ETV Bharat / lifestyle

ದಸರಾ ರಜೆಯಲ್ಲಿ ಸುದೀರ್ಘ ಪ್ರವಾಸಕ್ಕೆ ಯೋಜಿಸುತ್ತಿದ್ದೀರಾ?: ಅತ್ಯುತ್ತಮ ಪ್ರವಾಸಿ ತಾಣಗಳು ಇಲ್ಲಿವೆ ನೋಡಿ - Tourist Places for Long Vacation

ಮಕ್ಕಳಿಗೆ ದಸರಾ ರಜಾದಿನಗಳ ಹಿನ್ನೆಲೆ ಅನೇಕ ಪೋಷಕರು ದೀರ್ಘ ಪ್ರವಾಸ ಕೈಗೊಳ್ಳಲು ಪ್ಲಾನ್​ ಮಾಡುತ್ತಾರೆ. ನೀವು ಕೂಡ ಈ ಪಟ್ಟಿಯಲ್ಲಿ ಇದ್ದೀರಾ? ನಾವು ನಿಮಗಾಗಿ ದೇಶದ ಕೆಲವು ಅತ್ಯುತ್ತಮ ಪ್ರವಾಸಿ ತಾಣಗಳನ್ನು ತಂದಿದ್ದೇವೆ.

TOURIST PLACES FOR LONG VACATION  BEST TOURIST PLACES IN INDIA  TOURIST PLACES TO VISIT IN OCTOBER  BEST PLACE TO HOLIDAYS IN OCTOBER
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Lifestyle Team

Published : Oct 4, 2024, 1:14 PM IST

Best Tourist Places for Long Vacation in October: ಬಿಡುವಿಲ್ಲದೇ ಕೆಲಸ ಮಾಡಿ ಸುಸ್ತಾಗಿದ್ದೀರಾ? ಮಕ್ಕಳಿಗೆ ಈಗ ದಸರಾ ರಜೆ ನೀಡಲಾಗಿದೆ. ಈ ಸಮಯದಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯಲು ಜನರು ದೀರ್ಘ ಪ್ರವಾಸ ಕೈಗೊಳ್ಳಲು ಪ್ಲಾನ್​ ಮಾಡುತ್ತಿದ್ದಾರೆ. ವಿಶೇಷವಾಗಿ ಅಕ್ಟೋಬರ್ ತಿಂಗಳಲ್ಲಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಆನಂದಿಸಲು ಲಾಂಗ್​ ಟೂರ್​ ಮಾಡಲು ಸಿದ್ಧರಾಗುತ್ತಾರೆ. ಹಾಗಾದರೆ, ನೀವು ಈ ಪಟ್ಟಿಯಲ್ಲಿದ್ದೀರಾ? ನಾವು ನಿಮಗಾಗಿ ಕೆಲವು ಅತ್ಯುತ್ತಮ ಪ್ರವಾಸಿ ತಾಣಗಳನ್ನು ತಂದಿದ್ದೇವೆ. ಅಲ್ಲಿಗೆ ಹೋದರೆ ಪ್ರಕೃತಿಯ ಸೊಬಗಿನ ನಡುವೆ ಮೈಮರೆಯುವುದು ಗ್ಯಾರಂಟಿ. ಮತ್ತೇ ತಡ ಆ ಸ್ಥಳಗಳು ಯಾವುವು? ಅಲ್ಲಿಗೆ ತೆರಳುವುದು ಹೇಗೆ ಎಂಬುದನ್ನು ಇದೀಗ ನೋಡೋಣ.

ಮೌಂಟ್ ಅಬು: ರಾಜಸ್ಥಾನದ ಈ ಪ್ರವಾಸಿ ಸ್ಥಳವನ್ನು ಅನೇಕ ಜನರು ಇಷ್ಟಪಡುತ್ತಾರೆ. ಕುಟುಂಬದೊಂದಿಗೆ ಆನಂದಿಸಲು ಬಯಸುವವರು ಇಲ್ಲಿಗೆ ಹೋಗಬಹುದು. ಅರ್ಬುದಾ ದೇವಿ ದೇವಸ್ಥಾನ, ನಕ್ಕಿ ಸರೋವರ, ಟೋಡ್ ರಾಕ್, ಅಚಲಗಢ... ಇವು ರಾಜಸ್ಥಾನದ ಅದ್ಭುತ ನೈಸರ್ಗಿಕ ತಾಣಗಳಾಗಿವೆ.

ವಯನಾಡ್: ವಯನಾಡ್ ಹಸಿರು ಬೆಟ್ಟಗಳು ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ದೀರ್ಘ ಪ್ರವಾಸಕ್ಕೆ ಪ್ಲಾನ್​ ಮಾಡುವವರು ಇಲ್ಲಿಗೆ ಹೋಗಿ ಪೂರ್ಣವಾಗಿ ಆನಂದಿಸಬಹುದು. ಟ್ರೀ ಹೌಸ್, ವಟ್ಟಿರಿ, ಚೆಂಬ್ರಾ ಶಿಖರ, ಕುರುವಾ ದ್ವೀಪ, ತಿರುನೆಲ್ಲಿ ದೇವಸ್ಥಾನ ಮುಂತಾದ ಪ್ರಸಿದ್ಧ ಸ್ಥಳಗಳನ್ನು ವಯನಾಡ್‌ನಲ್ಲಿ ಕಾಣಬಹುದು. ವಯನಾಡ್​ ನೈಸರ್ಗಿಕ ಸೌಂದರ್ಯದ ರಮಣೀಯ ತಾಣವಾಗಿದೆ.

ಮುನ್ನಾರ್: ಮುನ್ನಾರ್ ಪ್ರಕೃತಿಯ ಸೌಂದರ್ಯ ವೀಕ್ಷಿಸುವುದೇ ಕಣ್ಣಿಗೆ ಹಬ್ಬವಾಗಿದೆ.. ಪ್ರವಾಸಿಗರಿಗೆ ಹೇಳಿ ಮಾಡಿಸಿದ ಅತ್ಯುತ್ತಮ ಸ್ಥಳ. ಪ್ರವಾಸಿಗರು ಇಲ್ಲಿ ವಿಶೇಷ ಅನುಭವ ಪಡೆಯುತ್ತಾರೆ. ಮುನ್ನಾರ್ ಬೆಟ್ಟಗಳ ಮೇಲಿರುವ ಚಹಾ ತೋಟಗಳು ವಿಶೇಷ ಆಕರ್ಷಣೆ ಎಂದು ಹೇಳಬಹುದು. ಅದ್ಭುತವಾದ ಬೆಟ್ಟಗಳು, ಹೌಸ್‌ಬೋಟ್ ಸೇರಿದಂತೆ ಅದ್ಭುತ ಜಲಪಾತಗಳು ಇಲ್ಲಿನ ಹೈಲೈಟ್‌ ಆಗಿವೆ. ಮುನ್ನಾರ್ ಅನ್ನು "ದಕ್ಷಿಣ ಭಾರತದ ಕಾಶ್ಮೀರ" ಎಂದೂ ಕರೆಯುತ್ತಾರೆ.

ಗೋವಾ: ಗೋವಾ ಪ್ರವಾಸ ಕೈಗೊಳ್ಳುವುದೇ ಒಂದು ವಿಶೇಷವಾಗಿದೆ. ಅನೇಕ ಜನರು ಇಲ್ಲಿಗೆ ಹೋಗಿ ಆನಂದಿಸುತ್ತಾರೆ. ಮತ್ತು ನೀವು ಅಕ್ಟೋಬರ್‌ನಲ್ಲಿ ಇಲ್ಲಿಗೆ ಹೋಗಿ ಆನಂದಿಸಬಹುದು. ಸುದೀರ್ಘ ಪ್ರವಾಸಕ್ಕೆ ಗೋವಾ ಅತ್ಯುತ್ತಮ ಪ್ರವಾಸಿ ತಾಣವಾಗಿದೆ. ಕಡಲತೀರಗಳು, ಶಾಪಿಂಗ್, ವನ್ಯಜೀವಿ ಸಫಾರಿಗಳು, ಸ್ಕೂಬಾ ಡೈವಿಂಗ್, ಸ್ನಾರ್ಕ್ಲಿಂಗ್, ಜೆಟ್ ಸ್ಕೀಯಿಂಗ್, ಜಲಪಾತಗಳು ಗೋವಾದ ಪ್ರಮುಖ ಆಕರ್ಷಣೆಯಾಗಿವೆ. ಗೋವಾ ಪ್ರವಾಸಕ್ಕೆ ಹೋದರೆ ಹಲವು ಸ್ಥಳಗಳು ಮನಕ್ಕೆ ತುಂಬಾ ಖುಷಿ ನೀಡುತ್ತವೆ.

ಈ ರೀತಿ ಪ್ಲಾನ್ ಮಾಡಿ: ಸೀಸನ್ ಬದಲಾದಂತೆ, ನೀವು ಅಕ್ಟೋಬರ್‌ನಲ್ಲಿ ಪ್ರವಾಸದ ಬಗ್ಗೆ ಯೋಜಿಸುತ್ತಿದ್ದರೆ, ನೀವು ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ನೀವು ಭೇಟಿ ನೀಡಲು ಬಯಸುವ ಪ್ರವಾಸಿ ತಾಣದ ಬಗ್ಗೆ ಮುಂಚಿತವಾಗಿ ಮಾಹಿತಿ ಸಂಗ್ರಹಿಸಿ. ಮುಂಚಿತವಾಗಿ ಹೋಟೆಲ್ ಬುಕ್ ಮಾಡಿ. ಎಲ್ಲಾ ಪ್ರವಾಸಿ ತಾಣಗಳಿಗೆ ಬಸ್​, ರೈಲು ಮತ್ತು ವಿಮಾನ ಲಭ್ಯವಿವೆ. ಆಯಾ ಪ್ರದೇಶಗಳಿಗೆ ಅನುಗುಣವಾಗಿ ಸಾರಿಗೆ ಲಭ್ಯತೆಯು ಬದಲಾಗುತ್ತವೆ. ಹಾಗಾಗಿ ಪ್ರಯಾಣವನ್ನು ಆರಾಮದಾಯಕವಾಗಿಸಲು ಮೊದಲೇ ಯೋಜಿಸಿ. IRCTC ದೇಶದ ಪ್ರಮುಖ ಪ್ರವಾಸಿ ತಾಣಗಳಾದ್ಯಂತ ರೈಲುಗಳನ್ನು ವ್ಯವಸ್ಥೆ ಮಾಡಿದೆ.

ಇದನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.