ಮೇಷ : ಬದುಕಿಗೆ ಸಂಬಂಧಿಸಿದ ಯಾವುದಾದರೂ ಅಡಚಣೆಯ ನಿವಾರಣೆಯ ಮೂಲಕ ಈ ವಾರವು ಪ್ರಾರಂಭಗೊಳ್ಳಲಿದೆ. ನಿಮ್ಮ ಹಿರಿಯರು ಮತ್ತು ಕಿರಿಯರು ನಿಮ್ಮನ್ನು ಬೆಂಬಲಿಸಲಿದ್ದಾರೆ. ಕಾಯಿಲೆಗೆ ಒಳಗಾದ ವ್ಯಕ್ತಿಗಳು ಚೇತರಿಸಿಕೊಳ್ಳಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಮಕ್ಕಳಿಗೆ ಈ ವಾರವು ಅದೃಷ್ಟಶಾಲಿ ಮತ್ತು ಲಾಭದಾಯಕ ಎನಿಸಲಿದೆ. ವಾರದ ಮೊದಲ ಭಾಗವು ವ್ಯಾಪಾರೋದ್ಯಮಿಗಳಿಗೆ ನಿರೀಕ್ಷಿತ ಆದಾಯವನ್ನು ತರಲಿದೆ. ವಾರದ ಕೊನೆಗೆ ಏನಾದರೂ ಶುಭ ಸುದ್ದಿ ಬರಲಿದೆ. ಯುವಕರು ಮೋಜಿನಿಂದ ಸಮಯ ಕಳೆಯಲಿದ್ದಾರೆ. ಈ ವಾರದಲ್ಲಿ ನಿಮ್ಮ ವ್ಯವಹಾರ ಮತ್ತು ವೃತ್ತಿಯಲ್ಲಿ ಪ್ರಗತಿ ಸಾಧಿಸಲು ನಿಮಗೆ ಅವಕಾಶ ಲಭಿಸಲಿದೆ. ಕೆಲಸ ಹುಡುಕುತ್ತಿರುವವರಿಗೆ ಹೊಸ ಅವಕಾಶಗಳು ಲಭಿಸಲಿವೆ. ವೈವಾಹಿಕ ಬದುಕಿನಲ್ಲಿ ಸಾಮರಸ್ಯ ಮತ್ತು ಪ್ರೀತಿ ನೆಲೆಸಲಿದೆ. ನಿಮ್ಮ ಪ್ರೇಮಿಯ ಜೊತೆಗೆ ಸಮಯವನ್ನು ಆನಂದಿಸಲಿದ್ದೀರಿ. ಅಲ್ಲದೆ ನಿಮ್ಮ ಬಂಧವು ಗಟ್ಟಿಗೊಳ್ಳಲಿದೆ.
ವೃಷಭ : ವಾರದ ಆರಂಭದಲ್ಲಿ ನಿಮ್ಮ ಎದುರಾಳಿಗಳು ನಿಮ್ಮನ್ನು ಬಾಧಿಸಲಿದ್ದು, ನಿಮ್ಮ ಗಮನಭಂಗ ಮಾಡಲು ಯತ್ನಿಸಲಿದ್ದಾರೆ. ಹೆಚ್ಚಿನ ಶ್ರಮ ಮತ್ತು ಪ್ರಯತ್ನದ ಅಗತ್ಯವಿದೆ. ಪ್ರಣಯ ಸಂಬಂಧದಲ್ಲಿ ಕೆಲವೊಮ್ಮೆ ತಪ್ಪು ಸಂವಹನ ಉಂಟಾಗಬಹುದು. ಪರಿಸ್ಥಿತಿ ಹದಗೆಡದಂತೆ ನೋಡಿಕೊಳ್ಳಬೇಕಾದರೆ, ವಾಗ್ವಾದ ಮಾಡುವ ಬದಲಿಗೆ ವಿಷಯದ ಕುರಿತಂತೆ ಚರ್ಚೆ ನಡೆಸಿ. ವಾರದ ನಡುವೆ ಮನೆಯ ದುರಸ್ತಿಗಾಗಿ ಅಥವಾ ಅಗತ್ಯ ವಸ್ತುಗಳ ಖರೀದಿಗಾಗಿ ಹೆಚ್ಚಿನ ಹಣ ಖರ್ಚು ಮಾಡಬೇಕಾದ ಅನಿವಾರ್ಯತೆ ಉಂಟಾಗಬಹುದು. ಭೂಮಿ, ಕಟ್ಟಡ ಇತ್ಯಾದಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನ್ಯಾಯಾಲಯದ ಹೊರಗಡೆ ಬಗೆಹರಿಸುವುದು ಒಳ್ಳೆಯದು. ವ್ಯವಹಾರ ನಡೆಸುವಾಗ, ವ್ಯಾಪಾರೋದ್ಯಮಿಗಳು ಜಾಗರೂಕರಾಗಿರಬೇಕು. ಈ ವಾರದಲ್ಲಿ ವೃಷಭ ರಾಶಿಯವರು ತಮ್ಮ ಸಂಬಂಧ ಮತ್ತು ಒಟ್ಟಾರೆ ಯೋಗಕ್ಷೇಮಕ್ಕೆ ಗಮನ ನೀಡಬೇಕು. ನಂತರ ನೀವು ಕಾಲೋಚಿತ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದೆ.
