ನವದೆಹಲಿ: ಪಾಕಿಸ್ತಾನಿ ಕ್ರಿಕೆಟಿಗರು ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದು ಶಿಕ್ಷೆಗೆ ಗುರಿಯಾಗುತ್ತಲೇ ಇರುತ್ತಾರೆ. ಈಗಾಗಲೇ ಮ್ಯಾಚ್ ಫಿಕ್ಸಿಂಗ್ನಲ್ಲಿ ಸಿಕ್ಕಿಬಿದ್ದರುವ ಸಲೀಂ ಮಲಿಕ್ನನ್ನು ಕ್ರಿಕೆಟ್ನಿಂದ ನಿಷೇಧಿಸಲಾಗಿತ್ತು. ಇದಲ್ಲದೇ ಸಲ್ಮಾನ್ ಬಟ್, ಮೊಹಮ್ಮದ್ ಆಸಿಫ್, ಮೊಹಮ್ಮದ್ ಅಮೀರ್, ಡ್ಯಾನಿಶ್ ಕನೇರಿಯಾ ಮತ್ತು ಮೊಹಮ್ಮದ್ ಇರ್ಫಾನ್ ವಿರುದ್ಧ ಸ್ಪಾಟ್ ಫಿಕ್ಸಿಂಗ್ ಆರೋಪ ಕೇಳಿಬಂದಿತ್ತು. ಇದೀಗ ಮತ್ತೊಮ್ಮೆ ಪಾಕಿಸ್ತಾನ ಕ್ರಿಕೆಟ್ನಲ್ಲಿ ಫಿಕ್ಸಿಂಗ್ ಆರೋಪ ಬೆಳಕಿಗೆ ಬಂದಿದೆ. ಖ್ಯಾತ ಕ್ರಿಕೆಟಿಗ ಶೋಯೆಬ್ ಮಲಿಕ್ ವಿರುದ್ಧ ಈ ಆರೋಪ ಕೇಳಿಬಂದಿದೆ.
’ಸಾಕ್ಷಿ ಬೇಕಾದರೆ ಕೊಡ್ತೇನಿ’: ಪಾಕ್ನ ಹಿರಿಯ ಆಟಗಾರ ಆಗಿರುವ ಬಸಿತ್ ಅಲಿ ಯೂಟ್ಯೂಬ್ ಚಾನೆಲ್ನಲ್ಲಿ ಈ ಬಗ್ಗೆ ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಬಸಿತ್, ಶೋಯೆಬ್ ಮಲಿಕ್ ಮ್ಯಾಚ್ ಫಿಕ್ಸ್ ಮಾಡಿಕೊಂಡಿದ್ದು, ಇದರ ಬಗ್ಗೆ ಸಾಕ್ಷಿ ಬೇಕಾದರೆ ಕೊಡುವೆ ಎಂದು ತಿಳಿಸಿದ್ದಾರೆ. ದೇಶದ ಬಗ್ಗೆ ಚಿಂತನೆ ಮಾಡದವರನ್ನು ಮತ್ತು ಉದ್ದೇಶಪೂರ್ವಕವಾಗಿ ಪಂದ್ಯವನ್ನು ಸೋತಿರುವುದಾಗಿ ಹೇಳುವ ಶೋಯೆಬ್ನನ್ನು ಯಾವುದೇ ತಂಡಕ್ಕೆ ಮಾರ್ಗದರ್ಶಕರನ್ನಾಗಿ ಮಾಡಬಾರದು ಎಂದಿದ್ದಾರೆ.
ಇವರೆಲ್ಲ ಮ್ಯಾಚ್ ಫಿಕ್ಸಿಂಗ್ನಲ್ಲಿ ನಿಷೇಧಕ್ಕೊಳಗಾದವರು: ಈ ಹಿಂದೆಯೂ ಪಾಕ್ನಲ್ಲಿ ಮ್ಯಾಚ್ ಫಿಕ್ಸಿಂಗ್ನಂತಹ ಪ್ರಕರಣಗಳ ಬೆಳಕಿಗೆ ಬಂದಿದ್ದವು. ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಪಾಕಿಸ್ತಾನಿ ಕ್ರಿಕೆಟಿಗ ಸಲೀಂ ಮಲಿಕ್ ಅವರನ್ನು ಕ್ರಿಕೆಟ್ನಿಂದಲೇ ನಿಷೇಧ ಗೊಳಿಸಲಾಗಿತ್ತು. ಇದಲ್ಲದೇ ಮೊಹಮ್ಮದ್ ಅಮೀರ್ ಕೂಡ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಗುರಿಯಾಗಿದ್ದರು. ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್ ಕೂಡ ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ನಿಷೇಧಕ್ಕೊಳಗಾಗಿದ್ದಾರೆ. ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಆಸಿಫ್ ಕೂಡ ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ನಿಷೇಧಕ್ಕೊಳಗಾಗಿದ್ದಾರೆ. ಇದಲ್ಲದೇ ಡ್ಯಾನಿಶ್ ಕನೇರಿಯಾ ಮತ್ತು ಮೊಹಮ್ಮದ್ ಇರ್ಫಾನ್ ಸ್ಪಾಟ್ ಫಿಕ್ಸಿಂಗ್ ಆರೋಪ ಎದುರಿಸುತ್ತಿದ್ದಾರೆ.
ವಾಸ್ತವವಾಗಿ, ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಏಕದಿನ ಕಪ್ ಕ್ರಿಕೆಟ್ ಆಡಿಸಲಾಗುತ್ತಿದೆ. ಸ್ಟಾಲಿಯನ್ಸ್ ತಂಡವು ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್ ಮಲಿಕ್ ಅವರನ್ನು ಈ ಪಂದ್ಯಾವಳಿಗೆ ಮೆಂಟರ್ ಆಗಿ ನೇಮಿಸಿದೆ. ಈ ಪಂದ್ಯಾವಳಿಯು ಸೆಪ್ಟೆಂಬರ್ 12 ರಿಂದ ಪ್ರಾರಂಭವಾಗಲಿದ್ದು 29 ಮುಕ್ತಾಯಗೊಳ್ಳಲಿದೆ. ಇದರಲ್ಲಿ ಬಾಬರ್ ಅಜಮ್, ಶಾಹೀನ್ ಶಾ ಆಫ್ರಿದಿ ಮತ್ತು ಮೊಹಮ್ಮದ್ ರಿಜ್ವಾನ್ ನಂತಹ ಅನುಭವಿ ಆಟಗಾರರು ಇದರಲ್ಲಿ ಭಾಗಿಯಾಗಲಿದ್ದಾರೆ. ಇದರ ನಡುವೆಯೇ ಫಿಕ್ಸಿಂಗ್ ಆರೋಪ ಸಂಚಲನ ಮೂಡಿಸಿದೆ.
ಇದನ್ನೂ ಓದಿ: ಸಾವನ್ನೇ ಗೆದ್ದು ಮೈದಾನಕ್ಕೆ ಮರಳಿರುವ ಕ್ರಿಕೆಟರ್ಗಳು ಇವರೇ ನೋಡಿ! - CRICKETER WHO HAD ROAD ACCIDENT