ಮ್ಯಾಗ್ಡೆಬರ್ಗ್, ಜರ್ಮನಿ: ಪೂರ್ವ ಜರ್ಮನಿಯ ಮ್ಯಾಗ್ಡೆಬರ್ಗ್ ನಗರದಲ್ಲಿ ಶುಕ್ರವಾರ ಜನನಿಬಿಡ ಕ್ರಿಸ್‌ಮಸ್ ಮಾರುಕಟ್ಟೆಗೆ ಕಾರೊಂದು ನುಗ್ಗಿ ಅನಾಹುತ ಸೃಷ್ಟಿ ಮಾಡಿದೆ. ಉದ್ದೇಶಪೂರ್ವಕವಾಗಿ ನಡೆದ ಈ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, ಕನಿಷ್ಠ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ರಿಸ್ಮಸ್ ರಜೆ ಹಾಗೂ ಸಂಬಂಧ ಸಂಭ್ರಮಕ್ಕಾಗಿ ಮ್ಯಾಗ್ಡೆಬರ್ಗ್ ನಗರದ ಮಾರುಕಟ್ಟೆ ತುಂಬಿ ತುಳುಕುತ್ತಿತ್ತು. ಇಂತಹ ಜನನಿಬಿಡ ಮಾರುಕಟ್ಟೆಗೆ ಕಾರು ನುಗ್ಗಿ ಅನಾಹುತಕ್ಕೆ ಕಾರಣವಾಗಿದೆ.
ನಿನ್ನೆ ನಡೆದ ಹಿಂಸಾಚಾರವು ನಗರವನ್ನು ಬೆಚ್ಚಿ ಬೀಳಿಸಿದೆ. ಶತಮಾನಗಳ- ಹಳೆಯ ಜರ್ಮನ್ ಸಂಪ್ರದಾಯದ ಭಾಗವಾಗಿರುವ ಹಬ್ಬದ ಕಾರ್ಯಕ್ರಮವನ್ನು ಈ ದಾಳಿ ಹಾಳುಗೆಡವಿದೆ. ಸ್ಯಾಕ್ಸೋನಿ-ಅನ್ಹಾಲ್ಟ್ ಸಚಿವರಾದ ತಮಾರಾ ಝಿಸ್‌ಚಾಂಗ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಂಕಿತ ವ್ಯಕ್ತಿ 50 ವರ್ಷ ವಯಸ್ಸಿನ ಸೌದಿ ವೈದ್ಯರಾಗಿದ್ದು, ಈತ 2006 ರಲ್ಲಿ ಜರ್ಮನಿಗೆ ಬಂದಿದ್ದಾರೆ. ಇವರು ಬರ್ನ್‌ಬರ್ಗ್‌ನಲ್ಲಿ ವೈದ್ಯಕೀಯ ಸೇವೆ ಮಾಡುತ್ತಿದ್ದಾರೆ. ಈತ ಮಾತ್ರ ದಾಳಿ ಮಾಡಿದ್ದು, ನಗರಕ್ಕೆ ಹೆಚ್ಚಿನ ಅಪಾಯವಿಲ್ಲಎಂದು ಅವರು ತಿಳಿಸಿದ್ದಾರೆ.
ಸ್ಯಾಕ್ಸೋನಿ-ಅನ್ಹಾಲ್ಟ್‌ನ ರಾಜಧಾನಿಯಾಗಿ ಕಾರ್ಯನಿರ್ವಹಿಸುವ, 240,000 ಜನರಿರುವ ಮ್ಯಾಗ್ಡೆಬರ್ಗ್‌ನಲ್ಲಿ ಹಿಂಸಾಚಾರ ಸಂಭವಿಸಿದೆ. ಕ್ರಿಸ್ಮಸ್ ಮಾರುಕಟ್ಟೆಗಳು ಜರ್ಮನ್ ಸಂಸ್ಕೃತಿಯ ಭಾಗವಾಗಿದೆ. ಮಧ್ಯಯುಗದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಕ್ರಿಸ್ಮಸ್ ಹಿನ್ನೆಲೆಯಲ್ಲಿ ಕಳೆದ ತಿಂಗಳ ಅಂತ್ಯದಲ್ಲಿ 100 ಕ್ಕೂ ಹೆಚ್ಚು ಮಾರುಕಟ್ಟೆಗಳು ತೆರೆಯಲ್ಪಟ್ಟಿದ್ದು ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಮಾರಾಟದಲ್ಲಿ ತೊಡಗಿವೆ.
ಜರ್ಮನಿಯ ಆಂತರಿಕ ಸಚಿವ ನ್ಯಾನ್ಸಿ ಫೇಸರ್, ದಾಳಿಯ ಬಗ್ಗೆ ಮಾತನಾಡಿ, ದೇಶದ ಕ್ರಿಸ್‌ಮಸ್ ಮಾರುಕಟ್ಟೆಗಳಿಗೆ ಯಾವುದೇ ಅಪಾಯ ಇಲ್ಲ. ಆದರೂ ಜನರು ಜಾಗರೂಕರಾಗಿರಬೇಕು ಎಂದು ಕರೆ ನೀಡಿದ್ದಾರೆ. ಇದೊಂದು ಕರಾಳ ದಿನವಾಗಿದೆ. ಇದರಿಂದ ನಾವು ಭಯಭೀತರಾಗಿದ್ದೇವೆ ಎಂದರು. ಘಟನೆಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ ಅವರು, ಸ್ಯಾಕ್ಸೋನಿ-ಅನ್ಹಾಲ್ಟ್‌ನಲ್ಲಿ ಧ್ವಜಗಳನ್ನು ಅರ್ಧಕ್ಕೆ ಇಳಿಸಲಾಗುವದು. ಫೆಡರಲ್ ಸರ್ಕಾರವು ಮೃತರ ಸ್ಮರಣಾರ್ಥ ಶೋಕಾಚರಣೆಗೆ ನಿರ್ಧರಿಸಿದೆ ಎಂದು ಅವರು ಹೇಳಿದರು.
ಇದನ್ನು ಓದಿ:ಕೆನಡಿಯನ್ನರು ಕೆನಡಾ ಅಮೆರಿಕದ 51 ನೇ ರಾಜ್ಯವಾಗಬೇಕೆಂದು ಬಯಸುತ್ತಾರೆ: ಡೊನಾಲ್ಡ್ ಟ್ರಂಪ್