ETV Bharat / opinion

ಫಿಲಡೆಲ್ಫಿ ಕಾರಿಡಾರ್​ ಎಲ್ಲಿದೆ?: ಇಸ್ರೇಲ್​ಗೆ ಇದು ಯಾಕಿಷ್ಟು ಮಹತ್ವದ್ದು? - Philadelphi Corridor

author img

By ETV Bharat Karnataka Team

Published : Sep 2, 2024, 7:49 PM IST

ಫಿಲಡೆಲ್ಫಿ ಕಾರಿಡಾರ್​ ಬಗ್ಗೆ ಇಸ್ರೇಲ್ ಯಾಕೆ ಅಷ್ಟು ಒಲವು ಹೊಂದಿದೆ ಎಂಬ ಬಗ್ಗೆ ಒಂದು ಅವಲೋಕನ ಇಲ್ಲಿದೆ.

ಫಿಲಡೆಲ್ಫಿ ಕಾರಿಡಾರ್
ಫಿಲಡೆಲ್ಫಿ ಕಾರಿಡಾರ್ (IANS)

ನವದೆಹಲಿ: ಗಾಜಾದಲ್ಲಿ ಒತ್ತೆಯಾಳಾಗಿ ಉಳಿದುಕೊಂಡಿರುವ ಇಸ್ರೇಲಿಗರ ಜೀವ ರಕ್ಷಣೆಗಿಂತ ಹೆಚ್ಚಾಗಿ ಗಾಜಾ ಮತ್ತು ಈಜಿಪ್ಟ್ ನಡುವಿನ ಗಡಿಯಲ್ಲಿರುವ ಆಯಕಟ್ಟಿನ ಕಾರಿಡಾರ್​ನಲ್ಲಿ ಇಸ್ರೇಲಿ ಪಡೆಗಳ ನಿಯೋಜನೆಗೆ ಹೆಚ್ಚಿನ ಆದ್ಯತೆ ನೀಡಿದ್ದಕ್ಕಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ಒತ್ತೆಯಾಳುಗಳ ಕುಟುಂಬಗಳು ಮತ್ತು ತಮ್ಮದೇ ಸರ್ಕಾರದ ರಕ್ಷಣಾ ಸಚಿವ ಯೋವ್ ಗ್ಯಾಲಂಟ್​ ಅವರಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಈ ವಾರದ ಆರಂಭದಲ್ಲಿ ನಡೆದ ಇಸ್ರೇಲ್ ಭದ್ರತಾ ಕ್ಯಾಬಿನೆಟ್ ಸಭೆಯಲ್ಲಿ, ಗಾಜಾ ಮತ್ತು ಈಜಿಪ್ಟ್ ನಡುವಿನ ಗಡಿ ಉದ್ದಕ್ಕೂ ಹಾದುಹೋಗುವ ಫಿಲಡೆಲ್ಫಿ ಕಾರಿಡಾರ್​ನಲ್ಲಿ ಇಸ್ರೇಲಿ ಯೋಧರ ನಿಯೋಜನೆಯನ್ನು ಮುಂದುವರಿಸುವ ನಿರ್ಧಾರದ ವಿಷಯದಲ್ಲಿ ನೆತನ್ಯಾಹು ಮತ್ತು ಗ್ಯಾಲಂಟ್ ಅವರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದಿದೆ.

