ETV Bharat / opinion

ಪಾಕಿಸ್ತಾನದಲ್ಲಿ ಚೀನಾ ಪ್ರಜೆಗಳ ಮೇಲೆ ಉಗ್ರರ ದಾಳಿ: ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ ಸಾಧ್ಯತೆ - China Pakistan Relations

author img

By ETV Bharat Karnataka Team

Published : Apr 3, 2024, 5:00 AM IST

ಪಾಕಿಸ್ತಾನದಲ್ಲಿ ಸಿಪಿಇಸಿ ಕಾಮಗಾರಿ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ತನ್ನ ಪ್ರಜೆಗಳ ಮೇಲೆ ಹೆಚ್ಚುತ್ತಿರುವ ದಾಳಿಗಳಿಂದ ಚೀನಾ ವ್ಯಗ್ರಗೊಂಡಿದೆ.

Chinese Engineers
Chinese Engineers

ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಗೆ ಸಂಬಂಧಿಸಿದ ಕಾಮಗಾರಿಯ ಸ್ಥಳಗಳು ಮತ್ತು ಇದಕ್ಕಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರ ಮೇಲೆ ಉಗ್ರರ ದಾಳಿಗಳು ಹೆಚ್ಚಾಗುತ್ತಿವೆ. ಇದರಿಂದ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಸದ್ಯದ ಸ್ಥಿತಿಯಲ್ಲಿ ಪರಿಸ್ಥಿತಿಗಳು ಉತ್ತಮವಾಗುವ ಸಾಧ್ಯತೆಗಳಿಲ್ಲ.

ಚೀನೀಯರು ನಿರ್ಮಿಸುತ್ತಿರುವ ಗ್ವಾದರ್ ಬಂದರು ಕಾಮಗಾರಿ, ತುರ್ಬತ್​ನಲ್ಲಿರುವ ಪಾಕಿಸ್ತಾನದ ನೌಕಾ ನೆಲೆಯ ಮೇಲೆ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್ಎ) ದಾಳಿ ನಡೆಸಿದೆ. ಇದಲ್ಲದೆ ದೇಶದ ವಾಯುವ್ಯದಲ್ಲಿರುವ ಖೈಬರ್ ಪಖ್ತುನಖ್ವಾ (ಕೆಪಿ) ಜಿಲ್ಲೆಯ ಶಾಂಗ್ಲಾದಲ್ಲಿ ಚೀನಾದ ಎಂಜಿನಿಯರ್​ಗಳ ಮೇಲೆ ಆತ್ಮಾಹುತಿ ದಾಳಿ ನಡೆದಿದೆ. ಇಸ್ಲಾಮಾಬಾದ್​ನಿಂದ ದಾಸುವಿನ ಜಲವಿದ್ಯುತ್ ಯೋಜನೆಯ ಕಡೆಗೆ ಈ ಎಂಜಿನಿಯರ್​ಗಳು ತೆರಳುತ್ತಿದ್ದರು. ಇವರ ವಾಹನದ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ ಚೀನಾದ ಐವರು ಎಂಜಿನಿಯರ್​ಗಳು ಮತ್ತು ವಾಹನದ ಸ್ಥಳೀಯ ಚಾಲಕ ಸಾವನ್ನಪ್ಪಿದ್ದರು.

ಗ್ವಾದರ್ ಮತ್ತು ತುರ್ಬತ್ ಮೇಲೆ ತಾನೇ ದಾಳಿ ನಡೆಸಿರುವುದಾಗಿ ಬಿಎಲ್ಎ ಹೇಳಿಕೊಂಡಿದೆ. ಆದರೆ ಚೀನಿ ಎಂಜಿನಿಯರ್​ಗಳ ಮೇಲಿನ ದಾಳಿಗೆ ಯಾವುದೇ ಉಗ್ರಗಾಮಿ ಗುಂಪು ಈವರೆಗೂ ಹೊಣೆ ಹೊತ್ತುಕೊಂಡಿಲ್ಲ. ತನ್ನ ಎಂಜಿನಿಯರ್​ಗಳ ಮೇಲೆ ಆತ್ಮಾಹುತಿ ದಾಳಿಯ ಘಟನೆಗೆ ಚೀನಾ ತೀವ್ರ ಆಕ್ರೋಶ ವ್ಯಕ್ತಪಡಿಸಿರುವುದು ಪಾಕಿಸ್ತಾನದ ಕಳವಳಕ್ಕೆ ಕಾರಣವಾಗಿದೆ. ಪಾಕಿಸ್ತಾನದಲ್ಲಿ ಚೀನಿಯರ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿರುವುದು ಪಾಕಿಸ್ತಾನ ಸರ್ಕಾರಕ್ಕೆ ಆತಂಕ ಮೂಡಿಸಿದೆ.

