ನ್ಯೂಯಾರ್ಕ್: ಅಮೆರಿಕದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಪ್ರಚಾರದ ವೇಳೆ ವ್ಯಕ್ತಿಯೊಬ್ಬ 'ನನ್ನನ್ನು ಮದುವೆಯಾಗುತ್ತೀಯಾ' ಎಂದು ಕೇಳಿರುವುದು ಎಲ್ಲರ ಗಮನ ಸೆಳೆದಿದೆ. ಅದು ಹ್ಯಾಲೆ ವಿರೋಧಿ ಡೋನಾಲ್ಡ್ ಟ್ರಂಪ್ ಬೆಂಬಲಿಗನಿಂದ ಈ ಮದುವೆ ಪ್ರಸ್ತಾಪ ಬಂದಿರುವುದು ವಿಶೇಷವಾಗಿದೆ.
ಅಮೆರಿಕದ ಹ್ಯಾಂಪ್ಶೈರ್ನಲ್ಲಿ ಸದ್ಯ 52 ವರ್ಷದ ನಿಕ್ಕಿ ಹ್ಯಾಲೆ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇಲ್ಲಿನ ಸಲೆಂನ ಅರ್ಟಿಸನ್ ಹೋಟೆಲ್ನಲ್ಲಿ ಅವರು, ಗಂಭೀರ ವಿಷಯಗಳ ಕುರಿತು ಪ್ರಸ್ತಾಪ ಮಾಡುವ ಮೂಲಕ ಪ್ರಚಾರ ನಡೆಸಿದ್ದರು.
ಈ ವೇಳೆ ಜನಸಂದಣಿ ಮಧ್ಯೆ ಟ್ರಂಪ್ ಬೆಂಬಲಿಗ ಮದುವೆ ಪ್ರಸ್ತಾಪ ಮಾಡಿದ್ದಾನೆ. ಆಗ ಇಡೀ ಸಭಾಂಗಣ ಸೇರಿದಂತೆ ನಿಕ್ಕಿ ನಗೆಗಡಲಲ್ಲಿ ತೇಲಿದರು.
ಸಾವರಿಸಿಕೊಂಡು ಉತ್ತರಿಸಿದ ನಿಕ್ಕಿ, ನನ್ನ ಪರವಾಗಿ ಮತ ಚಾಲಾಯಿಸುತ್ತೀಯಾ? ಎಂದು ಮರು ಪ್ರಶ್ನಿಸಿದ್ದಾರೆ. ಇದಕ್ಕೆ ಆತ, ಟ್ರಂಪ್ ಪರವಾಗಿ ಮತ ಹಾಕುವುದಾಗಿ ಹೇಳಿದ್ದಾನೆ. ತಕ್ಷಣಕ್ಕೆ ಇಲ್ಲಿಂದ ಹೊರಡುವಂತೆ ನಯವಾಗಿ ಆತನ ಮನವಿಯನ್ನು ಹ್ಯಾಲೆ ತಿರಸ್ಕರಿಸಿದ್ದಾರೆ. ಈ ವಿಡಿಯೋವನ್ನು ಬೆನ್ನಿ ಜಾನ್ಸನ್ ಎಂಬ ರಾಜಕೀಯ ಟೀಕಾಕಾರ ತಮ್ಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಅನೇಕ ಪ್ರತಿಕ್ರಿಯೆಗಳು ಕೂಡ ವ್ಯಕ್ತವಾಗಿದೆ.
'ತಮ್ಮ ಪರವಾಗಿ ಮತ ಚಲಾಯಿಸುವಂತೆ ಆ ವ್ಯಕ್ತಿ ಮನವೊಲಿಸುವಲ್ಲಿ ನಿಕ್ಕಿ ಸೋತಿದ್ದಾರೆ' ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ಮತ್ತೊಬ್ಬರು, 'ಎಂತಹ ಹಾಸ್ಯ, ಯಾರಿಗೂ ನಿಕ್ಕಿ ಬೇಡ. ನಮಗೆ ಟ್ರಂಪ್ ಬೇಕು' ಎಂದು ಬರೆದಿದ್ದಾರೆ.
ಸೌತ್ ಕರೊಲಿನಾದಲ್ಲಿ ಎರಡು ಬಾರಿ ಗವರ್ನರ್ ಆಗಿ ಸೇವೆ ಸಲ್ಲಿಸಿರುವ ಹ್ಯಾಲೆ, 1996ರಲ್ಲಿ ವಿಲಿಯಂ ಮಿಷೆಲ್ ಹ್ಯಾಲೆ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದರು. ಈ ಸಂಬಂಧವಾಗಿ ಅವರು ರೀನಾ ಎಂಬ ಮಗಳು ಮತ್ತು ನಲಿನ್ ಎಂಬ ಮಗನನ್ನು ಪಡೆದಿದ್ದಾರೆ.
ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಕಣದಲ್ಲಿರುವ ಏಕೈಕ ಮಹಿಳೆ ನಿಕ್ಕಿ ಹ್ಯಾಲೆಯಾಗಿದ್ದು, ಟ್ರಂಪ್ ವಿರುದ್ಧ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ. ವಾಷಿಂಗ್ಟನ್ ಪೋಸ್ಟ್ ಸಮೀಕ್ಷೆ ಪ್ರಕಾರ ಡೊನಾಲ್ಡ್ ಟ್ರಂಪ್ ಶೇ 52ರಷ್ಟು ಬೆಂಬಲವನ್ನು ಪಡೆದರೆ, ಸೌತ್ ಕರೊಲಿನಾ ಮಾಜಿ ಗವರ್ನರ್ ನಿಕ್ಕಿ ಹ್ಯಾಲೆ ಶೇ 34ರಷ್ಟು ಬೆಂಬಲ ಪಡೆದಿದ್ದಾರೆ. ಇನ್ನು ತಮ್ಮ ಈ ಅಧ್ಯಕ್ಷ ಚುನಾವಣೆ ಕುರಿತು ಮಾತನಾಡಿರುವ ನಿಕ್ಕಿ, ಸಾಕಷ್ಟು ದೂರ ಮುಂದೆ ಬಂದಾಗಿದೆ. ಹಿಂದೆ ಸರಿಯುವ ಮಾತಿಲ್ಲ ಎಂದಿದ್ದರು. (ಐಎಎನ್ಎಸ್)
ಇದನ್ನೂ ಓದಿ: ಟ್ರಂಪ್ ಬೆಂಬಲಿಸಿ ಹ್ಯಾಲೆ, ಡಿಸಾಂಟಿಸ್ ಕಣದಿಂದ ಹಿಂದೆ ಸರಿಯಲಿ; ವಿವೇಕ್ ರಾಮಸ್ವಾಮಿ ಆಗ್ರಹ