ಕ್ಯಾಬಿನೆಟ್​ ಸಭೆಯಲ್ಲಿ ನಡೆದಿದ್ದಾದರೂ ಏನು?: ಚಾನೆಲ್ 12 ಗೆ ಸೋರಿಕೆಯಾದ ಸಭೆಯ ಪ್ರತಿಲೇಖನವನ್ನು ಉಲ್ಲೇಖಿಸಿ, ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಸಿದ್ಧಪಡಿಸಿದ ನಕ್ಷೆಗಳ ಸರಣಿಯ ಬಗ್ಗೆ ನೆತನ್ಯಾಹು ಉನ್ನತ ಮಂತ್ರಿ ಸಂಸ್ಥೆಯ ಮತವನ್ನು ಕೇಳಿದಾಗ ತೀವ್ರ ಮಾತಿನ ಚಕಮಕಿ ನಡೆಯಿತು ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ. ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗಾಗಿ ಜಾರಿಯಾಗಿದ್ದ ಪ್ರಥಮ ಕದನ ವಿರಾಮದ ಆರು ವಾರಗಳ ಅವಧಿಯಲ್ಲಿ ಇಸ್ರೇಲ್ ಪಡೆಗಳು ಈ ಕಾರಿಡಾರ್​ನಲ್ಲಿ ನಿಯೋಜನೆಯಾಗಿದ್ದನ್ನು ತೋರಿಸುವ ನಕ್ಷೆ ಇವಾಗಿವೆ.

ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಮತ್ತಷ್ಟು ತೀವ್ರವಾಗುತ್ತಿರುವ ಮಧ್ಯೆ ನೆತನ್ಯಾಹು ಮತ್ತು ಭದ್ರತಾ ಪಡೆಗಳ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಿರುವುದಕ್ಕೆ ಇದು ಇತ್ತೀಚಿನ ಉದಾಹರಣೆಯಾಗಿದೆ. ಇಸ್ರೇಲ್ ದಾಳಿಯಲ್ಲಿ ಈವರೆಗೆ 41,000ಕ್ಕೂ ಅಧಿಕ ಪ್ಯಾಲೆಸ್ಟೈನಿಯರು ಬಲಿಯಾಗಿದ್ದಾರೆ. ನೆತನ್ಯಾಹು ಅವರ ಕಠಿಣ ನಿಲುವಿನಿಂದ 100 ಕ್ಕೂ ಹೆಚ್ಚು ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗಾಗಿ ನಡೆಯುತ್ತಿರುವ ಶಾಂತಿ ಮಾತುಕತೆಗಳಿಗೆ ಹಿನ್ನಡೆಯಾಗಲಿದೆ ಎಂಬುದು ಯೋವ್ ಗ್ಯಾಲಂಟ್​ ಮತ್ತು ಇತರ ಸೇನಾಧಿಕಾರಿಗಳ ಅಭಿಪ್ರಾಯವಾಗಿದೆ.

"ಫಿಲಡೆಲ್ಫಿ ಕಾರಿಡಾರ್​ನಲ್ಲಿ ಇಸ್ರೇಲ್ ಸೇನಾಪಡೆಗಳ ನಿಯೋಜನೆಯನ್ನು ಹಮಾಸ್ ಒಪ್ಪಲಾರದು ಮತ್ತು ಇದೇ ಕಾರಣದಿಂದ ಕದನ ವಿರಾಮ ಮಾತುಕತೆಗಳು ಯಶಸ್ವಿಯಾಗಲಾರವು. ಇದರ ಪರಿಣಾಮವಾಗಿ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ" ಎಂದು ಗ್ಯಾಲಂಟ್ ಸಚಿವರಿಗೆ ಹೇಳಿದ್ದಾರೆ ಎಂದು ಚಾನೆಲ್ 12 ವರದಿಯನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಕಳೆದ ವಾರ ಕೈರೋದಲ್ಲಿ ಈಜಿಪ್ಟ್, ಯುಎಸ್ ಮತ್ತು ಕತಾರ್ ಒಳಗೊಂಡ ಮಧ್ಯವರ್ತಿಗಳ ಮುಂದೆ ಐಡಿಎಫ್ ಪ್ರಸ್ತುತಪಡಿಸಿದ ನಕ್ಷೆಗಳ ಬಗ್ಗೆ ಒಪ್ಪಿಗೆ ನೀಡುವಂತೆ ಕಾರ್ಯತಂತ್ರದ ವ್ಯವಹಾರಗಳ ಸಚಿವ ರಾನ್ ಡೆರ್ಮರ್ ಸಭೆಯಲ್ಲಿ ಮನವಿ ಮಾಡಿದರು. ಆದರೆ, ಈ ನಕ್ಷೆಗಳು ಸೇನಾ ಪಡೆಯ ನಿಲುವಿಗೆ ವಿರುದ್ಧವಾಗಿವೆ ಎಂದು ಗ್ಯಾಲಂಟ್ ಆಕ್ಷೇಪಿಸಿದರು.

