ನವದೆಹಲಿ: ಸತತ ಲಾಭದತ್ತ ಮುನ್ನಗ್ಗುತ್ತಿರುವ ಭಾರತೀಯ ಷೇರುಪೇಟೆ ಹೊಸ ಗರಿಷ್ಠ ಎತ್ತರವನ್ನು ತಲುಪಿದೆ. ಇದೇ ಮೊದಲ ಬಾರಿಗೆ ಮುಂಬೈ ಷೇರು ಸೂಚ್ಯಂಕ 85 ಸಾವಿರ ಅಂಕಗಳ ಗಡಿ ದಾಟಿದೆ. ಒಂದು ಹಂತದಲ್ಲಿ ಸೆನ್ಸೆಕ್ಸ್ 85,052.42 ಅಂಕಕ್ಕೆ ತಲುಪಿದರೆ, ನಿಫ್ಟಿ 26 ಸಾವಿರದ ಸನಿಹಕ್ಕೆ ಬಂದಿತ್ತು. ಇದು ಷೇರುದಾರರ ಮೊಗದಲ್ಲಿ ಸಂತಸ ಮೂಡಿಸಿದೆ.
ಕಳೆದ ಮೂರು ದಿನಗಳಿಂದ ಭರ್ಜರಿ ಲಾಭದಲ್ಲಿ ನಡೆಯುತ್ತಿರುವ ಷೇರುಪೇಟೆ ಮಂಗಳವಾರ ಕೂಡ ಉತ್ತಮವಾಗಿ ಆರಂಭ ಕಂಡಿತು. ದಿನದ ಕೊನೆಯಲ್ಲಿ ಸೆನ್ಸೆಕ್ಸ್ 14.57 ಪಾಯಿಂಟ್ ಅಥವಾ ಶೇಕಡಾ 0.017 ರಷ್ಟು ಕುಸಿದು 84,914.04 ಪಾಯಿಂಟ್‌ಗಳಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿತು. ಇತ್ತ, ನಿಫ್ಟಿ 1.35 ಪಾಯಿಂಟ್ ಅಥವಾ 0.0052 ರಷ್ಟು ಏರಿಕೆಯಾಗಿ 25,940.40 ಪಾಯಿಂಟ್‌ಗಳಲ್ಲಿ ಕೊನೆಗೊಂಡಿತು.
ಜಾಗತಿಕ ಮಾರುಕಟ್ಟೆಯಲ್ಲಾದ ಬದಲಾವಣೆಗಳು ದೇಶೀಯ ಮಾರುಕಟ್ಟೆಯ ಮೇಲೆ ಭರ್ಜರಿ ಪರಿಣಾಮ ಬೀರಿವೆ. ಚೀನಾದ ಕೇಂದ್ರ ಬ್ಯಾಂಕ್ ಬಡ್ಡಿ ಕಡಿತ, ಆಸ್ತಿ ಮಾರುಕಟ್ಟೆ ಮತ್ತು ಆರ್ಥಿಕತೆಯನ್ನು ಹೆಚ್ಚಿಸಲು ಹಲವು ಕ್ರಮಗಳನ್ನು ಘೋಷಿಸಿದೆ. ಲೆಬನಾನ್ನಲ್ಲಿ ಇಸ್ರೇಲ್ ಬಾಂಬ್ ದಾಳಿ ನಡೆಸಿದ್ದರ ನಡುವೆಯೂ ಷೇರು ಮಾರುಕಟ್ಟೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.
ಯಾರಿಗೆ ನಷ್ಟ, ಲಾಭ?: ರಾಷ್ಟ್ರೀಯ ಸ್ಟಾಕ್ ಎಕ್ಸ್ಚೇಂಜ್ (NSE), ಬ್ಯಾಂಕ್, ಆಟೋ, ಹಣಕಾಸು ಸೇವೆಗಳು, ಮಾಧ್ಯಮ, ಲೋಹ, ಫಾರ್ಮಾ, ಹೆಲ್ತ್ಕೇರ್, ಕನ್ಸ್ಯೂಮರ್ ಡ್ಯೂರಬಲ್ಸ್, ತೈಲ ಮತ್ತು ಅನಿಲ ವಲಯದ ಕಂಪನಿಗಳು ಲಾಭ ಮಾಡಿಕೊಂಡವು. ಮತ್ತೊಂದೆಡೆ, ಹಣಕಾಸು ಸೇವೆಗಳು, ಎಫ್‌ಎಂಸಿಜಿ, ಐಟಿ, ಪಿಎಸ್‌ಯು ಬ್ಯಾಂಕ್‌ಗಳು, ಖಾಸಗಿ ಬ್ಯಾಂಕ್‌ಗಳು ಮತ್ತು ರಿಯಾಲ್ಟಿಯ ವಲಯದ ಷೇರುಗಳು ತುಸು ನಷ್ಟಕ್ಕೀಡಾದವು.
ಟಾಟಾ ಸ್ಟೀಲ್, ಜೆಎಸ್‌ಡಬ್ಲ್ಯೂ ಸ್ಟೀಲ್, ಹಿಂಡಾಲ್ಕೊ, ಪವರ್ ಗ್ರಿಡ್ ಮತ್ತು ನೆಸ್ಲೆ ಇಂಡಿಯಾ ಅತಿ ಹೆಚ್ಚು ಲಾಭ ಕಂಡ ಷೇರುಗಳಾಗಿದ್ದರೆ, ಇನ್ಫೋಸಿಸ್, ಬಜಾಜ್ ಫೈನಾನ್ಸ್, ವಿಪ್ರೋ, ಹಿಂದೂಸ್ತಾನ್ ಯೂನಿಲಿವರ್ ಮತ್ತು ಡಿವಿಸ್ ಲ್ಯಾಬ್ಸ್ ಷೇರುಗಳು ನಷ್ಟಕ್ಕೀಡಾದವು.
ಇದನ್ನೂ ಓದಿ: ಅನ್ಲಿಮಿಟೆಡ್ ಕರೆ, ಉಚಿತ ಡೇಟಾ, 52 ದಿನ ವ್ಯಾಲಿಡಿಟಿ! BSNL ಸೂಪರ್ ರೀಚಾರ್ಜ್ ಪ್ಲಾನ್ - BSNL Best Recharge Plan