ETV Bharat / sports

34ನೇ ವಸಂತಕ್ಕೆ ಕಾಲಿಟ್ಟ ​ಮೊಹಮ್ಮದ್​ ಶಮಿ: ಸೆನ್ಸೇಷನಲ್​ ವೇಗಿಯ ಈ ಐದು ದಾಖಲೆ ತಿಳಿಯಿರಿ - Mohammad Shami

ಭಾರತದ ವೇಗದ ಬೌಲರ್​ ಮತ್ತು 2023ರ ಏಕದಿನ ವಿಶ್ವಕಪ್​ನ ಅತೀ ಹೆಚ್ಚು ವಿಕೆಟ್​ ಪಡೆದು ಸಂಚಲನ ಸೃಷ್ಟಿಸಿದ್ದ ಮೊಹಮ್ಮದ್​ ಶಮಿ ಇಂದು 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ವಿಶ್ವಕಪ್​ನಲ್ಲಿ ಅವರು ಬರೆದಿರುವ 5 ದಾಖಲೆಗಳ ಮಾಹಿತಿ ಇಲ್ಲಿದೆ.

​ಮೊಹಮ್ಮದ್​ ಶಮಿ
​ಮೊಹಮ್ಮದ್​ ಶಮಿ (ANI)
author img

By ETV Bharat Sports Team

Published : Sep 3, 2024, 5:06 PM IST

ನವದೆಹಲಿ: ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಬೌಲರ್​ ಮೊಹಮ್ಮದ್​ ಶಮಿ ಇಂದು 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ವೇಗದ ಬೌಲಿಂಗ್​ನಿಂದಲೇ ಕ್ರಿಕೆಟ್​ ಜಗತ್ತಿನಲ್ಲಿ ದಾಖಲೆಗಳನ್ನು ಬರೆದಿರುವ ಶಮಿ 2023ರ ಏಕದಿನ ವಿಶ್ವಕಪ್​ನಲ್ಲಿ ಸೆನ್ಸೇಷನಲ್​ ಬೌಲರ್​ ಆಗಿ ಹೊರಹೊಮ್ಮಿದ್ದರು. ಈ ವಿಶ್ವ ಕ್ರೀಡಾಕೂಟದಲ್ಲಿ ತಮ್ಮ ಅದ್ಭುತ ಬೌಲಿಂಗ್ ಮೂಲಕ 24 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಶಮಿ ಬೌಲಿಂಗ್ ಸಹಾಯದಿಂದ ಭಾರತ ಫೈನಲ್​ಗೂ ತಲುಪಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧ ಅಂತಿಮ ಹಣಾಹಣಯಲ್ಲಿ ಸೋಲನುಭವಿಸಿತ್ತು.

ವಿಶ್ವಕಪ್​ನ ಮೊದಲ ಮೂರು ಪಂದ್ಯಗಳಲ್ಲಿ ಶಮಿ ಅವರನ್ನು ಭಾರತೀಯ ಇಲೆವೆನ್‌ ತಂಡದಿಂದ ಹೊರಗಿಡಲಾಗಿತ್ತು. ಆದರೆ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಗಾಯಗೊಂಡ ಬಳಿಕ ಶಮಿ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶ ದೊರೆತಿತ್ತು. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಶಮಿ ಇಡೀ ಟೂರ್ನಿಯುದ್ದಕ್ಕೂ ಮಾರಕ ಬೌಲಿಂಗ್​ ಮಾಡಿ ಅದ್ಭುತವನ್ನೇ ಸೃಷ್ಟಿಸಿದ್ದರು. ಜತೆಗೆ 5 ಹೊಸ ದಾಖಲೆಗಳನ್ನು ಬರೆದಿದ್ದರು. ಅವು ಯಾವುವು ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.

2023ರ ವಿಶ್ವಕಪ್​ನಲ್ಲಿ ಶಮಿ ದಾಖಲೆಗಳು;

ಏಳು ವಿಕೆಟ್ ಪಡೆದ ಬೌಲರ್​​: ಮುಂಬೈನಲ್ಲಿ ನಡೆದ ನ್ಯೂಜಿಲೆಂಡ್​ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ ಶಮಿ ಅತ್ಯದ್ಭುತ ಪ್ರದರ್ಶನ ತೋರಿದ್ದರು. ಈ ಪಂದ್ಯದಲ್ಲಿ ಅವರು 57 ನರ್​ಗಳಿಗೆ 7 ವಿಕೆಟ್​ಗಳನ್ನು ಉರುಳಿಸಿದ್ದರು. ಇದರೊಂದಿಗೆ ವಿಶ್ವಕಪ್​ನ ಸೆಮಿಫೈನಲ್​ ಪಂದ್ಯವೊಂದರಲ್ಲೇ ಅತೀ ಹೆಚ್ಚು ವಿಕೆಟ್​ ಪಡೆದ ಮೊದಲ ವಿಶ್ವದ ಮೊದಲ ಬೌಲರ್​ ಎಂಬ ದಾಖಲೆಯನ್ನು ಬರೆದಿದ್ದಾರೆ.

ಅತೀ ಹೆಚ್ಚು ವಿಕೆಟ್​: ವಿಶ್ವಕಪ್​ನಲ್ಲಿ ಫೈನಲ್​ ಸೇರಿದಂತೆ 7 ಪಂದ್ಯಗಳನ್ನು ಆಡಿರುವ ಶಮಿ ಒಟ್ಟು 24 ವಿಕೆಟ್​ಗಳನ್ನು ಪಡೆದಿದ್ದರು. ಇದರೊಂದಿಗೆ ಈ ಅವಧಿಯ ಏಕದಿನ ವಿಶ್ವಕಪ್​ನಲ್ಲಿ​ ಅತೀ ಹೆಚ್ಚು ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡರು.

ವಿಶ್ವಕಪ್​ನಲ್ಲಿ 24 ವಿಕೆಟ್​ ಪಡೆದ ಮೊಹಮ್ಮದ್​ ಶಮಿ, ಒಂದೇ ಆವೃತ್ತಿಯಲ್ಲಿ ಅತೀ ಹೆಚ್ಚು ವಿಕೆಟ್​ ಪಡೆದ ಮೊದಲ ಭಾರತೀಯ ಎಂಬ ದಾಖಲೆ ಬರೆದರು. ಈ ಹಿಂದೆ 2011ರ ಏಕದಿನ ವಿಶ್ವಕಪ್​ನಲ್ಲಿ ಭಾರತದ ವೇಗಿ ಜಹೀರ್​ ಖಾನ್​ 21 ವಿಕೆಟ್​ ಪಡೆದಿದ್ದರು.

ವಿಶ್ವಕಪ್​ ಇತಿಹಾಸದಲ್ಲೇ 55 ವಿಕೆಟ್​ಗಳನ್ನು ಪೂರ್ಣಗೊಳಿಸಿದ ಭಾರತದ ಮೊದಲ ವೇಗದ ಬೌಲರ್​ ಆಗಿದ್ದು ವಿಶ್ವದ 5ನೇ ಬೌಲರ್​ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ಚಾಂಪಿಯನ್ಸ್​ ಟ್ರೋಫಿ: ಟೀಂ ಇಂಡಿಯಾ ಜೊತೆ ಭದ್ರತಾ ತಂಡವೂ ಪಾಕಿಸ್ತಾನಕ್ಕೆ ಪ್ರಯಾಣ? - Champions Trophy

ETV Bharat Logo

Copyright © 2024 Ushodaya Enterprises Pvt. Ltd., All Rights Reserved.