"ಒಂದು ವೇಳೆ ಫಿಲಡೆಲ್ಫಿಯನ್ನು ತೊರೆಯುವ ಅಥವಾ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳುವ ಪೈಕಿ ಯಾವುದಾದರೂ ಒಂದು ಆಯ್ಕೆ ಮಾಡುವಂತೆ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ ಪ್ರಸ್ತಾಪವಿಟ್ಟರೆ ನೀವು ಏನು ಮಾಡುವಿರಿ?" ಎಂದು ನೆತನ್ಯಾಹು ಅವರನ್ನು ಯೋವ್ ಗ್ಯಾಲಂಟ್ ಪ್ರಶ್ನಿಸಿದರು.

ಇದಕ್ಕುತ್ತರಿಸಿದ ನೆತನ್ಯಾಹು "ನಾನು ಫಿಲಡೆಲ್ಫಿ ವಶದಲ್ಲಿರಿಸಿಕೊಳ್ಳುವುದನ್ನೇ ಆಯ್ಕೆ ಮಾಡುವೆ" ಎಂದರು. ಕ್ಯಾಬಿನೆಟ್ ಮತದಾನದಲ್ಲಿ ನೆತನ್ಯಾಹು ಅವರ ಪ್ರಸ್ತಾಪವನ್ನು ಎಂಟು ಮತಗಳಿಂದ ಅಂಗೀಕರಿಸಲಾಯಿತು. ಓರ್ವ ಸದಸ್ಯ ಗೈರುಹಾಜರಾಗಿದ್ದರು. ಆದರೆ ಫಿಲಡೆಲ್ಫಿ ಕಾರಿಡಾರ್​ನಲ್ಲಿ ಇಸ್ರೇಲಿ ಪಡೆಗಳ ಉಪಸ್ಥಿತಿಯನ್ನು ಹಮಾಸ್ ಮತ್ತು ಮಧ್ಯವರ್ತಿ ಈಜಿಪ್ಟ್ ಎರಡೂ ವಿರೋಧಿಸಿವೆ.

ನೆತನ್ಯಾಹು ನಿಲುವಿಗೆ ಒತ್ತೆಯಾಳುಗಳ ಕುಟುಂಬಗಳ ಪ್ರತಿಕ್ರಿಯೆ ಹೇಗಿದೆ?: ನೆತನ್ಯಾಹು ಅವರ ನಿಲುವು ಮಾಧ್ಯಮಗಳಲ್ಲಿ ಪ್ರಕಟವಾದ ನಂತರ, ಒತ್ತೆಯಾಳುಗಳ ಕುಟುಂಬಗಳು ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದು, ಫಿಲಡೆಲ್ಫಿ ಕಾರಿಡಾರ್​ನಲ್ಲಿ ಇಸ್ರೇಲಿ ಪಡೆಗಳ ಉಪಸ್ಥಿತಿಗಾಗಿ ಇಸ್ರೇಲಿ ಒತ್ತೆಯಾಳುಗಳ ಜೀವಗಳನ್ನು ಬಲಿ ಕೊಡುವುದಾಗಿ ಅವರು ಬಹಿರಂಗವಾಗಿ ಘೋಷಿಸಿ ಬಿಡಲಿ ಎಂದು ಅಸಮಾಧಾನ ಹೊರಹಾಕಿವೆ.