ದಾಳಿಯ ಹಿಂದಿನ ಅಪರಾಧಿಗಳನ್ನು ಬಂಧಿಸಿ ಸಮಗ್ರ ತನಿಖೆ ನಡೆಸಬೇಕು ಮತ್ತು ಅಪರಾಧಿಗಳನ್ನು ಕಠಿಣವಾಗಿ ಶಿಕ್ಷಿಸಬೇಕು ಎಂದು ಚೀನಾ ಪಾಕಿಸ್ತಾನ ಸರ್ಕಾರಕ್ಕೆ ಒತ್ತಾಯಿಸಿದೆ. ಸಿಪಿಇಸಿಯನ್ನು ವಿಧ್ವಂಸಕಗೊಳಿಸುವ ಯಾವುದೇ ಪ್ರಯತ್ನವು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಬೀಜಿಂಗ್​ನಲ್ಲಿರುವ ಚೀನಾದ ವಕ್ತಾರರು ಹೇಳಿದ್ದಾರೆ. ಬೀಜಿಂಗ್​ನ ಕೋಪ ಶಮನ ಮಾಡುವ ಯತ್ನವಾಗಿ ಪಾಕಿಸ್ತಾನದ ಪ್ರಧಾನಿ ಮತ್ತು ಅಧ್ಯಕ್ಷರು ಇಸ್ಲಾಮಾಬಾದ್​ನಲ್ಲಿರುವ ಚೀನಾದ ರಾಯಭಾರ ಕಚೇರಿಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

ಚೀನಾದೊಂದಿಗೆ ಪಾಕಿಸ್ತಾನದ ಮಿತ್ರತ್ವದ ವಿರೋಧಿಗಳು ಈ ದಾಳಿಗಳ ಹಿಂದಿದ್ದಾರೆ ಎಂದು ಪಾಕಿಸ್ತಾನ ನಿರೀಕ್ಷಿತ ಹೇಳಿಕೆ ನೀಡಿದೆ. 'ಕೆಲ ವಿದೇಶಿ ಶಕ್ತಿಗಳು ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಸಹಾಯ ಮತ್ತು ಕುಮ್ಮಕ್ಕು ನೀಡುವಲ್ಲಿ ಭಾಗಿಯಾಗಿವೆ' ಎಂದು ಪಾಕಿಸ್ತಾನ ಸೇನೆ ತನ್ನದೇ ಆದ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಅಫ್ಘಾನ್ ತಾಲಿಬಾನ್ ಬೆಂಬಲಿತ ಭಯೋತ್ಪಾದಕ ಗುಂಪು ಟಿಟಿಪಿ (ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್) ಯನ್ನು ಅದು ಆರೋಪಿಸಿದೆ. ಆದರೆ ಇದರಲ್ಲಿ ತಾನು ಭಾಗಿಯಾಗಿಲ್ಲ ಎಂದು ಟಿಟಿಪಿ ಹೇಳಿದೆ. ಕಾಬೂಲ್ ಮೂಲಕ ಭಾರತವು ತೆಹ್ರೀಕ್ ಎ ತಾಲಿಬಾನ್ ಅನ್ನು ಬೆಂಬಲಿಸುತ್ತಿದೆ ಎಂದು ಇತ್ತೀಚೆಗೆ ಪಾಕಿಸ್ತಾನವು ಭಾರತವನ್ನು ಕೂಡ ದೂಷಿಸಿದೆ.

