ETV Bharat / sports

ಡಬ್ಲ್ಯೂಟಿಸಿ ಶ್ರೇಯಾಂಕ ಪಟ್ಟಿ: ಭಾರತದ ಸ್ಥಾನ ಎಷ್ಟಿದೆ?, ಬಾಂಗ್ಲಾ ವಿರುದ್ಧ ಸೋತ ಪಾಕಿಸ್ತಾನದ ಸ್ಥಿತಿಯೇನು? - WTC 2025 Rankings - WTC 2025 RANKINGS

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ನ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಕಾಯ್ದುಕೊಂಡಿದೆ. ಬಾಂಗ್ಲಾದೇಶ ವಿರುದ್ಧ ಸೋತ ಪಾಕಿಸ್ತಾನ ಕೊನೆಯ ಎರಡನೇ ಕ್ರಮಾಂಕಕ್ಕೆ ಕುಸಿದಿದೆ.

ಡಬ್ಲ್ಯೂಟಿಸಿ ಶ್ರೇಯಾಂಕ ಪಟ್ಟಿ
ಡಬ್ಲ್ಯೂಟಿಸಿ ಶ್ರೇಯಾಂಕ ಪಟ್ಟಿ (AP)
author img

By ETV Bharat Karnataka Team

Published : Sep 4, 2024, 5:11 PM IST

ದುಬೈ: ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​​ ಪಂದ್ಯಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್​​ ಸಮಿತಿ (ಐಸಿಸಿ) ಮುಹೂರ್ತ ಫಿಕ್ಸ್​ ಮಾಡಿದೆ. ಕ್ರಿಕೆಟ್​​ ಕಾಶಿ ಎಂದೇ ಕರೆಯಲಾಗುವ ಲಾರ್ಡ್ಸ್​ ಮೈದಾನದಲ್ಲಿ ಅಗ್ರ ಎರಡು ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಈ ಮಧ್ಯೆ, ಡಬ್ಲ್ಯೂಟಿಸಿ ಫೈನಲ್​ಗಾಗಿ ಸೆಣಸಾಡುತ್ತಿರುವ ತಂಡಗಳ ನೂತನ ಶ್ರೇಯಾಂಕ ಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ.

ಸದ್ಯ ಭಾರತ ಮತ್ತು ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ಅಗ್ರ 2 ಸ್ಥಾನದಲ್ಲಿವೆ. ಭಾರತ ಆಡಿರುವ 9 ಪಂದ್ಯಗಳಲ್ಲಿ 6 ಗೆದ್ದು 2 ಸೋತು, 1 ಡ್ರಾ ಸಾಧಿಸಿದೆ. ಶೇಕಡಾ 68.52 ರಷ್ಟು ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಮಾಜಿ ಚಾಂಪಿಯನ್​ ಆಸ್ಟ್ರೇಲಿಯಾ 12 ಪಂದ್ಯಗಳಲ್ಲಿ 8 ಗೆಲುವು, 3 ಸೋಲು, 1 ಡ್ರಾದೊಂದಿಗೆ ಶೇಕಡಾ 62.5 ಫಲಿತಾಂಶದೊಂದಿಗೆ 2ನೇ ಸ್ಥಾನದಲ್ಲಿದೆ. ಹಾಲಿ ಚಾಂಪಿಯನ್​ ಆಗಿರುವ ನ್ಯೂಜಿಲ್ಯಾಂಡ್​​ 6 ಪಂದ್ಯಗಳಲ್ಲಿ ತಲಾ 3 ಗೆಲುವು, ಸೋಲಿನಿಂದಿಗೆ ಶೇಕಡಾ 50 ಅಂಕ ಹೊಂದಿ ಮೂರನೇ ಕ್ರಮಾಂಕದಲ್ಲಿದೆ.

