ನವದೆಹಲಿ: ಟೆಹ್ರಾನ್‌ನಲ್ಲಿ ಹಮಾಸ್ ರಾಜಕೀಯ ನಾಯಕ ಇಸ್ಮಾಯೆಲ್ ಹನಿಯೆಹ್ ಮತ್ತು ಬೈರುತ್‌ನಲ್ಲಿ ಹಿಜ್ಬುಲ್ಲಾ ನಾಯಕ ಫುವಾದ್ ಶುಕ್ರ್ ಹತ್ಯೆಯಿಂದಾಗಿ ಭಾರತವು ಪಶ್ಚಿಮ ಏಷ್ಯಾದಲ್ಲಿ ಪ್ರಯಾಣ ನಿರ್ಬಂಧಗಳನ್ನು ಹೇರಿದೆ. ಮತ್ತು ವಿಮಾನಯಾನ ಸಂಸ್ಥೆಗಳು ಈ ಪ್ರದೇಶಕ್ಕೆ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿದೆ. ಲೆಬನಾನ್‌ನ ಬೈರುತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ಪ್ರಜೆಗಳಿಗೆ ಆ ದೇಶಕ್ಕೆ ಪ್ರಯಾಣಿಸದಂತೆ ಮತ್ತು ಅಲ್ಲಿ ವಾಸಿಸುವವರಿಗೆ ತಕ್ಷಣವೇ ತೆರಳುವಂತೆ ಮಹತ್ವದ ಸಲಹೆಗಳನ್ನು ನೀಡಿದೆ.
"ಈ ಪ್ರದೇಶದಲ್ಲಿನ ಇತ್ತೀಚಿನ ಬೆಳವಣಿಗೆ ಮತ್ತು ಸಂಭಾವ್ಯ ಬೆದರಿಕೆಗಳ ದೃಷ್ಟಿಯಿಂದ, ಮುಂದಿನ ಸೂಚನೆ ಬರುವವರೆಗೆ ಲೆಬನಾನ್‌ಗೆ ಪ್ರಯಾಣಿಸದಂತೆ ಭಾರತೀಯ ಪ್ರಜೆಗಳಿಗೆ ಮಹತ್ವದ ಸಲಹೆಗಳನ್ನು ನೀಡಲಾಗಿದೆ" ಎಂದು ರಾಯಭಾರ ಕಚೇರಿಯು ಆಗಸ್ಟ್ 1ರಂದು ತಿಳಿಸಿದೆ. "ಎಲ್ಲಾ ಭಾರತೀಯರು ಲೆಬನಾನ್ ತೊರೆಯುವಂತೆ ಸೂಚಿಸಲಾಗಿದೆ. ಲೆಬನಾನ್‌ನಲ್ಲಿ ಉಳಿದುಕೊಳ್ಳುವ ಭಾರತೀಯರು ತೀವ್ರ ಎಚ್ಚರಿಕೆಯನ್ನು ವಹಿಸಬೇಕು. ಭಾರತದ ರಾಯಭಾರ ಕಚೇರಿಯೊಂದಿಗೆ ಸದಾ ಸಂಪರ್ಕದಲ್ಲಿರಲು ಸಲಹೆ ನೀಡಲಾಗಿದೆ" ಎಂದು ಹೇಳಿದೆ.
ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ಪ್ರಜೆಗಳಿಗೆ ಎಚ್ಚರಿಕೆ ವಹಿಸುವಂತೆ ಸಲಹೆ ಕೊಟ್ಟಿದೆ. ಈ ಪ್ರದೇಶದಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇಸ್ರೇಲ್‌ನಲ್ಲಿರುವ ಎಲ್ಲ ಭಾರತೀಯ ಪ್ರಜೆಗಳು ಜಾಗರೂಕರಾಗಿಬೇಕು. ಮತ್ತು ಸ್ಥಳೀಯ ಅಧಿಕಾರಿಗಳು ಸೂಚಿಸಿದಂತೆ ಸುರಕ್ಷತಾ ಪ್ರೋಟೋಕಾಲ್‌ಗೆ ಬದ್ಧವಾಗಿರಲು ಸೂಚಿಸಲಾಗಿದೆ" ಎಂದು ಆಗಸ್ಟ್ 2 ರಂದು ಸಲಹೆ ನೀಡಲಾಗಿದೆ.
ಸಂಚರಿಸುವ ಮುನ್ನ ಯೋಚನೆ ಮಾಡಿ: ದಯವಿಟ್ಟು ಎಚ್ಚರಿಕೆಯಿಂದ ಸಂಚಾರ ಮಾಡಿ, ದೇಶದೊಳಗೆ ಅನಗತ್ಯ ಪ್ರಯಾಣವನ್ನು ತಪ್ಪಿಸಿ ಮತ್ತು ಸುರಕ್ಷತಾ ಕ್ರಮವಹಿಸಿ. ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಮತ್ತು ನಮ್ಮ ಎಲ್ಲ ಪ್ರಜೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಸ್ರೇಲಿ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದೆ. ಈ ಮಧ್ಯೆಯೇ, ಏರ್ ಇಂಡಿಯಾ ಕಳೆದ ವಾರ ಇಸ್ರೇಲ್‌ಗೆ ಎಲ್ಲಾ ವಿಮಾನಗಳನ್ನು "ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು" ಆಗಸ್ಟ್ 8ರವರೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸುತ್ತಿದೆ ಎಂದು ಹೇಳಿದೆ.
