ETV Bharat / lifestyle

ಟೇಸ್ಟಿ ಟೇಸ್ಟಿ ಈರುಳ್ಳಿ ಚಟ್ನಿ: ಬಿಸಿ ರೊಟ್ಟಿ, ಅನ್ನದೊಂದಿಗೆ ಮಸ್ತ್ ಮಸ್ತ್​ ಕಾಂಬಿನೇಷನ್​​!​​ - HOW TO MAKE ONION CHUTNEY

How to Make Onion Chutney: ತುಂಬಾ ರುಚಿಯ ಈರುಳ್ಳಿ ಚಟ್ನಿಯನ್ನು ಬಿಸಿ ರೊಟ್ಟಿ, ಅನ್ನದೊಂದಿಗೆ ಮಸ್ತ್ ಟೇಸ್ಟಿಯಾಗಿರುತ್ತದೆ. ಹಾಗಾದರೆ, ಈರುಳ್ಳಿ ಚಟ್ನಿ ಸಿದ್ಧಪಡಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ONION CHUTNEY RECIPE  ONION CHUTNEY  HOW TO MAKE ONION CHUTNEY AT HOME
ಈರುಳ್ಳಿ ಚಟ್ನಿ (ETV Bharat)
author img

By ETV Bharat Lifestyle Team

Published : Nov 21, 2024, 7:47 PM IST

How to Make Onion Chutney: ನಮ್ಮಲ್ಲಿ ಬಹುತೇಕರು ರೊಟ್ಟಿ, ಚಪಾತಿಯ ಜೊತೆಗೆ ಚಟ್ನಿ ಸವಿಯುತ್ತಾರೆ. ಮನೆಯಲ್ಲಿ ತರಕಾರಿ ಇಲ್ಲದಿರುವ ವೇಳೆಯಲ್ಲಿ ರುಚಿಕರವಾದ ಈರುಳ್ಳಿ ಚಟ್ನಿ ಸಿದ್ಧಪಡಿಸಿದರೆ, ತೃಪ್ತಿಕರವಾಗಿ ಊಟ ಮಾಡಬಹುದು. ರೊಟ್ಟಿ ಜೊತೆಗೆ ಚಟ್ನಿ ಅಂದ್ರೆ, ಬಹುತೇಕ ಎಲ್ಲರಿಗೂ ನೆನಪಾಗುವುದು ಟೊಮೆಟೊ, ಹುಣಸೆ, ಸೌತೆಕಾಯಿ, ತೊಂಡೆಕಾಯಿ ಚಟ್ನಿ. ಆದರೆ, ಇವುಗಳ ಹೊರತಾಗಿ ನೀವು ಈರುಳ್ಳಿಯೊಂದಿಗೆ ಟೇಸ್ಟಿ ಚಟ್ನಿಯನ್ನೂ ಸಹ ತಯಾರಿಸಬಹುದು.

ಈ ಚಟ್ನಿಯು ಬಿಸಿ ರೊಟ್ಟಿ, ಅನ್ನದೊಂದಿಗೆ ತುಂಬಾ ರುಚಿಯಾಗಿರುತ್ತದೆ. ಈರುಳ್ಳಿ ಚಟ್ನಿಯನ್ನು ಗಾಜಿನ ಬಾಟಲಿಯಲ್ಲಿ ಶೇಖರಿಸಿ ಫ್ರಿಡ್ಜ್​ನಲ್ಲಿಟ್ಟರೆ ಎರಡು ವಾರ ಶೇಖರಿಸಿಡಬಹುದು. ರುಚಿಕರವಾದ ಈರುಳ್ಳಿ ಚಟ್ನಿಯನ್ನು ಸುಲಭವಾಗಿ ಮಾಡುವುದು ಹೇಗೆ? ತಯಾರಿಕೆಗೆ ಬೇಕಾದ ಪದಾರ್ಥಗಳು ಯಾವುವು ಎಂಬುದನ್ನು ತಿಳಿಯೋಣ.

