ETV Bharat / health

ಕಾಸರಗೋಡಲ್ಲಿ ಇಲಿ ಜ್ವರ ಕೇಸ್​ಗಳ ಸಂಖ್ಯೆ ಹೆಚ್ಚಳ; ಈ ರೋಗ ಲಕ್ಷಣಗಳಿದ್ರೆ ಮುಂಜಾಗ್ರತೆಗೆ ಸಲಹೆ - Rate fever cases increased - RATE FEVER CASES INCREASED

symptoms of rat fever: ಕೇರಳದ ಕಾಸರಗೋಡಿನಲ್ಲಿ ಇಲಿ ಜ್ವರದ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿವೆ. ಇದರ ಹಿನ್ನೆಲೆ ಮುಂಜಾಗ್ರತೆಗೆ ವಹಿಸಲು ಆರೋಗ್ಯ ಇಲಾಖೆ ಸಲಹೆಗಳನ್ನು ನೀಡಿದೆ. ಇಲಿ ಜ್ವರ ಲಕ್ಷಣಗಳೇನು? ಈ ರೋಗವನ್ನು ತಡೆಗಟ್ಟುವುದು ಹೇಗೆ ಎಂಬುದನ್ನು ತಿಳಿಯೋಣ.

symptoms of rat fever  rat fever  rate fever cases increased  How to prevent rat fever
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Sep 24, 2024, 7:34 PM IST

ಕಾಸರಗೋಡು (ಕೇರಳ): ಇಲಿ ಜ್ವರ ಹರಡುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸುವಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ. ಎ.ವಿ. ರಾಮದಾಸ್ ಮಾತನಾಡಿ, ಜಿಲ್ಲೆಯ ಕೆಲವೆಡೆ ಇಲಿ ಜ್ವರ ಕಾಣಿಸಿಕೊಂಡಿದೆ. ಸದ್ಯ 10 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಅಪಾಯವಿರುವ ಪ್ರದೇಶಗಳಲ್ಲಿ ಕೆಲಸ ಮಾಡಿದ ಯಾರಿಗಾದರೂ ಜ್ವರ ಕಾಣಿಸಿಕೊಂಡರೆ, ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಅವರು ಸಲಹೆ ನೀಡಿದ್ದಾರೆ.

ರೋಗಿಗಳು ತಮ್ಮ ಕೆಲಸದ ಸ್ಥಳದ ಬಗ್ಗೆ ವೈದ್ಯರಿಗೆ ತಿಳಿಸಲು ಮತ್ತು ಅನಾರೋಗ್ಯದ ಬಗ್ಗೆ ಹತ್ತಿರದ ಆರೋಗ್ಯ ಕಾರ್ಯಕರ್ತರಿಗೆ ತಿಳಿಸಲು ಆರೋಗ್ಯ ಅಧಿಕಾರಿಗಳು ಶಿಫಾರಸು ಮಾಡುತ್ತಾರೆ. ಸ್ವಯಂ-ಚಿಕಿತ್ಸೆಯನ್ನು ತಪ್ಪಿಸಬೇಕು ಎಂದು ಡಿಎಂಒ ಹೇಳಿದರು.

ಲೆಪ್ಟೊಸ್ಪಿರೋಸಿಸ್ ಎಂಬುದು ಲೆಪ್ಟೊಸ್ಪೈರೋಸಿಸ್ ಬ್ಯಾಕ್ಟೀರಿಯಾದಿಂದ ಉಂಟಾಗುವ ರಕ್ತದ ಸೋಂಕು, ಇದು ಮಾನವರು, ನಾಯಿಗಳು, ಇಲಿಗಳು ಮತ್ತು ಇತರ ಕಾಡು ಮತ್ತು ಸಾಕುಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತದೆ.

ರೋಗ ಲಕ್ಷಣಗಳೇನು? ಇಲಿ ಜ್ವರದ ಮುಖ್ಯ ಲಕ್ಷಣಗಳೆಂದರೆ ಜ್ವರ, ತಲೆನೋವು, ಕಾಲುಗಳ ಸ್ನಾಯುಗಳಲ್ಲಿ ನೋವು, ಕಣ್ಣುಗಳ ಹಳದಿ- ಕೆಂಪು ಬಣ್ಣ, ಮೂತ್ರದ ಪ್ರಮಾಣ ಕಡಿಮೆಯಾಗುವುದು ಮತ್ತು ಗಾಢ ಬಣ್ಣ ಇರುವುದು. ರೋಗವು ತೀವ್ರವಾಗಿದ್ದರೆ, ಸಾವು ಸಂಭವಿಸಬಹುದು.

