ETV Bharat / international

ಸಾಗರದ ಮೈಲಿಗಳಷ್ಟು ಆಳದಲ್ಲಿ ಬೇಟೆಯಾಡುವ 'ಘೋಸ್ಟ್ ಶಾರ್ಕ್' ಪತ್ತೆ ಮಾಡಿದ ವಿಜ್ಞಾನಿಗಳು - species of ghost shark

author img

By ETV Bharat Karnataka Team

Published : 3 hours ago

Updated : 3 hours ago

ಆಸ್ಟ್ರೇಲಿಯಾದ ವಿಜ್ಞಾನಿಗಳು ಘೋಸ್ಟ್ ಶಾರ್ಕ್' ಎಂಬ ಹೊಸ ಜಾತಿಯ ಮೀನುಗಳನ್ನು ಕಂಡು ಹಿಡಿದಿದ್ದಾರೆ.

New Zealand Scientists Discover
ಘೋಸ್ಟ್ ಶಾರ್ಕ್ (AFP/ National Institute Of Water and Atmospheric Research Ltd)

ವೆಲ್ಲಿಂಗ್ಟನ್ (ನ್ಯೂಜಿಲೆಂಡ್): ಪೆಸಿಫಿಕ್ ಮಹಾಸಾಗರದಲ್ಲಿ ಒಂದು ಮೈಲಿಗೂ ಹೆಚ್ಚು ಆಳಕ್ಕೆ ಹೋಗಿ ಬೇಟೆಯಾಡುವ 'ಘೋಸ್ಟ್ ಶಾರ್ಕ್' ಎಂಬ ಹೊಸ ಜಾತಿಯ ಮೀನುಗಳನ್ನು ಕಂಡುಹಿಡಿದಿರುವುದಾಗಿ ನ್ಯೂಜಿಲೆಂಡ್ ವಿಜ್ಞಾನಿಗಳು ಮಂಗಳವಾರ ತಿಳಿಸಿದ್ದಾರೆ. ವೆಲ್ಲಿಂಗ್ಟನ್ ಮೂಲದ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ವಾಟರ್ ಅಂಡ್ ಅಟ್ಮಾಸ್ಫಿಯರ್ ರಿಸರ್ಚ್ (ಎನ್ಐಡಬ್ಲ್ಯೂಎ) ವಿಜ್ಞಾನಿಗಳ ಪ್ರಕಾರ, ಆಸ್ಟ್ರೇಲಿಯಾದ ಕಿರಿದಾದ ಮೂಗಿನ ಈ ಸ್ಪೂಕ್ ಫಿಶ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ನ ಆಳವಾದ ನೀರಿನಲ್ಲಿ ವಾಸಿಸುತ್ತಿರುವುದು ಕಂಡು ಬಂದಿದೆ.

ನ್ಯೂಜಿಲೆಂಡ್​ನ ದಕ್ಷಿಣ ದ್ವೀಪದ ಬಳಿ ಪೂರ್ವಕ್ಕೆ 1,000 ಕಿಲೋಮೀಟರ್ (621 ಮೈಲಿ) ವಿಸ್ತರಿಸಿರುವ ಪೆಸಿಫಿಕ್​ನ ಪ್ರದೇಶವಾದ ಚಾಥಮ್ ರೈಸ್​ನಲ್ಲಿ ಸಂಶೋಧನೆಯ ಸಮಯದಲ್ಲಿ ಈ ಮಾದರಿಗಳನ್ನು ಕಂಡುಹಿಡಿಯಲಾಗಿದೆ. ಘೋಸ್ಟ್ ಶಾರ್ಕ್​ಗಳು ಅಥವಾ ಚಿಮೆರಾಗಳು, ಶಾರ್ಕ್ ಗಳು ಮತ್ತು ರೇ ಗಳಿಗೆ ಸಂಬಂಧಿಸಿವೆ. ಆದರೆ, ಇವು ಮೀನುಗಳ ಗುಂಪಿನ ಭಾಗವಾಗಿದ್ದು, ಇವುಗಳ ಅಸ್ಥಿಪಂಜರಗಳು ಸಂಪೂರ್ಣವಾಗಿ ಕಾರ್ಟಿಲೆಜ್ ನಿಂದ ಮಾಡಲ್ಪಟ್ಟಿವೆ. ಸ್ಪೂಕ್ ಫಿಶ್ ಎಂದೂ ಕರೆಯಲ್ಪಡುವ ಘೋಸ್ಟ್ ಶಾರ್ಕ್​​ಗಳು ಕಪ್ಪು ಕಣ್ಣುಗಳು ಮತ್ತು ನಯವಾದ, ತಿಳಿ ಕಂದು, ಸ್ಕೇಲ್ - ಮುಕ್ತ ಚರ್ಮ ಹೊಂದಿವೆ.

