ETV Bharat / international

ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಚುನಾವಣೆ; ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿ ವಿಕ್ರಮಸಿಂಘೆ - Sri Lanka Presidential election

2022ರಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲಿದ್ದ ಶ್ರೀಲಂಕಾದಲ್ಲಿ ಇದೀಗ ಅಧ್ಯಕ್ಷೀಯ ಚುನಾವಣೆ ಹೆಚ್ಚಿನ ಮಹತ್ವ ಪಡೆದಿದೆ.

sri-lankans-vote-in-crucial-presidential-election-wickremesinghe-seeks-another-term
ಮತದಾನದಲ್ಲಿ ನಿರತರಾಗಿರುವ ಶ್ರೀಲಂಕಾ ಜನತೆ (ANI)
author img

By PTI

Published : Sep 21, 2024, 2:28 PM IST

ಕೊಲೊಂಬೊ: 2022ರಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲಿದ್ದ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಇಂದು ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಈ ನಿರ್ಣಾಯಕ ಚುನಾವಣೆಗಾಗಿ ಲಕ್ಷಾಂತರ ಶ್ರೀಲಂಕಾದ ಜನರು ಬಿರುಸಿನ ಮತದಾನದಲ್ಲಿ ಭಾಗಿಯಾಗಿದ್ದಾರೆ.

ಅಧ್ಯಕ್ಷ ರನಿಲ್​ ವಿಕ್ರಮಸಿಂಘೆ ಇದು ಪರೀಕ್ಷೆಯಾಗಿದ್ದು, ಜನರು ಮತ್ತೊಮ್ಮೆ ಅವರ ಮೇಲೆ ಭರವಸೆಯನ್ನು ಇಟ್ಟು ಆಯ್ಕೆ ಮಾಡಲಿದ್ದಾರೆ ಎಂಬ ವಿಶ್ವಾಸವನ್ನು ಹೊಂದಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ 17 ಮಿಲಿಯನ್​ ಅರ್ಹ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ, 13,400 ಮತಕ್ಷೇತ್ರ ನಿರ್ಮಾಣ ಮಾಡಲಾಗಿದ್ದು, 2,00,00 ಅಧಿಕಾರಿಗಳು ಚುನಾವಣೆಗೆ ನೇಮಿಸಲಾಗಿದೆ. ಇದರಲ್ಲಿ ಮತದಾನ ಸರಾಗವಾಗಿ ನಡೆಸುವ ಉದ್ದೇಶದಿಂದ 63,000 ಪೊಲೀಸ್​ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದು ಬೆಳಗ್ಗೆ 7ರಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸಂಜೆ 4ಕ್ಕೆ ಮುಕ್ತಾಯವಾಗಲಿದೆ. ಫಲಿತಾಂಶ ಭಾನುವಾರ(ಸೆ.22) ಹೊರಬೀಳುವ ನಿರೀಕ್ಷೆ ಇದೆ.

ನಿರ್ಣಾಯಕ ಚುನಾವಣೆ: ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದ ದೇಶವನ್ನು ಚೇತರಿಕೆ ಹಾದಿಗೆ ಯಶಸ್ವಿಯಾಗಿ ತಂದಿರುವ 75 ವರ್ಷದ ವಿಕ್ರಮೆಸಿಂಘೆ ಸ್ವತಂತ್ರ್ಯ ಅಭ್ಯರ್ಥಿಯಾಗಿ ಐದು ವರ್ಷ ಅಧಿಕಾರ ನಡೆಸಲು ಮರು ಆಯ್ಕೆಯನ್ನು ಬಯಸ್ಸಿದ್ದಾರೆ. ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ದೇಶವನ್ನು ಶೀಘ್ರವಾಗಿ ಚೇತರಿಕೆ ಕಾಣುವಂತೆ ಮಾಡಿದ ಹಿನ್ನೆಲೆ ಇವರ ಕಾರ್ಯಕ್ಕೆ ತಜ್ಞರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು.

2022ರಲ್ಲಿ ಶ್ರೀಲಂಕಾ ತೀವ್ರ ಆರ್ಥಿಕತೆ ಬಿಕ್ಕಟ್ಟಿಗೆ ಸಿಲುಕಿತ್ತು. ಇದರಿಂದಾಗಿ ದೇಶದ ಪ್ರಖ್ಯಾತ ಅಧ್ಯಕ್ಷರಾಗಿದ್ದ ಗೊಟಬಯ ರಾಜಪಕ್ಸೆ ದೇಶ ತೊರೆದು ಪಲಾಯನ ಮಾಡಿದರು. ಈ ಬೆಳವಣಿಗೆ ನಡೆದ ವಾರದ ಬಳಿಕ ವಿಕ್ರಮ್​ಸಿಂಘೆ ಅವರನ್ನು ಅಧ್ಯಕ್ಷರಾಗಿ ಸಂಸತ್​ ನೇಮಿಸಿತು.

