ETV Bharat / opinion

'ವಿಶ್ವಾಸ ಮತಯಾಚನೆ' ಆರಂಭವಾದ ಬಗೆ ಹೇಗೆ? ಭಾರತದ ರಾಜಕಾರಣದಲ್ಲಿ ಇದು ಸಾಗಿ ಬಂದ ಹಾದಿ - ವಿಶ್ವಾಸ ಮತಯಾಚನೆ

ಸರ್ಕಾರ ರಚನೆಯ ಸಂದರ್ಭದಲ್ಲಿ ಮಂಡಿಸಲಾಗುವ ವಿಶ್ವಾಸ ಮತಯಾಚನೆ ಎಂದರೇನು?, ಯಾವ ಸಂದರ್ಭದಲ್ಲಿ ಅದು ಅನಿರ್ವಾಯವಾಗುತ್ತದೆ?. ಈ ಕುರಿತು ರಾಜ್ಯಸಭೆ ಮಾಜಿ ಪ್ರಧಾನ ಕಾರ್ಯದರ್ಶಿ, ನಿವೃತ್ತ ಐಎಎಸ್ ಅಧಿಕಾರಿ ವಿವೇಕ್ ಕೆ.ಅಗ್ನಿಹೋತ್ರಿ ಅವರ ಲೇಖನ ಇಲ್ಲಿದೆ.

floor-test
ವಿಶ್ವಾಸ ಮತಯಾಚನೆ
author img

By ETV Bharat Karnataka Team

Published : Feb 13, 2024, 9:35 PM IST

Updated : Feb 13, 2024, 10:28 PM IST

ನೆಲದ ಪರೀಕ್ಷೆ ಅಥವಾ ವಿಶ್ವಾಸ ಮತಯಾಚನೆ ಎಂಬುದು ಪ್ರಸ್ತುತ ಹೆಚ್ಚು ಪ್ರಚಲಿತ ವಿಷಯ. ಜಾರ್ಖಂಡ್‌ನಲ್ಲಿ ಇತ್ತೀಚಿಗೆ ಸಿಎಂ ಬದಲಾವಣೆಯ ನಂತರ ಅದೇ ಒಕ್ಕೂಟವು ಹೊಸ ಸಿಎಂ ನೇತೃತ್ವದಲ್ಲಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿದೆ. ಮತ್ತೊಂದೆಡೆ, ಬಿಹಾರದಲ್ಲೂ ಈ ಹಿಂದಿದ್ದ ಸಿಎಂ ಮತ್ತೆ ಅಧಿಕಾರದ ಗದ್ದುಗೆ ಏರಿದ್ದಾರೆ. ಆದರೆ, ಸರ್ಕಾರ ಬೆಂಬಲಿತ ಒಕ್ಕೂಟ ಬೇರೆ. ಈ ಎರಡೂ ಸಂದರ್ಭಗಳಲ್ಲಿ ಸಿಎಂ ತಮ್ಮ ಬಹುಮತವನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಾರ್ಖಂಡ್‌ನಲ್ಲಿ ಜಾರಿ ನಿರ್ದೇಶನಾಲಯದಿಂದ (ಇಡಿ) ಬಂಧನಕ್ಕೊಳಗಾದ ನಂತರ ಮುಖ್ಯಮಂತ್ರಿ ಹೇಮಂತ್ ಸೊರೇನ್ ತಮ್ಮ ಸ್ಥಾನಕ್ಕೆ ಜನವರಿ 31ರಂದು ರಾಜೀನಾಮೆ ನೀಡಿದ್ದರು. ಆಡಳಿತಾರೂಢ ಸಮ್ಮಿಶ್ರ ಸರ್ಕಾರವು ಚಂಪೈ ಸೊರೇನ್ ಅವರನ್ನು ತಮ್ಮ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿತ್ತು. ಚಂಪೈ ಮುಖ್ಯಮಂತ್ರಿಯಾಗಿ ಸರ್ಕಾರ ರಚಿಸುವ ಹಕ್ಕನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದರು.

ಕೆಲವು ಕುತೂಹಲಕಾರಿ ವಿದ್ಯಮಾನಗಳ ಮಧ್ಯೆ ಕೊಂಚ ವಿಳಂಬಿಸಿ ರಾಜ್ಯಪಾಲರು ಬಹುಮತ ಸಾಬೀತಿಗೆ ಒಪ್ಪಿಗೆ ನೀಡಿದ್ದರು. ನಾಟಕೀಯ ಬೆಳವಣಿಗೆಗಳ ಬಳಿಕ ಫೆಬ್ರವರಿ 5ರಂದು ಚಂಪೈ ಸೊರೇನ್ ಸರ್ಕಾರ ವಿಶ್ವಾಸ ಮತ ಗೆದ್ದುಕೊಂಡಿತು. ಇದಕ್ಕೂ ಮುನ್ನ ರಾಜ್ಯಪಾಲರು ಜಾರ್ಖಂಡ್​ನ 5ನೇ ಶಾಸಕಾಂಗ ಸಭೆಯ 14ನೇ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದರು. ಆ ಬಳಿಕ ವಿಶ್ವಾಸ ಮತಯಾಚನೆಯ ಮೇಲಿನ ಚರ್ಚೆ ಶುರುವಾಗಿತ್ತು.