ಇವು ತಮ್ಮ ವಿಶಿಷ್ಟ ಕೊಕ್ಕಿನಂತಹ ಬಾಯಿಯನ್ನು ಬಳಸಿಕೊಂಡು 2,600 ಮೀಟರ್ (8,530 ಅಡಿ) ಆಳದಲ್ಲಿ ಕ್ರಸ್ಟೇಷಿಯನ್​ಗಳನ್ನು ತಿನ್ನುತ್ತವೆ. ಈ ರೀತಿಯ ಘೋಸ್ಟ್ ಶಾರ್ಕ್​ಗಳು ಹೆಚ್ಚಾಗಿ ಸಾಗರ ತಳದಲ್ಲಿ ಮಾತ್ರ ವಾಸಿಸುತ್ತವೆ ಎಂದು ಸಂಶೋಧನಾ ವಿಜ್ಞಾನಿ ಬ್ರಿಟ್ ಫಿನುಸಿ ಹೇಳಿದರು. ಫಿನುಸಿ ತನ್ನ ಅಜ್ಜಿಯ ನೆನಪಿಗಾಗಿ ಹೊಸ ಜಾತಿಗೆ "ಹ್ಯಾರಿಯಟ್ಟಾ ಅವಿಯಾ" ಎಂಬ ವೈಜ್ಞಾನಿಕ ಹೆಸರನ್ನು ಇಟ್ಟಿದ್ದಾರೆ.

"ಅವುಗಳು ವಾಸಿಸುವ ಆವಾಸಸ್ಥಾನದ ಕಾರಣದಿಂದಾಗಿ ಅವುಗಳ ಬಗ್ಗೆ ಅಧ್ಯಯನ ಮತ್ತು ಮೇಲ್ವಿಚಾರಣೆ ಮಾಡುವುದು ಕಷ್ಟಕರವಾಗಿದೆ. ಅಂದರೆ ಅವುಗಳ ಜೀವಶಾಸ್ತ್ರ ಅಥವಾ ಅವುಗಳ ಸಂತತಿಗೆ ಎದುರಾಗಿರುವ ಅಪಾಯದ ಸ್ಥಿತಿಯ ಬಗ್ಗೆ ನಮಗೆ ಸಾಕಷ್ಟು ತಿಳಿದಿಲ್ಲ, ಆದರೆ, ಇದು ಈ ರೀತಿಯ ಆವಿಷ್ಕಾರಗಳನ್ನು ಇನ್ನಷ್ಟು ರೋಮಾಂಚನಗೊಳಿಸುತ್ತದೆ." ಎಂದು ಬ್ರಿಟ್ ಫಿನುಸಿ ತಿಳಿಸಿದರು.

ಸ್ಪೂಕ್ ಫಿಶ್ ತನ್ನ ಸೋದರಸಂಬಂಧಿಗಳಿಗಿಂತ ಆನುವಂಶಿಕವಾಗಿ ಮತ್ತು ರೂಪಶಾಸ್ತ್ರೀಯವಾಗಿ ಭಿನ್ನವಾಗಿದೆ ಎಂದು ವಿಜ್ಞಾನಿಗಳು ಕಂಡು ಹಿಡಿಯುವವರೆಗೂ ಇದು ಜಾಗತಿಕವಾಗಿ ಹರಡಿರುವ ಏಕೈಕ ಜಾತಿಯ ಭಾಗವೆಂದು ಈ ಹಿಂದೆ ಭಾವಿಸಲಾಗಿತ್ತು.

ಇದನ್ನೂ ಓದಿ : ನ್ಯೂಯಾರ್ಕ್‌ನಲ್ಲಿ ಉಕ್ರೇನ್​ ಅಧ್ಯಕ್ಷ ಝೆಲನ್ಸ್ಕಿ ಜೊತೆಗೆ ಪ್ರಧಾನಿ ಮೋದಿ ಮಾತುಕತೆ - Modi Meeting With Zelenskyy

Last Updated : 3 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.