ಮಿಥುನ : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರು ಈ ವಾರದ ಆರಂಭದಲ್ಲಿ ಒಂದಷ್ಟು ಉತ್ತೇಜಕ ಸುದ್ದಿಯನ್ನು ಪಡೆಯಲಿದ್ದಾರೆ. ನೀವು ದೀರ್ಘ ಕಾಲದಿಂದ ನಿಮ್ಮ ಇಷ್ಟದ ಸ್ಥಳಕ್ಕೆ ವರ್ಗಾವಣೆ ಅಥವಾ ಭಡ್ತಿಗಾಗಿ ಕಾಯುತ್ತಿದ್ದರೆ ಈ ವಾರದಲ್ಲಿ ಅದು ಕೈಗೂಡಲಿದೆ. ನಿರುದ್ಯೋಗಿಗಳಿಗೆ ಕೆಲಸ ದೊರೆಯುವ ಸಾಧ್ಯತೆ ಇದೆ. ನಿಮ್ಮ ಒತ್ತಡದ ಕೆಲಸದ ವೇಳಾಪಟ್ಟಿಯ ಕಾರಣ ನಿಮ್ಮ ಆಹಾರಕ್ಕೆ ಹೆಚ್ಚು ನೀಡಿರಿ ಹಾಗೂ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ದೂರವಿರಿ. ಪ್ರಭಾವಿ ವ್ಯಕ್ತಿಯೊಬ್ಬರು ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದವನ್ನು ಬಗೆಹರಿಸಲು ಸಹಾಯ ಮಾಡುವುದರಿಂದ ಈ ವಾರದ ದ್ವಿತೀಯಾರ್ಧದಲ್ಲಿ ನೀವು ನಿರಾಳತೆಯನ್ನು ಅನುಭವಿಸಲಿದ್ದೀರಿ. ನಿಮ್ಮ ಜೀವನ ಸಂಗಾತಿಯ ಭಾವನೆಗಳನ್ನು ನಿರ್ಲಕ್ಷಿಸಬೇಡಿ. ನಿಮ್ಮ ವೈವಾಹಿಕ ಜೀವನವು ಗಟ್ಟಿಗೊಳ್ಳಬೇಕಾದರೆ ಅವರಿಗಾಗಿ ಸಮಯವನ್ನು ಮೀಸಲಿಡಿ. ಪ್ರಣಯ ಸಂಬಂಧದಲ್ಲಿ ಉಂಟಾಗುವ ಯಾವುದೇ ತಪ್ಪು ಗ್ರಹಿಕೆಯನ್ನು ಸರಿಪಡಿಸಲು ಮಹಿಳಾ ಸಂಗಾತಿಯು ನಿಮಗೆ ಸಹಾಯ ಮಾಡಲಿದ್ದಾರೆ.
