ETV Bharat / sports

ಶ್ರೀಲಂಕಾ ಪುರುಷರ ಕ್ರಿಕೆಟ್​ ತಂಡದ​ ಬೌಲಿಂಗ್​ ಕೋಚ್​ ಆಗಿ ಪಾಕಿಸ್ತಾನ ಮಾಜಿ ವೇಗಿ ಅಕೀಬ್​ ಜಾವೇದ್​ ನೇಮಕ - Lanka mens cricket team

ಪಾಕಿಸ್ತಾನ ಸೂಪರ್​ ಲೀಗ್​ನ ಲಾಹೋರ್​​ ​​ತಂಡಕ್ಕೆ ಮುಖ್ಯ ಕೋಚ್​ ಆಗಿ ಅಕೀಬ್​ ಕಾರ್ಯ ನಿರ್ವಹಿಸಿದ್ದಾರೆ. ಅವರನ್ನೀಗ ಶ್ರೀಲಂಕಾ ತಂಡದ ಬೌಲಿಂಗ್​ ಕೋಚ್​ ಆಗಿ ನೇಮಕ ಮಾಡಲಾಗಿದೆ.

aaqib-javed-appointed-fast-bowling-coach-of-sri-lanka-mens-cricket-team

author img

By ETV Bharat Karnataka Team

Published : Mar 16, 2024, 5:48 PM IST

ಕೊಲಂಬೊ: ಶ್ರೀಲಂಕಾ ಪುರುಷರ ಕ್ರಿಕೆಟ್​ ತಂಡದ ಬೌಲಿಂಗ್​​ ಕೋಚ್​ ಆಗಿ ಪಾಕಿಸ್ತಾನದ ಮಾಜಿ ವೇಗಿ ಅಕೀಬ್​ ಜಾವೇದ್​ ಅವರನ್ನು ನೇಮಕ ಮಾಡಲಾಗಿದೆ. ಮುಂಬರಲಿರುವ ಅಂದರೆ ಜೂನ್​ 2024ರಲ್ಲಿ ವೆಸ್ಟ್​ ಇಂಡೀಸ್​ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ ಪಂದ್ಯಾವಳಿವರೆಗೂ ಅವರು ತಂಡದ ವೇಗದ​ ಬೌಲಿಂಗ್​ ಕೋಚ್​ ಆಗಿ ತತ್​​ಕ್ಷಣದಿಂದ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್​ ತಂಡ (ಎಸ್​ಎಲ್​ಸಿ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ

51 ವರ್ಷದ ಅಕೀಬ್​​ ಪಾಕಿಸ್ತಾನದ ಪರ 163 ಏಕದಿನ ಪಂದ್ಯ ಮತ್ತು 22 ಟೆಸ್ಟ್​​ ಪಂದ್ಯಗಳನ್ನು ಆಡಿದ್ದಾರೆ. 1992 ವಿಶ್ವ ಕಪ್​ ಗೆದ್ದ ಪಾಕಿಸ್ತಾನ ತಂಡದಲ್ಲಿ ಅಕೀಬ್​ ಇದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟಾರೆ 236 ವಿಕೆಟ್​ ಪಡೆದಿದ್ದಾರೆ. ಅಕೀಬ್​ ಸದ್ಯ ಪಾಕಿಸ್ತಾನ ಸೂಪರ್​ ಲೀಗ್​ನ ಲಾಹೋರ್​​ ಕಾಲಂದರ್​​ ತಂಡಕ್ಕೆ ಮುಖ್ಯ ಕೋಚ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ತಂಡವೂ 2022 ಮತ್ತು 2023 ರಲ್ಲಿ ಪ್ರಶಸ್ತಿ​ ಗೆದ್ದಿದೆ.

