ETV Bharat / international

ಪಲ್ಟಿಯಾಗಿ ಮರವೇರಿದ ಕಾರು: ರಸ್ತೆ ಅಪಘಾತದಲ್ಲಿ ಮೂವರು ಭಾರತೀಯ ಮಹಿಳೆಯರು ಸಾವು - Indian women died - INDIAN WOMEN DIED

ಅತೀ ವೇಗ ಅಪಘಾತಕ್ಕೆ ಕಾರಣ ಎಂಬಂತೆ ಅಮೆರಿಕದಲ್ಲಿ ನಡೆದ ಅಪಘಾತದಲ್ಲಿ ಭಾರತೀಯ ಮೂಲದ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಚಾಲಕನಿಗೆ ಗಂಭೀರವಾಗಿ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

DEADLY CRASH  VICTIMS REPORTEDLY FROM INDIA  US KILLS 3 WOMEN  SOUTH CAROLINA
ರಸ್ತೆ ಅಪಘಾತದಲ್ಲಿ ಮೂವರು ಭಾರತೀಯ ಮಹಿಳೆಯರು ಸಾವು!
author img

By PTI

Published : Apr 27, 2024, 5:52 PM IST

ನ್ಯೂಯಾರ್ಕ್: ಅಮೆರಿಕದ ಸೌತ್ ಕೆರೊಲಿನಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಮೂವರು ಭಾರತೀಯ ಮಹಿಳೆಯರು ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಗುಜರಾತ್‌ನ ಆನಂದ್ ಜಿಲ್ಲೆಯವರು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ರೇಖಾಬೆನ್ ಪಟೇಲ್, ಸಂಗೀತಾಬೆನ್ ಪಟೇಲ್ ಮತ್ತು ಮನೀಶಾಬೆನ್ ಪಟೇಲ್ ಎಂದು ಗುರುತಿಸಲಾಗಿದೆ.

ಅವರು ಪ್ರಯಾಣಿಸುತ್ತಿದ್ದ ವಾಹನವು ಮಿತಿ ಮೀರಿದ ವೇಗದಲ್ಲಿ ಚಲಿಸಿದೆ ಎಂದು ತೋರುತ್ತದೆ. ಅಂತಹ ವೇಗವನ್ನು ನಾವು ಅಪರೂಪವಾಗಿ ನೋಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಎಸ್​ಯುವಿ ನಿಯಂತ್ರಣ ತಪ್ಪಿ ರಸ್ತೆಯಲ್ಲಿದ್ದ 4 ರಿಂದ 6 ಬಾರಿ ಪಲ್ಟಿಯಾಗಿ 20 ಅಡಿಗಳಷ್ಟು ಎತ್ತರಕ್ಕೆ ಜಿಗಿದು ಮರದಲ್ಲಿ ಸಿಲುಕಿಕೊಂಡಂತಿದೆ. ಮಾಹಿತಿ ಪಡೆದ ತುರ್ತು ಸಿಬ್ಬಂದಿ ತಕ್ಷಣ ರಕ್ಷಣಾ ಕ್ರಮ ಕೈಗೊಂಡರು. ಈ ದುರಂತದಲ್ಲಿ ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗ್ರೀನ್‌ವಿಲ್ಲೆ ಕೌಂಟಿ ಕರೋನರ್ ಕಚೇರಿಯ ಮುಖ್ಯ ಉಪ ಕರೋನರ್ ಮೈಕ್ ಎಲ್ಲಿಸ್ ಹೇಳಿದ್ದಾರೆ.

ಓದಿ: ಬೆಂಗಳೂರಲ್ಲಿ ಆ್ಯಂಬುಲೆನ್ಸ್ ಚಾಲಕನ ಅಚಾತುರ್ಯ: ಸರಣಿ ಅಪಘಾತ - Bengaluru Serial Accident

ETV Bharat Logo

Copyright © 2024 Ushodaya Enterprises Pvt. Ltd., All Rights Reserved.