ದೇಶವನ್ನು ನಾಶ ಮಾಡಿದ ಸಾಂಪ್ರದಾಯಿಕ ರಾಜಕೀಯ ಮತ್ತು ದೇಶವನ್ನು ಹಾಳು ಮಾಡಿದ ಆರ್ಥಿಕತೆಯಿಂದ ದೂರಾಗುವ ಶ್ರೀಲಂಕಾಗೆ ಇದೊಂದು ಮಹತ್ವದ ತಿರುವಿನ ಚುನಾವಣೆ ಇದಾಗಿದೆ. ಹೊಸ ಸಾಮಾಜಿಕ ವ್ಯವಸ್ಥೆ ಮತ್ತು ರಾಜಕೀಯ ವ್ಯವಸ್ಥೆಗೆ ಇದು ಮಹತ್ವದ್ದಾಗಿದೆ ಎಂದು ವಿಕ್ರಮೆಸಿಂಘೆ ಮತಚಲಾಯಿಸಿದ ಬಳಿಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಕ್ರಮಸಿಂಘೆ ಅಧ್ಯಕ್ಷರಾದ ಬಳಿಕ ಮತ್ತೆ ದೇಶದಲ್ಲಿ ರೂಪಾಯಿ ಸ್ಥಿರತೆಗೆ ಬಂದಿತು. ಹಣದುಬ್ಬರ ನಿಧಾನವಾಗಿ ನಿಯಂತ್ರಣಕ್ಕೆ ಬಂದಿತು. ಆರ್ಥಿಕ ಬಿಕ್ಕಟ್ಟಿನ ವೇಳೆ ಶೇ 70ರಷ್ಟಿದ್ದ ಹಣದುಬ್ಬರ ಕ್ರಮೇಣವಾಗಿ ಕುಗ್ಗಿ, ಆರ್ಥಿಕ ಬೆಳವಣಿಗೆಯತ್ತ ಮುನ್ನಡೆಯಿತು. ಸರ್ಕಾದ ಕೂಡ ಹೊಸ ತೆರಿಗೆ ಮತ್ತು ಮೌಲ್ಯ ವರ್ಧಿತ ತೆರಿಗೆ ಆದಾಯ ಹೆಚ್ಚಳದಿಂದ ಚೇತರಿಕೆ ಕಂಡಿತು.

ತ್ರಿಕೋನ ಸ್ಪರ್ಧೆ: ಅಧ್ಯಕ್ಷೀಯ ಚುನಾವಣೆಯಲ್ಲಿ ವಿಕ್ರಮಸಿಂಘೆ ತ್ರಿಕೋನಾ ಸ್ಪರ್ಧೆ ಎದುರಿಸುತ್ತಿದ್ದು, ಇವರ ಎದುರಿಗೆ ನ್ಯಾಷನಲ್​ ಪೀಪಲ್ಸ್​ ಪವರ್​ (ಎನ್​ಪಿಪಿ)ಯ 56 ವರ್ಷದ ಅನುರಾ ಕುಮಾರಾ ದಿಸ್ಸನಾಯಕೆ ಹಾಗೂ ಪ್ರಮುಖ ವಿಪಕ್ಷ ನಾಯಕರಾಗಿರುವ ಸಮಗೈ ಜನ ಬಲವೆಗಯ (ಎಸ್​ಜೆಪಿ) ಪಕ್ಷದ 57 ವರ್ಷದ ಸಜಿತ್​ ಪ್ರೇಮ್​ದಾಸ್​ ಕಣದಲ್ಲಿದ್ದಾರೆ.

ವಿಕ್ರಮಸಿಂಘೆ ಅವರ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎರ್ಫ್) ನಿಧಿಯ ಕಠಿಣ ಸುಧಾರಣೆಗಳು ಹೆಚ್ಚಿನ ಜನಪ್ರಿಯತೆ ಪಡೆಯದಿದ್ದರೂ, ಸತತ ತ್ರೈಮಾಸಿಕಗಳ ನಕಾರಾತ್ಮಕ ಬೆಳವಣಿಗೆಯಿಂದ ಚೇತರಿಸಿಕೊಳ್ಳಲು ಶ್ರೀಲಂಕಾಕ್ಕೆ ಸಹಾಯ ಮಾಡಿದೆ.