ದಾಳಿಯ ಪರಿಣಾಮಗಳು ಈಗಾಗಲೇ ಕಾಣಿಸಿಕೊಳ್ಳಲಾರಂಭಿಸಿವೆ. ಚೀನಾದ ತನಿಖಾಧಿಕಾರಿಗಳು ಕೂಡ ದಾಳಿಯ ತನಿಖೆಯಲ್ಲಿ ಭಾಗವಹಿಸಿದ್ದಾರೆ. ನಿಷ್ಪಕ್ಷಪಾತ ತನಿಖೆ ನಡೆಸುವಲ್ಲಿ ಪಾಕಿಸ್ತಾನದ ಮೇಲೆ ಚೀನಾ ಹೊಂದರಿವ ಸಂಶಯವನ್ನು ಇದು ಸೂಚಿಸುತ್ತದೆ. ಏತನ್ಮಧ್ಯೆ ಚೀನಾದ ಕಂಪನಿಗಳು ದಾಸು ಅಣೆಕಟ್ಟು, ಡಯಾಮರ್-ಬಾಷಾ ಅಣೆಕಟ್ಟು ಮತ್ತು ತರ್ಬೆಲಾ 5 ನೇ ವಿಸ್ತರಣೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದು, ಸಾವಿರಾರು ಸ್ಥಳೀಯ ಕಾರ್ಮಿಕರನ್ನು ವಜಾಗೊಳಿಸಿವೆ.

ಪ್ರಸ್ತುತ ಸಿಪಿಇಸಿ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ಚೀನೀ ಪ್ರಜೆಗಳು ಭಯಭೀತರಾಗಿದ್ದಾರೆ ಮತ್ತು ಅವರಲ್ಲಿ ಅನೇಕರು ತವರಿಗೆ ಮರಳಲು ಯೋಚಿಸುತ್ತಿದ್ದಾರೆ. ದಾಸು ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಎಂಜಿನಿಯರ್​ಗಳ ಮೇಲಿನ ದಾಳಿಯ ನಂತರ ಚೀನಾದ ಕಾರ್ಮಿಕರ ನಿರ್ಗಮನ ಆರಂಭವಾಗಿದೆ. ಜುಲೈ 2021 ರಲ್ಲಿ ನಡೆದ ದಾಸು ಯೋಜನೆಯ ಮೇಲಿನ ದಾಳಿಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದರು. ಇದರ ನಂತರ ಚೀನೀಯರು ಮತ್ತೆ ಕೆಲಸ ಆರಂಭಿಸಲು ಸಾಕಷ್ಟು ಸಮಯ ಹಿಡಿದಿತ್ತು.

ಪಾಕಿಸ್ತಾನದಲ್ಲಿ ಕೆಲಸ ಮಾಡುವ ತನ್ನ ನಾಗರಿಕರಿಗೆ ಹೆಚ್ಚಿನ ರಕ್ಷಣೆ ನೀಡಬೇಕೆಂದು ಚೀನೀಯರು ಪದೇ ಪದೇ ಆಗ್ರಹಿಸುತ್ತಿದ್ದಾರೆ. 2021 ರಲ್ಲಿ, ಚೀನಾ ಹತ್ಯೆಗೀಡಾದ ತನ್ನ ಒಂಬತ್ತು ಎಂಜಿನಿಯರ್​ಗಳಿಗೆ ಪರಿಹಾರವಾಗಿ 38 ಮಿಲಿಯನ್ ಡಾಲರ್ ಕೇಳಿದೆ. ಇದು ಇಸ್ಲಾಮಾಬಾದ್​ಗೆ ಪಾವತಿಸಲು ಸಾಧ್ಯವಾಗದಷ್ಟು ದೊಡ್ಡ ಮೊತ್ತವಾಗಿದೆ. ಈ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಪಾಕಿಸ್ತಾನ ಕೋರಿತ್ತು. ಅಂತಿಮವಾಗಿ ಎಷ್ಟು ಪರಿಹಾರ ಪಾವತಿಸಲಾಯಿತು ಎಂಬ ಬಗ್ಗೆ ಗೊತ್ತಾಗಿಲ್ಲ.