ಕರ್ಕಾಟಕ : ವಾರದ ಆರಂಭದಲ್ಲಿ, ಕೆಲಸಕ್ಕೆ ಸಂಬಂಧಿಸಿದಂತೆ ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಅನಗತ್ಯವಾಗಿ ಉಂಟಾಗುವ ಅನೇಕ ಸಮಸ್ಯೆಗಳನ್ನು ದೂರ ಮಾಡುವುದಕ್ಕಾಗಿ ಕರ್ಕಾಟಕ ರಾಶಿಯವರು ಈ ವಾರದಲ್ಲಿ ಸ್ವನಿಯಂತ್ರಣವನ್ನು ತೋರಬೇಕು. ವೃತ್ತಿಯಲ್ಲಿ ಬದಲಾವಣೆಯನ್ನು ಎದುರು ನೋಡುತ್ತಿರುವವರಿಗೆ ಈ ವಾರದಲ್ಲಿ ಒಳ್ಳೆಯ ಅವಕಾಶಗಳು ಲಭಿಸಲಿವೆ. ಪ್ರಾಧಿಕಾರ ಅಥವಾ ಸರ್ಕಾರಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಯನ್ನು ಬಗೆಹರಿಸುವಾಗ ನಿಮ್ಮ ಮಾತು ಮತ್ತು ಕ್ರಿಯೆಗಳ ಮೇಲೆ ನಿಯಂತ್ರಣವಿರಲಿ. ವಾರದ ಉತ್ತರಾರ್ಧದಲ್ಲಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಹತ್ತಿರದ ಅಥವಾ ದೂರದ ಸ್ಥಳಗಳಿಗೆ ಪ್ರಯಾಣಿಸುವ ಅವಕಾಶ ಲಭಿಸಬಹುದು. ವಿದ್ಯಾರ್ಥಿಗಳ ಗಮನವು ಶಾಲೆಯ ಕೆಲಸದಿಂದ ಬೇರೆಡೆ ಹೋಗಬಹುದು ಹಾಗೂ ಈ ಅವಧಿಯಲ್ಲಿ ಅವರು ಮೋಜಿಗೆ ಹೆಚ್ಚಿನ ಗಮನ ನೀಡಬಹುದು. ಪ್ರಣಯ ಸಂಬಂಧಕ್ಕೆ ಸಂಬಂಧಿಸಿದಂತೆ ಈ ಅವಧಿಯು ಮಂಗಳದಾಯಕವಾಗಿದೆ. ಪ್ರೇಮಿಯನ್ನು ಭೇಟಿಯಾಗಲು ಅಥವಾ ಅವರ ಸಾಮಿಪ್ಯವನ್ನು ಸಾಧಿಸಲು ಅಸಾಧ್ಯವಾಗುವ ಕಾರಣ ಮಾನಸಿಕ ಒತ್ತಡ ಉಂಟಾಗಬಹುದು.
ಸಿಂಹ : ಈ ವಾರದ ಆರಂಭದಲ್ಲಿ ವ್ಯವಹಾರ ಮತ್ತು ವೃತ್ತಿಗೆ ಸಂಬಂಧಿಸಿದ ಪ್ರಯತ್ನಗಳು ಅಗತ್ಯ ಫಲಿತಾಂಶವನ್ನು ನೀಡಲಿವೆ. ಉದ್ಯೋಗದಲ್ಲಿರುವವರಿಗೆ ಆದಾಯದ ಹೊಸ ಮೂಲ ದೊರೆಯಲಿದೆ. ಸಮಾಜದಲ್ಲಿ ಗೌರವ ಹೆಚ್ಚಲಿದೆ. ಮಾರುಕಟ್ಟೆಯಲ್ಲಿ ಸಿಲುಕಿ ಹಾಕಿಕೊಂಡಿರುವ ಹಣವು ಅನಿರೀಕ್ಷಿತವಾಗಿ ವಾಪಾಸ್ ದೊರೆಯಲಿದ್ದು, ವ್ಯವಹಾರದ ವಿಸ್ತರಣೆಗೆ ಸಹಾಯ ದೊರೆಯಲಿದೆ. ಪ್ರಭಾವಿ ಮತ್ತು ಹಿರಿಯ ವ್ಯಕ್ತಿಗಳನ್ನು ಭೇಟಿಯಾಗುವುದರಿಂದ ಪ್ರಯೋಜನ ದೊರೆಯಲಿದೆ. ಯುವಕರು ಮೋಜಿನಿಂದ ಸಮಯ ಕಳೆಯಲಿದ್ದಾರೆ. ಆಸ್ತಿ ಮತ್ತು