ETV Bharat / international

ಇಸ್ರೇಲ್​ ಗುರಿಯಾಗಿಸಿ ಲೆಬನಾನ್‌ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕೇರಳದ ವ್ಯಕ್ತಿ ಸಾವು, ಇನ್ನಿಬ್ಬರಿಗೆ ಗಾಯ - Lebanon

ಇಸ್ರೇಲ್​ ಗುರಿಯಾಗಿಸಿಕೊಂಡು ಲೆಬನಾನ್​ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಓರ್ವ ಭಾರತೀಯ ಸಾವನ್ನಪ್ಪಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಇದನ್ನು ಇಸ್ರೇಲ್​ ಭದ್ರತಾ ಪಡೆಗಳು ಖಚಿತಪಡಿಸಿವೆ.

ಇಸ್ರೇಲ್​ನಲ್ಲಿ ಭಾರತೀಯನ ಸಾವು
ಇಸ್ರೇಲ್​ನಲ್ಲಿ ಭಾರತೀಯನ ಸಾವು
author img

By ETV Bharat Karnataka Team

Published : Mar 5, 2024, 11:01 AM IST

ಜೆರುಸಲೇಂ: ಲೆಬನಾನ್​ನಿಂದ ಉಡಾವಣೆಯಾದ ಟ್ಯಾಂಕ್​ ಉಡಾವಣಾ ಕ್ಷಿಪಣಿಯೊಂದು ಇಸ್ರೇಲ್​ ಮೇಲೆ ಅಪ್ಪಳಿಸಿ ಓರ್ವ ಭಾರತೀಯ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದಾರೆ. ಮೂವರನ್ನೂ ಕೇರಳ ರಾಜ್ಯದವರೆಂದು ಗುರುತಿಸಲಾಗಿದೆ.

ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದೆ. ಉತ್ತರ ಇಸ್ರೇಲ್​ನ ಗಡಿಯಲ್ಲಿರುವ ಮಾರ್ಗಲಿಯೊಟ್​ ಪ್ರದೇಶದ ತೋಟದಲ್ಲಿ ಕ್ಷಿಪಣಿ ಸಿಡಿದಿದೆ. ಇದರಿಂದ ಕೇರಳದ ಕೊಲ್ಲಂ ನಿವಾಸಿ ಪಟ್ನಿಬನ್​ ಮ್ಯಾಕ್ಸ್​ವೆಲ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ ಬುಶ್​ ಜೋಸೆಫ್​ ಜಾರ್ಜ್​, ಪೌಲ್​ ಮಾಲ್ವಿನ್​ ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದಾರೆ. ಇಬ್ಬರಿಗೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಮ್ಯಾಕ್ಸ್​​ವೆಲ್​ ಅವರ ಪಾರ್ಥಿವ ಶರೀರವನ್ನು ಝಿವ್ ಆಸ್ಪತ್ರೆಯಲ್ಲಿ ಇಡಲಾಗಿದೆ. ಇನ್ನಿಬ್ಬರಿಗೆ ಮುಖ ಮತ್ತು ದೇಹದ ಮೇಲೆ ಗಾಯಗಳಾಗಿವೆ. ಇವರು ಕೇರಳದ ಇಡುಕ್ಕಿ ಜಿಲ್ಲೆಯವರು ಎಂದು ಗುರುತಿಸಲಾಗಿದೆ. ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಭಾರತದಲ್ಲಿನ ಅವರ ಕುಟುಂಬದೊಂದಿಗೆ ಮಾಹಿತಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದಲ್ಲದೇ, ಕ್ಷಿಪಣಿ ದಾಳಿಯಲ್ಲಿ ಭಾರತೀಯರು ಸೇರಿ ಒಟ್ಟು 7 ಮಂದಿ ಗಾಯಗೊಂಡಿದ್ದಾರೆ. ಲೆಬನಾನ್‌ನ ಶಿಯಾ ಹಿಜ್ಬುಲ್ಲಾ ಸಂಘಟನೆ ಈ ದಾಳಿ ನಡೆಸಿದೆ ಎಂದು ಇಸ್ರೇಲ್​ ಹೇಳಿದೆ. ಗಾಜಾ ಪಟ್ಟಿಯಲ್ಲಿನ ಹಮಾಸ್​ ಉಗ್ರರ ಮೇಲೆ ಇಸ್ರೇಲ್​ ಭದ್ರತಾ ಪಡೆಗಳು ನಡೆಸುತ್ತಿರುವ ಯುದ್ಧಕ್ಕೆ ವಿರುದ್ಧವಾಗಿ, ಹಮಾಸ್‌ಗೆ ಬೆಂಬಲ ನೀಡಿ ಲೆಬನಾನ್​ ಇಸ್ರೇಲ್‌ ಮೇಲೆ ಪ್ರತಿದಿನ ರಾಕೆಟ್‌ಗಳು, ಕ್ಷಿಪಣಿಗಳು ಮತ್ತು ಡ್ರೋನ್‌ ದಾಳಿ ನಡೆಸುತ್ತಿದೆ.

ಭಾರತೀಯರು ಸೇರಿದಂತೆ ಗಾಯಗೊಂಡ ಏಳು ವಿದೇಶಿಗರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಎಲ್ಲರನ್ನೂ ಆಂಬ್ಯುಲೆನ್ಸ್‌ಗಳು ಮತ್ತು ಇಸ್ರೇಲಿ ವಾಯುಪಡೆಯ ಹೆಲಿಕಾಪ್ಟರ್‌ಗಳ ಮೂಲಕ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಮಾಹಿತಿ ನೀಡಿವೆ.

ಇಸ್ರೇಲ್ ಮತ್ತು ಹಿಜ್ಬುಲ್ಲಾ ಸಂಘಟನೆಯ ಚಕಮಕಿಯಲ್ಲಿ ಏಳು ಇಸ್ರೇಲಿ ನಾಗರಿಕರು, 10 ಸೈನಿಕರು ಸಾವಿಗೀಡಾಗಿದ್ದಾರೆ. ಇಸ್ರೇಲ್​ ದಾಳಿಗೆ ಈವರೆಗೂ 229 ಮಂದಿ ಸಾವಿಗೀಡಾಗಿದ್ದಾರೆ ಎಂದು ಹಿಜ್ಬುಲ್ಲಾ ಹೇಳಿದೆ. ಇದರಲ್ಲಿ ಹಿಜ್ಬುಲ್ಲಾ ಪರ ಹೆಚ್ಚಿನ ಸಾವುನೋವುಗಳು ಸಂಭವಿಸಿವೆ.

ಇದನ್ನೂ ಓದಿ: ಫಲ ನೀಡದ ಶಾಂತಿ ಮಾತುಕತೆ: ಯುದ್ಧ ಮತ್ತಷ್ಟು ತೀವ್ರವಾಗಲಿದೆ ಎಂದ ಇಸ್ರೇಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.