ETV Bharat / sports

ಕಿವೀಸ್​ ವಿರುದ್ಧ ಎರಡನೇ ಟೆಸ್ಟ್​ ಸೋತ ಭಾರತ: WTC ಅಂಕ ಪಟ್ಟಿಯಲ್ಲಿ ಭಾರೀ ಕುಸಿತ, ಹೇಗಿದೆ ಫೈನಲ್​ ಹಾದಿ? - INDIA VS NEW ZEALANAD 2ND TEST

ನ್ಯೂಜಿಲೆಂಡ್​ ವಿರುದ್ಧ ಎರಡನೇ ಟೆಸ್ಟ್​ ಸೋತಿರುವ ಭಾರತ ಅಂಕಪಟ್ಟಿಯಲ್ಲಿ ಭಾರೀ ಕುಸಿತ ಕಂಡಿದೆ.

ಟೀ ಇಂಡಿಯಾ
ಟೀ ಇಂಡಿಯಾ (AP)
author img

By ETV Bharat Sports Team

Published : Oct 26, 2024, 5:06 PM IST

WTC Points Table India: ನ್ಯೂಜಿಲೆಂಡ್​ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ 113 ರನ್​ಗಳ ಹೀನಾಯ ಸೋಲನುಭವಿಸಿದೆ. ಇದರೊಂದಿಗೆ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ಕೈಚೆಲ್ಲಿದೆ. ತವರು ನೆಲದಲ್ಲಿ ಸತತ 18 ಟೆಸ್ಟ್​ ಸರಣಿ ಗೆದ್ದು ಗೆಲವಿನ ಓಟ ಮುಂದುವರೆಸಿದ್ದ ಭಾರತದ ಓಟಕ್ಕೆ ಕಿವೀಸ್ ಪಡೆ ಬ್ರೇಕ್ ಹಾಕಿದೆ.

ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್​ನಲ್ಲಿ 156 ರನ್​ಗಳಿಗೆ ಸೋಲನ್ನು ಕಂಡಿದ್ದ ಭಾರತ ಎರಡನೇ ಪಂದ್ಯದಲ್ಲಿ 113 ರನ್​ಗಳಿಂದ ಸೋಲನುಭವಿಸಿತು. ತವರಿನಲ್ಲಿ ಸ್ಪಿನ್ ಬಲೆ ಬೀಸಿ ಎದುರಾಳಿಗಳನ್ನು ಕಾಡುತ್ತಿದ್ದ ಭಾರತ ಈ ಬಾರಿ ಅದೇ ಅಸ್ತ್ರಕ್ಕೆ ತಲೆಬಾಗಿ ನ್ಯೂಜಿಲೆಂಡ್​ಗೆ ಸರಣಿ ಬಿಟ್ಟುಕೊಟ್ಟಿತು. ಎರಡು ಪಂದ್ಯಗಳ ಸೋಲಿನಿಂದಾಗಿ ವಿಶ್ವ ಟೆಸ್ಟ್​ ಚಾಂಪಿಯನ್ಸ್​ ಅಂಕಪಟ್ಟಿಯಲ್ಲೂ ಭಾರತ ಭಾರೀ ಹಿನ್ನಡೆ ಅನುಭವಿಸಿದೆ.

WTC ಅಂಕಪಟ್ಟಿ: ನ್ಯೂಜಿಲೆಂಡ್ ವಿರುದ್ಧ ಸತತ ಎರಡು ಸೋಲಿನ ನಂತರವೂ ಭಾರತ ತಂಡ ಡಬ್ಲ್ಯುಟಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಶೇಕಡಾವಾರು ಅಂಕದಲ್ಲಿ ಭಾರೀ ಕುಸಿತ ಕಂಡಿದೆ. ಬಾಂಗ್ಲಾದೇಶ ವಿರುದ್ಧ ಸರಣಿ ಗೆದ್ದ ವೇಳೆ ಭಾರತ WTC ಟೆಸ್ಟ್​ ಶೇಕಡಾವಾರು ಅಂಕ 74 ಇತ್ತು. ಇದೀಗ 62.820ಕ್ಕೆ ಬಂದು ತಲುಪಿದೆ. ಪ್ರಸ್ತುತ ವಿಶ್ವ ಟೆಸ್ಟ್​ ಚಾಂಪಿಯನ್ಸ್​ ಋತುವಿನಲ್ಲಿ ಭಾರತ ತಂಡ ಇದುವರೆಗೆ 13 ಪಂದ್ಯಗಳನ್ನು ಆಡಿ 8ರಲ್ಲಿ ಗೆದ್ದು 4ರಲ್ಲಿ ಸೋತಿದೆ. 1 ಪಂದ್ಯ ಡ್ರಾ ಆಗಿದ್ದು 98 ಅಂಕ ಹೊಂದಿದೆ.

ಭಾರತ ವಿರುದ್ಧ ಟೆಸ್ಟ್​ ಸರಣಿ ಗೆದ್ದ ನ್ಯೂಜಿಲೆಂಡ್ ಪಾಯಿಂಟ್ಸ್ ಪಟ್ಟಿಯಲ್ಲಿ ಏರಿಕೆ ಕಂಡಿದೆ. ಈ ಹಿಂದೆ ಡಬ್ಲ್ಯುಟಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದ ತಂಡ, ಇದೀಗ 4ನೇ ಸ್ಥಾನಕ್ಕೆ ತಲುಪಿದೆ. ಕಿವೀಸ್ ತಂಡ ಇದುವರೆಗೆ 10 ಪಂದ್ಯಗಳನ್ನು ಆಡಿ 5ರಲ್ಲಿ ಗೆಲುವು ಸಾಧಿಸಿದೆ.

ಉಳಿದಂತೆ ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ಅದೂ ಕೂಡ 12 ಪಂದ್ಯಗಳನ್ನು ಆಡಿ 3 ರಲ್ಲಿ ಸೋಲನ್ನು ಕಂಡಿದೆ. 1 ಪಂದ್ಯ ಡ್ರಾ ಆಗಿದೆ. 90 ಅಂಕಗಳೊಂದಿಗೆ 62.500 ಶೇಕಡಾವಾರು ಅಂಕ ಹೊಂದಿದೆ.

ಭಾರತದ WTC ಫೈನಲ್​ ಹಾದಿ: ಟೀಂ ಇಂಡಿಯಾ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ ಪ್ರವೇಶ ಪಡೆಯಬೇಕೆಂದರೆ ಮುಂದಿನ 6 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ನ್ಯೂಜಿಲೆಂಡ್​ ವಿರುದ್ಧ ಒಂದು ಟೆಸ್ಟ್​ ಪಂದ್ಯ ಬಾಕಿಯುದ್ದು, ಆಸ್ಟ್ರೇಲಿಯಾ ಜೊತೆ 5 ಪಂದ್ಯಳ ಬಾರ್ಡರ್​ ಗವಾಸ್ಕರ್​ ಟೆಸ್ಟ್​ ಸರಣಿ ಆಡಲಿದೆ.

ಇದನ್ನೂ ಓದಿ: 67 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್​ ಸರಣಿ ಗೆದ್ದ ನ್ಯೂಜಿಲೆಂಡ್​: 12 ವರ್ಷ ಬಳಿಕ ತವರಿನಲ್ಲಿ ಸರಣಿ ಸೋತ ಟೀಂ ಇಂಡಿಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.