ETV Bharat / sports

ದಕ್ಷಿಣ ಆಫ್ರಿಕಾ ಎದುರಿನ ಏಕೈಕ ಟೆಸ್ಟ್​ನಲ್ಲಿ ಸ್ಪಿನ್ನರ್​ ಸ್ನೇಹ ರಾಣಾಗೆ 8 ವಿಕೆಟ್​​ ಗೊಂಚಲು! - Sneh Rana

author img

By PTI

Published : Jul 1, 2024, 11:27 AM IST

ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ಧದ ಏಕೈಕ ಟೆಸ್ಟ್​ನಲ್ಲಿ ಭಾರತದ ಸ್ನೇಹ ರಾಣಾ ವಿಜೃಂಭಿಸಿದರು. ಇವರು ಒಂದೇ ಇನಿಂಗ್ಸ್​ನಲ್ಲಿ 8 ವಿಕೆಟ್​ ಉರುಳಿಸಿದ್ದಾರೆ. ಆಫ್ರಿಕನ್ನರು ಸೋಲಿನ ಸುಳಿಯಲ್ಲಿದ್ದಾರೆ.

ಸ್ಪಿನ್ನರ್​ ಸ್ನೇಹ ರಾಣಾ
ಸ್ಪಿನ್ನರ್​ ಸ್ನೇಹ ರಾಣಾ (X handle)

ಚೆನ್ನೈ(ತಮಿಳುನಾಡು): ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ಧದ ಏಕೈಕ ಟೆಸ್ಟ್​ ಪಂದ್ಯದ ಮೇಲೆ ಭಾರತದ ವನಿತೆಯರು ಬಿಗಿ ಹಿಡಿತ ಸಾಧಿಸಿದ್ದಾರೆ. 603 ರನ್​​ಗಳ ಬೃಹತ್​ ಗುರಿ ನೀಡಿದ ಭಾರತ ಬಳಿಕ, ಆಫ್ರಿಕಾದ ಮೊದಲ ಇನಿಂಗ್ಸ್​ ಅನ್ನು 266 ರನ್​​ಗೆ ಕಟ್ಟಿಹಾಕಿತು. ಆಫ್ರಿಕನ್ನರ ಮೇಲೆ ಫಾಲೋಆನ್​ ಹೇರಲಾಗಿದ್ದು, ಸೋಲಿನ ಸುಳಿಗೆ ಸಿಲುಕಿದ್ದಾರೆ. ಇದಕ್ಕೆ ಪ್ರಮುಖ ಕಾರಣವಾಗಿದ್ದು ಭಾರತದ ಸ್ಪಿನ್ನರ್​ ಸ್ನೇಹ ರಾಣಾ ಅವರ ಮಾರಕ ಬೌಲಿಂಗ್ ದಾಳಿ.

ಬಲಗೈ ಆಫ್​ ಸ್ಪಿನ್ನರ್​ ಸ್ನೇಹ ರಾಣಾ ದಕ್ಷಿಣ ಆಫ್ರಿಕಾದ ಮೇಲೆ ಸಿಡಿಲಂತೆ ಎರಗಿದರು. ಬ್ಯಾಟಿಂಗ್​ ಪಡೆಯನ್ನೇ ಧೂಳೀಪಟ ಮಾಡಿದ ಅವರು ಒಂದೇ ಇನಿಂಗ್ಸ್​ನಲ್ಲಿ 8 ವಿಕೆಟ್​ ಉರುಳಿಸಿದರು. ಸತತ ದಾಳಿ ನಡೆಸಿದ ರಾಣಾ 25.3 ಓವರ್​ಗಳಲ್ಲಿ 77 ರನ್​ ನೀಡಿದರು. ಇನ್ನೊಂದೆಡೆ, ಹಿರಿಯ ಸ್ಪಿನ್ನರ್​​ ದೀಪ್ತಿ ಶರ್ಮಾ ಉಳಿದೆರಡು ವಿಕೆಟ್​ ಪಡೆದು ಮೊದಲ ಇನಿಂಗ್ಸ್​ಗೆ ತೆರೆ ಎಳೆದಿದ್ದರು.

ಮರಿಝನ್ನೆ ಕಾಪ್ (74), ಅನ್ನೆಕೆ ಬಾಚ್​ (39), ನದಿನೆ ಡಿ ಕ್ಲಾರ್ಕ್​ (39) ನಾಯಕಿ ವಾಲ್ವಾರ್ಟ್​ (20) ದೊಡ್ಡ ಇನಿಂಗ್ಸ್​ ಕಟ್ಟದಂತೆ ಸ್ನೇಹ ತಡೆದರು. 4 ವಿಕೆಟ್​ಗೆ 200 ರನ್​ ಗಳಿಸಿದ್ದ ಆಫ್ರಿಕಾ ಉಳಿದ ಆರು ವಿಕೆಟ್​ಗಳನ್ನು 60 ರನ್​ಗಳ ಅಂತರದಲ್ಲಿ ಕಳೆದುಕೊಂಡು ಸರ್ವಪತನ ಕಂಡಿತು.