"ಕ್ಯಾಬಿನೆಟ್ ಸಭೆಯಲ್ಲಿ ನಡೆದ ಚರ್ಚೆಗಳು ಪ್ರತಿಯೊಬ್ಬ ಇಸ್ರೇಲಿ ನಾಗರಿಕ ತಲ್ಲಣಗೊಳ್ಳುವಂತಿವೆ. " ಎಂದು ಒತ್ತೆಯಾಳು ಮತ್ತು ಕಾಣೆಯಾದ ಕುಟುಂಬಗಳ ಸಂಘಟನೆ ಹೇಳಿಕೆಯಲ್ಲಿ ತಿಳಿಸಿದೆ.

"ಯಾವುದೋ ಶನಿವಾರದಂದು ಬೆಳಗ್ಗೆ ನೀವು ಹಾಸಿಗೆಯಲ್ಲಿ ಮಲಗಿರುವಾಗ, ಪೈಜಾಮಾ ಧರಿಸಿದ ನಿಮ್ಮನ್ನು ಉಗ್ರರು ಅಪಹರಿಸಿಕೊಂಡು ಹೋದರೆ ನಿಮ್ಮನ್ನು ರಕ್ಷಿಸುವ ಬದಲಾಗಿ ಪ್ರಧಾನಿ ನೆತನ್ಯಾಹು ತಮ್ಮ ಕುರ್ಚಿ ಉಳಿಸಿಕೊಳ್ಳಲು ಆದ್ಯತೆ ನೀಡುತ್ತಾರೆ ಎಂಬುದು ಈಗ ಎಲ್ಲರಿಗೂ ಗೊತ್ತಾಗುತ್ತಿದೆ" ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

ನೆತನ್ಯಾಹು ಅವರ ನಿಲುವುಗಳು ಜನರ ವಿರುದ್ಧ, ಇಸ್ರೇಲ್ ದೇಶದ ವಿರುದ್ಧ ಮತ್ತು ಝಿಯಾನಿಸಂ ವಿರುದ್ಧದ ಅಪರಾಧವಾಗಿವೆ ಎಂದು ಹಮಾಸ್​ ಬಳಿ ಒತ್ತೆಯಾಳಾಗಿರುವ ಮಾತನ್ ಜಂಗೌಕರ್ ಅವರ ತಾಯಿ ಐನವ್ ಜಂಗೌಕರ್ ಹೇಳಿದ್ದಾರೆ. "ನೆತನ್ಯಾಹು ಮಿಸ್ಟರ್ ಸೆಕ್ಯುರಿಟಿ ಅಲ್ಲ, ಅವರು ಮಿಸ್ಟರ್ ಡೆತ್. ಅವರು ನಿಷ್ಕರುಣಿಯಾಗಿ ಶಾಂತಿ ಸಂಧಾನವನ್ನು ಹಾಳು ಮಾಡುತ್ತಿದ್ದಾರೆ" ಎಂದು ಜಂಗೌಕರ್ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಫಿಲಡೆಲ್ಫಿ ಕಾರಿಡಾರ್ ನಿಖರವಾಗಿ ಎಲ್ಲಿದೆ?: ಫಿಲಡೆಲ್ಫಿ ಕಾರಿಡಾರ್ ಅನ್ನು ಫಿಲಡೆಲ್ಫಿ ಮಾರ್ಗ ಎಂದೂ ಕರೆಯಲಾಗುತ್ತದೆ. ಇದು ಗಾಜಾ ಪಟ್ಟಿ ಮತ್ತು ಈಜಿಪ್ಟ್ ನಡುವಿನ ಗಡಿಯ ಉದ್ದಕ್ಕೂ ಇರುವ 14 ಕಿ.ಮೀ ಉದ್ದದ ಕಿರಿದಾದ ಭೂಮಿಗೆ ಇಸ್ರೇಲ್​ ಸಾಂಕೇತಿಕವಾಗಿ ಕರೆಯುವ ಹೆಸರಾಗಿದೆ.

