋಲನುಭವಿಸಿಲ್ಲ. ಕೊನೆಯದಾಗಿ 2007ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋಲನುಭವಿಸಿತ್ತು. ಇದುವರೆಗೂ ಈ ಮೈದಾನದಲ್ಲಿ ಒಟ್ಟು 5 ಬಾರಿ ಟಿ20 ಪಂದ್ಯವನ್ನು ಆಡಿರುವ ದಕ್ಷಿಣ ಆಫ್ರಿಕಾ 4 ರಲ್ಲಿ ಗೆಲುವು ಸಾಧಿಸಿದೆ. ಆದ್ರೆ ಈ ಮೈದಾನದಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದ ದಾಖಲೆ ಭಾರತದ ಹೆಸರಲ್ಲಿದೆ.
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ನಡೆದಿದ್ದ ಟಿ20 ಪಂದ್ಯದಲ್ಲಿ ಭಾರತ 180 ರನ್ ಕಲೆಹಾಕಿತ್ತು. ಇದು ಈ ವರೆಗಿನ ಹೈಸ್ಕೋರ್. ಆದ್ರೆ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಡೆಕ್ವರ್ತ್ ಲೂಯಿಸ್ ನಿಯಮದಿಂದಾಗಿ ಗೆಲುವು ಸಾಧಿಸಿತ್ತು. ಈ ಹಿನ್ನೆಲೆಯಲ್ಲಿ ಸೇಂಟ್ ಜಾರ್ಜ್ ಓವಲ್ ಮೈದಾನ ದಕ್ಷಿಣ ಆಫ್ರಿಕಾಕ್ಕೆ ಫೇವರಿಟ್ ಆಗಿದೆ.
ಇದನ್ನೂ ಓದಿ: IND vs SA 2nd T20: ಮೊದಲ ಪಂದ್ಯ ಗೆದ್ದರೂ ಟೀಂ ಇಂಡಿಯಾಗೆ ಕಡಿಮೆ ಆಗಿಲ್ಲ ಟೆನ್ಶನ್: ಕಾರಣ ಏನು ಗೊತ್ತಾ?