ಏಪ್ರಿಲ್ 2023 ರಲ್ಲಿ ಚೀನಾದ ಓರ್ವ ಎಂಜಿನಿಯರ್ ವಿರುದ್ಧ ಧರ್ಮನಿಂದನೆಯ ಆರೋಪ ಹೊರಿಸಲಾಗಿತ್ತು. ನಂತರ ಪೊಲೀಸರ ರಕ್ಷಣೆಯಲ್ಲಿ ಆತನನ್ನು ಸ್ವದೇಶಕ್ಕೆ ಕಳುಹಿಸಲಾಗಿತ್ತು. ಕಳೆದ ವರ್ಷ ಆಗಸ್ಟ್​ನಲ್ಲಿ 23 ಚೀನೀ ಎಂಜಿನಿಯರ್​ಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ದಾಳಿ ನಡೆದಿತ್ತು. ಪಾಕಿಸ್ತಾನ ಸೇನೆಯು ದಾಳಿಕೋರರನ್ನು ಕೊಂದು ಹಾಕಿತ್ತು. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ.

ಇದಕ್ಕೂ ಮೊದಲು 2021 ರಲ್ಲಿ, ಚೀನಾದ ರಾಯಭಾರಿ ಉಳಿದುಕೊಳ್ಳಬೇಕಿದ್ದ ಕ್ವೆಟ್ಟಾದ ಹೋಟೆಲ್​ ಮೇಲೆ ದಾಳಿ ನಡೆಸಲಾಗಿತ್ತು. ಆದರೆ ಅವರು ಇನ್ನೂ ಹೋಟೆಲ್​ಗೆ ಬಂದಿರಲಿಲ್ಲವಾದ್ದರಿಂದ ಬಚಾವಾದರು. ಇದಾಗಿ ಒಂದು ತಿಂಗಳ ನಂತರ ಕರಾಚಿ ವಿಶ್ವವಿದ್ಯಾಲಯದಲ್ಲಿನ ಚೀನಾ ನಿರ್ಮಿತ ಕನ್ಫ್ಯೂಷಿಯಸ್ ಇನ್ ಸ್ಟಿಟ್ಯೂಟ್​ನ ಮೂವರು ಚೀನೀ ಸಿಬ್ಬಂದಿಯ ಮೇಲೆ ಆತ್ಮಾಹುತಿ ಬಾಂಬರ್ ದಾಳಿ ನಡೆಸಿದ್ದ. ಈ ಘಟನೆಯಲ್ಲಿ ಮೂವರು ಚೀನಾ ಸಿಬ್ಬಂದಿ ಸಾವಿಗೀಡಾಗಿದ್ದರು. ಪ್ರತಿ ಬಾರಿಯೂ ಚೀನಾ ಸಮಗ್ರ ತನಿಖೆಗೆ ಒತ್ತಾಯಿಸಿತ್ತು. ಆದರೆ ಪಾಕಿಸ್ತಾನ ಸೇನೆಯು ಬೇಕಾಬಿಟ್ಟಿಯಾಗಿ ಯಾರಾರನ್ನೋ ಆರೋಪಿಗಳೆಂದು ಬಂಧಿಸಿ ಅವರಿಂದ ಬಲವಂತವಾಗಿ ತಪ್ಪೊಪ್ಪಿಗೆ ಹೇಳಿಕೆ ಪಡೆದು ಜೈಲಿಗೆ ಹಾಕಿರುವುದು ವಿಪರ್ಯಾಸ.

ಚೀನೀಯರ ಮೇಲಿನ ದಾಳಿಯ ಹಿಂದೆ ವಿದೇಶಿ ಕೈವಾಡವಿದೆ ಎಂದು ಪಾಕಿಸ್ತಾನ ಆರೋಪಿಸುತ್ತಲೇ ಬಂದಿದೆ. ತನ್ನ ಪ್ರಜೆಗಳು ಕೊಲ್ಲಲ್ಪಟ್ಟಾಗಲೆಲ್ಲಾ ಬೀಜಿಂಗ್ ಇಕ್ಕಟ್ಟಿನಲ್ಲಿ ಸಿಲುಕುತ್ತದೆ. ತನ್ನ ಬಿಆರ್​ಐ (ಬೆಲ್ಟ್ ರೋಡ್ ಇನಿಶಿಯೇಟಿವ್) ನ ಯೋಜನೆಯಲ್ಲಿ ಅಪಾರ ಹೂಡಿಕೆ ಮಾಡಿರುವುದರಿಂದ ಅದು ಸಿಪಿಇಸಿಯನ್ನು ತೊರೆಯಲು ಸಾಧ್ಯವಿಲ್ಲ. ಹೀಗಾಗಿ ಇಷ್ಟೆಲ್ಲ ಆದರೂ ಚೀನಾ ಅನಿವಾರ್ಯವಾಗಿ ಪಾಕಿಸ್ತಾನದೊಂದಿಗೆ ಗೆಳೆತನ ಮುಂದುವರಿಸಲೇಬೇಕಿದೆ. ಇನ್ನು ಸಿಪಿಇಸಿ ಯೋಜನೆಗಳಿಗೆ ಪಾಕಿಸ್ತಾನ ಯಾವುದೇ ಹೂಡಿಕೆ ಮಾಡಲು ಅಸಮರ್ಥವಾಗಿರುವುದರಿಂದ ಚೀನಾದ ಯೋಜನೆಗಳು ನಿಧಾನಗತಿಯಲ್ಲಿ ಸಾಗುತ್ತಿವೆ.

