How to Make Chicken 65 Recipe: ವಾರದ ರಜೆ ಸೇರಿದಂತೆ ಇತರೆ ರಜಾ ದಿನಗಳು ಬಂದರೆ ಸಾಕು, ಹಲವರು ತಮ್ಮ ಮನೆಯಲ್ಲಿ ನಾನ್ವೆಜ್ ಅಡುಗೆ ಮಾಡುತ್ತಾರೆ. ಚಿಕನ್, ಮಟನ್, ಮೀನಿನಿಂದ ವಿವಿಧ ಖಾದ್ಯಗಳನ್ನು ಸಿದ್ಧಪಡಿಸಿ ಸೇವಿಸುತ್ತಾರೆ. ನಾವು ನಿಮಗಾಗಿ ಕ್ರಿಸ್ಪಿ ಅಂಡ್ ಸಖತ್ ಟೇಸ್ಟಿ ಮದ್ರಾಸ್ ಸ್ಟೈಲ್ ಚಿಕನ್ 65 ರೆಸಿಪಿ ಬಗ್ಗೆ ತಿಳಿಸುತ್ತೇವೆ. ಇಲ್ಲಿ ತಿಳಿಸಿದಂತೆ ಸಿದ್ಧಪಡಿಸಿದರೆ ಚಿಕನ್ 65 ಕ್ರಿಸ್ಪಿ ಮತ್ತು ರುಚಿಕರವಾಗಿರುತ್ತದೆ. ಮತ್ತೇಕೆ ವಿಳಂಬ, ಮದ್ರಾಸ್ ಸ್ಟೈಲ್ ಚಿಕನ್ 65 ರೆಸಿಪಿಯನ್ನು ಮಾಡೋದೇಗೆ ಅನ್ನೋದರ ಮಾಹಿತಿ ಇಲ್ಲಿದೆ.
ಮದ್ರಾಸ್ ಸ್ಟೈಲ್ ಚಿಕನ್ 65ಗೆ ಬೇಕಾಗುವ ಪದಾರ್ಥಗಳು:
- ಚಿಕನ್ ಪೀಸ್ಗಳು - ಅರ್ಧ ಕೆಜಿ
- ಶುಂಠಿ, ಬೆಳ್ಳುಳ್ಳಿ ಪೇಸ್ಟ್ - 2 ಟೀಸ್ಪೂನ್
- ಖಾರದ ಪುಡಿ - 2 ಟೀಸ್ಪೂನ್
- ಗರಂ ಮಸಾಲಾ- ಟೀಸ್ಪೂನ್
- ಧನಿಯಾ ಪುಡಿ - ಟೀಸ್ಪೂನ್
- ಜೀರಿಗೆ ಪುಡಿ- ಟೀಚಮಚ
- ಅರಿಶಿನ - ಕಾಲು ಟೀಚಮಚ
- ನಿಂಬೆ ರಸ ಸ್ವಲ್ಪ
- ಕಾರ್ನ್ ಫ್ಲೋರ್ (ಮೆಕ್ಕೆಜೋಳದ ಹಿಟ್ಟು) - 2 ಟೀಸ್ಪೂನ್
- ಮೊಟ್ಟೆ - ಒಂದು
- ಮೊಸರು - ಕಾಲು ಕಪ್
- ಹಸಿಮೆಣಸಿನಕಾಯಿ - ನಾಲ್ಕು
- ಕರಿಬೇವಿನ ಎಲೆಗಳು - ಐದು ಅಥವಾ ಆರು
- ಉಪ್ಪು - ರುಚಿಗೆ ತಕ್ಕಷ್ಟು
- ಫುಡ್ ಕಲರ್ - ಚಿಟಿಕೆ (ಕೆಂಪು ಬಣ್ಣ)
- ಎಣ್ಣೆ: ಡೀಪ್ ಫ್ರೈ ಮಾಡಲು ಬೇಕಾಗುವಷ್ಟು
ಮದ್ರಾಸ್ ಸ್ಟೈಲ್ ಚಿಕನ್ 65 ತಯಾರಿಸುವ ವಿಧಾನ:
- ಮೊದಲು ಚಿಕನ್ ಪೀಸ್ಗಳನ್ನು ಸರಿಯಾಗಿ ನೀರಿನಲ್ಲಿ ತೊಳೆಯಿರಿ. ನಂತರ ಅದನ್ನು ಮಿಕ್ಸಿಂಗ್ ಬೌಲ್‌ಗೆ ತೆಗೆದುಕೊಳ್ಳಿ.
- ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಧನಿಯಾ ಪುಡಿ, ಗರಂ ಮಸಾಲಾ, ಮೆಣಸಿನ ಪುಡಿ, ಜೀರಿಗೆ ಪುಡಿ, ಅರಿಶಿನ, ನಿಂಬೆ ರಸ, ಕರಿಬೇವಿನ ಎಲೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
- ಚಿಕನ್ ಪೀಸ್ಗಳನ್ನು ಮಸಾಲೆ ಮಿಶ್ರಣದಲ್ಲಿ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು.
- ನಂತರ ಕಾರ್ನ್ ಫ್ಲೋರ್ (ಮೆಕ್ಕೆಜೋಳದ ಹಿಟ್ಟನ್ನು) ಹಾಕಿ ಮಿಕ್ಸ್ ಮಾಡಿ. (ಕಾರ್ನ್ ಫ್ಲೋರ್ ಬದಲಿಗೆ ಮೈದಾ ಅಥವಾ ಅಕ್ಕಿ ಹಿಟ್ಟನ್ನು ಕೂಡ ಬಳಸಬಹುದು).
- ಈಗ ಮೊಸರು ಮತ್ತು ಫುಡ್ ಕಲರ್ ಸೇರಿಸಿ ಮಿಶ್ರಣ ಮಾಡಿ. ಚಿಕನ್ ಪೀಸ್ಗಳಿಗೆ ಲೇಪನವು ಸ್ವಲ್ಪ ಗಟ್ಟಿಯಾಗಿರಬೇಕು. ಅಗತ್ಯವಿದ್ದರೆ, ನೀವು ಸ್ವಲ್ಪ ಕಾರ್ನ್ ಫ್ಲೋರ್ನ್ನು ಸೇರಿಸಬಹುದು.
- ಮ್ಯಾರಿನೇಟ್ ಚಿಕನ್ನ್ನು ಫ್ರಿಜ್ಡ್ನಲ್ಲಿ ಒಂದು ಗಂಟೆ ಇಡಬೇಕು.
- ಬಳಿಕ ಅದರಲ್ಲಿ ಅರ್ಧ ಹಸಿ ಮೊಟ್ಟೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಈಗ ಒಲೆಯ ಮೇಲೆ ಕಡಾಯಿ ಇಟ್ಟು ಎಣ್ಣೆ ಸುರಿಯಿರಿ. ಎಣ್ಣೆ ಬಿಸಿಯಾದ ನಂತರ ಸ್ಟವ್ನ್ನು ಮಧ್ಯಮ ಉರಿಯಲ್ಲಿ ಇಡಿ. ಚಿಕನ್ ಪೀಸ್ಗಳು ಒಂದೊಂದಾಗಿ ಅದರೊಳಗೆ ಹಾಕಿ ಹೊಂಬಣ್ಣ ಬರುವವರೆಗೆ ಫ್ರೈ ಮಾಡಿ.
- ಚಿಕನ್ ಪೀಸ್ಗಳನ್ನು ಅರ್ಧಕ್ಕಿಂತ ಹೆಚ್ಚು ಫ್ರೈ ಮಾಡಿ ಮತ್ತು ತಟ್ಟೆಯಲ್ಲಿ ತೆಗೆದುಕೊಳ್ಳಿ. ಅವುಗಳನ್ನು ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಮತ್ತೆ ಎಣ್ಣೆಯಲ್ಲಿ ಹಾಕಿ ಡೀಪ್ ಫ್ರೈ ಮಾಡಿ. ಚಿಕನ್ 65 ಅನ್ನು ಈ ರೀತಿ ಎರಡು ಬಾರಿ ಹಾಕಿ ಫ್ರೈ ಮಾಡಿದರೆ ರುಚಿ ತುಂಬಾ ಚೆನ್ನಾಗಿರುತ್ತದೆ.
- ನಂತರ ಹಸಿ ಮೆಣಸಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಎಣ್ಣೆಯಲ್ಲಿ ಫ್ರೈ ಮಾಡಿ ಹಾಗೂ ಚಿಕನ್ 65 ಅನ್ನು ಪ್ಲೇಟ್ಗೆ ಹಾಕಿ. ಹೀಗೆ ಮಾಡಿದರೆ ಕ್ರಿಸ್ಪಿ ಚಿಕನ್ 65 ಸಿದ್ಧವಾಗುತ್ತದೆ.
- ನಿಮಗೆ ಇಷ್ಟವಾದಲ್ಲಿ, ಈ ಚಿಕನ್ 65 ಅನ್ನು ಒಮ್ಮೆ ಸಿದ್ಧಪಡಿಸಿ ರುಚಿ ಸವಿಯಿರಿ..