ಜೆರುಸಲೇಮ್ ಸೆಂಟರ್ ಫಾರ್ ಪಬ್ಲಿಕ್ ಅಫೇರ್ಸ್​ನ ಹಿರಿಯ ಸಂಶೋಧಕ ಯೋನಿ ಬೆನ್-ಮೆನಾಚೆಮ್ ಅವರ ಪ್ರಕಾರ, ಫಿಲಡೆಲ್ಫಿ ಕಾರಿಡಾರ್ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಮೂಲಕ, ಗಾಜಾ ಪಟ್ಟಿಯನ್ನು ಈಜಿಪ್ಟ್​ನೊಂದಿಗೆ ಸಂಪರ್ಕಿಸುವ ಏಕೈಕ ಮಾರ್ಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಇದರಿಂದ ಸುರಂಗಗಳ ಜಾಲದ ಮೂಲಕ ಎರಡು ಪ್ರದೇಶಗಳ ನಡುವೆ ಉಗ್ರರು ಭೂಗತವಾಗಿ ಸಂಚರಿಸುವುದನ್ನು ತಡೆಯಬಹುದು.

2005 ರಲ್ಲಿ ಗಾಜಾ ಪಟ್ಟಿಯಿಂದ ಇಸ್ರೇಲ್ ಏಕಪಕ್ಷೀಯವಾಗಿ ಹಿಂದೆ ಸರಿದ ನಂತರ, ಈಜಿಪ್ಟ್​ನೊಂದಿಗೆ ಫಿಲಡೆಲ್ಫಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದವು ತನ್ನ ಗಡಿಯ ಭಾಗದಲ್ಲಿ 750 ಯೋಧರನ್ನು ನಿಯೋಜಿಸಲು ಈಜಿಪ್ಟ್​ಗೆ ಅಧಿಕಾರ ನೀಡುತ್ತದೆ. 2007ರವರೆಗೂ ಗಡಿಯ ಪ್ಯಾಲೆಸ್ಟೈನ್ ಭಾಗವನ್ನು ಪ್ಯಾಲೆಸ್ಟೈನ್​ ಪ್ರಾಧಿಕಾರವು ನಿಯಂತ್ರಿಸುತ್ತಿತ್ತು.

ಆದರೆ ನಂತರ ಹಮಾಸ್​ ಇದನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು. ಒಪ್ಪಂದದ ಸಮಯದಲ್ಲಿ ರಫಾ ಗಡಿಯ ನಿರ್ವಹಣೆಯ ಜಂಟಿ ಅಧಿಕಾರವನ್ನು ಪ್ಯಾಲೆಸ್ಟೈನ್ ಪ್ರಾಧಿಕಾರ ಮತ್ತು ಈಜಿಪ್ಟ್​ಗೆ ನೀಡಲಾಗಿತ್ತು. ಪ್ಯಾಲೆಸ್ಟೈನ್ ಗುರುತಿನ ಚೀಟಿ ಹೊಂದಿರುವವರು ಮತ್ತು ವಿನಾಯಿತಿ ಹೊಂದಿದ ಇತರರಿಗೆ ಈ ಗಡಿ ದಾಟಲು ಅವಕಾಶ ನೀಡಬಹುದಿತ್ತು.

ಫಿಲಡೆಲ್ಫಿ ಕಾರಿಡಾರ್ ಪ್ರಾಮುಖ್ಯತೆ ಏನು?: ಈಜಿಪ್ಟ್ ಮತ್ತು ಗಾಜಾ ನಡುವೆ ಸರಕು ಸಾಗಣೆ, ಜನರ ಸಂಚಾರ ಮತ್ತು ಶಸ್ತ್ರಾಸ್ತ್ರಗಳ ಚಲನೆಯನ್ನು ನಿಯಂತ್ರಿಸುವಲ್ಲಿ ಅದರ ಪಾತ್ರ ಮತ್ತು ಅದರ ಸ್ಥಾನದಿಂದಾಗಿ ಕಾರಿಡಾರ್ ಇಸ್ರೇಲ್ ಮತ್ತು ಹಮಾಸ್ ಎರಡಕ್ಕೂ ವ್ಯೂಹಾತ್ಮಕವಾಗಿ ಮಹತ್ವದ್ದಾಗಿದೆ.

