ETV Bharat / sports

ಇಂಗ್ಲೆಂಡ್ ​- ಭಾರತ ಮೂರನೇ ಟೆಸ್ಟ್​: ಸ್ಪಿನ್ನರ್ ರೆಹಾನ್ ಅಹ್ಮದ್ ವೀಸಾ ಸಮಸ್ಯೆ, ವಿಮಾನ ನಿಲ್ದಾಣದಲ್ಲೇ ತಡೆದ ಅಧಿಕಾರಿಗಳು

ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಪಿನ್ ಬೌಲರ್ ರೆಹಾನ್ ಅಹ್ಮದ್ ಕೂಡಾ ವೀಸಾ ಸಂಬಂಧಿತ ಸಮಸ್ಯೆಗಳನ್ನು ಎದುರಿಸಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ತಂಡ ಮೂರನೇ ಟೆಸ್ಟ್‌ಗಾಗಿ ಭಾರತಕ್ಕೆ ಮರಳಿದ್ದು, ಪೂರ್ಣ ದಾಖಲೆಗಳನ್ನು ನೀಡಲು ಸದ್ಯ ಅಹ್ಮದ್​ಗೆ ಎರಡು ದಿನಗಳ ಕಾಲಾವಕಾಶ ನೀಡಲಾಗಿದೆ.

Ind vs eng  rehan ahmed  rehan ahmed visa issue  ಇಂಗ್ಲೆಂಡ್​ ಭಾರತ ಮೂರನೇ ಟೆಸ್ಟ್  ರೆಹಾನ್ ಅಹ್ಮದ್ ವೀಸಾ ಸಮಸ್ಯೆ
ವೀಸಾ ಸಮಸ್ಯೆ
author img

By ETV Bharat Karnataka Team

Published : Feb 13, 2024, 1:26 PM IST

ನವದೆಹಲಿ: ಭಾರತ ಪ್ರವಾಸದ ವೇಳೆ ಇಂಗ್ಲೆಂಡ್‌ಗೆ ಮತ್ತೊಂದು ವೀಸಾ ಸಂಬಂಧಿತ ಸಮಸ್ಯೆ ಎದುರಾಗಿದೆ. ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ ಅವರು ಅಬುಧಾಬಿಯಿಂದ ಹಿಂದಿರುಗುವಾಗ ಸಾಕಷ್ಟು ದಾಖಲೆಗಳ ಕೊರತೆಯಿಂದಾಗಿ ರಾಜ್‌ಕೋಟ್‌ನ ಹಿರಾಸರ್ ವಿಮಾನ ನಿಲ್ದಾಣದಿಂದ ನಿರ್ಗಮಿಸುವುದಕ್ಕೆ ಅಧಿಕಾರಿಗಳು ತಡೆ ಹಿಡಿದರು. ಎರಡನೇ ಮತ್ತು ಮೂರನೇ ಟೆಸ್ಟ್ ಪಂದ್ಯದ ನಡುವೆ ಸುದೀರ್ಘ ವಿರಾಮದ ಕಾರಣ, ಇಂಗ್ಲೆಂಡ್ ತಂಡವು ತಮ್ಮ ಕುಟುಂಬಗಳೊಂದಿಗೆ ಸಮಯ ಕಳೆಯಲು ಅಬುಧಾಬಿಗೆ ತೆರಳಿರುವುದು ಗಮನಾರ್ಹ.

ಕಳೆದ 30 ದಿನಗಳಲ್ಲಿ ಎರಡನೇ ಬಾರಿಗೆ ಯುಎಇಯಿಂದ ಹಿಂತಿರುಗುತ್ತಿರುವಾಗ ಮಲ್ಟಿ - ಎಂಟ್ರಿ ವೀಸಾದ ಕೊರತೆಯಿಂದಾಗಿ ಅಹ್ಮದ್ ಅವರನ್ನು ಹಿರೇಸ್ಸರ್ ವಿಮಾನ ನಿಲ್ದಾಣದಿಂದ ಹೊರಬರುವುದನ್ನು ತಡೆಹಿಡಿಯಲಾಗಿತ್ತು ಎಂದು ಸ್ಪೋರ್ಟ್‌ ಮಾಧ್ಯಮವೊಂದು ಸೋಮವಾರ ವರದಿ ಮಾಡಿದೆ. ಭಾರತಕ್ಕೆ ಕೇವಲ ಏಕ - ಪ್ರವೇಶದ ವೀಸಾ( ಸಿಂಗಲ್​ ಎಂಟ್ರಿ) ಹೊಂದಿರುವ ಸ್ಪಿನ್ನರ್ ಅನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ತಡೆದರು. ಅಗತ್ಯ ದಾಖಲೆಗಳ ಪರಿಶೀಲನೆ ಪೂರ್ಣಗೊಳ್ಳುವವರೆಗೂ ವಿಮಾನ ನಿಲ್ದಾಣದಲ್ಲಿ ಕಾಯಲು ಇಂಗ್ಲೆಂಡ್ ತಂಡದ ಆಟಗಾರನಿಗೆ ಸೂಚಿಸಲಾಯಿತು.