"ನಾವು ನಿರಂತರವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಈ ಅವಧಿಯಲ್ಲಿ ಟೆಲ್ ಅವಿವ್‌ಗೆ ಪ್ರಯಾಣಿಸಲು ಮತ್ತು ಪ್ರಯಾಣಕ್ಕಾಗಿ ದೃಢಪಡಿಸಿದ ಬುಕಿಂಗ್‌ಗಳೊಂದಿಗೆ ನಮ್ಮ ಪ್ರಯಾಣಿಕರಿಗೆ ಬೆಂಬಲವನ್ನು ವಿಸ್ತರಿಸುತ್ತಿದ್ದೇವೆ. "ನಮ್ಮ ಅತಿಥಿಗಳು ಮತ್ತು ಸಿಬ್ಬಂದಿಯ ಸುರಕ್ಷತೆಯು ನಮ್ಮ ಮೊದಲ ಆದ್ಯತೆಯಾಗಿದೆ" ಎಂದು ಏರ್‌ಲೈನ್ ತನ್ನ ಎಕ್ಸ್ ಖಾತೆಯಲ್ಲಿ ತಿಳಿಸಿದೆ.
ಮುಂದಿನ ಆದೇಶದವರೆಗೂ ಇಸ್ರೇಲ್‌ಗೆ ಹೊರಡುವ ವಿಮಾನಗಳಿಗೆ ನಿರ್ಬಂಧ: ಯುನೈಟೆಡ್ ಏರ್‌ಲೈನ್ಸ್, ಲುಫ್ಥಾನ್ಸ, ಕೆಎಲ್‌ಎಂ, ಡೆಲ್ಟಾ ಮತ್ತು ಸ್ವಿಸ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್‌ನಂತಹ ಇತರ ಅಂತಾರಾಷ್ಟ್ರೀಯ ಸಂಸ್ಥೆಗಳ ಮುಂದಿನ ಸೂಚನೆ ಬರುವವರೆಗೆ ಇಸ್ರೇಲ್‌ಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ.
ಇರಾನ್‌ನ ಹೊಸ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಕೆಲವೇ ಗಂಟೆಗಳ ನಂತರ ಟೆಹ್ರಾನ್‌ನಲ್ಲಿ ಹನಿಯೆಹ್ ಹತ್ಯೆಯು ಗಾಜಾದಲ್ಲಿ ಯುದ್ಧದ ಮಧ್ಯೆ ಪಶ್ಚಿಮ ಏಷ್ಯಾದಲ್ಲಿ ಹೊಸ ಉದ್ವಿಗ್ನತೆಯನ್ನು ಉಂಟುಮಾಡಿದೆ. ಹತ್ಯೆಯ ಹೊಣೆಯನ್ನು ಇಸ್ರೇಲ್ ಹೊತ್ತುಕೊಂಡಿಲ್ಲವಾದರೂ, ಇರಾನ್ ಯಹೂದಿ ರಾಷ್ಟ್ರವನ್ನು ದೂಷಿಸಿದೆ. ಹನಿಯೆಹ್ ಜುಲೈ 31 ರಂದು ಟೆಹ್ರಾನ್ ಅಪಾರ್ಟ್‌ಮೆಂಟ್‌ನಲ್ಲಿ ಸುಮಾರು 7 ಕೆಜಿಯ ಸ್ಪೋಟಕದಿಂದ ಹತ್ಯೆ ಮಾಡಲಾಗಿತ್ತು.
ಹಿಂದಿನ ದಿನ ಬೈರುತ್‌ನಲ್ಲಿ ಹಿಜ್ಬುಲ್ಲಾ ನಾಯಕ ಫುವಾದ್ ಶುಕ್ರ್ ಹತ್ಯೆಯ ಹೊಣೆಯನ್ನು ಇಸ್ರೇಲ್ ವಹಿಸಿಕೊಂಡಿದೆ. ಇರಾನ್ ಬೆಂಬಲಿತ ಘಟಕವಾದ ಹಿಜ್ಬುಲ್ಲಾ, ಗೋಲನ್ ಹೈಟ್ಸ್‌ನಲ್ಲಿರುವ ಫುಟ್‌ಬಾಲ್ ಮೈದಾನದಲ್ಲಿ ನಡೆದ ಬಾಂಬ್ ಸ್ಫೋಟಿಸಿದಲ್ಲಿ ಶುಕ್ರ್ ಮೃತಪಟ್ಟಿದ್ದರು. ಜೊತೆಗೆ 12 ಮಕ್ಕಳ ಸಾವನ್ನಪ್ಪಿದ್ದರು. ಈ ಬೆಳವಣಿಗೆಗಳ ನಂತರ, ಇರಾನ್ ಅರಬ್ ರಾಜತಾಂತ್ರಿಕರಿಗೆ ಪೂರ್ಣ ಪ್ರಮಾಣದ ಯುದ್ಧಕ್ಕೆ ಕಾರಣವಾದ ಇಸ್ರೇಲ್ ಮೇಲೆ ದಾಳಿ ಮಾಡುವುದಾಗಿ ಹೇಳಿದೆ ಎಂದು ವರದಿಯಾಗಿದೆ.
