ETV Bharat / international

ರಷ್ಯಾ - ಉಕ್ರೇನ್ ಯುದ್ಧ ತಡೆಯುವ ಶಕ್ತಿ ಭಾರತದ ಪ್ರಧಾನಿ ಮೋದಿಗೆ ಇದೆ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ - ZELENSKYY REAFFIRMS TRUST IN MODI

Zelenskyy reaffirms trust in PM Modi: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವನ್ನು ತಡೆಯುವ ಶಕ್ತಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗಿದೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ.

ZELENSKYY REAFFIRMS TRUST IN MODI  MODI TO HELP END WAR  UKRAINE RUSSIA WAR
ಪ್ರಧಾನಿ ಮೋದಿ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ (ANI)
author img

By ETV Bharat Karnataka Team

Published : Oct 28, 2024, 12:34 PM IST

Zelenskyy reaffirms trust in PM Modi: ರಷ್ಯಾ - ಉಕ್ರೇನ್ ಯುದ್ಧವನ್ನು ತಡೆಯುವ ಶಕ್ತಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗಿದೆ ಎಂದು ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಭಾರತೀಯ ಮಾಧ್ಯಮ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮೋದಿ ಅವರು ವಿಶ್ವದಾದ್ಯಂತ ದೊಡ್ಡ ಖ್ಯಾತಿಯನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಭಾರತದಲ್ಲಿ ರಷ್ಯಾ - ಉಕ್ರೇನ್ ಮಾತುಕತೆ ನಡೆಸಬಹುದು ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಭಾರತಕ್ಕೆ ಅಗ್ಗದ ಇಂಧನ ಪೂರೈಕೆಯನ್ನು ರಷ್ಯಾ ಖರೀದಿಸುವುದನ್ನು ನಿಲ್ಲಿಸುವ ಮೂಲಕ ಮೋದಿ ರಷ್ಯಾದ ಆಕ್ರಮಣವನ್ನು ತಡೆಯಬಹುದು ಎಂದು ಅವರು ಹೇಳಿದರು.

ನಮ್ಮ ದೇಶದಲ್ಲಿ ಯುದ್ಧ ನಡೆಯುತ್ತಿರುವುದರಿಂದ ಎದುರಾಳಿಯೊಂದಿಗೆ ಮಾತುಕತೆ ನಡೆಸುವುದು ಬಹಳ ಮುಖ್ಯ. ಇದಕ್ಕಾಗಿ ನವೆಂಬರ್​ನಲ್ಲಿ ನಡೆಯಲಿರುವ ಎರಡನೇ ವಿಶ್ವಶಾಂತಿ ಸಮ್ಮೇಳನಕ್ಕೂ ಮುನ್ನವೇ ದೇಶ ಸಿದ್ಧಗೊಳ್ಳಬೇಕಿದೆ. ಉಕ್ರೇನ್ ತನ್ನ ಮೊದಲ ಶಾಂತಿ ಶೃಂಗಸಭೆಯನ್ನು ಸ್ವಿಟ್ಜರ್ಲೆಂಡ್​ನಲ್ಲಿ ನಡೆಸಿತು. ರಷ್ಯಾ ಹೊರತುಪಡಿಸಿ 92 ದೇಶಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು.

ಡೊನಾಲ್ಡ್​ ಟ್ರಂಪ್​ ಅಧಿಕಾರಕ್ಕೆ ಬಂದರೆ ಎಂಬ ಆತಂಕ: ನವೆಂಬರ್ 5 ರಂದು ಅಮೆರಿಕದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದರೆ ರಷ್ಯಾ ಹೆಚ್ಚಿನ ಮಿಲಿಟರಿ ನೆರವು ಪಡೆಯಲಿದೆ ಎಂದು ಝೆಲೆನ್ಸ್ಕಿ ಆತಂಕ ವ್ಯಕ್ತಪಡಿಸಿದರು. ಈಗಾಗಲೇ ಉಕ್ರೇನ್ ಮೇಲೆ ಪದೇ ಪದೆ ದಾಳಿ ನಡೆಸುತ್ತಿರುವ ರಷ್ಯಾ ಶಸ್ತ್ರಾಸ್ತ್ರ ಹಾಗೂ ಸೇನಾ ನೆರವು ಪಡೆದರೆ ಅವರ ಮೇಲೆ ತೀವ್ರ ದಾಳಿ ನಡೆಸುವ ಅಪಾಯವಿದೆ ಎಂದು ಹೇಳಿದ್ದಾರೆ. ಆದ್ದರಿಂದ, ವಿಶ್ವದ ರಾಷ್ಟ್ರಗಳು ತಕ್ಷಣವೇ ಸಿದ್ಧಪಡಿಸಿರುವ ವಿಕ್ಟರ್​ ಪ್ಲಾನ್​ ಕುರಿತು ಮಾತುಕತೆ ನಡೆಸುವಂತೆ ಕೋರಲಾಗಿದೆ. ಅವರು ತಕ್ಷಣವೇ ನ್ಯಾಟೋ ಸದಸ್ಯತ್ವ ಕೇಳುತ್ತಿಲ್ಲ, ಅವರು ಕೇವಲ ಆಹ್ವಾನವನ್ನು ಕೇಳುತ್ತಿದ್ದಾರೆ ಎಂದು ಹೇಳಿದರು.

ಐದು ವ್ಯೂಹಾತ್ಮಕ ವಾಯು ರಕ್ಷಣಾ ವ್ಯವಸ್ಥೆ ಪೂರೈಸುವ ಭರವಸೆ ನೀಡಿದ ಬೈಡನ್​: ರಷ್ಯಾವು ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ಮಾಡುತ್ತಿರುವುದರಿಂದ ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಕಳೆದ ಕೆಲವು ತಿಂಗಳುಗಳಿಂದ ಪದೇ ಪದೇ ಶಸ್ತ್ರಾಸ್ತ್ರಗಳಿಗಾಗಿ ಪಶ್ಚಿಮವನ್ನು ಕೇಳಿದ್ದಾರೆ. ರಷ್ಯಾದ ಉಗ್ರ ದಾಳಿಯಿಂದ ತತ್ತರಿಸಿರುವ ಉಕ್ರೇನ್‌ಗೆ ಐದು ವ್ಯೂಹಾತ್ಮಕ ವಾಯು ರಕ್ಷಣಾ ವ್ಯವಸ್ಥೆಗಳನ್ನು ಪೂರೈಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್​​ ಇತ್ತೀಚೆಗೆ ಘೋಷಿಸಿದ್ದಾರೆ. ಈ ಯುದ್ಧದ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ರಷ್ಯಾ ನಡುವಿನ ಸಂಬಂಧಗಳು ತೀವ್ರವಾಗಿ ಹದಗೆಟ್ಟಿರುವಂತಿದೆ. ಉಕ್ರೇನ್‌ಗೆ ಮಿಲಿಟರಿ ಮತ್ತು ಆರ್ಥಿಕ ನೆರವು ನೀಡುತ್ತಿರುವ ಅಮೆರಿಕವನ್ನು ಟ್ರಂಪ್ ದೂಷಿಸಿದ್ದಾರೆ.

ಅಮೆರಿಕ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಟ್ರಂಪ್ ಗೆದ್ದರೆ, ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಬದಲಿಗೆ ರಷ್ಯಾವನ್ನು ಬೆಂಬಲಿಸುತ್ತಾರೆ ಎಂದು ಉಕ್ರೇನ್ ಭಾವಿಸಿದೆ.

ಓದಿ: ಜಪಾನ್ ಚುನಾವಣೆ: ಬಹುಮತ ಪಡೆಯುವಲ್ಲಿ ಪ್ರಧಾನಿ ಶಿಗೆರು ಇಶಿಬಾ ಪಕ್ಷ ವಿಫಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.