ETV Bharat / sports

ಫೈನಲ್‌ನಲ್ಲಿ ವಿರಾಟ್​ ದೊಡ್ಡ ಇನ್ನಿಂಗ್ಸ್ ಆಡಲಿದ್ದಾರೆ: ಕೊಹ್ಲಿ ಬೆಂಬಲಿಸಿದ ದ್ರಾವಿಡ್​ - ರೋಹಿತ್​ - Rohit and Dravid back Kohli - ROHIT AND DRAVID BACK KOHLI

ಟಿ-20 ವಿಶ್ವಕಪ್ ಫೈನಲ್‌ನಲ್ಲಿ ವಿರಾಟ್​ ದೊಡ್ಡ ಇನ್ನಿಂಗ್ಸ್ ಆಡಲಿದ್ದಾರೆ ಎಂದು ಹೇಳುವ ಮೂಲಕ ದ್ರಾವಿಡ್ ಮತ್ತು ರೋಹಿತ್ ಕೊಹ್ಲಿಯನ್ನು ಬೆಂಬಲಿಸಿದ್ದಾರೆ.

T20 WORLD CUP 2024  SKIPPER ROHIT SHARMA  INDIA HEAD COACH RAHUL DRAVID  INDIA VS SOUTH AFRICA FINAL MATCH
ಫೈನಲ್‌ನಲ್ಲಿ ವಿರಾಟ್​ ದೊಡ್ಡ ಇನ್ನಿಂಗ್ಸ್ ಆಡಲಿದ್ದಾರೆ: ಕೊಹ್ಲಿಯನ್ನು ಬೆಂಬಲಿಸಿದ ದ್ರಾವಿಡ್​-ರೋಹಿತ್​ (IANS)
author img

By PTI

Published : Jun 28, 2024, 1:56 PM IST

ಜಾರ್ಜ್‌ಟೌನ್ (ಗಯಾನಾ): ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರು ಫಾರ್ಮ್‌ ಕಳೆದುಕೊಂಡಿರುವ ವಿರಾಟ್ ಕೊಹ್ಲಿಯನ್ನು ಬೆಂಬಲಿಸಿದ್ದಾರೆ. ಅಷ್ಟೇ ಅಲ್ಲ ಸ್ಟೈಲಿಶ್ ಬ್ಯಾಟ್ಸ್‌ಮನ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ದೊಡ್ಡ ಇನ್ನಿಂಗ್ಸ್ ಆಡಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು. ಟಿ20 ವಿಶ್ವಕಪ್‌ಗೂ ಮುನ್ನ ಐಪಿಎಲ್‌ನಲ್ಲಿ ಗರಿಷ್ಠ 741 ರನ್ ಗಳಿಸಿದ್ದ ಕೊಹ್ಲಿ, ಈ ಟೂರ್ನಿಯಲ್ಲಿ ಇದುವರೆಗೆ ಏಳು ಇನ್ನಿಂಗ್ಸ್‌ಗಳಲ್ಲಿ 75 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ.

ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 68 ರನ್‌ಗಳ ಜಯ ಸಾಧಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ದ್ರಾವಿಡ್, 'ವಿರಾಟ್ ಸ್ವಲ್ಪ ಅಪಾಯಕಾರಿ ಕ್ರಿಕೆಟ್ ಆಡಿದಾಗಲೆಲ್ಲಾ ಅವರು ಕೆಲವು ಸಂದರ್ಭಗಳಲ್ಲಿ ಯಶಸ್ಸನ್ನು ಪಡೆಯುವುದಿಲ್ಲ ಎಂಬುದನ್ನು ನೀವು ನೋಡಿರಬೇಕು. ಇಂಗ್ಲೆಂಡ್ ವಿರುದ್ಧ ಅವರು ನಿಜವಾಗಿಯೂ ಉತ್ತಮ ಸಿಕ್ಸರ್ ಬಾರಿಸಿದರು. ಆದರೆ, ಅದೃಷ್ಟ ಅವರ ಕಡೆ ಇರಲಿಲ್ಲ. ಆದರೆ ವಿರಾಟ್​ ಆಡುವ ರೀತಿ ನನಗೆ ಇಷ್ಟ ಎಂದು ದ್ರಾವಿಡ್​ ಹೇಳಿದರು.

ಇದಕ್ಕೆ ಯಾವುದೇ ರೀತಿಯ ಇತರ ಹೇಳಿಕೆಯನ್ನು ಸೇರಿಸಲು ನಾನು ಬಯಸುವುದಿಲ್ಲ. ಆದರೆ ಅವರು ಶೀಘ್ರದಲ್ಲೇ ದೊಡ್ಡ ಇನ್ನಿಂಗ್ಸ್ ಆಡುತ್ತಾರೆ ಎಂಬ ಭರವಸೆ ನನಗಿದೆ. ಅವರ ವರ್ತನೆ ಮತ್ತು ಸಮರ್ಪಣೆ ನನಗೆ ಇಷ್ಟ ಎಂದು ದ್ರಾವಿಡ್ ಹೇಳಿದರು. ನಾಯಕ ರೋಹಿತ್ ಕೂಡ ಕೊಹ್ಲಿ ಫೈನಲ್‌ನಲ್ಲಿ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ಯಶಸ್ವಿಯಾಗುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ರೋಹಿತ್ ಮಾತನಾಡಿ, ಅವರೊಬ್ಬ ಶ್ರೇಷ್ಠ ಆಟಗಾರ. ಅವರು ಎಂತಹ ನುರಿತ ಆಟಗಾರ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ದೊಡ್ಡ ಪಂದ್ಯಗಳಲ್ಲಿ ಅವರ ಪ್ರಾಮುಖ್ಯತೆಯನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. 15 ವರ್ಷಗಳಿಂದ ಕ್ರಿಕೆಟ್ ಆಡುತ್ತಿರುವಾಗ ಫಾರ್ಮ್ ಸಮಸ್ಯೆಯಾಗುವುದಿಲ್ಲ. ಅವರ ಉದ್ದೇಶಗಳು ಸ್ಪಷ್ಟವಾಗಿವೆ. ಬಹುಶಃ ಅವರು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಫೈನಲ್‌ಗೆ ಉಳಿಸಿಕೊಂಡಂತೆ ಕಾಣುತ್ತದೆ ಎಂದು ನಾಯಕ ರೋಹಿತ್​ ಶರ್ಮಾ ಹೇಳಿದರು.

ಟೂರ್ನಿಯಲ್ಲಿ ಇದುವರೆಗೆ ಮೂರು ಅರ್ಧಶತಕಗಳ ನೆರವಿನಿಂದ 248 ರನ್ ಗಳಿಸಿರುವ ರೋಹಿತ್ ಅವರು 12 ತಿಂಗಳೊಳಗೆ ಮೂರನೇ ಬಾರಿಗೆ ಯಾವುದೇ ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ಆಡುವ ನಾಯಕತ್ವದಲ್ಲಿ ಭಾರತ ಮೊದಲ ನಾಯಕರಾಗಿದ್ದಾರೆ. ಭಾರತ ಕಳೆದ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿತ್ತು.

ರೋಹಿತ್​ ಅವರನ್ನು ಹೊಗಳಿದ ದ್ರಾವಿಡ್, ನಾನು ಅವರ ಬಗ್ಗೆ ಏನು ಹೇಳಿದರೂ ಕಡಿಮೆ. ತಂಡದೊಂದಿಗೆ ಕೆಲಸ ಮಾಡಿದ ರೀತಿ, ತಂತ್ರಗಾರಿಕೆ, ಪ್ರಬುದ್ಧತೆ ಮತ್ತು ತಂಡದ ಬಗೆಗಿನ ಅವರ ವರ್ತನೆ ಬಗ್ಗೆ ಏನು ಹೇಳಲು ಸಾಧ್ಯ ಎಂದು ದ್ರಾವಿಡ್​ ಹೊಗಳಿದರು.

ವೈಯಕ್ತಿಕ ಪ್ರದರ್ಶನ ಮುಖ್ಯ. ಆದರೆ ಸಾಮೂಹಿಕ ಪ್ರಯತ್ನದ ಮೂಲಕ ಪಂದ್ಯ ಗೆದ್ದಿರುವುದು ತೃಪ್ತಿ ತಂದಿದೆ. ನಾವು ಸಂದರ್ಭಗಳಿಗೆ ಚೆನ್ನಾಗಿ ಹೊಂದಿಕೊಂಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ಸಂದರ್ಭಗಳು ಸ್ವಲ್ಪ ಸವಾಲಿನಿಂದ ಕೂಡಿದ್ದವು. ನಾವು ಅವುಗಳಿಗೆ ಹೊಂದಿಕೊಂಡಿದ್ದೇವೆ ಮತ್ತು ಇದು ಇಲ್ಲಿಯವರೆಗಿನ ನಮ್ಮ ಯಶಸ್ಸಿನ ಕಥೆಯಾಗಿದೆ ಎಂದು ರೋಹಿತ್​ ಹೇಳಿದರು.

ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದ ಬಗ್ಗೆ ಪ್ರತಿಕ್ರಿಯಿಸಿದ ರೋಹಿತ್, ನಾವು ಸಂಪೂರ್ಣ 40 ಓವರ್‌ಗಳಿಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಇದು ಪಂದ್ಯವನ್ನು ನಮ್ಮ ಪರವಾಗಿ ತಿರುಗಿಸಲು ನಮಗೆ ಸಹಾಯ ಮಾಡುತ್ತದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲೂ ನಾವು ಶಾಂತವಾಗಿದ್ದೆವು. ತಂಡವು ಉತ್ತಮ ಲಯದಲ್ಲಿದೆ ಮತ್ತು ನಾವು ಉತ್ತಮ ಕ್ರಿಕೆಟ್ ಆಡುತ್ತಿದ್ದೇವೆ. ನಾವು ಫೈನಲ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತೇವೆ ಎಂದು ನಾನು ಭಾವಿಸುತ್ತೇನೆ ಅಂತಾ ನಾಯಕ ರೋಹಿತ್​ ಶರ್ಮಾ ಹೇಳಿದರು.

ಓದಿ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 68 ರನ್ ಗಳ ಭರ್ಜರಿ ಗೆಲುವು: ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದ ರೋಹಿತ್​ ಪಡೆ - India enter T20 World Cup final

ETV Bharat Logo

Copyright © 2025 Ushodaya Enterprises Pvt. Ltd., All Rights Reserved.