ಡಮಾಸ್ಕಸ್: ಸಿರಿಯಾದ ರಾಜಧಾನಿ ಡಮಾಸ್ಕಸ್ನಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಸಿರಿಯಾ ರಕ್ಷಣಾ ಸಚಿವಾಲಯ ತಿಳಿಸಿದೆ.
ಮಜ್ಜೆಯ ಪೂರ್ವ ಭಾಗದಲ್ಲಿನ ಗೋಲ್ಡನ್ ಮಜ್ಜೆಯ ಬಳಿಕ ವಾಹನ ಗುರಿಯಾಗಿಸಿ ಈ ದಾಳಿ ನಡೆಸಲಾಗಿದ್ದು, ಇದರಿಂದ ಸುತ್ತಮುತ್ತಲಿನ ಆಸ್ತಿಗಳಿಗೂ ಹಾನಿಯಾಗಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ಮುನ್ನಾದಿನ ಸಿರಿಯಾ ಮೇಲೆ ನಡೆಸಿದ ಈ ಆಕ್ರಮಣಕಾರಿ ದಾಳಿಯನ್ನು ಇಸ್ರೇಲ್ ನಡೆಸಿದೆ. ಆದರೆ, ಇಸ್ರೇಲ್ ಮಾತ್ರ ಈ ದಾಳಿಯ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇತ್ತೀಚಿಗೆ ಸಿರಿಯಾ ಮೇಲೆ ಇಸ್ರೇಲ್ ಮಿಲಿಟರಿ ದಾಳಿ ಹೆಚ್ಚಿದೆ. ಈ ದಾಳಿ ಕುರಿತು ಮಾತನಾಡಿದ ಇಸ್ರೇಲ್, ಇರಾನ್ ಬೆಂಬಲಿತ ಉಗ್ರರ ಪಡೆಗಳನ್ನು ಗುರಿಯಾಗಿಸಿಕೊಂಡು ಇಂತಹ ದಾಳಿಗಳನ್ನು ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಶೀಘ್ರದಲ್ಲೇ ದಾಳಿಗೆ ಪ್ರತ್ಯುತ್ತರ: ಇರಾನ್ ವಿರುದ್ಧ ಯೋಜಿತ ಪ್ರತಿದಾಳಿಯನ್ನು "ಅತಿ ಶೀಘ್ರದಲ್ಲಿ" ನಡೆಸಲಾಗುವುದು ಎಂದು ಇಸ್ರೇಲಿ ಕ್ಯಾಬಿನೆಟ್ ಮಂತ್ರಿಗಳಿಗೆ ತಿಳಿಸಲಾಗಿದೆ ಎಂದು ಅಲ್ಲಿನ ರಾಜ್ಯ ಮಾಧ್ಯಮ ವರದಿ ಮಾಡಿದೆ.
ಅಕ್ಟೋಬರ್ 1 ರಂದು ಇರಾನ್ ಇಸ್ರೇಲ್ ಮೇಲೆ ಸುಮಾರು 180 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿತ್ತು. ಅಷ್ಟೇ ಅಲ್ಲ ಇಸ್ರೇಲ್ ಈ ದಾಳಿಯನ್ನು ಸಮರ್ಥವಾಗಿ ತಡೆದಿತ್ತು. ಟೆಹ್ರಾನ್ನಲ್ಲಿ ಹಮಾಸ್ ರಾಜಕೀಯ ನಾಯಕ ಇಸ್ಮಾಯಿಲ್ ಹನಿಯೆಹ್ ಮತ್ತು ಬೈರುತ್ನಲ್ಲಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರ ಹತ್ಯೆಗಳಿಗೆ ಪ್ರತಿಕ್ರಿಯೆಯಾಗಿ ತನ್ನ ದೇಶವು ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂದು ಇರಾನ್ ಕೂಡಾ ಪ್ರತಿಜ್ಞೆ ಮಾಡಿದೆ
ಭಾನುವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಇರಾನ್ ದಾಳಿಗೆ ಪ್ರತೀಕಾರವಾಗಿ "ಶೀಘ್ರದಲ್ಲೇ"ದಾಳಿ ನಡೆಸಬೇಕಾಗುತ್ತದೆ ಎಂದು ಮಂತ್ರಿಗಳಿಗೆ ತಿಳಿಸಲಾಯಿತು ಎಂದು ಇಸ್ರೇಲ್ ಸರ್ಕಾರಿ ಸ್ವಾಮ್ಯದ ಕಾನ್ ಟಿವಿಯನ್ನು ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ
ಇಸ್ರೇಲ್ಗೆ ಅಮೆರಿಕದ ಥಾಡ್ ರಕ್ಷಣೆ: ಈ ನಡುವೆ ಸಂಭಾವ್ಯ ದಾಳಿಗಳನ್ನು ತಡೆಯುವ ಉದ್ದೇಶದಿಂದ ಅಮೆರಿಕ ಈಗಾಗಲೇ ಸಹಾಯಕ್ಕೆ ಧಾವಿಸಿದೆ. US ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ -THAAD ರಕ್ಷಣೆಯನ್ನು ಇಸ್ರೇಲ್ನಲ್ಲಿ ನೀಡುವುದಾಗಿ ಘೋಷಿಸಿದ ಕೆಲವೇ ಗಂಟೆಗಳ ನಂತರ ಈ ವರದಿ ಬಂದಿದೆ, ಜೊತೆಗೆ ಸುಮಾರು 100 US ಸೈನಿಕರು ಅದನ್ನು ನಿರ್ವಹಿಸಲು ರೆಡಿಯಾಗಿದ್ದಾರೆ.
ಇರಾನ್ನಿಂದಲೂ ಪ್ರತಿದಾಳಿಯ ಎಚ್ಚರಿಕೆ: ಈ ನಡುವೆ ಇರಾನ್ ಕೂಡಾ ಎಚ್ಚರಿಕೆ ನೀಡಿದೆ. ಯಾವುದೇ ಇಸ್ರೇಲ್ ಕ್ಷಿಪಣಿ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಅದು ಘೋಷಿಸಿದೆ.
ಇದನ್ನೂ ಓದಿ: ಪ್ಯಾಲೆಸ್ಟೈನ್ ಜನರಿಗೆ 30 ಟನ್ ಔಷಧ, ಆಹಾರ ಸಾಮಗ್ರಿ ರವಾನಿಸಿದ ಭಾರತ