ಅಕೀಬ್​ ಅವರಿಗೆ ಆತ್ಮೀಯ ಸ್ವಾಗತವನ್ನು ಕೋರುತ್ತೇವೆ. ಬೌಲಿಂಗ್​ ಕೋಚಿಂಗ್​ನಲ್ಲಿ ಅವರು ಅಂತಾರಾಷ್ಟ್ರೀಯವಾಗಿ ಅದ್ಬುತ ಅನುಭವ ಹೊಂದಿದ್ದು, ಆ ಬಗ್ಗೆ ನಂಬಿಕೆ ಹೊಂದಿದ್ದೇವೆ. ಅವರ ಈ ಅನುಭವ ನಮ್ಮ ಬೌಲರ್​​ಗಳಿಗೆ ಮುಂಬರುವ ಐಸಿಸಿ ಮೆನ್ಸ್​ ಟಿ-20 ವರ್ಲ್ಡ್​​​​ ಕಪ್​ಗೆ ಉತ್ತಮ ರೂಪ ನೀಡಲಿದೆ ಎಂದು ಶ್ರೀ ಲಂಕಾ ಕ್ರಿಕೆಟ್​ ಸಿಇಒ ಆಶ್ಲೆ ಡೆ ಸಿಲ್ವಾ ತಿಳಿಸಿದ್ದಾರೆ

ಜಾವೇದ್​ ಅವರ​ ಸಾಮರ್ಥ್ಯದ ಆಧಾರದ ಮೇಲೆ ಹಲವು ರಾಷ್ಟ್ರೀಯ ತಂಡಕ್ಕೆ ಕೋಚ್​ ಆಗಿ ಸೇವೆ ಸಲ್ಲಿಸಿದ್ದಾರೆ. ಅದರಲ್ಲಿ ಪಾಕಿಸ್ತಾನ ನ್ಯಾಷನಲ್​ ಟೀಂನಲ್ಲಿ ಬೌಲಿಂಗ್​ ಕೋಚ್​​ ಆಗಿ, ಯುನೈಟೆಡ್​ ಅರಬ್​​​​​ ಎಮಿರೇಟ್ಸ್​​ ರಾಷ್ಟ್ರೀಯ ತಂಡದ ಕೋಚ್​​, ಅಫ್ಘಾನಿಸ್ತಾನ್​ ರಾಷ್ಟ್ರೀಯ ತಂಡದಲ್ಲೂ ಕಾರ್ಯ ನಿರ್ವಹಿಸಿದ್ದಾರೆ.

ತಮ್ಮ ಕೋಚ್​ ಅವಧಿಯಲ್ಲಿ, ಯುಎಇ ರಾಷ್ಟ್ರೀಯ ತಂಡ ಏಕದಿನ ಮತ್ತು ಟಿ20 ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು. 2015ರಲ್ಲಿ ಐಸಿಸಿ ಮೆನ್ಸ್​​ ಒಡಿಐ ನಲ್ಲಿ ಸ್ಥಾನ ಪಡೆದಿತ್ತು. ಅಷ್ಟೇ ಅಲ್ಲದೆ, 2014ರ ಟಿ 20 ವಿಶ್ವಕಪ್​ನಲ್ಲಿ ಐಸಿಸಿ ಮೆನ್ಸ್​​ಗೆ ಅರ್ಹತೆ ಗಿಟ್ಟಿಸಿತ್ತು. ಪಾಕಿಸ್ತಾನ ಅಂಡರ್​​​ 19 ತಂಡವು 2004ರಲ್ಲಿ ವಿಶ್ವ ಕಪ್​ ಗೆಲುವಿಗೆ ಸಹಾಯ ಮಾಡುವಲ್ಲಿ ಪಾಕಿಸ್ತಾನದ ಮಾಜಿ ಬೌಲರ್​ ಕಾರ್ಯ ನಿರ್ವಹಿಸಿದ್ದು ಗಮನಾರ್ಹ.

ಇದನ್ನೂ ಓದಿ: ಏಕದಿನ, ಟಿ20 ಕ್ರಿಕೆಟ್​ನಲ್ಲಿ ಸಮಯ ವ್ಯರ್ಥ ತಡೆಯಲು 'ಸ್ಟಾಪ್ ಕ್ಲಾಕ್'​: ಏನಿದು ನಿಯಮ? ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.