ಈರುಳ್ಳಿ ಚಟ್ನಿಗೆ ಬೇಕಾಗುವ ಸಾಮಗ್ರಿಗಳು:

8-10 ಒಣ ಮೆಣಸಿನಕಾಯಿ

ಒಂದು ದೊಡ್ಡ ಈರುಳ್ಳಿ

ಎಣ್ಣೆ - 2 ಟೀಸ್ಪೂನ್

ಹುಣಸೆಹಣ್ಣು ಸ್ವಲ್ಪ

ರುಚಿಗೆ ತಕ್ಕಷ್ಟು ಉಪ್ಪು

ಸಾಸಿವೆ ಅರ್ಧ ಟೀಸ್ಪೂನ್

ಜೀರಿಗೆ ಅರ್ಧ ಟೀಸ್ಪೂನ್

ಕಾಲು ಟೀಸ್ಪೂನ್ ಮೆಂತ್ಯ

ಧನಿಯಾ - ಟೀಸ್ಪೂನ್

ಬೆಳ್ಳುಳ್ಳಿ ಎಸಳು - 5

ಕರಿಬೇವಿನ ಎಲೆಗಳು- 2

ಈರುಳ್ಳಿ ಚಟ್ನಿಗೆ ಸಿದ್ಧಪಡಿಸುವ ವಿಧಾನ:

  • ಮೊದಲು ಹುಣಸೆ ಹಣ್ಣನ್ನು ಒಂದು ಪಾತ್ರೆಯಲ್ಲಿ ಸ್ವಲ್ಪ ಹೊತ್ತು ನೆನೆಸಿಡಿ.
  • ನಂತರ ಒಲೆಯ ಮೇಲೆ ಬಾಣಲೆ ಇಡಿ, ಅದರೊಳಗೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಒಣ ಮೆಣಸಿಕಾಯಿ ಹಾಕಿ ಹುರಿದುಕೊಳ್ಳಿ.
  • ಮೆಣಸಿನಕಾಯಿಯನ್ನು 2 ನಿಮಿಷ ಹುರಿದ ನಂತರ ಸಾಸಿವೆ, ಮೆಂತ್ಯ, ಜೀರಿಗೆ ಮತ್ತು ಧನಿಯಾ ಪುಡಿ ಹಾಕಿ ಹುರಿಯಿರಿ.
  • ಈ ಮಿಶ್ರಣವನ್ನು ಸ್ವಲ್ಪ ತಣ್ಣಗಾಗಲು ಕಾಯಿರಿ. ನಂತರ ಇದರೊಳಗೆ ಬೆಳ್ಳುಳ್ಳಿ ಎಸಳು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
  • ನಂತರ ಅದರಲ್ಲಿ ಕರಿಬೇವಿನ ಸೊಪ್ಪು ಮತ್ತು ನೆನೆಸಿದ ಹುಣಸೆ ಹಣ್ಣನ್ನು ಹಾಕಿ ಮತ್ತೆ ಮಿಶ್ರಣ ಮಾಡಿಕೊಳ್ಳಿ.
  • ಈಗ ಈರುಳ್ಳಿ ತುಂಡುಗಳನ್ನು ಸೇರಿಸಿ ಒರಟಾಗಿ ರುಬ್ಬಿಕೊಳ್ಳಿ, ಮೊದಲೇ ಸಿದ್ಧಪಡಿಸಿ ಮಿಶ್ರಣದೊಳಗೆ ಸೇರಿಸಿಕೊಳ್ಳಿ.
  • ಇದೀಗ ತುಂಬಾ ರುಚಿಯಾದ ಈರುಳ್ಳಿ ರೊಟ್ಟಿ ಪಚಡಿ ರೆಡಿ.
  • ಈ ಚಟ್ನಿಯನ್ನು ಬಿಸಿ ಅನ್ನದೊಂದಿಗೆ ಸೇವಿಸಿದರೆ ಸಖತ್​ ಆಗಿರುತ್ತದೆ.
  • ಈ ರೆಸಿಪಿ ನಿಮಗೆ ಇಷ್ಟವಾಗಿದ್ದರೆ ನೀವೂ ಒಮ್ಮೆ ಟ್ರೈ ಮಾಡಬಹುದು. ಇದನ್ನು ಮನೆಯಲ್ಲಿ ಎಲ್ಲರೂ ತಿನ್ನಲು ಇಷ್ಟಪಡುತ್ತಾರೆ.

ಇವುಗಳನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.