ಶ್ರೀಲಂಕಾದ ಬಿಕ್ಕಟ್ಟು ದಿಸ್ಸನಾಯಕೆಗೂ ಅವಕಾಶವನ್ನು ನೀಡಿದ್ದು, ದ್ವೀಪ ರಾಷ್ಟ್ರದಲ್ಲಿ ಭ್ರಷ್ಟಾಚಾರದ ರಾಜಕೀಯ ಸಂಸ್ಕೃತಿ ಬದಲಾವಣೆ ಮಾಡುವ ಇವರ ಪ್ರತಿಜ್ಞೆ ಬೆಂಬಲಿಗರನ್ನು ಹೆಚ್ಚಿಸಿದೆ. ಈ ಬಾರಿ ಶ್ರೀಲಂಕಾ ಚುನಾವಣೆಯಲ್ಲಿ ಮೂವರು ಸ್ಪರ್ಧಿಗಳಿಗೆ ಅಲ್ಪಸಂಖ್ಯಾತ ತಮಿಳು ವಿಷಯ ಮಾತ್ರವೇ ಅಜೆಂಡಾವಾಗಿ ಉಳಿದಿಲ್ಲ. ಬದಲಾಗಿ ದೇಶದ ಉತ್ತಮ ಆರ್ಥಿಕ ಮತ್ತು ಐಎಂಎಫ್​ ಸುಧಾರಣೆ ಕೂಡ ಹೊಂದಿದೆ. ಐಎಂಎಫ್​ ಕಾರ್ಯಕ್ರಮಗಳು ಸಾರ್ಜನಿಕರಿಗೆ ಆರ್ಥಿಕ ಸುಧಾರಣೆ ನೀಡಲಿವೆ ಎಂದು ದಿಸ್ಸಾನಾಯಕೆ ಮತ್ತು ಪ್ರೇಮ್​ದಾಸ್​ ಚಿಂತನೆ ನಡೆಸಿದ್ದಾರೆ.

ಏಕ ವ್ಯಕ್ತಿಗೆ ಬಹುಮತ?: ಈ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿ ಶೇ 50ಕ್ಕಿಂತ ಹೆಚ್ಚಿನ ಮತ ಪಡೆಯದೇ ಹೋದಲ್ಲಿ ಎರಡನೇ ಹೆಚ್ಚಿನ ಅಧಿಕ ಮತಗಳಿಸಿದ ಅಭ್ಯರ್ಥಿ ಅವಕಾಶ ಪಡೆಯಲಿದ್ದಾರೆ. ಅಭ್ಯರ್ಥಿಗಳು ಒಬ್ಬರು ಸಂಪೂರ್ಣ ಬಹುಮತ ಗಳಿಸಿದ್ದಲ್ಲಿ ಅವರು ಅಧ್ಯಕ್ಷರಾಗುತ್ತಾರೆ. ಇದು ಸಾಧ್ಯವಾಗದೇ ಹೋದಲ್ಲಿ ಎರಡನೇ ಬಾರಿ ಮತ ಏಣಿಕೆ ನಡೆಯಲಿದ್ದು, ಎರಡು ಮತ್ತು ಮೂರನೇ ಆಯ್ಕೆಯ ಮತಗಳನ್ನು ಪರಿಗಣನೆ ಮಾಡಲಾಗುವುದು.

ಶ್ರೀಲಂಕಾ ಚುನಾವಣೆಯಲ್ಲಿ ಇದುವರೆಗೂ ಎರಡನೇ ಸುತ್ತಿನ ಮತ ಏಣಿಕೆ ನಡೆದಿಲ್ಲ. ಏಕ ವ್ಯಕ್ತಿಯೇ ಮೊದಲ ಆಯ್ಕೆಯ ಮತದಲ್ಲಿ ವಿಜೇತರಾಗಿದ್ದಾರೆ. ಆದರೆ, ಈ ಬಾರಿ ಇದು ಸಾಧ್ಯವಾಗದೇ ಹೋಗಬಹುದು. ದೇಶದ ಮತದಾರರು ಎರಡು ಮತ್ತು ಮೂರನೇ ಪ್ರಾಶಸ್ತ್ಯ ಆಯ್ಕೆ ಕುರಿತು ಹೆಚ್ಚಿನ ಅರಿವು ಹೊಂದಿಲ್ಲ ಎಂಬ ಭೀತಿ ವಿಶ್ಲೇಷಕರದ್ದಾಗಿದೆ.

ಇದನ್ನೂ ಓದಿ: ಶ್ರೀಲಂಕಾ ಸ್ಥಳೀಯ ಚುನಾವಣೆ ಮುಂದೂಡಿದ್ದ ಅಧ್ಯಕ್ಷ ವಿಕ್ರಮಸಿಂಘೆಗೆ ಕೋರ್ಟ್​ ತಪರಾಕಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.