ಈ ದಾಳಿಯ ಪರಿಣಾಮವಾಗಿ ಸಿಪಿಇಸಿ ಯೋಜನೆಗಳಲ್ಲಿ ಕೆಲಸ ಮಾಡುವ ತನ್ನ ನಾಗರಿಕರ ಸುರಕ್ಷತೆಗಾಗಿ ತನ್ನದೇ ಸೈನ್ಯವನ್ನು ನಿಯೋಜಿಸಲು ಚೀನಾ ಪದೇ ಪದೆ ಒತ್ತಾಯಿಸುತ್ತಿದೆ. ಇದಕ್ಕೆ ಒಪ್ಪಿಕೊಂಡಿದ್ದೇ ಆದಲ್ಲಿ ಪಾಕಿಸ್ತಾನವೇ ಚೀನಾ ಸೈನಿಕರ ವೆಚ್ಚವನ್ನು ಭರಿಸಬೇಕಾಗುತ್ತದೆ. ಇದು ಒಟ್ಟಾರೆ ಯೋಜನಾ ವೆಚ್ಚವನ್ನು ಹೆಚ್ಚಿಸುತ್ತದೆ. ಪಾಕಿಸ್ತಾನ ಸೈನ್ಯವು ತನ್ನ ದೇಶದೊಳಗಡೆಯೇ ಚೀನಾ ಪ್ರಜೆಗಳಿಗೆ ಭದ್ರತೆ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದು ವಾಸ್ತವ.

ಪಾಕಿಸ್ತಾನದಲ್ಲಿ ಚೀನಾ ಪಡೆಗಳು ನಿಯೋಜನೆಗೊಂಡಲ್ಲಿ ಅದು ಪಾಕಿಸ್ತಾನದ ಸಾರ್ವಭೌಮತ್ವಕ್ಕೆ ಖಂಡಿತವಾಗಿಯೂ ಧಕ್ಕೆ ತರಲಿದೆ. ಅಲ್ಲದೆ ಚೀನಾ ಪಡೆಗಳಿಗೆ ಅವಕಾಶ ನೀಡಿದಲ್ಲಿ ಪಿಎಲ್ಎ ಪಾಕಿಸ್ತಾನದಲ್ಲಿ ತನ್ನ ಸೇನಾ ನೆಲೆಗಳನ್ನು ಸ್ಥಾಪಿಸಲು ದಾರಿ ಮಾಡಿಕೊಟ್ಟಂತಾಗುತ್ತದೆ. ಇಸ್ಲಾಮಾಬಾದ್ ತನ್ನ ಬೇಡಿಕೆಗಳಿಗೆ ಒಪ್ಪುವಂತೆ ಮಾಡಲು ಪಾಕಿಸ್ತಾನವು ಪಾವತಿಸಲು ಸಾಧ್ಯವಾಗದಷ್ಟು ಪರಿಹಾರ ನೀಡುವಂತೆ ಬೀಜಿಂಗ್ ಒತ್ತಾಯಿಸುತ್ತಿದೆ.

