ETV Bharat / sports

ಮಹಾ ದುರಂತ!; ಕ್ರಿಕೆಟ್​ ಆಡುವಾಗಲೇ ಕುಸಿದು ಬಿದ್ದು ಆಲ್​ರೌಂಡರ್​ ಸಾವು: ಶೋಕ ಸಾಗರದಲ್ಲಿ ಕ್ರೀಡಾಲೋಕ! - CRICKETER DIED OF CARDIAC ARREST

ಕ್ರಿಕೆಟ್​ ಆಡುವಾಗಲೇ ಕುಸಿದು ಬಿದ್ದು ಆಲ್​ರೌಂಡರ್​ ಸಾವನ್ನಪ್ಪಿರುವ ದುರ್ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

CARDIAC ARREST  CRICKETER DIED  MAHARASHTRA CRICKETER DIED  ಕ್ರಿಕೆಟರ್​ ಸಾವು
ಸಾಂದರ್ಭಿಕ ಚಿತ್ರ (Getty Images)
author img

By ETV Bharat Sports Team

Published : Nov 29, 2024, 3:09 PM IST

ಪುಣೆ: Mumbai Cricketer died - ಮಹಾರಾಷ್ಟ್ರದ ಪುಣೆಯಲ್ಲಿ ದುರ್ಘಟನೆಯೊಂದು ನಡೆದಿದೆ. ಕ್ರಿಕೆಟ್​ ಆಡುವಾಗಲೇ ಬ್ಯಾಟರ್​ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರ ಕ್ರಿಕೆಟಿಗ ಇಮ್ರಾನ್ ಪಟೇಲ್ ಬುಧವಾರ ಲೀಗ್ ಪಂದ್ಯ ಆಡುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 35ರ ಹರೆಯದ ಇಮ್ರಾನ್ ಗರ್ವಾರೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಲೀಗ್ ಪಂದ್ಯದಲ್ಲಿ ಆರಂಭಿಕರಾಗಿ ಪ್ರವೇಶಿಸಿದ್ದರು. ಆದರೆ. ಪಂದ್ಯದ ನಡುವೆಯೇ ಇಮ್ರಾನ್ ಪ್ರಾಣ ಬಿಟ್ಟಿದ್ದಾರೆ. ಇದರಿಂದ ಇಮ್ರಾನ್ ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ.

ಇಮ್ರಾನ್ ತಂಡದ ಪರ ಬ್ಯಾಟಿಂಗ್ ಮಾಡುವಾಗ ಸತತ ಎರಡು ಬೌಂಡರಿಗಳನ್ನು ಬಾರಿಸಿದ್ದರು. ಕೆಲವು ಓವರ್‌ಗಳು ಬ್ಯಾಟಿಂಗ್​ ಮಾಡಿದ ನಂತರ ಏಕಾಏಕಿ ಅವರ ಕುತ್ತಿಗೆ ಮತ್ತು ಕೈಗಳಲ್ಲಿ ನೋವು ಕಾಣಿಸಿಕೊಂಡಿದೆ. ಈ ಬಗ್ಗೆ ಸ್ವತಃ ಇಮ್ರಾನ್​ ಕೂಡ ಅಂಪೈರ್‌ಗೆ ತಿಳಿಸಿ ಪೆವಿಲಿಯನ್ ಕಡೆಗೆ ಹೋಗಲಾರಂಭಿಸಿದ್ದಾರೆ. ಆದರೆ, ಪೆವಿಲಿಯನ್ ತಲುಪುವ ಮುನ್ನವೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲಿದ ಸಹ ಆಟಗಾರರು ಇಮ್ರಾನ್​ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು ಯಾವುದೇ ಪ್ರಯೋಜನವಾಗದೇ ಕೊನೆಯುಸಿರೆಳೆದಿದ್ದಾರೆ.

