ETV Bharat / international

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮುನ್ನವೇ ಟ್ರಂಪ್​ ವಿವಾದಾತ್ಮಕ ಚಿತ್ರ 'ದಿ ಅಪ್ರೆಂಟಿಸ್​' ತೆರೆಗೆ - Controversial Trump Biopic - CONTROVERSIAL TRUMP BIOPIC

ಟ್ರಂಪ್​ ಯೌವನ ಕಾಲದ ಕೆಲವು ಕೆಲವು ಸ್ಪೋಟಕ ಮಾಹಿತಿಯನ್ನು ಚಿತ್ರ ಹೊಂದಿದ್ದು, ಮೇನಲ್ಲಿ ಕೇನ್ಸ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಪ್ರದರ್ಶಿತವಾದ ಚಿತ್ರ ನೋಡಿದ ಮಂದಿ ಆಘಾತ ವ್ಯಕ್ತಪಡಿಸಿದ್ದರು

controversial-trump-biopic-the-apprentice-to-hit-us-theatres-before-presidential-election
ಡೋನಾಲ್ಡ್​ ಟ್ರಂಪ್​ (ಈಟಿವಿ ಭಾರತ್​)
author img

By ETV Bharat Karnataka Team

Published : Aug 31, 2024, 12:15 PM IST

ಲಾಸ್​ ಏಂಜಲೀಸ್​, ಅಮೆರಿಕ: ಅಮೆರಿದ ಅಧ್ಯಕ್ಷೀಯ ಚುನಾವಣೆ ಕಾವಿನ ನಡುವೆಯೇ ಡೋನಾಲ್ಡ್​​ ಟ್ರಂಪ್​ ಅವರ ವಿವಾದಾತ್ಮಕ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಚುನಾವಣೆಗೆ ಮುನ್ನವೇ ಬಿಡುಗಡೆಯಾಗಲಿರುವ ಚಿತ್ರದಲ್ಲಿ, ಅಮೆರಿಕ ಮಾಜಿ ಅಧ್ಯಕ್ಷ ತಮ್ಮ ಪತ್ನಿ ಮೇಲೆ ಎಸಗಿದ ಅತ್ಯಾಚಾರ ಸೇರಿದಂತೆ ಅನೇಕ ಆಘಾತಕಾರಿ ಅಂಶಗಳನ್ನು ಒಳಗೊಂಡಿದೆ.

'ದಿ ಅಪ್ರೆಂಟಿಸ್'​ ಎಂಬ ಶೀರ್ಷಿಕೆಯಲ್ಲಿ ಮೂಡಿ ಬರುತ್ತಿರುವ ಚಿತ್ರದ ಬಿಡುಗಡೆ ಟಿನಿ ಇಂಡೇ ಸ್ಟುಡಿಯೋ ಬ್ರಿಯಾರ್ಕ್ಲಿಫ್ ಎಂಟರ್​ಟೈನ್​ಮೆಂಟ್​ ಸಿದ್ಧತೆ ನಡೆಸಿದೆ. ಕಮಲಾ ಹ್ಯಾರಿಸ್​ - ಟ್ರಂಪ್ ನಡುವಿನ ಪ್ರಬಲ ಸ್ಪರ್ಧೆ ನಡುವ ಚಿತ್ರ ಅಕ್ಟೋಬರ್​ನಲ್ಲಿ ತೆರೆ ಕಾಣಲಿದೆ ಎಂದು ಹಾಲಿವುಡ್​ ವರದಿಗಳು ತಿಳಿಸಿದೆ. ಆದರೆ, ಈ ಕುರಿತು ಎಎಫ್​ಪಿ ಪ್ರಶ್ನೆಗಳಿಗೆ ಬ್ರಿಯಾರ್ಕ್ಲಿಫ್ ಪ್ರತಿನಿಧಿಗಳು ಯಾವುದೇ ಪ್ರತಿಕ್ರಿಯೆ ತೋರಿಲ್ಲ.

ಟ್ರಂಪ್​ ಯೌವನ ಕಾಲದ ಕೆಲವು ಕೆಲವು ಸ್ಪೋಟಕ ಮಾಹಿತಿಯನ್ನು ಚಿತ್ರ ಹೊಂದಿದ್ದು, ಮೇಯಲ್ಲಿ ಕೇನ್ಸ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಪ್ರದರ್ಶಿತವಾದ ಚಿತ್ರ ನೋಡಿದ ಮಂದಿ ಆಘಾತ ವ್ಯಕ್ತಪಡಿಸಿದ್ದರು. ಟ್ರಂಪ್​ ತಮ್ಮ ಮೊದಲ ಪತ್ನಿ ಇವನಾ ಮೇಲೆ ಅತ್ಯಾಚಾರ ಎಸಗಿದ ದೃಶ್ಯ ಹೆಚ್ಚು ಚರ್ಚಿತವಾಯಿತು. ನಿಜ ಜೀವನದಲ್ಲೂ ಕೂಡ ಇವನಾ ವಿಚ್ಛೇದನ ಸಂದರ್ಭದಲ್ಲಿ ಟ್ರಂಪ್​ ಅತ್ಯಾಚಾರ ಘಟನೆ ಉಲ್ಲೇಖಿಸಿದ್ದರು. ಆದರೆ, ಬಳಿಕ ಈ ಹೇಳಿಕೆಯನ್ನು ಹಿಂಪಡೆದವರು. ಆಕೆ 2022ರಲ್ಲಿ ಸಾವನ್ನಪ್ಪಿದ್ದರು.

ಸಿನಿಮಾದಲ್ಲಿ ಟ್ರಂಪ್​ ಎರೆಕ್ಟಿಲೆ ಡಿಸ್ಫಂಕ್ಷನ್ ಸಮಸ್ಯೆಯಿಂದ ಬಳಲುತ್ತಿರುವುದು​ ಹಾಗೂ ಕೂದಲು ