ETV Bharat / international

ರಷ್ಯಾ-ಉತ್ತರ ಕೊರಿಯಾ ರಕ್ಷಣಾ ಒಪ್ಪಂದ ಜಗತ್ತಿಗೆ ಅಪಾಯಕಾರಿ: ಆಸ್ಟ್ರೇಲಿಯಾ ವಿದೇಶಾಂಗ ಸಚಿವೆ - Russia North Korea Defense Deal - RUSSIA NORTH KOREA DEFENSE DEAL

ರಷ್ಯಾ ಮತ್ತು ಉತ್ತರ ಕೊರಿಯಾ ಮಧ್ಯದ ರಕ್ಷಣಾ ಒಪ್ಪಂದವು ಜಗತ್ತಿಗೆ ಅಪಾಯಕಾರಿಯಾಗಿದೆ ಎಂದು ಆಸ್ಟ್ರೇಲಿಯಾ ವಿದೇಶಾಂಗ ಸಚಿವೆ ಆರೋಪಿಸಿದ್ದಾರೆ.

ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್
ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (IANS)
author img

By PTI

Published : Jul 30, 2024, 1:22 PM IST

ಸಿಯೋಲ್ : ಉತ್ತರ ಕೊರಿಯಾ ಮತ್ತು ರಷ್ಯಾ ನಡುವಿನ ಇತ್ತೀಚಿನ ರಕ್ಷಣಾ ಒಪ್ಪಂದವು ಜಗತ್ತನ್ನು ಅಸ್ಥಿರಗೊಳಿಸುವಂತಿದ್ದು, ವಿಶ್ವಕ್ಕೆ ಅಪಾಯಕಾರಿಯಾಗಿದೆ ಎಂದು ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಆರೋಪಿಸಿದ್ದಾರೆ. ಮಂಗಳವಾರ ಉತ್ತರ ಮತ್ತು ದಕ್ಷಿಣ ಕೊರಿಯಾ ಗಡಿಗಳ ಮಧ್ಯದ ಉದ್ವಿಗ್ನ ಗಡಿ ಗ್ರಾಮಕ್ಕೆ ಭೇಟಿ ನೀಡಿದ ನಂತರ ಅವರು ಮಾತನಾಡಿದರು. ವಿಶ್ವಶಾಂತಿಗೆ ಪ್ರತಿಕೂಲವಾದ ರೀತಿಯಲ್ಲಿ ರಷ್ಯಾ ವರ್ತಿಸುತ್ತಿದೆ ಎಂದು ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಕೊರಿಯಾದ ಗಡಿ ಗ್ರಾಮವಾದ ಪನ್ಮುಂಜೊಮ್​ನ ದಕ್ಷಿಣ ಭಾಗಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರಿಗೆ ತಿಳಿಸಿದರು.

ಕಳೆದ ಜೂನ್​ನಲ್ಲಿ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎರಡೂ ದೇಶಗಳ ಮೇಲೆ ದಾಳಿ ನಡೆದರೆ ಪರಸ್ಪರ ಮಿಲಿಟರಿ ಸಹಾಯವನ್ನು ಖಾತರಿಪಡಿಸುವ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದರು. ಮಿಲಿಟರಿ ಮತ್ತು ಆರ್ಥಿಕ ಸಹಾಯಕ್ಕೆ ಪ್ರತಿಯಾಗಿ, ಉಕ್ರೇನ್ ಯುದ್ಧದಲ್ಲಿ ಬಳಸಲು ರಷ್ಯಾಕ್ಕೆ ಹೆಚ್ಚು ಅಗತ್ಯವಾಗಿರುವ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ಉತ್ತರ ಕೊರಿಯಾ ಪೂರೈಸುತ್ತಿದೆ ಎಂದು ಯುಎಸ್ ಮತ್ತು ಅದರ ಮಿತ್ರ ರಾಷ್ಟ್ರಗಳು ಆರೋಪಿಸಿವೆ.

ಪ್ರಾದೇಶಿಕ ಭದ್ರತೆಗೆ ಬೆದರಿಕೆಯೊಡ್ಡುವ ಉತ್ತರ ಕೊರಿಯಾದ ಕ್ಷಿಪಣಿ ಪರೀಕ್ಷೆಗಳನ್ನು ವಾಂಗ್ ಖಂಡಿಸಿದರು. ಡಿಪಿಆರ್​ಕೆಯ ಪ್ರಚೋದನಕಾರಿ ಪ್ರತಿಕ್ರಿಯೆಗಳು, ಜಗತ್ತನ್ನು ಅಸ್ಥಿರಗೊಳಿಸುವ ಕ್ರಮಗಳ ಬಗ್ಗೆ ನಾವು ಹೆಚ್ಚಿನ ಕಳವಳ ಹೊಂದಿದ್ದೇವೆ ಎಂದು ಅವರು ಹೇಳಿದರು.

ಮಂಗಳವಾರ ವಾಂಗ್ ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ ಚೋ ಟೇ-ಯುಲ್ ಅವರನ್ನು ಸಿಯೋಲ್​ನಲ್ಲಿ ಭೇಟಿಯಾಗಿ ರಕ್ಷಣೆ, ಆರ್ಥಿಕ ಭದ್ರತೆ ಮತ್ತು ಇತರ ವಿಷಯಗಳಲ್ಲಿ ಸಹಕಾರ ಹೆಚ್ಚಿಸುವ ಬಗ್ಗೆ ಮಾತುಕತೆ ನಡೆಸಿದರು.

ಕೊರಿಯನ್ ಪರ್ಯಾಯ ದ್ವೀಪದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಉತ್ತರ ಕೊರಿಯಾವು ದಕ್ಷಿಣ ಕೊರಿಯಾದ ಕಡೆಗೆ ಕಸ ತುಂಬಿದ ಬಲೂನ್​ಗಳನ್ನು ಹಾರಿಸುತ್ತಿದೆ ಮತ್ತು ಶಸ್ತ್ರಾಸ್ತ್ರ ಪರೀಕ್ಷೆಗಳನ್ನು ಮುಂದುವರೆಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ದಕ್ಷಿಣ ಕೊರಿಯಾ, ಪ್ಯೋಂಗ್ಯಾಂಗ್ ವಿರೋಧಿ ಪ್ರಚಾರ ಮತ್ತು ಗಡಿ ಪ್ರದೇಶಗಳಲ್ಲಿ ಲೈವ್-ಫೈರ್ ಅಭ್ಯಾಸಗಳನ್ನು ಪುನರಾರಂಭಿಸಿದೆ. ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರ ಮಗಳು ದೇಶದ ಮುಂದಿನ ನಾಯಕಿನಾಗಲು ತರಬೇತಿ ಪಡೆಯುತ್ತಿದ್ದಾರೆ ಎಂದು ದಕ್ಷಿಣ ಕೊರಿಯಾದ ಗೂಢಚಾರ ಸಂಸ್ಥೆಯನ್ನು ಉಲ್ಲೇಖಿಸಿ ಯೋನ್ಹಾಪ್ ಸುದ್ದಿ ಸಂಸ್ಥೆ ಸೋಮವಾರ ವರದಿ ಮಾಡಿದೆ.

ಇದನ್ನೂ ಓದಿ: ವಿಶ್ವದಲ್ಲಿರುವ ಹುಲಿಗಳ ಸಂಖ್ಯೆ ಎಷ್ಟು? ಭಾರತದ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಹುಲಿಗಳಿವೆ? - Global Tiger Population

ETV Bharat Logo

Copyright © 2025 Ushodaya Enterprises Pvt. Ltd., All Rights Reserved.