ತಡೆಗಟ್ಟುವುದು ಹೇಗೆ?

  • ಇಲಿ ಜ್ವರವನ್ನು ತಪ್ಪಿಸಲು ನಿಂತ ನೀರಿನಲ್ಲಿ ಹೆಜ್ಜೆ ಹಾಕಬೇಡಿ, ಸ್ನಾನ ಮಾಡಬೇಡಿ ಅಥವಾ ನಿಮ್ಮ ಕೈ ಮತ್ತು ಮುಖವನ್ನು ತೊಳೆದುಕೊಳ್ಳಬೇಡಿ.
  • ಇಲಿಗಳು, ಅಳಿಲುಗಳು, ಬೆಕ್ಕುಗಳು, ನಾಯಿಗಳು, ಮೊಲಗಳು, ದನಗಳು ಇತ್ಯಾದಿಗಳ ಮಲವಿಸರ್ಜನೆಯಿಂದ ಕಲುಷಿತಗೊಂಡ ನೀರಿನ ಸಂಪರ್ಕ ಮತ್ತು ಕಲುಷಿತ ಆಹಾರ ಮತ್ತು ನೀರಿನ ಸೇವನೆಯು ಇಲಿ ಜ್ವರಕ್ಕೆ ಕಾರಣವಾಗಬಹುದು.
  • ನಿಂತ ನೀರು ಮತ್ತು ಚರಂಡಿಗಳಲ್ಲಿ ಕೆಲಸ ಮಾಡುವವರು, ಪಶುಪಾಲಕರು, ಕಟ್ಟಡ ಕಾರ್ಮಿಕರು, ಹೆದ್ದಾರಿ ನಿರ್ಮಾಣ ಕಾರ್ಮಿಕರು, ನೈರ್ಮಲ್ಯ ಕಾರ್ಮಿಕರು ಮತ್ತು ಇತರರು ಸೋಂಕಿಗೆ ಒಳಗಾಗುವ ಸಾಧ್ಯತೆ ಇರುವವರು ವೈದ್ಯರ ಪ್ರಿಸ್ಕ್ರಿಪ್ಷನ್ ಪ್ರಕಾರ ತಡೆಗಟ್ಟುವ ಔಷಧಿ ಡಾಕ್ಸಿಸೈಕ್ಲಿನ್ ಅನ್ನು ತೆಗೆದುಕೊಳ್ಳಬೇಕು.
  • ಡಾಕ್ಸಿಸೈಕ್ಲಿನ್ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಭ್ಯವಿದೆ. ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ಕೈಗವಸುಗಳು ಮತ್ತು ಕಾಲಿನ ಗವಸುಗಳನ್ನು ಶಿಫಾರಸು ಮಾಡಲಾಗುತ್ತದೆ.
  • ಹಣ್ಣುಗಳು ಮತ್ತು ತರಕಾರಿಗಳನ್ನು ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ನೈರ್ಮಲ್ಯದ ಪರಿಸ್ಥಿತಿಗಳಲ್ಲಿ ತಯಾರಿಸಲಾದ ಆಹಾರ ಪದಾರ್ಥಗಳನ್ನು ಮಾತ್ರ ಬಳಸಿ. ಕುಡಿಯಲು ಬಿಸಿ ನೀರನ್ನು ಉಪಯೋಗಿಸಿ.
  • ವ್ಯಾಪಾರಿಗಳು ತಂಪು ಪಾನೀಯ ಬಾಟಲಿಗಳು ಮತ್ತು ಪ್ಯಾಕೆಟ್‌ಗಳು, ಕುಡಿಯುವ ನೀರಿನ ಬಾಟಲಿಗಳು ಮತ್ತು ಇತರ ಆಹಾರ ಪ್ಯಾಕೆಟ್‌ಗಳನ್ನು ಸರಿಯಾದ ರೀತಿಯಲ್ಲಿ ಇಡಬೇಕು. ಅಂತಹ ಪ್ಯಾಕೆಟ್ ಮತ್ತು ಬಾಟಲಿಗಳನ್ನು ಸ್ವಚ್ಛಗೊಳಿಸಿದ ನಂತರವೇ ಬಳಸಿ.

ಓದುಗರಿಗೆ ಮುಖ್ಯ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.