ಎಸ್. ಸ್ಯಾಮ್ಯುಯೆಲ್ ಸಿ. ರಾಜೀವ್ ಅಭಿಪ್ರಾಯ: ಮನೋಹರ್ ಪರಿಕ್ಕರ್ ಇನ್‌ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಸ್ಟಡೀಸ್ ಅಂಡ್ ಅನಾಲಿಸಿಸ್‌ನ ಅಸೋಸಿಯೇಟ್ ಫೆಲೋ ಎಸ್. ಸ್ಯಾಮ್ಯುಯೆಲ್ ಸಿ. ರಾಜೀವ್ ಪ್ರಕಾರ, ''ಈ ಉನ್ನತ ಮಟ್ಟದ ಹತ್ಯೆಗಳಿಗೆ ಇರಾನ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಮೇಲೆ ಪರಿಸ್ಥಿತಿಯು ಅವಲಂಬಿತವಾಗಿರುತ್ತದೆ. ಹನಿಯೆಹ್ ಇರಾನ್ ಪ್ರಜೆಯಲ್ಲದಿದ್ದರೂ, ಇರಾನ್ ನೆಲದಲ್ಲಿ ಅವನನ್ನು ಕೊಲ್ಲಲಾಯಿತು" ಎಂದು ರಾಜೀವ್ ಈಟಿವಿ ಭಾರತಕ್ಕೆ ತಿಳಿಸಿದರು.
"ಇದೆಲ್ಲವೂ ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳ ಸಂದರ್ಭದಲ್ಲಿ ಮತ್ತು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮುಂದೆ ನಡೆಯುತ್ತಿದೆ. ಇಸ್ರೇಲ್‌ನಲ್ಲೂ ನಿರಂತವಾಗಿ ಬದಲಾವಣೆಗಳು ನಡೆಯುತ್ತಿವೆ. ಇಸ್ರೇಲ್ ಒತ್ತೆಯಾಳುಗಳು ಗಾಜಾದಲ್ಲಿ ಇನ್ನೂ ಹಮಾಸ್ನ ಸೆರೆಯಲ್ಲಿರುವುದರಿಂದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮೇಲೆ ಸಾಕಷ್ಟು ರಾಜಕೀಯ ಒತ್ತಡವಿದೆ" ಎಂದು ರಾಜೀವ್ ಹೇಳಿದರು.
''ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಈಗ 10ನೇ ತಿಂಗಳಿಗೆ ಕಾಲಿಟ್ಟಿದೆ. ಈ ಯುದ್ಧವು ಇಲ್ಲಿಯವರೆಗೆ ಸುಮಾರು 40,000 ಪ್ಯಾಲೆಸ್ತೀನ್ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಭಾರತವು ಇರಾನ್ ಮತ್ತು ಇಸ್ರೇಲ್ ಎರಡರೊಂದಿಗೂ ಉತ್ತಮ ಸಂಬಂಧವನ್ನು ಹೊಂದಿದೆ. ಹನಿಯ ಹತ್ಯೆಗೆ ಪ್ರತಿಕ್ರಿಯೆ ನೀಡಲು ಇರಾನ್ ಪ್ರತಿಜ್ಞೆ ಮಾಡಿದೆ" ಎಂದು ರಾಜೀವ್ ತಿಳಿಸಿದರು. ಈ ವರ್ಷದ ಏಪ್ರಿಲ್‌ನಿಂದ ಇಸ್ರೇಲ್ ದೇಶದ ನಿರ್ಮಾಣ ಉದ್ಯಮಕ್ಕೆ ಭಾರತೀಯ ಬ್ಲೂ ಕಾಲರ್ ಕೆಲಸಗಾರರನ್ನು ನೇಮಿಸಿಕೊಳ್ಳುತ್ತಿದೆ. ಗಾಜಾದಿಂದ ಹೆಚ್ಚಾಗಿ ಬಂದು ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಪ್ಯಾಲೇಸ್ಟಿನಿಯನ್ ಕಾರ್ಮಿಕರಿಗೆ ಇಸ್ರೇಲ್‌ಗೆ ಪ್ರವೇಶ ನಿರಾಕರಿಸಿದ ನಂತರ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಚಬಹಾರ್ ಬಂದರನ್ನು ಅಭಿವೃದ್ಧಿಪಡಿಸಲು ಭಾರತವು ಈ ನಡುವೆ ಇರಾನ್‌ನೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ.