ETV Bharat / lifestyle

ಪೂರಿಯಂತೆ ಉಬ್ಬಿರುವ ಸಾಫ್ಟ್​ ಚಪಾತಿ ಮಾಡೋದೇಗೆ? ಈ ಕ್ರಮದಲ್ಲಿ ಹಿಟ್ಟು ಸಿದ್ಧಪಡಿಸಿದರೆ ಮೃದುವಾಗುತ್ತೆ!

ಟಿವಿ ಜಾಹೀರಾತುಗಳಲ್ಲಿ ತೋರಿಸಿರುವಂತೆ ಚಪಾತಿ ಮಾಡಬೇಕು ಎನಿಸುತ್ತಿದೆಯೇ? ಆದರೆ, ಈ ರೀತಿಯಾದ ಚಪಾತಿ ಮಾಡಲು ಬಹುತೇಕರ ಕಷ್ಟಪಡುತ್ತಾರೆ. ಕೆಲವು ಸಲಹೆಗಳನ್ನು ಪಾಲಿಸಿದರೆ ಚಪಾತಿಗಳು ನಯವಾಗಿ ಮತ್ತು ಮೃದುವಾಗಿ ಹತ್ತಿಯಂತೆ ಮಾಡಲು ಸಾಧ್ಯವಾಗುತ್ತದೆ ಎನ್ನುತ್ತಾರೆ ತಜ್ಞರು.

author img

By ETV Bharat Lifestyle Team

Published : 6 hours ago

CHAPATI MAKING TIPS  HOW TO MAKE SOFT CHAPATI AT HOME  HOW TO PREPARE CHAPATI  CHAPATI PREPARATION TIPS
ಸಾಫ್ಟ್​ ಆದ ಚಪಾತಿ (ETV Bharat)

How to Make Soft Chapati: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತೂಕ ಇಳಿಸಿಕೊಳ್ಳಲು ಚಪಾತಿಯನ್ನು ಅತ್ಯುತ್ತಮ ಆಯ್ಕೆಯಾಗಿ ಆರಿಸಿಕೊಳ್ಳುತ್ತಾರೆ. ಆದರೆ, ಚಪಾತಿ ಮೃದುವಾಗಿದ್ದರೆ ಮಾತ್ರ ಸಖತ್ ರುಚಿಯಾಗಿರುತ್ತದೆ. ಆದರೆ, ಹೆಚ್ಚಿನ ಜನರಿಗೆ ಅವುಗಳನ್ನು ಹೇಗೆ ಸಿದ್ಧಪಡಿಸಬೇಕು ಎಂಬುದು ತಿಳಿದಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಸಾಫ್ಟ್ ಚಪಾತಿ ಮಾಡಲು ಕಷ್ಟವಾಗುತ್ತಿದೆಯೇ? ಈ ಸಲಹೆಗಳನ್ನು ಪಾಲಿಸಿದರೆ ಸಾಕು ನೀವು ಮಾಡುವ ಚಪಾತಿಗಳು ಉಬ್ಬಿ ಬರುವುದರ ಜೊತೆಗೆ ಮೃದುವಾಗಿರುತ್ತದೆ ಎನ್ನುತ್ತಾರೆ ಅಡುಗೆ ತಜ್ಞರು. ಈ ಈ ಟಿಪ್ಸ್​ ಅನುಸರಿಸಿ ಚಪಾತಿ ಮಾಡುವುದು ಹೇಗೆ ಎಂಬುದನ್ನು ನೋಡೋಣ.

ಸಾಫ್ಟ್​ ಚಪಾತಿಗೆ ಬೇಕಾಗುವ ಪದಾರ್ಥಗಳು:

  • ಗೋಧಿ ಹಿಟ್ಟು - 2 ಕಪ್
  • ಉಪ್ಪು - ರುಚಿಗೆ ತಕ್ಕಷ್ಟು
  • ನೀರು - ಅಗತ್ಯಕ್ಕೆ ತಕ್ಕಷ್ಟು
  • ಎಣ್ಣೆ - ಅಗತ್ಯವಿರುವಷ್ಟು

ತಯಾರಿಸುವ ವಿಧಾನ ಹೇಗೆ?:

  • ಮೊದಲು ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಗೋಧಿ ಹಿಟ್ಟನ್ನು ಹಾಕಿ. ಅದರ ನಂತರ ಅದಕ್ಕೆ ಉಪ್ಪು ಸೇರಿಸಿ ಮಿಶ್ರಣ ಮಾಡಿ.
  • ಅದರ ನಂತರ ಸ್ವಲ್ಪ ನೀರು ಸುರಿಯಿರಿ ಮತ್ತು ಬೆರಳುಗಳಿಂದ ಮಾತ್ರ ಮಿಶ್ರಣ ಮಾಡಿ. ಇಡೀ ಹಿಟ್ಟಿಗೆ ನೀರನ್ನು ಸೇರಿಸಿ, ನಂತರ ಅದನ್ನು ನಿಮ್ಮ ಅಂಗೈಯಿಂದ ಒತ್ತಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸುಮಾರು 10 ರಿಂದ 15 ನಿಮಿಷಗಳ ಕಾಲ ಹಿಟ್ಟನ್ನು ನೆನೆಯಲು ಬಿಡಿ. ನಂತರ ಈ ಹಿಟ್ಟು ತುಂಬಾ ಮೃದುವಾಗುತ್ತದೆ.
  • ಅದರ ನಂತರ ಹಿಟ್ಟಿಗೆ ಎರಡು ಟೀಸ್ಪೂನ್​ ಎಣ್ಣೆಯನ್ನು ಸೇರಿಸಿ ಮತ್ತು ಇನ್ನೊಂದು 4 ನಿಮಿಷಗಳ ಕಾಲ ಚೆನ್ನಾಗಿ ಮಿಶ್ರಣ ಮಾಡಿ. ಅದರ ನಂತರ ಹಿಟ್ಟನ್ನು ಮುಚ್ಚಿ ಮತ್ತು 10 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ.
  • ಅದರ ನಂತರ, ಹಿಟ್ಟು ಇನ್ನೊಂದು ಎರಡು ನಿಮಿಷಗಳ ಕಾಲ ಮಿಶ್ರಣ ಮಾಡಬೇಕು. ಅದರ ನಂತರ, ಅವುಗಳನ್ನು ಸಮಾನವಾದ ಉಂಡೆಗಳಾಗಿ ಮಾಡಬೇಕು ಮತ್ತು ಅವು ಒಣಗದಂತೆ ಮೇಲ್ಭಾಗದಲ್ಲಿ ಮುಚ್ಚಿ ಇಡಬೇಕಾಗುತ್ತದೆ.
  • ಈಗ ಉಂಡೆವನ್ನು ತೆಗೆದುಕೊಂಡು ಒಣ ಗೋಧಿ ಹಿಟ್ಟಿನಲ್ಲಿ ಅದ್ದಿ ಮತ್ತು ಚಪಾತಿ ಮಣೆಯ ಮೇಲೆ ಲತ್ತುಗುಣಿಯಿಂದ ರೌಂಡ್​ ಆಗಿ ತೀಡಬೇಕಾಗುತ್ತದೆ. ಆ ನಂತರ ಚಪಾತಿಗೆ ಎಣ್ಣೆ ಹಚ್ಚಿ ಮಧ್ಯದಲ್ಲಿ ಮಡಚಿ. ಮತ್ತೆ ಆ ಪದರದ ಮೇಲೆ ಎಣ್ಣೆ ಹಚ್ಚಿ ಮತ್ತೆ ಮಡಚಿ. ನಂತರ ಅದು ತ್ರಿಕೋನ ಆಕಾರದಲ್ಲಿ ಬರುತ್ತದೆ.