ಕಳೆದ ತಿಂಗಳು ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್ ಸ್ಪಿನ್ ಬೌಲರ್ ಶೋಯೆಬ್ ಬಶೀರ್ ಅವರನ್ನೂ ವೀಸಾ ಸಮಸ್ಯೆಯಿಂದ ತಡೆಹಿಡಿಯಲಾಗಿತ್ತು. ಆ ನಂತರ ಈ ಸ್ಪಿನ್ ಬೌಲರ್ ಅಬುಧಾಬಿಯಿಂದ ಇಂಗ್ಲೆಂಡ್‌ಗೆ ಮರಳಬೇಕಾಯಿತು. ಆದರೂ ಈ ಸಮಸ್ಯೆಯು ಒಂದು ಅಥವಾ ಎರಡು ದಿನಗಳ ನಂತರ ಪರಿಹರಿಸಲ್ಪಟ್ಟಿತ್ತು ಮತ್ತು ಬಶೀರ್ ವಿಶಾಖಪಟ್ಟಣಂ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ ಆಡುವ 11ರ ಬಳಗದಲ್ಲಿ ಸ್ಥಾನವನ್ನು ಕೂಡಾ ಪಡೆದುಕೊಂಡಿದ್ದರು.

ಸ್ಥಳೀಯ ಅಧಿಕಾರಿಗಳ ನೆರವಿನಿಂದ ಅಹ್ಮದ್‌ಗೆ ಎರಡು ದಿನಗಳ ವೀಸಾ ನೀಡಲಾಗಿದ್ದು, ಪಂದ್ಯದ ಆರಂಭಕ್ಕೂ ಮುನ್ನ ಉಳಿದ ದಾಖಲೆಗಳನ್ನು ಸಕಾಲದಲ್ಲಿ ಒದಗಿಸುವಂತೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿ ತಿಳಿಸಿದೆ. ರೆಹಾನ್ ಇದುವರೆಗೆ 36.37 ಸರಾಸರಿಯಲ್ಲಿ ಎಂಟು ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ 70 ರನ್ ಗಳಿಸಿದ್ದಾರೆ. ಎರಡನೇ ಟೆಸ್ಟ್​ನಲ್ಲಿ ಬೃಹತ್ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ 106 ರನ್‌ಗಳಿಂದ ಸೋಲು ಅನುಭವಿಸಿತ್ತು.

ಹೈದರಾಬಾದ್‌ನಲ್ಲಿ ನಡೆದ ಐದು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯವನ್ನು ಇಂಗ್ಲೆಂಡ್ 28 ರನ್‌ಗಳಿಂದ ಗೆದ್ದಿದ್ದರೆ, ವಿಶಾಖಪಟ್ಟಣದಲ್ಲಿ ಭಾರತ 106 ರನ್‌ಗಳ ಜಯದೊಂದಿಗೆ ಪುನರಾಗಮನ ಮಾಡಿತ್ತು. ಸದ್ಯ ಟೆಸ್ಟ್ ಸರಣಿ 1-1ರಲ್ಲಿ ಸಮಬಲ ಸಾಧಿಸಿದ್ದು, ಮೂರನೇ ಟೆಸ್ಟ್ ಗುರುವಾರದಿಂದ ರಾಜ್‌ಕೋಟ್‌ನಲ್ಲಿ ಆರಂಭವಾಗಲಿದೆ.

ಓದಿ: ಇಂಗ್ಲೆಂಡ್‌ ವಿರುದ್ಧದ 3ನೇ ಟೆಸ್ಟ್‌ಗೆ ರಾಹುಲ್ ಅಲಭ್ಯ; ದೇವದತ್ ಪಡಿಕ್ಕಲ್‌ಗೆ ಅವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.