ಕಟ್ಟಡಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಇಚ್ಛೆಯು ಈ ವಾರದಲ್ಲಿ ಈಡೇರಲಿದೆ. ಮಗುವಿಗೆ ಸಂಬಂಧಿಸಿದ ಯಾವುದೇ ಸಾಧನೆಯು ನಿಮ್ಮ ಆನಂದ ಮತ್ತು ಗೌರವಕ್ಕೆ ಕಾರಣವೆನಿಸಲಿದೆ. ಪ್ರೇಮ ಸಂಬಂಧದಲ್ಲಿ ತೀವ್ರತೆ ಇರಲಿದ್ದು, ಅವರು ತಮ್ಮ ಪ್ರಣಯ ಸಂಗಾತಿಯೊಂದಿಗೆ ಸಂತಸದ ಕ್ಷಣಗಳನ್ನು ಕಳೆಯಲಿದ್ದಾರೆ. ವೈವಾಹಿಕ ಬದುಕು ಸಹ ಚೆನ್ನಾಗಿರಲಿದೆ. ದೊಡ್ಡದಾದ ಉಡುಗೊರೆಯ ಮೂಲಕ ನಿಮ್ಮ ಜೀವನ ಸಂಗಾತಿಯು ನಿಮಗೆ ಅಚ್ಚರಿ ಮೂಡಿಸಬಹುದು. ಆರೋಗ್ಯದ ವಿಚಾರದಲ್ಲಿ ಎಲ್ಲವೂ ಸುಗಮವಾಗಿರಲಿದೆ.
ಕನ್ಯಾ : ಕನ್ಯಾ ರಾಶಿಯಲ್ಲಿ ಜನಿಸಿದವರಿಗೆ ಈ ವಾರದಲ್ಲಿ ಅಸ್ಥಿರತೆ ಕಾಡಬಹುದು. ವಾರದ ಆರಂಭದಲ್ಲಿ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮ ಆತಂಕಕ್ಕೆ ಕಾರಣವೆನಿಸಬಹುದು. ನಿಮ್ಮ ಗುರಿಯನ್ನು ಸಾಧಿಸಲು ನೀವು ಇನ್ನಷ್ಟು ಪ್ರಯತ್ನ ಮತ್ತು ಕಠಿಣ ಶ್ರಮವನ್ನು ಹಾಕಬೇಕು. ಉದ್ಯೋಗಕ್ಕಾಗಿ ಎದುರು ನೋಡುತ್ತಿರುವವರು ಇನ್ನಷ್ಟು ಹೊತ್ತು ಕಾಯಬೇಕಾದೀತು. ವಾರದ ನಡುವೆ ನಿಮ್ಮ ಸಂಬಂಧ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ನೀವು ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾದೀತು. ಈ ಹಂತದಲ್ಲಿ ಭೂಮಿ ಮತ್ತು ಕಟ್ಟಡಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಸವಾಲಿನ ಕ್ಷಣಗಳನ್ನು ಎದುರಿಸುವಾಗ ನಿಮ್ಮ ಜೀವನ ಸಂಗಾತಿಯು ನಿಮಗೆ ನೆರವನ್ನು ಒದಗಿಸಲಿದ್ದಾರೆ. ಈ ವಾರದಲ್ಲಿ ನಿಮ್ಮ ವೈಯಕ್ತಿಕ ಬದುಕು ಅಥವಾ ಪ್ರೇಮ ಜೀವನದಲ್ಲಿ ಕಾಡುತ್ತಿರುವ ಸಮಸ್ಯೆಗಳನ್ನು ನಿರ್ಲಕ್ಷಿಸುವುದಕ್ಕಿಂತಲೂ ಅವುಗಳಿಗೆ ಉತ್ತರಗಳನ್ನು ಕಂಡುಹಿಡಿಯುವುದು ಒಳ್ಳೆಯದು. ನಿಮ್ಮ ಜೀವನ ಸಂಗಾತಿಯ ಜೊತೆಗಿನ ಭಿನ್ನಾಭಿಪ್ರಾಯಗಳನ್ನು ದೂರ ಮಾಡುವುದಕ್ಕಾಗಿ ಸಂವಾದದ ಹಾದಿಯನ್ನು ಬಳಸಿ.
