ETV Bharat / international

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್​ - ಹ್ಯಾರಿಸ್​ ನಡುವೆ ನೇರ ಹಣಾಹಣಿ, ಏನ್​ ಹೇಳುತ್ತೆ ಹೊಸ ಸಮೀಕ್ಷೆ? - US ELECTIONS

ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು, ಡೆಮಾಕ್ರಟಿಕ್​ ಹಾಗೂ ರಿಪಬ್ಲಿಕ್​ ಪಕ್ಷಗಳ ಅಭ್ಯರ್ಥಿಗಳಲ್ಲಿ ಯಾರಿಗೆ ಜನ ಮಣೆ ಹಾಕಿದ್ದಾರೆ ಎನ್ನುವುದರ ಬಗ್ಗೆ ಸಿಎನ್​ಎನ್​ ಹೊಸ ಸಮೀಕ್ಷೆ ನಡೆಸಿದೆ.

Donald Trump and Kamala Harris
ಡೊನಾಲ್ಡ್​ ಟ್ರಂಪ್​ ಹಾಗೂ ಕಮಲಾ ಹ್ಯಾರಿಸ್​ (ANI)
author img

By ANI

Published : Oct 30, 2024, 10:31 AM IST

Updated : Oct 30, 2024, 11:22 AM IST

ವಾಷಿಂಗ್ಟನ್​ ಡಿಸಿ, ಅಮೆರಿಕ: ಅಮೆರಿಕ ಅಧ್ಯಕ್ಷೀಯ ಚುನಾವಣಾ ಅಂತಿಮ ಸುತ್ತಿನ ಮತದಾನದ ದಿನ ಸಮೀಪಿಸುತ್ತಿದ್ದಂತೆ ಇಬ್ಬರು ಅಭ್ಯರ್ಥಿಗಳ ಗೆಲುವಿನ ಸಾಧ್ಯತೆಯ ಬಗ್ಗೆ ಹೊಸ ಸಮೀಕ್ಷೆಯೊಂದು ಹೊರಬಿದ್ದಿದೆ. ನಿರ್ಣಾಯಕ ಚುನಾವಣಾ ಕಣದ ರಾಜ್ಯಗಳಾದ ಅರಿಜೋನಾ ಹಾಗೂ ನೆವಾಡಾದಲ್ಲಿ ಡೆಮಾಕ್ರಟಿಕ್​ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್​ ಹಾಗೂ ರಿಪಬ್ಲಿಕ್​ ಪಕ್ಷದ ಅಭ್ಯರ್ಥಿ ಡೊನಾಲ್ಡ್​ ಟ್ರಂಪ್​ ಇಬ್ಬರ ನಡುವೆ ತೀರಾ ಹಣಾಹಣಿಲ್ಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಎಸ್​ಎಸ್​ಆರ್​ಎಸ್​ ನಡೆಸಿದ ಸಿಎನ್​ಎನ್​ ಸಮೀಕ್ಷೆಯ ಪ್ರಕಾರ, ಅರಿಜೋನಾದಲ್ಲಿ 48 ಶೇ ಸಂಭಾವ್ಯ ಮತದಾರರು ಹ್ಯಾರಿಸ್ ಅವರಿಗೆ ಬೆಂಬಲ ಸೂಚಿಸಿದರೆ, ಟ್ರಂಪ್​ಗೆ 47 ಶೇ ಬೆಂಬಲ ಸೂಚಿಸಿದ್ದಾರೆ. ನೆವಾಡಾದಲ್ಲಿ, ಹ್ಯಾರಿಸ್‌ ಅವರಿಗೆ ಶೇ 47 ಆದರೆ ಟ್ರಂಪ್ ಅವರು ಶೇ 48 ಬೆಂಬಲ ಪಡೆದು ಸ್ವಲ್ಪ ಮುನ್ನಡೆ ಸಾಧಿಸಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ. ಎರಡು ರಾಜ್ಯಗಳಲ್ಲಿ ಇಬ್ಬರಿಗೂ ದೊರೆತಿರುವ ಬೆಂಬಲವನ್ನು ಗಮನಿಸಿದರೆ ಯಾವುದೇ ಸ್ಪಷ್ಟ ಮುಂಚೂಣಿಯನ್ನು ಸೂಚಿಸಿಲ್ಲ.