  • ಈಗ ಚಪಾತಿಯನ್ನು ಮತ್ತೆ ಒಣ ಗೋಧಿ ಹಿಟ್ಟಿನಲ್ಲಿ ಅದ್ದಿ ಸುತ್ತಿಕೊಳ್ಳಿ. ರೋಲಿಂಗ್ ಮಾಡುವ ಮೊದಲು, ಹಿಟ್ಟಿನ ಮಧ್ಯದಲ್ಲಿ ಲತ್ತುಗುಣಿಯಿಂದ ತೀಡಬೇಡಿ. ಆದರೆ, ಹಿಟ್ಟಿನ ತುದಿಗಳನ್ನು ತೀಡಿಕೊಳ್ಳಿ ಮತ್ತು ಅದು ದುಂಡಗಿನ ಆಕಾರವನ್ನು ಪಡೆಯುವವರೆಗೆ ತೀಡುತ್ತಾ ಇರಿ. ಆದರೆ, ಇಲ್ಲಿ ಚಪಾತಿ ದಪ್ಪ ಅಥವಾ ತೆಳ್ಳಗಿರುವುದಿಲ್ಲ. ಆದರೆ ಮಧ್ಯಮ ದಪ್ಪಕ್ಕೆ ತೀಡಿಕೊಳ್ಳಬೇಕು.
  • ಹೀಗೆ ಮಾಡಿದ ಚಪಾತಿಯನ್ನು ತಟ್ಟೆಯಲ್ಲಿ ತೆಗೆದುಕೊಂಡು ಒಣಗದಂತೆ ಬಟ್ಟೆಯಿಂದ ಮುಚ್ಚಿ ಇಡಿ. ಇವೆಲ್ಲವನ್ನೂ ಚಪಾತಿಗಳಾಗಿ ತೀಡಿ ಇಟ್ಟುಕೊಳ್ಳಬೇಕು.
  • ಈಗ ಒಲೆಯ ಮೇಲೆ ತವಾ ಇಡಿ, ಚೆನ್ನಾಗಿ ಬಿಸಿ ಮಾಡಿ. ತವಾ ಬಿಸಿಯಾದ ನಂತರ, ಚಪಾತಿಯನ್ನು ಹೊರಳಾಡಿಸುತ್ತಾ 10 ಸೆಕೆಂಡುಗಳ ಕಾಲ ಫ್ರೈ ಮಾಡಿ.
  • ನಂತರ ಇನ್ನೊಂದು ಬದಿಯನ್ನು ತಿರುಗಿಸಿ, 10 ಸೆಕೆಂಡುಗಳ ಕಾಲ ಬೇಯಿಸಿ. ಈ ಸಮಯದಲ್ಲಿ ಚಪಾತಿ ಉಬ್ಬುತ್ತದೆ. ನಂತರ ಚಪಾತಿಯನ್ನು ಎರಡೂ ಕಡೆ ಸ್ವಲ್ಪ ಎಣ್ಣೆ ಹಾಕಿ ಬೇಯಿಸಿ.
  • ಬೇಯಿಸಿದ ಚಪಾತಿಯನ್ನು ಹಾಟ್ ಬಾಕ್ಸ್​ಗೆ ಹಾಕಿ ಮುಚ್ಚಳವನ್ನು ಪೂರ್ತಿಯಾಗಿ ಮುಚ್ಚದೆ ಸ್ವಲ್ಪ ಗ್ಯಾಪ್ ಬಿಡಿ. ಇಷ್ಟೆಲ್ಲಾ ಆದಮೇಲೆ ಸೂಪರ್ ಸಾಫ್ಟ್ ಚಪಾತಿ. ತೂಕ ಇಳಿಸಲು ಚಪಾತಿ ತಿನ್ನುವವರು ಎಣ್ಣೆ ಇಲ್ಲದೆ ಬೇಯಿಸಬಹುದು. ಹೀಗೆ ಬೇಯಿಸಿದರೂ ಕೂಡ ಮೆತ್ತಗಿರುತ್ತದೆ.

ಇದನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.