ತುಲಾ : ಈ ವಾರದ ಆರಂಭಿಕ ದಿನಗಳು ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ತುಲಾ ರಾಶಿಯವರಿಗೆ ಒಂದಷ್ಟು ಸವಾಲುಗಳನ್ನು ಉಂಟು ಮಾಡಬಹುದು. ನಿಮ್ಮ ಕೆಲಸದ ಹೊರೆಯೂ ಹೆಚ್ಚಲಿದೆ. ಕೆಲಸಕ್ಕೆ ಸಂಬಂಧಿಸಿದ ಈ ಸವಾಲುಗಳ ನಡುವೆ ಕುಟುಂಬದ ಕಲಹವೂ ನಿಮ್ಮನ್ನು ಕಾಡಬಹುದು. ನಿಮ್ಮ ಜೀವನ ಸಂಗಾತಿಯ ಜೊತೆಗಿನ ಸಂಘರ್ಷವು ನಿಮ್ಮ ದುಃಖಕ್ಕೆ ಕಾರಣವಾಗಬಹುದು. ಇನ್ನೊಮ್ಮೆ ನಿಮಗೆ ಅಸಂಖ್ಯಾತ ಆಶೀರ್ವಾದ ದೊರೆಯಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ಈ ವಾರದ ದ್ವಿತೀಯಾರ್ಧದಲ್ಲಿ ನಿರೀಕ್ಷಿತ ಲಾಭವನ್ನು ಗಳಿಸಲಿದ್ದಾರೆ. ತಮ್ಮ ಸಂಸ್ಥೆಯನ್ನು ಬೆಳೆಸುವ ಕನಸು ಕಾಣುತ್ತಿರುವವರ ಇಚ್ಛೆ ಈಡೇರಲಿದೆ. ಯಾವುದೇ ಪ್ರಮುಖ ನಿರ್ಧಾರವನ್ನು ಕೈಗೊಳ್ಳುವಾಗ ನಿಮ್ಮ ಒಡಹುಟ್ಟಿದವರು ಮತ್ತು ಕುಟುಂಬದ ಇತರ ಸದಸ್ಯರ ಬೆಂಬಲವು ನಿಮಗೆ ದೊರೆಯಲಿದೆ. ಈ ವಾರದ ದ್ವಿತೀಯಾರ್ಧದಲ್ಲಿ ಪೂಜಾ ಸ್ಥಳಕ್ಕೆ ನೀವು ಪ್ರಯಾಣಿಸುವ ಸಾಧ್ಯತೆ ಇದೆ. ಪ್ರಣಯ ಸಂಬಂಧಕ್ಕೆ ಇನ್ನಷ್ಟು ಮೆರುಗು ದೊರೆಯಲಿದ್ದು, ನಿಮ್ಮಿಬ್ಬರ ನಡುವಿನ ಸಂವಹನದಲ್ಲಿ ಸುಧಾರಣೆ ಉಂಟಾಗಲಿದೆ.
ವೃಶ್ಚಿಕ : ವೃಶ್ಚಿಕ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲ್ಲಿ ಮಿಶ್ರಫಲ ದೊರೆಯಲಿದೆ. ಭೀತಿಯ ಕಾರಣ ಸವಾಲುಗಳಿಂದ ಪಲಾಯನ ಮಾಡುವ ಬದಲಿಗೆ ಅವುಗಳನ್ನು ನೇರವಾಗಿ ಎದುರಿಸಬೇಕು. ವಿಶೇಷವೆಂದರೆ, ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ನಿಭಾಯಿಸುವುದಕ್ಕಾಗಿ ನಿಮ್ಮ ವಿವೇಚನೆ ಮತ್ತು ಜ್ಞಾನ ಎರಡನ್ನೂ ಬಳಸಲು ನಿಮಗೆ ಸಾಧ್ಯವಾಗಲಿದೆ. ಯಾವುದೇ ಪರೀಕ್ಷೆ ಅಥವಾ ಸ್ಪರ್ಧೆಯಲ್ಲಿ ಯಶಸ್ಸನ್ನು ಪಡೆಯಬೇಕಾದರೆ ಅಭ್ಯರ್ಥಿಗಳು