ಬಿಹಾರದಲ್ಲೂ ಇದೇ ರೀತಿಯ ಬೆಳವಣಿಗೆಗಳು ಉಂಟಾದವು. ಜೆಡಿಯು ಮತ್ತು ಆರ್‌ಜೆಡಿ ಮೈತ್ರಿಕೂಟದ ಸರ್ಕಾರ ಜನವರಿ 28ರಂದು ನಿತೀಶ್ ಕುಮಾರ್ ರಾಜೀನಾಮೆ ನೀಡುವ ಮೂಲಕ ಪತನವಾಗಿತ್ತು. ಆದರೆ, ಇಲ್ಲಿ ನಿತೀಶ್ ಹೊಸ ಪಾಲುದಾರ ಪಕ್ಷವಾದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಜೊತೆ ಸೇರಿ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದಾಗ್ಯೂ, ಬಿಹಾರದಲ್ಲಿ ವಿಶ್ವಾಸಮತಕ್ಕೂ ಮುನ್ನ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು. ಆರ್​ಜೆಡಿ ನಾಯಕರಾಗಿದ್ದ ಸ್ಪೀಕರ್​ ಅಧಿವೇಶನ ಕರೆಯುವವರೆಗೂ ತಮ್ಮ ಹುದ್ದೆ ತೊರೆಯಲು ನಿರಾಕರಿಸಿದ್ದರು.

ಸಂವಿಧಾನದ 179 (ಸಿ) ವಿಧಿಯ ಮೊದಲ ನಿಬಂಧನೆಯ ಪ್ರಕಾರ, ಕನಿಷ್ಠ 14 ದಿನಗಳ ನೋಟಿಸ್ ನೀಡಿದ ನಂತರವೇ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬಹುದು. ಬಿಜೆಪಿ ನಾಯಕ ನಂದ ಕಿಶೋರ್ ಯಾದವ್ ಜನವರಿ 28ರಂದು ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಇದರಿಂದ ಈ ಅಗತ್ಯ ಸಮಯವನ್ನು ಪೂರೈಸುವ ಸಲುವಾಗಿ ಫೆಬ್ರವರಿ 12ಕ್ಕೆ ವಿಧಾನಸಭೆ ಅಧಿವೇಶನ ಕರೆಯಲಾಗಿತ್ತು.

ಈ ಹಿಂದೆ ಬಿಜೆಪಿ ನಾಯಕ ವಿಜಯ್ ಕುಮಾರ್ ಸಿನ್ಹಾ ವಿಷಯದಲ್ಲೂ ಇದೇ ರೀತಿಯ ಬೆಳವಣಿಗೆ ನಡೆದಿತ್ತು. 2022ರ ಅಗಸ್ಟ್​ನಲ್ಲಿ ನಿತೀಶ್ ಕುಮಾರ್ ಬಿಜೆಪಿಯೊಂದಿಗೆ ತಮ್ಮ ಸಂಬಂಧ ಮುರಿದುಕೊಂಡು ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡ ಮಿತ್ರಪಕ್ಷಗಳೊಂದಿಗೆ ಸರ್ಕಾರ ರಚಿಸಿದ್ದರು. ಆಗ ಸ್ಪೀಕರ್​ ಆಗಿದ್ದ ವಿಜಯ್ ಕುಮಾರ್ ಸಿನ್ಹಾ ರಾಜೀನಾಮೆ ನೀಡಲು ನಿರಾಕರಿಸಿದ್ದರು. ಆದರೆ, ನಂತರದಲ್ಲಿ ಅವಿಶ್ವಾಸಮತ ನಿರ್ಣಯದಿಂದ ಪಾರಾಗುವ ಉದ್ದೇಶದಿಂದ ಸಿನ್ಹಾ ರಾಜೀನಾಮೆ ಕೊಡಬೇಕಾಗಿತ್ತು.