ಫಾಲೋಆನ್​ ಹೇರಿದ ಭಾರತ: ಮೊದಲ ಇನಿಂಗ್ಸ್​ನಲ್ಲಿ 337 ರನ್​​ಗಳ ಮುನ್ನಡೆ ಪಡೆದ ಭಾರತ, ಆಫ್ರಿಕನ್ನರ ಮೇಲೆ ಫಾಲೋಆನ್​ ಹೇರಿತು. 4ನೇ ದಿನದಾಟವಾದ ಸೋಮವಾರ 5 ವಿಕೆಟ್​ಗೆ 287 ರನ್​ ಗಳಿಸಿದೆ. ಇನ್ನೂ 50 ರನ್​ಗಳ ಹಿನ್ನಡೆ ಹೊಂದಿದೆ. ನಾಯಕಿ ಲೌರಾ ವಾಲ್ವಾಟ್​ 122, ಸುನೆ ಲೂಸ್​ 109 ಶತಕ ಗಳಿಸಿ ಸೋಲಿನ ಅಂತರ ತಗ್ಗಿಸಿದರು. ಎರಡನೇ ಇನಿಂಗ್ಸ್​ನಲ್ಲಿ ಸ್ನೇಹ 1 ವಿಕೆಟ್​ ಪಡೆದಿದ್ದಾರೆ.

ರಾಣಾ ಬೌಲಿಂಗ್​ಗೆ ಕೋಚ್​ ಮೆಚ್ಚುಗೆ: ಸ್ನೇಹ ರಾಣಾರ ಮಾರಕ ದಾಳಿಯನ್ನು ಮಹಿಳಾ ತಂಡದ ಮುಖ್ಯ ಕೋಚ್​ ಅಮೋಲ್ ಮುಜುಂದಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ನೇಹ ರಾಣಾ ಅವರು ಉತ್ತಮ ಬೌಲಿಂಗ್​ ಕೌಶಲ್ಯ ಪ್ರದರ್ಶಿಸಿದರು. ಆಸ್ಟ್ರೇಲಿಯಾ ವಿರುದ್ಧವೂ ಕಳೆದ ವರ್ಷ ನಡೆದ ಟೆಸ್ಟ್​ನಲ್ಲಿ ಉತ್ತಮ ಆಟವಾಡಿ 'ಪಂದ್ಯಶ್ರೇಷ್ಠ' ಪ್ರಶಸ್ತಿ ಪಡೆದಿದ್ದರು. ಬಳಿಕ ಎನ್​ಸಿಎನಲ್ಲಿ ಬೌಲಿಂಗ್ ಶಿಬಿರಕ್ಕೆ ಹಾಜರಾಗಿ ಬೌಲಿಂಗ್ ಕೌಶಲ್ಯಗಳ ಮೇಲೆ ಹೆಚ್ಚಿನ ಗಮನ ಹರಿಸಿದರು. ಆ ಅಸ್ತ್ರಗಳನ್ನು ಈ ಪಂದ್ಯದಲ್ಲಿ ಬಳಸಿದರು ಎಂದು ಹೇಳಿದ್ದಾರೆ.

ರಾಣಾ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಒಂದು ಇನಿಂಗ್ಸ್​ನಲ್ಲಿ ಎಂಟು ವಿಕೆಟ್‌ ಪಡೆಯುವುದು ಸುಲಭವಲ್ಲ. ಇದು ಅವರ ಬೌಲಿಂಗ್​ ಚಾಣಾಕ್ಷತೆಗೆ ಸಾಕ್ಷಿಯಾಗಿದೆ ಎಂದು ಹೊಗಳಿದ್ದಾರೆ.

ಇದನ್ನೂ ಓದಿ: ವಿಶ್ವಕಪ್​ ಎತ್ತಿ ಹಿಡಿದ ಬಳಿಕ ಪಿಚ್​​ ಮೇಲಿನ ಮಣ್ಣು ತಿಂದು 'ಗೆಲುವಿನ ರುಚಿ' ಸವಿದ ರೋಹಿತ್​ ಶರ್ಮಾ - Rohit Sharma

ETV Bharat Logo

Copyright © 2024 Ushodaya Enterprises Pvt. Ltd., All Rights Reserved.