ಸಾಕಷ್ಟು ಶ್ರಮ ಪಡಬೇಕು. ನಿಮ್ಮ ಎದುರಾಳಿಗಳು ಈ ವಾರದಲ್ಲಿ ಬಲ ಪಡೆಯುವ ಸಾಧ್ಯತೆ ಇದೆ. ಇಂತಹ ಸನ್ನಿವೇಶದಲ್ಲಿ ನೀವು ಸಾಕಷ್ಟು ಎಚ್ಚರಿಕೆ ವಹಿಸಬೇಕು. ಈ ವಾರದ ದ್ವಿತೀಯಾರ್ಧದಲ್ಲಿ ಕೆಲಸಕ್ಕೆ ಸಂಬಂಧಿಸಿದಂತೆ ದೂರದ ಅಥವಾ ಹತ್ತಿರದ ಸ್ಥಳಕ್ಕೆ ನೀವು ಪ್ರಯಾಣಿಸಬಹುದು. ಹಣಕಾಸಿನ ವಹಿವಾಟು ನಡೆಸುವಾಗ ಸಾಕಷ್ಟು ಎಚ್ಚರ ವಹಿಸಿ. ಇಲ್ಲದಿದ್ದರೆ ಆರ್ಥಿಕ ನಷ್ಟ ಉಂಟಾಗಬಹುದು. ಪ್ರಣಯ ಸಂಬಂಧದಲ್ಲಿ ಸಿಹಿಕಹಿ ವಾಗ್ವಾದಗಳು ನಡೆಯಬಹುದು. ವೈವಾಹಿಕ ಬದುಕಿನಲ್ಲಿ ಸಂತಸವು ಮುಂದುವರಿಯಲಿದೆ.
ಧನು : ಈ ವಾರವು ದೂರದ ಅಥವಾ ಹತ್ತಿರದ ಪ್ರಯಾಣದ ಮೂಲಕ ಪ್ರಾರಂಭಗೊಳ್ಳಲಿದೆ. ಇದು ಮೋಜು ಹಾಗೂ ಆನಂದದಿಂದ ಕೂಡಿದ ಪ್ರಯಾಣವೆನಿಸಲಿದೆ. ವಾರದ ಆರಂಭದಲ್ಲಿ ನಿಮಗೆ ಬೇಕಾದ ಹುದ್ದೆಯು ದೊರೆಯಬಹುದು. ನಿಮ್ಮದೇ ಆದ ವ್ಯವಹಾರವನ್ನು ಪ್ರಾರಂಭಿಸುವುದಾದರೆ ಅಥವಾ ಈಗ ಇರುವ ವ್ಯವಹಾರವನ್ನು ವಿಸ್ತರಿಸಲು ನೀವು ಇಚ್ಛಿಸುವುದಾದರೆ ಈ ವಾರದಲ್ಲಿ ನಿಮ್ಮ ಇಚ್ಛೆಯು ಈಡೇರಲಿದೆ. ನಿಮಗೆ ಸಾಕಷ್ಟು ಗೌರವಾದಾರ ದೊರೆಯಲಿದೆ. ಮಕ್ಕಳ ಕುರಿತು ಏನಾದರೂ ಶುಭ ಸುದ್ದಿ ದೊರೆಯಬಹುದು. ವಾರದ ದ್ವಿತೀಯಾರ್ಧದಲ್ಲಿ ಕುಟುಂಬದ ಸದಸ್ಯರ ನಡುವಿನ ತಪ್ಪು ಗ್ರಹಿಕೆಯು ನಿವಾರಣೆಯಾಗಲಿದ್ದು, ಜನರ ನಡುವಿನ ಬಾಂಧವ್ಯವು ಗಟ್ಟಿಗೊಳ್ಳಲಿದೆ. ನಿಮ್ಮ ಪ್ರಣಯ ಸಂಬಂಧಕ್ಕೆ ಕುರಿತಂತೆ ಈ ವಾರವು ಸಾಕಷ್ಟು ಅದೃಷ್ಟದಿಂದ ಕೂಡಿರಲಿದೆ. ನಿಮ್ಮ ಕುಟುಂಬದ ಸದಸ್ಯರು ನಿಮ್ಮ ಪ್ರೇಮವನ್ನು ವಿವಾಹ ಬಂಧನಕ್ಕೆ ಪರಿವರ್ತಿಸಲಿದ್ದಾರೆ. ವೈವಾಹಿಕ ಬದುಕಿನಲ್ಲಿ ಸಂತಸವು ಮುಂದುವರಿಯಲಿದೆ. ನಿಮ್ಮ ಪ್ರೇಮಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವ ಅವಕಾಶ ತಾನಾಗಿಯೇ ದೊರೆಯಲಿದೆ.