ವಿಧಿ 181 (1)ರ ಪ್ರಕಾರ, ಯಾವುದೇ ಸಂದರ್ಭದಲ್ಲಿ ಸ್ಪೀಕರ್​ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದಾಗ ಅದನ್ನು ಸದನವು ಪರಿಗಣನೆಗೆ ತೆಗೆದುಕೊಂಡರೆ, ಅಂತಹ ಸ್ಪೀಕರ್​ ಸದನದ ಕಲಾಪಗಳ ಅಧ್ಯಕ್ಷತೆ ವಹಿಸುವಂತಿಲ್ಲ. ಫೆಬ್ರವರಿ 12ರಂದು ರಾಜ್ಯಪಾಲರ ಭಾಷಣದೊಂದಿಗೆ ಬಿಹಾರದ ವಿಧಾನ ಮಂಡಲದ ಆರಂಭವಾಗಿತ್ತು. ಆಗ ಎರಡೂ ಸದನಗಳ ಸದಸ್ಯರು ಒಟ್ಟಿಗೆ ಸೇರಿಸಿದ್ದರು. ಇದರ ನಂತರ ಬಿಹಾರ ಶಾಸಕಾಂಗ ಸಭೆಯು ಪ್ರತ್ಯೇಕವಾಗಿ ಸದನ ಸೇರಿದಾಗ ಅಜೆಂಡಾದಲ್ಲಿದ್ದ ಮೊದಲ ವಿಷಯವೆಂದರೆ, ಸ್ಪೀಕರ್ ಅವಧ್ ಬಿಹಾರಿ ಚೌಧರಿ ವಿರುದ್ಧ ಅವಿಶ್ವಾಸ ನಿರ್ಣಯ. ಆಗ ಉಪಾಧ್ಯಕ್ಷ ಮಹೇಶ್ವರ್ ಹಜಾರಿ ಸದನದ ಅಧ್ಯಕ್ಷತೆ ವಹಿಸಿದ್ದರು.

ಈ ವೇಳೆ, ಸ್ಪೀಕರ್​ ವಿರುದ್ಧದ ಅವಿಶ್ವಾಸ ಮತ ನಿರ್ಣಯದ ಪರ 125 ಶಾಸಕರು ಮತ ಚಲಾಯಿಸಿದರೆ, 112 ಮಂದಿ ಮಾತ್ರ ವಿರೋಧಿಸಿದ್ದರು. ಆದರೆ, ಹೆಚ್ಚಿನ ಬಹುಮತವು ನಿರ್ಣಯದ ಪರವಾಗಿದ್ದ ಕಾರಣ ಸ್ಪೀಕರ್ ಅವರನ್ನು ಪದಚ್ಯುತಗೊಳಿಸಲಾಗಿತ್ತು. ನಂತರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಹೊಸ ಎನ್‌ಡಿಎ ಸರ್ಕಾರಕ್ಕೆ ವಿಶ್ವಾಸ ಮತಯಾಚಿಸುವ ಪ್ರಸ್ತಾಪ ಮಂಡಿಸಿದ್ದರು. ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದ ನಂತರ ಧ್ವನಿ ಮತದ ಮೂಲಕ 129-0 ಅಂತರರಿಂದ ಈ ಪ್ರಸ್ತಾಪ ಅಂಗೀಕಾರವಾಗಿತ್ತು.

ಈ ಹಿಂದೆ ಇದೇ ರೀತಿಯ ಸಂದರ್ಭ ಅಥವಾ ಅಸ್ತಿರತೆ ಸಮಯದಲ್ಲಿ ಸರ್ಕಾರವನ್ನು ನಡೆಸಲು ಬಹುಮತ ಹೊಂದಿರುವ ನಾಯಕನನ್ನು ಆಯ್ಕೆ ಮಾಡುವಲ್ಲಿ ರಾಜ್ಯಪಾಲರು ಕೆಲವೊಮ್ಮೆ ತಮ್ಮ ಅನಿಯಂತ್ರಿತ ವಿವೇಚನೆಯನ್ನು ಬಳಸಿ ವಿವಿಧ ತರಹದ ತಂತ್ರಗಳನ್ನೂ ಅನುಸರಿಸಿದ ನಿದರ್ಶನಗಳಿವೆ. ಕೆಲವೊಮ್ಮೆ ಸಿಎಂ ಆಕಾಂಕ್ಷಿಗೆ ತನ್ನ ಬೆಂಬಲಿಗರ ಸಹಿ ಪಟ್ಟಿ ಸಲ್ಲಿಸಿ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಸೂಚಿಸಬಹುದು. ಇನ್ನೂ ಕೆಲವು ಸಂದರ್ಭಗಳಲ್ಲಿ ರಾಜ್ಯಪಾಲರು ಬೆಂಬಲಿಗ ಶಾಸಕರನ್ನು ರಾಜಭವನದಲ್ಲಿ ತಮ್ಮ ಮುಂದೆ ಪರೇಡ್ ಮಾಡುವಂತೆ ಸೂಚನೆ ಕೊಡಬಹುದು. ಆದರೆ, ಇದು ಪ್ರತಿಸಲವೂ ಯಶ ಕಂಡಿಲ್ಲ. ಪ್ರತಿಪಕ್ಷಗಳಿಂದ ಅವಿಶ್ವಾಸ ನಿರ್ಣಯದ ನಂತರ ಸರ್ಕಾರದ ಪತನಕ್ಕೂ ಕಾರಣವಾಗಿದೆ.

