ETV Bharat / entertainment

ಮಗುವಿನೊಂದಿಗೆ ನಟಿ ದೀಪಿಕಾ ಪಡುಕೋಣೆ: ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿವೆ ಫ್ಯಾನ್​ ಮೇಡ್​​ ಫೋಟೋಗಳು - Deepika Padukone - DEEPIKA PADUKONE

ದೀಪಿಕಾ ಪಡುಕೋಣೆ ಮತ್ತು ರಣ್​​ವೀರ್ ಸಿಂಗ್ ತಮ್ಮ ಮೊದಲ ಮಗುವನ್ನು ಇದೇ ಸೆಪ್ಟೆಂಬರ್ 8ರಂದು ಸ್ವಾಗತಿಸಿದ್ದಾರೆ. ಜನಪ್ರಿಯ ತಾರಾ ದಂಪತಿ ತಮ್ಮ ಮಗುವಿನ ಹೆಸರು ಅಥವಾ ನೋಟವನ್ನು ಇನ್ನೂ ಬಹಿರಂಗಪಡಿಸದಿದ್ದರೂ ಕಂದಮ್ಮನೊಂದಿಗಿರುವ ತಾರಾ ದಂಪತಿಯ ಎಐ ಫೋಟೋಗಳು ಹೊರಹೊಮ್ಮಿವೆ. ಫೋಟೋಗಳು ಅಧಿಕೃತ ಎಂದೇ ಅನೇಕರನ್ನು ದಾರಿ ತಪ್ಪಿಸುತ್ತಿರುವಂತೆ ತೋರುತ್ತಿದೆ.

Deepika Padukone
Actress Deepika Padukone (Photo: PTI)
author img

By ETV Bharat Karnataka Team

Published : Sep 24, 2024, 7:43 PM IST

ಹೈದರಾಬಾದ್: ಬಾಲಿವುಡ್​ ತಾರಾ ದಂಪತಿ ರಣ್​​ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರ ಪ್ರೇಮಕಥೆ ಯಾವುದೇ ಫೇರಿ ಟೇಲ್​​​ಗಿಂತ ಕಡಿಮೆಯೇನಿಲ್ಲ. ಪ್ರೇಮಪಕ್ಷಿಗಳ ಪ್ರಯಾಣ 2013ರಲ್ಲಿ ''ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ'' ಸೆಟ್‌ಗಳಲ್ಲಿ ಪ್ರಾರಂಭವಾಯಿತು. ಸೂಪರ್​ ಡೂಪರ್​​ ಚಿತ್ರದಲ್ಲಿ ಜೋಡಿಯ ಆನ್-ಸ್ಕ್ರೀನ್ ಬಹಳ ಅದ್ಭುತವಾಗಿ ಮೂಡಿಬಂದಿತ್ತು.

ನಂತರದ ದಿನಗಳಲ್ಲಿ ಜೋಡಿಯ ಪ್ರೇಮ ಪ್ರಣಯ ಉತ್ತುಂಗಕ್ಕೇರಿತು. ಸಿನಿಮಾ ಮಾತ್ರವಲ್ಲದೇ ಸಾರ್ವಜನಿಕವಾಗಿಯೂ ಕಾಣಿಸಿಕೊಳ್ಳಲು ಶುರುವಾಯಿತು. 2018ರಲ್ಲಿ ದಾಂಪತ್ಯ ಜೀವನ ಆರಂಭಿಸಿರುವ ಈ ಲವ್​ಬರ್ಡ್ಸ್ ಬಾಲಿವುಡ್‌ನ ಅತ್ಯಂತ ಪ್ರೀತಿಯ ಜೋಡಿಗಳಲ್ಲಿ ಒಂದಾದರು.

2018ರ ನವೆಂಬರ್​ನಲ್ಲಿ ದೀಪ್​ವೀರ್​​ ಇಟಲಿಯ ಲೇಕ್ ಕೊಮೋದಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದರು. ವಿವಾಹ ಸಮಾರಂಭ ಕೊಂಕಣಿ ಮತ್ತು ಸಿಂಧಿ ಪದ್ಧತಿಗಳ ಪ್ರಕಾರ ಬಹಳ ಸುಂದರವಾಗಿ ನಡೆದಿತ್ತು. ಪ್ರೀತಿ, ನಗು ಮತ್ತು ಕುಟುಂಬ - ಸ್ನೇಹಿತರನ್ನೊಳಗೊಂಡ ಸುಂದರ ಕ್ಷಣವನ್ನು ಸೃಷ್ಟಿಸಿದ್ದರು. ಮದುವೆ ಬಳಿಕ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಅದ್ಭುತ ಫೋಟೋಗಳನ್ನು ಹಂಚಿಕೊಂಡು ಸಖತ್​ ಸದ್ದು ಮಾಡಿದ್ದರು.

ಹೀಗೆ ಅಪಾರ ಸಂಖ್ಯೆಯ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿರುವ ಜೋಡಿ ಇತ್ತೀಚೆಗಷ್ಟೇ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲೀಗ ಫ್ಯಾನ್​ ಮೇಡ್​​ ಫೋಟೋಗಳು ನೆಟ್ಟಿಗರ ಗಮನ ಸೆಳೆದಿವೆ.

ಸೆಪ್ಟೆಂಬರ್ 8 ರಂದು, ದೀಪಿಕಾ ಮತ್ತು ರಣವೀರ್ ತಮ್ಮ ಮೊದಲ ಮಗು ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಜೋಡಿಯಿಂದ ಬಂದ ಅಧಿಕೃತ ಅನೌನ್ಸ್​​ಮೆಂಟ್​ ಅಪಾರ ಸಂಖ್ಯೆಯ ಅಭಿಮಾನಿಗಳು, ಸಹುದ್ಯೋಗಿಗಳಿಂದ ಪ್ರೀತಿ, ಅಭಿನಂದನೆಗಳನ್ನು ಸ್ವೀಕರಿಸಿತು. ನವಜಾತ ಶಿಶುವಿನ ಒಂದು ನೋಟಕ್ಕಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರರಾಗಿದ್ದಾರೆ. ಜೊತೆ ಜೊತೆಗೆ, ತಮ್ಮ ಮಗುವಿನೊಂದಿಗೆ ದಂಪತಿಯನ್ನು ಚಿತ್ರಿಸುವ ಎಐ ರಚಿತ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಹೊರಹೊಮ್ಮಿವೆ. ಇದು ಅಭಿಮಾನಿಗಳ ಕುತೂಹಲ, ನಿರೀಕ್ಷೆ, ಉತ್ಸಾಹ, ಕಾತರವನ್ನು ಹೆಚ್ಚಿಸಿವೆ.

ಇದನ್ನೂ ಓದಿ: ಡಿವೋರ್ಸ್ ವದಂತಿ ನಡುವೆ ಪ್ಯಾರಿಸ್ ಫ್ಯಾಶನ್ ವೀಕ್​​​ನಲ್ಲಿ ಮಿಂಚು ಹರಿಸಿದ ನೀಲಿ ಕಣ್ಣಿನ ಚೆಲುವೆ - Aishwarya Rai

ಅದಾಗ್ಯೂ ದಂಪತಿ ತಮ್ಮ ಮಗಳ ಯಾವುದೇ ನೈಜ ಫೋಟೋಗಳನ್ನು ಇನ್ನೂ ಹಂಚಿಕೊಂಡಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಕಂದಮ್ಮನ ಜನನದ ಬಗ್ಗೆ ಅಧಿಕೃತ ಮಾಡಿದ್ದಾರೆ. ಪೋಸ್ಟ್​​ನಲ್ಲಿ ಸರಳವಾಗಿ "ಹೆಣ್ಣು ಮಗು 8.9.2024. ದೀಪಿಕಾ ಮತ್ತು ರಣವೀರ್" ಎಂದು ಬರೆಯಲಾಗಿತ್ತು.

ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ: 'ನಿಮ್ಮ ಪ್ರತಿ ಮಾತಿಗೂ ಉತ್ತರಿಸುತ್ತೇನೆ'; ಪವನ್​ ಕಲ್ಯಾಣ್ -​ಪ್ರಕಾಶ್​​ ರಾಜ್​​ ಜಟಾಪಟಿ - Prakash Raj on Pawan Kalyan

ಈ ಸಂತೋಷದ ನಡುವೆ, ದೀಪಿಕಾ ತಮ್ಮ ಮಗಳನ್ನು ಹಿಡಿದಿರುವಂತೆ ತೋರುವ ಹಲವು ಎಐ ರಚಿತ ಚಿತ್ರಗಳು ಆನ್‌ಲೈನ್‌ನಲ್ಲಿ ವೈರಲ್​ ಆಗುತ್ತಿವೆ. ಈ ಫ್ಯಾನ್​ಮೇಡ್​​ ಫೋಟೋಗಳು ತಾಯಿಯ ಹೃದಯಸ್ಪರ್ಶಿ ಕ್ಷಣಗಳನ್ನು ಪ್ರಸ್ತುತಪಡಿಸಿವೆ. ಆದ್ರೆ ಅಧಿಕೃತ ಫೋಟೋ ವಿಡಿಯೋಗಳಿಗಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.