ಶೆಹಬಾಜ್ ಷರೀಫ್ ಅವರು ಶೀಘ್ರದಲ್ಲೇ ತಮ್ಮ ಮೊದಲ ಅಧಿಕೃತ ವಿದೇಶ ಪ್ರವಾಸದ ಅಂಗವಾಗಿ ಬೀಜಿಂಗ್ ಗೆ ತೆರಳಲಿದ್ದಾರೆ. ಭೇಟಿಯ ದಿನಾಂಕಗಳನ್ನು ಇನ್ನೂ ಘೋಷಿಸಲಾಗಿಲ್ಲ. ಈ ಭೇಟಿಯ ಸಂದರ್ಭದಲ್ಲಿ ಚೀನಾ ತನ್ನ ಷರತ್ತುಗಳನ್ನು ಒಪ್ಪುವಂತೆ ಪಾಕಿಸ್ತಾನಕ್ಕೆ ಒತ್ತಡ ಹೇರಬಹುದು ಮತ್ತು ಇದನ್ನು ಒಪ್ಪಿಕೊಳ್ಳಲು ಪಾಕಿಸ್ತಾನಕ್ಕೆ ಕಷ್ಟವಾಗಬಹುದು. ತನ್ನ ದೇಶದಲ್ಲಿ ಇನ್ನಷ್ಟು ಹೂಡಿಕೆ ಮಾಡುವಂತೆ ಮತ್ತು ಸಾಲ ಮರುಪಾವತಿಗೆ ಮತ್ತಷ್ಟು ಕಾಲಾವಧಿಗಾಗಿ ಪಾಕಿಸ್ತಾನ ಮನವಿ ಮಾಡುವ ಸಾಧ್ಯತೆಯಿದೆ. ಆದರೆ ಇದಕ್ಕೆ ಪ್ರತಿಯಾಗಿ ತನ್ನ ಪ್ರಜೆಗಳಿಗೆ ಹೆಚ್ಚುವರಿ ಸುರಕ್ಷತೆಗಾಗಿ ಚೀನಾ ಒತ್ತಾಯಿಸಬಹುದು. ಇದರಿಂದ ಪಾಕಿಸ್ತಾನ ಮಿಲಿಟರಿ ಮುಜುಗರಕ್ಕೀಡಾಗುವ ಸಾಧ್ಯತೆಯಿದೆ.

ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ತಾನೇ ಮುಂಚೂಣಿಯಲ್ಲಿರುವುದಾಗಿ ಪಾಕಿಸ್ತಾನ ಈಗಲೂ ಭಾವಿಸಿದೆ ಮತ್ತು ಅದರ ಮಿಲಿಟರಿ ಹೇಳಿದಂತೆ ಪಾಕಿಸ್ತಾನವು ಅಂತರರಾಷ್ಟ್ರೀಯ ಭಯೋತ್ಪಾದಕತೆಯನ್ನು ನೇರವಾಗಿ ಎದುರಿಸುವ ಏಕೈಕ ರಾಷ್ಟ್ರವಾಗಿ ಉಳಿದಿದೆ. ಆದರೆ ಪಾಕಿಸ್ತಾನವು ಈಗಲೂ ಅನೇಕ ಉಗ್ರಗಾಮಿ ಗುಂಪುಗಳಿಗೆ ಸ್ವರ್ಗವಾಗಿ ಮುಂದುವರೆದಿದೆ. ಈ ಉಗ್ರರನ್ನು ಪಾಕಿಸ್ತಾನವು ಒಳ್ಳೆಯ ಉಗ್ರರು ಎಂದು ಕರೆಯುತ್ತದೆ. ಪಾಕಿಸ್ತಾನವಿ ಹೀಗೆ ಉಗ್ರರಿಗೆ ನೆಲೆ ನೀಡಿರುವುದರಿಂದ ಪ್ರಮುಖ ನೆರೆಯ ರಾಷ್ಟ್ರಗಳಾದ ಇರಾನ್, ಅಫ್ಘಾನಿಸ್ತಾನ ಮತ್ತು ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳೊಂದಿಗೆ ಸಂಬಂಧ ಹಾಳು ಮಾಡಿಕೊಂಡಿದೆ. ಇನ್ನು ಪಾಕಿಸ್ತಾನದ ಕುತಂತ್ರಕ್ಕೆ ಪ್ರತಿಯಾಗಿ ಇರಾನ್ ಮತ್ತು ಅಫ್ಘಾನಿಸ್ತಾನಗಳು ತಮ್ಮ ನೆಲದಲ್ಲಿ ಪಾಕಿಸ್ತಾನ ವಿರೋಧಿ ಉಗ್ರರಿಗೆ ನೆಲೆ ಕಲ್ಪಿಸುತ್ತಿವೆ.