ಅರಿಝೋನಾದಲ್ಲಿ 781 ನೋಂದಾಯಿತ ಮತದಾರರಲ್ಲಿ ಮತ್ತು ನೆವಾಡಾದಲ್ಲಿ 683 ನೋಂದಾಯಿತ ಮತದಾರರಲ್ಲಿ ಸಮೀಕ್ಷೆ ನಡೆಸಲಾಯಿತು. ಅಕ್ಟೋಬರ್ 21 ರಿಂದ ಅಕ್ಟೋಬರ್ 26 ರ ನಡುವೆ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆ ವೇಳೆ, ಯಾವ ಅಭ್ಯರ್ಥಿ ಪ್ರಮುಖ ಸಮಸ್ಯೆಗಳನ್ನು ಉತ್ತಮವಾಗಿ ನಿಭಾಯಿಸುತ್ತಾರೆ ಎಂಬುದರ ಕುರಿತು ಮತದಾರರು ಹೆಚ್ಚು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಯಾವ ಅಭ್ಯರ್ಥಿ ತಮ್ಮ ಮತದಾರರ ಬಗ್ಗೆ ಕಾಳಜಿ ವಹಿಸುತ್ತಾರೆ, ದೇಶದ ದೃಷ್ಟಿಕೋನವನ್ನು ಹಂಚಿಕೊಳ್ಳುತ್ತಾರೆ, ವೈಯಕ್ತಿಕ ಹಿತಾಸಕ್ತಿಗಳಿಗಿಂತ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಆದ್ಯತೆ ನೀಡುವ ಗುಣಲಕ್ಷಣಗಳ ಮೇಲೆ ಯಾವುದೇ ಅಭ್ಯರ್ಥಿ ಮತದಾರರ ಮೇಲೆ ಪ್ರಭಾವ ಬೀರಿಲ್ಲ.

ನೆವಾಡಾದಲ್ಲಿ ಕಳೆದ ಆಗಸ್ಟ್​ ಅಂತ್ಯದಿಂದಲೂ ಇದೇ ರೀತಿ ಮುಂದುವರಿದಿದೆ. ಆದರೆ, ಅರಿಜೋನಾದಲ್ಲಿ ಇತ್ತೀಚಿನ ಬದಲಾವಣೆಗಳು ಹ್ಯಾರಿಸ್​ ಅವರತ್ತ ಮತದಾರರು ವಾಲುತ್ತಿರುವಂತೆ ಸೂಚಿಸುತ್ತಿವೆ. ವಿಶೇಷವಾಗಿ ಮಹಿಳೆಯರು ಲ್ಯಾಟಿನೋ ಮತದಾರರು, ಕಿರಿಯ ಮತದಾರರು 16 ಪಾಯಿಂಟ್​ ಅಂತರದಿಂದ ಹ್ಯಾರಿಸ್​ ಅವರನ್ನು ಬೆಂಬಲಿಸಿದರೆ, ಪುರುಷರು 14 ಪಾಯಿಂಟ್​ಗಳಿಂದ ಟ್ರಂಪ್​ ಅವರ ಪರವಾಗಿದ್ದಾರೆ.

ನೆವಾಡಾದಲ್ಲಿ, ಹ್ಯಾರಿಸ್ ಮಹಿಳೆಯರಲ್ಲಿ (ಶೇ 51 ರಿಂದ 46 ರಷ್ಟು) ಸ್ವಲ್ಪ ಮುನ್ನಡೆ ಹೊಂದಿದ್ದಾರೆ. ಟ್ರಂಪ್ ಅವರು ಬಿಳಿ ಪುರುಷರಲ್ಲಿ 15 ಪಾಯಿಂಟ್​ ಮತ್ತು ಬಿಳಿ ಮಹಿಳೆಯರಲ್ಲಿ 12 ಪಾಯಿಂಟ್​ಗಳಿಂದ ಮುನ್ನಡೆ ಸಾಧಿಸಿದ್ದಾರೆ. ಹಿಸ್ಪಾನಿಕ್​ ಮತದಾರರು ಸರಿಸುಮಾರು ಸಮಾನವಾಗಿ ಇಬ್ಬರ ಪರವಾಗಿಯೂ ಇದ್ದಾರೆ. ಅದರಲ್ಲೂ 35 ವರ್ಷದೊಳಗಿನ ಮತದಾರರು ಗಮನಾರ್ಹವಾಗಿ ಹ್ಯಾರಿಸ್​ ಅವರಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.