ಮಕರ : ಮಕರ ರಾಶಿಯಲ್ಲಿ ಹುಟ್ಟಿದವರು ಈ ವಾರದಲ್ಲಿ ತಮ್ಮ ಗುರಿಯತ್ತ ಗಮನ ನೀಡಬೇಕು ಹಾಗೂ ಬಾಹ್ಯ ಅಡಚಣೆಗಳನ್ನು ನಿರ್ಲಕ್ಷಿಸಬೇಕು. ನಿಮ್ಮ ಬದುಕಿನಲ್ಲಿ ಸಮಸ್ಯೆಗಳನ್ನು ತಾಳ್ಮೆಯಿಂದಲೇ ಒಂದೊಂದಾಗಿ ಬಗೆಹರಿಸಲು ನಿಮಗೆ ಸಾಧ್ಯವಾಗಲಿದೆ. ಯಾವುದೇ ಯೋಜನೆಯಲ್ಲಿ ಆರ್ಥಿಕ ಹೂಡಿಕೆ ಮಾಡುವ ಮೊದಲು ವೃತ್ತಿಪರರು ಅಥವಾ ಹಿತೈಷಿಗಳ ಮಾರ್ಗದರ್ಶನ ಪಡೆಯಿರಿ. ಯಾವುದೇ ಅಗತ್ಯ ವಸ್ತುಗಳು ಅಥವಾ ಮನೆಯ ನಿರ್ವಹಣೆಗಾಗಿ ನಿಮ್ಮ ಕಿಸೆಯಿಂದ ಹಣ ಪಾವತಿಸಬೇಕಾದ ಅನಿವಾರ್ಯತೆ ಉಂಟಾದಲ್ಲಿ ನಿಮ್ಮ ಬಜೆಟ್ ಗೆ ಪೆಟ್ಟು ಬೀಳಲಿದೆ. ವಾರದ ದ್ವಿತೀಯಾರ್ಧದಲ್ಲಿ ದುಡಿಯುತ್ತಿರುವ ಮಹಿಳೆಯರು ಕೆಲಸ ಮತ್ತು ಮನೆಯ ಜವಾಬ್ದಾರಿಯ ನಡುವೆ ಸಂತುಲನ ಕಾಪಾಡಲು ಹೆಣಗಾಡಲಿದ್ದಾರೆ. ವೈವಾಹಿಕ ಬದುಕಿನಲ್ಲಿ ಸಂತಸವು ಮುಂದುವರಿಯಲಿದೆ. ಪ್ರೇಮ ಜೀವನವನ್ನು ಸಾಗಿಸುತ್ತಿರುವವರು ಸಾಮಾಜಿಕ ಮಾಧ್ಯಮ ಅಥವಾ ಅಂತಹ ಇತರ ಯಾವುದೇ ಜಾಲತಾಣಗಳಲ್ಲಿ ತಮ್ಮ ಪ್ರಣಯಭರಿತ ಬದುಕಿನ ವೈಭವೀಕರಣ ಅಥವಾ ಪ್ರದರ್ಶನವನ್ನು ಮಾಡಬಾರದು.