ಚೀನಾ ಮತ್ತು ಸಿಪಿಇಸಿಯ ಮೇಲೆ ಪಾಕಿಸ್ತಾನದ ಅತಿಯಾದ ಅವಲಂಬನೆ ಅದರ ದುರ್ಬಲತೆಯನ್ನು ಹೆಚ್ಚಿಸಿದೆ. ಸಿಪಿಇಸಿಯ ಪ್ರಮುಖ ಕೇಂದ್ರವಾದ ಬಲೂಚಿಸ್ತಾನವು ಇಸ್ಲಾಮಾಬಾದ್​ನಿಂದ ದಬ್ಬಾಳಿಕೆಗೆ ಒಳಗಾಗಿದೆ. ಅಭಿವೃದ್ಧಿ ವಂಚಿತವಾಗಿರುವ ಇಲ್ಲಿನ ಜನತೆ ಪಾಕಿಸ್ತಾನ ಸರ್ಕಾರದ ವಿರುದ್ಧ ಆಕ್ರೋಶಿತರಾಗಿದ್ದಾರೆ. ಈ ಆಕ್ರೋಶವು ಬಲೂಚ್ ಸ್ವಾತಂತ್ರ್ಯ ಗುಂಪುಗಳ ಸಂಯೋಜನೆಯಾದ ಬಿಆರ್​ಎಎಸ್ (ಬಲೂಚ್ ರಾಜಿ ಅಜೋಯ್ ಸಂಗರ್)ನ ಬೆಳವಣಿಗೆಗೆ ಉತ್ತೇಜನ ನೀಡಿದೆ. ಬಲೂಚಿಸ್ತಾನ ಮತ್ತು ಕೆಪಿ ಸೇರಿದಂತೆ ಅದರ ಪಶ್ಚಿಮ ಪ್ರಾಂತ್ಯಗಳಲ್ಲಿ ಆಡಳಿತ ನಡೆಸುವುದು ಅಸಾಧ್ಯವಾಗಿದೆ. ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ ಖೈಬರ್ ಪಖ್ತುನಖ್ವಾದ ಬಹುದೊಡ್ಡ ಭಾಗವನ್ನು ನಿಯಂತ್ರಿಸುತ್ತದೆ. ವಿವಿಧ ಉಗ್ರಗಾಮಿ ಗುಂಪುಗಳು ಪಾಕಿಸ್ತಾನದ ನೆಲೆಗಳ ಮೇಲೆ ಪ್ರತಿದಿನ ದಾಳಿ ನಡೆಸುತ್ತಿರುವುದು ಕಳವಳಕಾರಿ ವಿಷಯವಾಗಿದೆ.

ಇದಲ್ಲದೆ ಚೀನಾದ ಈ ಯೋಜನೆಗಳು ಪಂಜಾಬ್ ಮತ್ತು ಸಿಂದ್​ನಲ್ಲಿನ ಜನರಿಗೆ ಉಪಯೋಗವಾಗಲಿಯೆಯೇ ಹೊರತು ತಮಗೆ ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಸ್ಥಳೀಯರು ನಂಬುತ್ತಾರೆ. ಮುಹಮ್ಮದ್ ಅಮೀರ್ ರಾಣಾ ದಿ ಡಾನ್ ಪತ್ರಿಕೆಯಲ್ಲಿ ಬರೆಯುವಂತೆ, 'ಅಣೆಕಟ್ಟುಗಳು ಮತ್ತು ಅಗಲವಾದ ರಸ್ತೆಗಳು ನಗರೀಕರಣ, ಮಹಿಳಾ ವಿಮೋಚನೆ ಮತ್ತು ಆಧುನೀಕರಣವನ್ನು ಪ್ರಚೋದಿಸುತ್ತವೆ ಎಂದು ಅನೇಕರು ನಂಬುತ್ತಾರೆ. ಇದನ್ನು ಅವರು ತಮ್ಮ ಧರ್ಮ ಮತ್ತು ಸಂಸ್ಕೃತಿಗೆ ಬೆದರಿಕೆ ಎಂದು ಪರಿಗಣಿಸುತ್ತಾರೆ.'

