ನವದೆಹಲಿ: ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ 106 ರನ್‌ಗಳ ಗೆಲುವಿನ ನಂತರ ಭಾರತ ತಂಡದ ಹುಮ್ಮಸ್ಸಿನಲ್ಲಿದೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ - ಭಾರತ ತಲಾ ಒಂದು ಪಂದ್ಯಗಳನ್ನು ಗೆಲ್ಲುವ ಮೂಲಕ ಸಮಬಲ ಸಾಧಿಸಿವೆ. ಹೀಗಾಗಿ ಎರಡು ತಂಡಗಳು ಮುಂದಿನ ಪಂದ್ಯ ಗೆದ್ದು ಮುನ್ನಡೆ ಸಾಧಿಸಲು ಹವಣಿಸುತ್ತಿವೆ.
ಇಂಗ್ಲೆಂಡ್‌ನ ಮಾಜಿ ನಾಯಕ ನಾಸೀರ್ ಹುಸೇನ್ ಈ ಬಗ್ಗೆ ಮಾತನಾಡಿದ್ದಾರೆ. ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಉತ್ತಮ ಕ್ರಿಕೆಟ್ ಆಡಿದ್ದು, ಈ ಹಿಂದಿನ ಪ್ರವಾಸಗಳಿಗಿಂತ ಆಂಗ್ಲ ಪಡೆ ಉತ್ತಮವಾಗಿಯೇ ಆಡಿದೆ ಎಂದಿರುವ ನಾಸೀರ್ ಹುಸೇನ್, ನಮ್ಮ ತಂಡ ಮೊದಲ ಪಂದ್ಯವನ್ನು ಗೆದ್ದಿದ್ದರೂ ಮತ್ತು ಆ ಬಳಿಕ 3-1ರಿಂದ ಸರಣಿಯನ್ನು ಕಳೆದುಕೊಂಡರೂ ಭಾರತ ತಂಡವೇ ಬಲಿಷ್ಠವಾಗಿದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಆಂಗ್ಲ ಮಾಧ್ಯಮದೊಂದಿಗೆ ಮಾತನಾಡಿರುವ ಅವರು, 'ಈ ಸರಣಿ ಇಂಗ್ಲೆಂಡ್‌ಗೆ ಒಂದು ಅವಕಾಶವಾಗಿದೆ. ಆದರೆ ಇಂಗ್ಲೆಂಡ್ ತಂಡ ಜಾಕ್ ಲೀಚ್ ಮತ್ತು ಹ್ಯಾರಿ ಬ್ರೂಕ್‌ನಂತಹ ಆಟಗಾರರನ್ನು ಸಹ ಕಳೆದುಕೊಳ್ಳುತ್ತಿದ್ದಾರೆ ಎಂಬುದನ್ನು ಮರೆಯಬಾರದು. ಇನ್ನು ಜೋ ರೂಟ್ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಲು ಸಾಧ್ಯವಾಗದಿರುವುದು ತಂಡಕ್ಕೆ ಹಿನ್ನಡೆ ಎಂದೇ ಹೇಳಬಹುದು. ಇನ್ನು ಕೆಎಲ್ ರಾಹುಲ್ ಮತ್ತು ಬಹುಶಃ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿರುವುದು ಇಂಗ್ಲೆಂಡ್ ತಂಡಕ್ಕೆ ಮತ್ತಷ್ಟು ಸವಾಲನ್ನು ಒಡ್ಡಲಿದೆ. ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಟೆಸ್ಟ್‌ನ ನಾಲ್ಕನೇ ದಿನದಂದು ಇಂಗ್ಲೆಂಡ್ ಆಕ್ರಮಣಕಾರಿ ಆಟ ಆಡಿದ್ದು, ಸಕಾರಾತ್ಮಕ ಅಂಶ ಎನ್ನುವುದನ್ನು ಮರೆಯಬಾರದು. ಆದರೆ, ಈ ಆಕ್ರಮಣಕಾರಿ ಆಟ ಸಾಕಾಗಲಿಲ್ಲ ಅನಿಸುತ್ತಿದೆ. ಏಕೆಂದರೆ ಅವರು 69.2 ಓವರ್‌ಗಳಲ್ಲಿ 292 ರನ್‌ಗಳಿಗೆ ಆಲೌಟ್ ಆಗಬೇಕಾಯಿತು. ಆಕ್ರಮಣಕಾರಿ ಆಟದ ಜತೆಗೆ ವಿಕೆಟ್ ಕಾಯ್ದುಕೊಳ್ಳುವುದು ಮುಖ್ಯವಾಗುತ್ತದೆ ಎಂದಿದ್ದಾರೆ.
ಜಾಕ್ ಕ್ರಾಲಿ ಅವರ 73 ರನ್‌ಗಳ ಹೊರತಾಗಿ, ನಾಲ್ಕನೇ ಇನ್ನಿಂಗ್ಸ್‌ನಲ್ಲಿ ತಂಡದ ಯಾವುದೇ ಬ್ಯಾಟ್ಸ್‌ಮನ್ 50 ರನ್‌ಗಳ ಗಡಿ ಮುಟ್ಟಲು ಸಾಧ್ಯವಾಗಲಿಲ್ಲ. ಈ ಮೂಲಕ ಭಾರತ ಐದು ಪಂದ್ಯಗಳ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ನಾಯಕ ಬೆನ್ ಸ್ಟೋಕ್ಸ್ ಬಗ್ಗೆ ಹುಸೇನ್ ಉತ್ತಮ ಮಾತುಗಳನ್ನೇ ಹೇಳಿದ್ದಾರೆ. 'ಬೆನ್ ಅವರು ಯಾವಾಗಲೂ ಪ್ರಾಮಾಣಿಕರಾಗಿದ್ದಾರೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಟೆಸ್ಟ್‌ನಲ್ಲಿ ಬುಮ್ರಾ ನಂ.1 ವೇಗದ ಬೌಲರ್! ಈ ಸಾಧನೆ ಮಾಡಿದ ಭಾರತದ ಮೊದಲ ಕ್ರಿಕೆಟಿಗ