ಕುಂಭ : ನಿಮ್ಮ ಗೆಳೆಯರ ಸಹಕಾರದಿಂದಾಗಿ, ನಿಮ್ಮ ಸಂಸ್ಥೆಯನ್ನು ಬೆಳೆಸುವ ನಿಮ್ಮ ಕನಸು ಈಡೇರಲಿದೆ. ಉದ್ಯೋಗದಲ್ಲಿರುವವರಿಗೆ ಇದು ಸಕಾಲ. ಉದ್ಯೋಗದಲ್ಲಿರುವವರಿಗೆ ಆದಾಯದ ಹೊಸ ಮೂಲ ದೊರೆಯಲಿದೆ. ಪರೀಕ್ಷೆ ಮತ್ತು ಸ್ಪರ್ಧೆಗಳಿಗಾಗಿ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಕೆಲವೊಂದು ಆಶಾದಾಯಕ ಸುದ್ದಿ ದೊರೆಯಲಿದೆ. ವಾರದ ನಡುವಿನ ದಿನಗಳಲ್ಲಿ, ಭೂಮಿ ಮತ್ತು ಕಟ್ಟಡದ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಪೋಷಕರ ಸಂಪೂರ್ಣ ಸಹಕಾರ ಮತ್ತು ನೆರವನ್ನು ನೀವು ಪಡೆಯಲಿದ್ದೀರಿ. ವೈವಾಹಿಕ ಬದುಕಿನಲ್ಲಿ ಸಂತಸವು ಮುಂದುವರಿಯಲಿದೆ. ಪ್ರಣಯ ಸಂಬಂಧದ ವಿಚಾರದಲ್ಲಿಯೂ ಈ ವಾರವು ಅದೃಷ್ಟದಿಂದ ಕೂಡಿರಲಿದೆ. ನಿಮ್ಮ ಪ್ರೇಮವನ್ನು ನಿವೇದಿಸುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ಈಗಾಗಲೇ ಪ್ರಣಯ ಸಂಬಂಧದಲ್ಲಿರುವವರ ಪ್ರೇಮಕ್ಕೆ ಕುಟುಂಬದ ಸದಸ್ಯರ ಹಸಿರು ನಿಶಾನೆ ದೊರೆಯಲಿದೆ.
ಮೀನ : ಗೊತ್ತುಗುರಿಯಿಲ್ಲದೆ ಉದ್ಯೋಗದ ಹುಡುಕಾಟ ನಡೆಸುತ್ತಿರುವ ವ್ಯಕ್ತಿಗಳಿಗೆ ಅದ್ಭುತ ಅವಕಾಶಗಳು ಲಭಿಸಲಿವೆ. ಆಡಳಿತ ಮತ್ತು ಅಧಿಕಾರಕ್ಕೆ ಸಂಬಂಧಿಸಿದ ಯೋಜನೆಗಳಿಂದ ನಿಮಗೆ ಲಾಭ ದೊರೆಯಲಿದೆ. ವಿದೇಶದಲ್ಲಿ ಅಧ್ಯಯನ ಅಥವಾ ಉದ್ಯೋಗ ನಡೆಸುವ ಯೋಜನೆ ಇದ್ದಲ್ಲಿ ನಿಮ್ಮ ಕನಸು ನನಸಾಗಲಿದೆ. ವಾರದ ದ್ವಿತೀಯಾರ್ಧದಲ್ಲಿ, ಭೂಮಿ, ಕಟ್ಟಡ ಮತ್ತು ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ಅಡೆತಡೆಗಳು ನಿವಾರಣೆಯಾಗಲಿವೆ. ಆದರೆ ಈ ಅವಧಿಯಲ್ಲಿ ನಿಮ್ಮ ಆರೋಗ್ಯಕ್ಕೆ ನೀವು ಹೆಚ್ಚಿನ ಗಮನ ನೀಡಬೇಕು. ಇಲ್ಲದಿದ್ದರೆ ಋತುಮಾನಕ್ಕೆ ಸಂಬಂಧಿಸಿದ ಕಾಯಿಲೆಯು ನಿಮ್ಮನ್ನು ಕಾಡಬಹುದು. ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನಿಮ್ಮ ಪರವಾಗಿರಲಿದೆ. ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಮತ್ತು ಪ್ರಗತಿ ಉಂಟಾಗಲಿದೆ. ಈ ವಾರದಲ್ಲಿ ನಿಮ್ಮ ಪ್ರೇಮ ಜೀವನವು ಉತ್ತುಂಗಕ್ಕೇರಲಿದೆ. ವೈವಾಹಿಕ ಬದುಕಿನಲ್ಲಿ ಸಂತಸವು ಮುಂದುವರಿಯಲಿದೆ. ನಿಮ್ಮ ಪ್ರಣಯ ಸಂಬಂಧವು ಗಟ್ಟಿಗೊಳ್ಳಲಿದೆ. ಅಲ್ಲದೆ ನಿಮ್ಮ ಪ್ರೇಮಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ನಿಮಗೆ ಅವಕಾಶ ದೊರೆಯಲಿದೆ.