ತನ್ನ ಒಳ್ಳೆಯ ಮತ್ತು ಕೆಟ್ಟ ಭಯೋತ್ಪಾದಕ ನೀತಿಗಳನ್ನು ಬದಲಾಯಿಸುವ ಮತ್ತು ತನ್ನ ಜನರಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಭಯವನ್ನು ತೆಗೆದುಹಾಕುವ ಮೂಲಕ ಸಿಪಿಇಸಿಯನ್ನು ನಿರ್ಮಿಸುವ ಬಗ್ಗೆ ಪಾಕಿಸ್ತಾನ ತನ್ನ ಜನರಲ್ಲಿ ವಿಶ್ವಾಸವನ್ನು ಬೆಳೆಸಬೇಕಾಗಿದೆ. ಅದು ಹಾಗೆ ಮಾಡದಿದ್ದರೆ, ತನ್ನದೇ ಆದ ಸಶಸ್ತ್ರ ಪಡೆಗಳು ಮತ್ತು ಸಿಪಿಇಸಿಯಲ್ಲಿ ಭಾಗಿಯಾಗಿರುವ ಚೀನೀಯರಿಗೆ ಅಪಾಯ ಮುಂದುವರಿಯಲಿದೆ. ಇದು ಪಾಕಿಸ್ತಾನದ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಗ್ವಾದರ್ ನಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಇನ್ನೂ ಇಬ್ಬರು ಸಾವನ್ನಪ್ಪಿದ್ದಾರೆ. ಅದೇ ಸಮಯದಲ್ಲಿ ಟಿಟಿಪಿಯ ಮುಖ್ಯ ಕಮಾಂಡರ್ ಸೇರಿದಂತೆ ಶಾಂಗ್ಲಾದಲ್ಲಿ ಚೀನಾದ ಎಂಜಿನಿಯರ್​ಗಳ ಮೇಲೆ ದಾಳಿ ನಡೆಸಿದ 10 ಭಯೋತ್ಪಾದಕರು ಮತ್ತು ಆಯೋಜಕರನ್ನು ಬಂಧಿಸಲಾಗಿದೆ ಎಂದು ಪಾಕಿಸ್ತಾನ ಸೇನೆ ಹೇಳಿಕೊಂಡಿದೆ. ಆತ್ಮಾಹುತಿ ಬಾಂಬರ್ ಅಫ್ಘಾನಿಸ್ತಾನದವ ಎಂದು ಪಾಕಿಸ್ತಾನ ಹೇಳಿದೆ. ಆದರೆ ಈ ಆರೋಪಿಗಳು ನಿಜವಾದ ಆರೋಪಿಗಳಲ್ಲ ಎನ್ನಲಾಗಿದೆ. ಮುಗ್ಧ ಜನರನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಇಂಥ ಕ್ರಮದ ಮೂಲಕ ಪಾಕಿಸ್ತಾನ ಚೀನಾವನ್ನು ಸಂತೈಸಲು ಯತ್ನಿಸುತ್ತಿದೆ ಮತ್ತು ಕಾಬೂಲ್​ಗೆ ವಾರ್ನಿಂಗ್ ನೀಡಲು ಬಯಸುತ್ತಿದೆ. ಜೊತೆಗೆ ಭಾರತಕ್ಕೂ ಸಂದೇಶ ನೀಡಲು ಯತ್ನಿಸುತ್ತಿದೆ. ಪಾಕಿಸ್ತಾನದ ಈ ಕಣ್ಣೊರೆಸುವ ಕ್ರಮಗಳಿಂದ ಚೀನಾ ಸಮಾಧಾನವಾಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಲೇಖನ: ಹರ್ಷ ಕಾಕರ್, ನಿವೃತ್ತ ಮೇಜರ್ ಜನರಲ್

ಇದನ್ನೂ ಓದಿ : ಭಾರತಕ್ಕೆ ಮಾಲ್ಡೀವ್ಸ್ ನೀಡಬೇಕಾದ ​ಸಾಲದ ಮೊತ್ತ 517 ಮಿಲಿಯನ್ ಡಾಲರ್: ರಾಗ ಬದಲಿಸಿದ ಮುಯಿಝ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.