ETV Bharat / international

ಲಂಡನ್​ನಲ್ಲಿ ಕಾರು ಅಪಘಾತ: ಭಾರತೀಯ ವಿದ್ಯಾರ್ಥಿ ಸಾವು, ಆಂಧ್ರದ ನಾಲ್ವರಿಗೆ ಗಾಯ!

ಲಂಡನ್​ನ ಲೀಸೆಸ್ಟರ್​ಶೈರ್‌ನಲ್ಲಿ ನಡೆದ ಕಾರು ಅಪಘಾತದಲ್ಲಿ ಆಂಧ್ರ ಮೂಲದ ವಿದ್ಯಾರ್ಥಿ ಸಾವನ್ನಪ್ಪಿದ್ದು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

LONDON ROAD ACCIDENT  ANDHRA PRADESH STUDENT DIES  AP STUDENT DIES IN LONDON  CAR ACCIDENT
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)
author img

By PTI

Published : 2 hours ago

ಲಂಡನ್(ಇಂಗ್ಲೆಂಡ್​​): ರಸ್ತೆ ಅಪಘಾತದಲ್ಲಿ 30 ವರ್ಷದ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿ, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಪೂರ್ವ ಇಂಗ್ಲೆಂಡ್​ನ ಲೀಸೆಸ್ಟರ್​ಶೈರ್‌ನಲ್ಲಿ ಮಂಗಳವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರು ಹಾಗೂ ಮೃತ ಆಂಧ್ರಪ್ರದೇಶಕ್ಕೆ ಸೇರಿದವರಾಗಿದ್ದಾರೆ ಎಂದು ವರದಿಯಾಗಿದೆ.

ಚಿರಂಜೀವಿ ಪಾಂಗುಲೂರಿ(30) ಘಟನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈತನೊಂದಿಗಿದ್ದ ಸಹ ಸವಾರರಾದ ಓರ್ವ ಮಹಿಳೆ, ಇಬ್ಬರು ಪುರುಷರು ಹಾಗೂ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಾಯಕಾರಿ ಚಾಲನೆ ಘಟನೆಗೆ ಕಾರಣವಾಗಿದ್ದು, 27 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಆದರೆ, ಆತ ಜಾಮೀನಿನ ಮೇಲೆ ಹೊರ ಬಂದಿದ್ದಾನೆ. ಇವರೆಲ್ಲರೂ ಬೂದು ಬಣ್ಣದ ಮಜ್ದಾ 3 ತಮುರಾ ಕಾರಿನಲ್ಲಿ ಕೌಂಟಿಯಿಂದ ಲೀಸೆಸ್ಟರ್​ಶೈರ್‌ನಿಂದ ಮಾರ್ಕೆಟ್ ಹಾರ್ಬರೋ ಕಡೆಗೆ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದಾಗ ಡ್ಯಾಶ್ ಕ್ಯಾಮ್​ನಲ್ಲಿ ಯಾವುದಾದರೂ ದೃಶ್ಯಗಳುನ ಸೆರೆಯಾಗಿದೆಯೇ ಎಂದು ಪರಿಶೀಲಿಸಲಾಗುತ್ತಿದೆ ಎಂದು ಲೀಸೆಸ್ಟರ್‌ಶೈರ್ ಪೊಲೀಸರ ಹೇಳಿಕೆ ತಿಳಿಸಿದೆ.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ ಟ್ರೈನಿ ಪೈಲಟ್​ಗಳಿಬ್ಬರು ಸಾವು

ಇದನ್ನೂ ಓದಿ: ಪಾಕ್​​​ನಲ್ಲಿ ನಿಲ್ಲದ ಉಗ್ರರ ಹಾವಳಿ: ಪ್ರತ್ಯೇಕ ಕಾರ್ಯಾಚರಣೆಯಲ್ಲಿ 7 ಭಯೋತ್ಪಾದಕರ ಎನ್​​​ಕೌಂಟರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.