ಅರಿಝೋನಾದಲ್ಲಿ ಸ್ವತಂತ್ರ ಮತದಾರರು ವಿಭಜನೆಗೊಂಡಿದ್ದು, ಟ್ರಂಪ್ ಪರವಾಗಿ 45 ಶೇ. ಮತ್ತು ಹ್ಯಾರಿಸ್ ಪರ 43 ಶೇ. ಬೆಂಬಲ ಸೂಚಿಸಿದ್ದಾರೆ. ನೆವಾಡಾದಲ್ಲಿ, ಸ್ವತಂತ್ರ ಸಂಭಾವ್ಯ ಮತದಾರರು ಹ್ಯಾರಿಸ್‌ಗೆ ಶೇಕಡಾ 46 ರಿಂದ 43 ರಷ್ಟು ಒಲವು ತೋರಿದ್ದಾರೆ. ಆಗಸ್ಟ್‌ನಿಂದ ಇದರಲ್ಲಿ ಸ್ವಲ್ಪ ಬದಲಾವಣೆ ಕಂಡು ಕಂಡು ಬರುತ್ತಿದೆ.

ಈಗಾಗಲೇ ಚುನಾವಣೆಗೆ ಮೊದಲೇ 5 ಕೋಟಿ ಜನ ಈಗಾಗಲೇ ಮತದಾನ ಮಾಡಿದ್ದಾರೆ. ನವೆಂಬರ್​ 5 ರಂದು ಚುನಾವಣೆ ನಡೆಯಲಿದ್ದು, ಅಮೆರಿಕಾದ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಚುನಾವಣಾ ದಿನ ಜನಸಂದಣಿ ಕಡಿಮೆ ಮಾಡಲು ಅಮೆರಿಕಾದಲ್ಲಿ ಚುನಾವಣೆಗೆ ಮೊದಲು ವೈಯಕ್ತಿಕವಾಗಿ ಅಥವಾ ಮೇಲ್​ ಮೂಲಕ ಮತದಾನ ಮಾಡಲು ಅವಕಾಶ ಒದಗಿಸಲಾಗುತ್ತದೆ. ಆ ಮೂಲಕ ಸಮೀಕ್ಷೆಗಳ ಪ್ರಕಾರ, ಅರಿಝೋನಾದಲ್ಲಿ 55 ಶೇ. ಮತದಾರರು ಮತ್ತು ನೆವಾಡಾದಲ್ಲಿ 42 ಶೇ. ಮತದಾರರು ಈಗಾಗಲೇ ಮತ ಚಲಾಯಿಸಿದ್ದಾರೆ. ಮತ್ತು ನೋಂದಾಯಿತ ಡೆಮೋಕ್ರಾಟ್‌ಗಳಿಗೆ ಹೋಲಿಸಿದರೆ ಹೆಚ್ಚು ನೋಂದಾಯಿತ ರಿಪಬ್ಲಿಕನ್‌ಗಳು ಮೊದಲೇ ಮತ ಚಲಾಯಿಸಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.

ಇದನ್ನೂ ಓದಿ: ಡೊನಾಲ್ಡ್​​ ಟ್ರಂಪ್​ ಅಧ್ಯಕ್ಷರಾಗಲು ಅನರ್ಹ: ಕಮಲಾ ಹ್ಯಾರಿಸ್ ಟೀಕಾಪ್ರಹಾರ

Last Updated : Oct 30, 2024, 11:22 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.