Bumrah Wife sanjana Ganeshan Post viral: ಪರ್ತ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತ ಸ್ಟ್ಯಾಂಡ್-ಇನ್ ನಾಯಕ ಜಸ್ಪ್ರೀತ್ ಬುಮ್ರಾ ಅತ್ಯುತ್ತಮ ಪ್ರದರ್ಶನ ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ 10 ಓವರ್ ಬೌಲ್ ಮಾಡಿ 17 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದರು. ನಾಥನ್ ಮೆಕ್‌ಸ್ವೀ, ಸ್ಟೀವ್ ಸ್ಮಿತ್ ಮತ್ತು ಉಸ್ಮಾನ್ ಖವಾಜಾ ಅವರೊಂದಿಗೆ ನಾಯಕ ಪ್ಯಾಟ್ ಕಮ್ಮಿನ್ಸ್ ಅವರ ವಿಕೆಟ್ ಉರುಳಿಸಿದರು. ಬ್ಯಾಟಿಂಗ್‌ನಲ್ಲಿ ಕಡಿಮೆ ಮೊತ್ತಕ್ಕೆ ಭಾರತ ಕುಸಿದಿದ್ದರು ಬುಮ್ರಾ ತಮ್ಮ ಸೆನ್ಸೇಷನಲ್ ಬೌಲಿಂಗ್‌ನಿಂದ ಪಂದ್ಯದ ಮೇಲೆ ಹಿಡಿತ ಸಾಧಿಸುವಂತೆ ಮಾಡಿದರು.
ತಮ್ಮ ಅದ್ಭುತ ಬೌಲಿಂಗ್ ಮೂಲಕ ಆಸ್ಟ್ರೇಲಿಯಾ ತಂಡವನ್ನು ಕಟ್ಟಿಹಾಕಿದ ಜಸ್ಪ್ರೀತ್ ಬುಮ್ರಾಗೆ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ. ಕಾಮೆಂಟೇಟರ್‌ಗಳು, ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರು ಅವರನ್ನು ಗುಣಗಾನ ಮಾಡುತ್ತಿದ್ದಾರೆ. ಏತನ್ಮಧ್ಯೆ, ಬುಮ್ರಾ ಅವರನ್ನು ಅವರ ಪತ್ನಿ, ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಪ್ರಶಂಸೆಯ ಸುರಿಮಳೆಗೈದರು. ತನ್ನ ಪತಿ ಉತ್ತಮ ಬೌಲರ್ ಎಂದು ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಿಳಿಸಿದ್ದಾರೆ. ‘ಬುಮ್ರಾ ಗ್ರೇಟ್ ಬೌಲರ್, ಜೊತೆಗೆ ಗ್ರೇಟರ್ ಬೂಟಿ’ ಎಂದು ಸಂಜನಾ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಇದರರ್ಥ ಬುಮ್ರಾ ಒಬ್ಬ ಶ್ರೇಷ್ಠ ಬೌಲರ್ ಮತ್ತು ಶ್ರೇಷ್ಠ ಪೃಷ್ಠ ಎಂದು ತಮಾಷೆಯಾಗಿ ಪೋಸ್ಟ್ ಮಾಡಿದ್ದಾರೆ. ಬುಮ್ರಾ ಅವರ ಪೃಷ್ಠವನ್ನು ಹೈಲೈಟ್ ಮಾಡಿರುವುದು ಗಮನಾರ್ಹವಾಗಿದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ನಗುವುದರ ಜೊತೆಗೆ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಕೆಲವರು ಸ್ವಲ್ಪ ನಿಮ್ಮ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಿ ಎಂದಿದ್ದಾರೆ.
ಮೊದಲ ಇನ್ನಿಂಗ್ಸ್ ಸ್ಕೋರ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯ ಪರ್ತ್‌ನಲ್ಲಿ ನಡೆಯುತ್ತಿದೆ. ನಿನ್ನೆ ಮೊದಲ ದಿನ ಭಾರತ 150 ರನ್ಗಳಿಗೆ ಆಲೌಟ್ ಆಗಿತ್ತು. ಕೆಎಲ್ ರಾಹುಲ್ (26), ಪಂತ್ (37), ನಿತೀಶ್ ರೆಡ್ಡಿ (41), ಧ್ರುವ್ ಜುರೆಲ್ (11) ಹೊರತುಪಡಿಸಿ ಉಳಿದ ಬ್ಯಾಟರ್ಗಳು ಎರಡಂಕಿ ಗಳಿಸಲು ಸಾಧ್ಯವಾಗದೇ ಪೆವಿಲಿಯನ್ ಸೇರಿದ್ದರು.
ಭಾರತ ಬ್ಯಾಟಿಂಗ್‌ನಲ್ಲಿ ಹಿನ್ನಡೆ ಅನುಭವಿಸಿದರೂ ಬೌಲಿಂಗ್ನಲ್ಲಿ ಭರ್ಜರಿ ಪ್ರದರ್ಶನ ತೋರಿದರು. ಮೊದಲ ದಿನದಲ್ಲೇ ಆಸ್ಟ್ರೇಲಿಯಾದ 67 ರನ್ಗಳಿಗೆ 7 ವಿಕೆಟ್ ಉರುಳಿಸಿ ಪ್ರಾಬಲ್ಯ ಮೆರೆದರು. ಎರಡನೇ ದಿನವಾದ ಇಂದು ಕೂಡ ಉಳಿದ ಮೂರು ವಿಕೆಟ್ ಉರುಳಿಸಿದ ಭಾರತೀಯ ಬೌಲರ್ಗಳು ಕಾಂಗರೂ ಪಡೆಯನ್ನು 104 ರನ್ಗಳಿಗೆ ಕಟ್ಟಿ ಹಾಕಿದರು. ಇದರೊಂದಿಗೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 46 ರನ್ಗಳ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ: IND vs AUS Test: ಬುಮ್ರಾ ದಾಳಿಗೆ ನಡುಗಿದ ಆಸ್ಟ್ರೇಲಿಯಾ, 104 ರನ್ಗಳಿಗೆ ಸರ್ವಪತನ!