CARDIAC ARREST  CRICKETER DIED  MAHARASHTRA CRICKETER DIED  ಕ್ರಿಕೆಟರ್​ ಸಾವು
ಇಮ್ರಾನ್​ ಪಟೇಲ್​ (ETV Bharat)

ಏತನ್ಮಧ್ಯೆ, ನಾಲ್ಕು ತಿಂಗಳ ಹಿಂದೆಯೇ ಇಮ್ರಾನ್ ಮೂರನೇ ಬಾರಿಗೆ ತಂದೆಯಾಗಿದ್ದರು. ಇದೀಗ ಅವರು ತಾಯಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಇಮ್ರಾನ್ ಪಟೇಲ್ ಅವರ ಸಹ ಆಟಗಾರ ನಸೀರ್ ಖಾನ್ ಅವರು ಪಂದ್ಯದ ಮೊದಲು ಆಟಗಾರನಿಗೆ ಯಾವುದೇ ಸಮಸ್ಯೆಗಳು ಕಾಣಿಸಿಕೊಂಡಿರಲಿಲ್ಲ. ಅಲ್ಲದೇ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಕೂಡಾ ಇರಲಿಲ್ಲ ಫಿಟ್ ಆಗಿದ್ದರು.

ಅವರು ಕ್ರಿಕೆಟ್ ಅನ್ನು ತುಂಬಾ ಪ್ರೀತಿಸುವ ಆಲ್ ರೌಂಡರ್ ಆಗಿದ್ದರು ಎಂದು ಕಂಬನಿ ಮಿಡಿದಿದ್ದಾರೆ. ಇಮ್ರಾನ್​ ಸಾವಿನ ಬಗ್ಗೆ ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಆಜಾದ್ ಕಾಲೇಜು ಬಳಿಯ ಸ್ಮಶಾನದಲ್ಲಿ ಇಮ್ರಾನ್​ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಈ ಹಿಂದೆಯೂ ಮುಂಬೈನಲ್ಲಿ ಇಂತಹದ್ದೇ ಘಟನೆಯೊಂದು ನಡೆದಿತ್ತು. ಜೂನ್​ ತಿಂಗಳಲ್ಲಿ ಕ್ರಿಕೆಟ್ ಪಂದ್ಯ ಆಡುತ್ತಿದ್ದ ವೇಳೆ 42 ವರ್ಷದ ಆಟಗಾರ ಸಾವನ್ನಪ್ಪಿದ್ದರು. ನಗರದ ಕಾಶ್ಮೀರ ಪ್ರದೇಶದ ಫಾರ್ಮ್‌ಹೌಸ್‌ನಲ್ಲಿ ಕಂಪನಿಯೊಂದು ಕ್ರಿಕೆಟ್​ ಪಂದ್ಯವನ್ನು ಆಯೋಜಿಸಿತ್ತು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ರಾಮ್ ಗಣೇಶ್ ತೇವಾರ್ ಸಿಕ್ಸರ್ ಬಾರಿಸಿದ ತಕ್ಷಣ ಕುಸಿದು ಬಿದ್ದಿದ್ದರು. ಅಲ್ಲಿದ್ದ ಸಹ ಆಟಗಾರರು ಕೂಡಲೇ ತೇವಾರ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದ್ರೆ ದಾರಿ ಮಧ್ಯದಲ್ಲೇ ಸಾವನ್ನಪ್ಪಿದ್ದರು. ಇದಾದ ಬಳಿಕ ಯುವ ಕ್ರಿಕೆಟರ್ ವೊಬ್ಬರು ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದರು. ​

ಇದನ್ನೂ ಓದಿ: RCBಗೆ ಕೊಹ್ಲಿ ನಾಯಕನಾಗುವ ಸಾಧ್ಯತೆ, ಆದರೆ ತಂಡದಲ್ಲೊಂದು ಕೊರತೆ- ಎಬಿ ಡಿವಿಲಿಯರ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.