ಜೆರುಸಲೇಮ್ ಸೆಂಟರ್ ಫಾರ್ ಪಬ್ಲಿಕ್ ಅಫೇರ್ಸ್​ನ ಹಿರಿಯ ಸಂಶೋಧಕ ಯೋನಿ ಬೆನ್-ಮೆನಾಚೆಮ್ ಅವರ ಪ್ರಕಾರ, ಫಿಲಡೆಲ್ಫಿ ಕಾರಿಡಾರ್ ಅನ್ನು ನಿಯಂತ್ರಿಸುವುದರಿಂದ ಗಾಜಾ ಪಟ್ಟಿಯು ಈಜಿಪ್ಟ್​ನೊಂದಿಗೆ ಹೊಂದಿರುವ ಏಕೈಕ ಭೂ ಸಂಪರ್ಕವನ್ನು ಪರಿಣಾಮಕಾರಿಯಾಗಿ ಕಡಿತಗೊಳಿಸುತ್ತದೆ ಹಾಗೂ ಸುರಂಗಗಳ ಮೂಲಕ ಎರಡು ಪ್ರದೇಶಗಳ ನಡುವಿನ ಭೂಗತ ಚಲನೆಯನ್ನು ತಡೆಯುತ್ತದೆ.

"ಕಾರಿಡಾರ್​ನ ನಿಯಂತ್ರಣದಿಂದ ಗಾಜಾ ಪಟ್ಟಿಯನ್ನು ಅರಬ್ ಜಗತ್ತಿಗೆ ಸಂಪರ್ಕಿಸುವ ಏಕೈಕ ಗಡಿ ದಾಟುವ ಮತ್ತು ಹಿರಿಯ ಹಮಾಸ್ ಅಧಿಕಾರಿಗಳ ಅಂತರರಾಷ್ಟ್ರೀಯ ಪ್ರಯಾಣಕ್ಕೆ ನಿರ್ಣಾಯಕವಾದ ರಾಫಾ ಕ್ರಾಸಿಂಗ್​ನ ಮೇಲೆ ಪ್ರಾಬಲ್ಯ ಸಾಧಿಸಬಹುದು." ಎಂದು ಮೆನಾಚೆಮ್ ಕಳೆದ ವರ್ಷ ಡಿಸೆಂಬರ್​ನಲ್ಲಿ ಬರೆದ ಲೇಖನದಲ್ಲಿ ಹೇಳಿದ್ದಾರೆ.

ಇಸ್ರೇಲ್ ಈ ಸುರಂಗಗಳ ಬಗ್ಗೆ ಗುಪ್ತಚರ ಮಾಹಿತಿಯನ್ನು ಹೊಂದಿದ್ದರೂ, ಸುರಂಗಗಳು ಇಲ್ಲ ಎಂದು ಈಜಿಪ್ಟ್ ವಾದಿಸುತ್ತಲೇ ಇದೆ. ಹಲವಾರು ವರ್ಷಗಳ ಹಿಂದೆಯೇ ಸುರಂಗಗಳನ್ನು ನಾಶಪಡಿಸಲಾಗಿದೆ ಎಂದು ಅದು ಹೇಳಿದೆ.