ಎಸ್‌.ಆರ್‌.ಬೊಮ್ಮಾಯಿ ಪ್ರಕರಣ: ಹಾಗಾದರೆ, ನೆಲದ ಪರೀಕ್ಷೆ ಎಂದರೇನು?. ಕರ್ನಾಟಕದ ಎಸ್.ಆರ್​.ಬೊಮ್ಮಾಯಿ ಮತ್ತು ಕೇಂದ್ರ ಸರ್ಕಾರದ ನಡುವಿನ (1994) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೆಲದ ಪರೀಕ್ಷೆಯ ಮೂಲವು ಕಾರಣವೆಂದು ಹೇಳಬಹುದು. ಎಸ್.ಆರ್.ಬೊಮ್ಮಾಯಿ 1988ರ ಆಗಸ್ಟ್ 13ರಿಂದ 1989ರ ಏಪ್ರಿಲ್ 21 ನಡುವೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಆದರೆ, 1989ರ ಏಪ್ರಿಲ್ 21ರಂದು ರಾಷ್ಟ್ರಪತಿಗಳು 356ನೇ ವಿಧಿಯಡಿ ಬೊಮ್ಮಾಯಿ ಸರ್ಕಾರವನ್ನು ವಜಾಗೊಳಿಸಿದ್ದರು. ಬೊಮ್ಮಾಯಿ ದೊಡ್ಡ ಪ್ರಮಾಣದ ಪಕ್ಷಾಂತರ ನಂತರ ಬಹುಮತ ಕಳೆದುಕೊಂಡಿದ್ದಾರೆ ಎಂದು ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಗಿತ್ತು.

ಆಗ ಎಸ್.ಆರ್.ಬೊಮ್ಮಾಯಿ ವಿಧಾನಸಭೆಯಲ್ಲಿ ತಮ್ಮ ಬಹುಮತದ ಪರೀಕ್ಷಿಸಲು ಅವಕಾಶ ಕೋರಿದ್ದರು. ಆದರೆ, ರಾಜ್ಯಪಾಲರು ಇದನ್ನು ನಿರಾಕರಿಸಿದ್ದರು. ಇದೇ ರೀತಿಯಾಗಿ ನಾಗಾಲ್ಯಾಂಡ್, ಮೇಘಾಲಯ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿ ಶಾಸಕಾಂಗ ಸಭೆಗಳನ್ನು ವಿಸರ್ಜಿಸಿದ ಇತರ ಪ್ರಕರಣಗಳಿದ್ದವು.

ಹೀಗಾಗಿ ಎಸ್.ಆರ್.ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಾಧೀಶರ ಪೀಠವು ರಾಜ್ಯ ಸರ್ಕಾರಗಳನ್ನು ಅನಿಯಂತ್ರಿತವಾಗಿ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಮತ್ತು ಸರ್ಕಾರ ರಚಿಸಲು ಪಕ್ಷಗಳು ಹರಸಾಹಸಪಟ್ಟಾಗ ಹಾಗೂ ಅತಂತ್ರ ವಿಧಾನಸಭೆಗಳ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವುದೇ ಏಕೈಕ ವೇದಿಕೆ. ಇದು ರಾಜ್ಯಪಾಲರ ವ್ಯಕ್ತಿನಿಷ್ಠ ಅಭಿಪ್ರಾಯವಲ್ಲ ಎಂದು ಹೇಳಿತ್ತು. ಆದ್ದರಿಂದ ಇದನ್ನು 'ನೆಲದ ಪರೀಕ್ಷೆ' ಎಂದು ಭಾರತೀಯ ರಾಜಕಾರಣದಲ್ಲಿ ಕರೆಯಲಾಗುತ್ತಿದೆ.

ಇದನ್ನೂ ಓದಿ: ಭಾರತ ಸಂವಿಧಾನದ ರಚನೆ ಮತ್ತು ವಿಶೇಷತೆಗಳು: ಒಂದು ಅವಲೋಕನ

Last Updated : Feb 13, 2024, 10:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.