ಪಾಕ್​ ಸೋಲಿಸಿದ ಬಾಂಗ್ಲಾಗೆ ಬಂಪರ್​​: ಪಾಕಿಸ್ತಾನ ವಿರುದ್ಧ 2 ಪಂದ್ಯಗಳ ಟೆಸ್ಟ್​ ಸರಣಿಯನ್ನು ಕ್ಲೀನ್​ಸ್ವೀಪ್​ ಮಾಡಿದ ಬಾಂಗ್ಲಾದೇಶ ಪಾಯಿಂಟ್​ ಪಟ್ಟಿಯಲ್ಲಿ ಭರ್ಜರಿ ಸಾಧನೆ ಮಾಡಿದೆ. ಆಡಿದ 6 ಪಂದ್ಯಗಳಲ್ಲಿ ತಲಾ 3 ಸೋಲು, ಗೆಲುವಿನೊಂದಿಗೆ 45.83 ರಷ್ಟು ಗೆಲುವಿನ ಪ್ರತಿಶತ ಕಾಯ್ದುಕೊಂಡು 4ನೇ ಸ್ಥಾನದಲ್ಲಿದೆ. ಇಂಗ್ಲೆಂಡ್​​ ಇರುವ ಟೀಂಗಳಲ್ಲಿ ಅತಿಹೆಚ್ಚು ಪಂದ್ಯವಾಡಿದ್ದರೂ ಗೆಲುವಿನ ಪ್ರಮಾಣ ಮಾತ್ರ ಶೇಕಡಾ 45 ರಷ್ಟಿದೆ. ಆಂಗ್ಲರು 15 ಪಂದ್ಯಗಳಲ್ಲಿ 8 ಗೆಲುವು, 6 ಸೋಲು, 1 ಡ್ರಾ ಸಾಧಿಸಿ 5ನೇ ಶ್ರೇಯಾಂಕ ಪಡೆದಿದ್ದಾರೆ.

ಉಳಿದಂತೆ ದಕ್ಷಿಣ ಆಫ್ರಿಕಾ 6 ರಲ್ಲಿ 2 ಗೆಲುವು, 3 ಸೋಲು, 1 ಡ್ರಾ ಸೇರಿ ಶೇಕಡಾ 38.89 ಗೆಲುವಿನ ಪ್ರತಿಶತದೊಂದಿಗೆ ಆರನೇ ಸ್ಥಾನ, ಶ್ರೀಲಂಕಾ 6 ರಲ್ಲಿ 2 ಗೆಲುವು, 4 ಸೋಲು ಸೇರಿ ಶೇಕಡಾ 33.33 ಪ್ರತಿಶತದೊಂದಿಗೆ 7ನೇ ಸ್ಥಾನ ಪಡೆದಿದೆ. ಇತ್ತ ಬಾಂಗ್ಲಾದೇಶದ ವಿರುದ್ಧ ತವರಿನಲ್ಲೇ ಸರಣಿ ಸೋತು ತೀವ್ರ ಮುಖಭಂಗ ಅನುಭವಿಸಿರುವ ಪಾಕಿಸ್ತಾನ ಶೇಕಡಾ 19.05 ಗೆಲುವಿನ ಪ್ರತಿಶತದೊಂದಿಗೆ ಪಾಯಿಂಟ್​ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿದಿದೆ. 1965 ರ ಬಳಿಕ ತಂಡ ಕಡಿಮೆ ಸ್ಥಾನಕ್ಕೆ ಕುಸಿದಿದ್ದು ಇದೇ ಮೊದಲು.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಟೀಮ್ ಇಂಡಿಯಾ ಇನ್ನೂ 10 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಬಾಂಗ್ಲಾದೇಶ ವಿರುದ್ಧ 2, ನ್ಯೂಜಿಲೆಂಡ್ ವಿರುದ್ಧ 3 ಮತ್ತು ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ಮೂರು ಸರಣಿಗಳಲ್ಲಿ ನ್ಯೂಜಿಲೆಂಡ್​ ಮತ್ತು ಬಾಂಗ್ಲಾ ವಿರುದ್ಧ ಸರಣಿ ಕ್ಲೀನ್​ ಸ್ವೀಪ್​ ಸಾಧಿಸಿದರೆ, ನೇರವಾಗಿ ಡಬ್ಲ್ಯೂಟಿಸಿ ಫೈನಲ್​ ತಲುಪಲಿದೆ. ಬಾಂಗ್ಲಾದೇಶ ವಿರುದ್ಧ ಸೆಪ್ಟೆಂಬರ್ 19 ರಿಂದ ಸರಣಿ ಆರಂಭವಾಗಲಿದೆ.

ಇದನ್ನೂ ಓದಿ: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ ಮೂಹೂರ್ತ ಫಿಕ್ಸ್​: ಯಾವಾಗ, ಎಲ್ಲಿ ನಡೆಯಲಿದೆ ಗೊತ್ತಾ? - World Test Championship Final

ETV Bharat Logo

Copyright © 2025 Ushodaya Enterprises Pvt. Ltd., All Rights Reserved.