ಹಮಾಸ್ ಕಾರಿಡಾರ್ ಅನ್ನು ಅವಲಂಬಿಸಿರುವುದೇಕೆ?: ಹಮಾಸ್​ಗೆ, ಫಿಲಡೆಲ್ಫಿ ಕಾರಿಡಾರ್ ನಿರ್ಣಾಯಕ ಸರಕು ಪೂರೈಕೆ ಮಾರ್ಗವಾಗಿದೆ. ಕಾರಿಡಾರ್​ನ ಕೆಳಗಿನ ಸುರಂಗಗಳ ಮೂಲಕ ಶಸ್ತ್ರಾಸ್ತ್ರಗಳು, ಇಂಧನ, ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಸಾಗಿಸಲಾಗುತ್ತದೆ. ಇದು ಹಮಾಸ್​ ಗಾಜಾದಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆಗಳನ್ನು ಮುಂದುವರಿಸಲು ಮತ್ತು ನಾಗರಿಕ ಆಡಳಿತದ ಅಧಿಕಾರ ಉಳಿಸಿಕೊಳ್ಳಲು ಮುಖ್ಯವಾಗಿದೆ. ಈ ಕಳ್ಳಸಾಗಣೆ ಜಾಲವು ಗಾಜಾಕ್ಕೆ ಸರಕುಗಳ ಚಲನೆಯನ್ನು ನಿರ್ಬಂಧಿಸುವ ಇಸ್ರೇಲಿ ದಿಗ್ಬಂಧನವನ್ನು ತಪ್ಪಿಸಲು ಹಮಾಸ್​ಗೆ ಸಹಾಯ ಮಾಡುತ್ತದೆ.

ಮಿಲಿಟರಿ ಸರಕುಗಳ ಪೂರೈಕೆಗಳು ಮಾತ್ರವಲ್ಲದೆ ಕಾರಿಡಾರ್ ನ ಕೆಳಗಿರುವ ಸುರಂಗಗಳು ಗಾಜಾಗೆ ಆರ್ಥಿಕ ಅಡಿಪಾಯವಾಗಿವೆ. ಗಾಜಾದ ಜನಸಂಖ್ಯೆಯ ಮೇಲೆ ಹಮಾಸ್ ತನ್ನ ನಿಯಂತ್ರಣ ಮತ್ತು ಪ್ರಭಾವವನ್ನು ಕಾಪಾಡಿಕೊಳ್ಳಲು ಈ ಭೂಗತ ಆರ್ಥಿಕತೆಯು ಅತ್ಯಗತ್ಯ. ಇದು ಅನೇಕ ಗಾಜನ್ನರಿಗೆ ಆದಾಯ ಮತ್ತು ಉದ್ಯೋಗದ ಮೂಲವಾಗಿದೆ.

ಈಗ, ಫಿಲಡೆಲ್ಫಿ ಕಾರಿಡಾರ್​ನಲ್ಲಿ ಇಸ್ರೇಲಿ ಪಡೆಗಳ ಉಪಸ್ಥಿತಿಯನ್ನು ಕಾಪಾಡಿಕೊಳ್ಳುವ ತನ್ನ ನಿಲುವಿನಿಂದ ನೆತನ್ಯಾಹು ಹಿಂದೆ ಸರಿಯದ ಕಾರಣ ಮತ್ತು ಹಮಾಸ್ ಇದನ್ನು ಸಂಪೂರ್ಣವಾಗಿ ವಿರೋಧಿಸುತ್ತಿರುವುದರಿಂದ, ಗಾಜಾದಿಂದ ಇಸ್ರೇಲಿ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳುವ ಶಾಂತಿ ಸಂಧಾನ ಮಾತುಕತೆಗಳಿಗೆ ಹಿನ್ನಡೆಯಾಗಿದೆ.

ಇದನ್ನೂ ಓದಿ : ಕಾಳಿ ಆರಾಧನೆಯ ಇತಿಹಾಸ: ಉಗ್ರ ಸ್ವರೂಪಿಣಿ ದೇವಿಯ ಕುರಿತಾದ ಪ್ರಮುಖ ಅಂಶಗಳು ಹೀಗಿವೆ! - History Of Kali Worship

ETV Bharat Logo

Copyright © 2024 Ushodaya Enterprises Pvt. Ltd., All Rights Reserved.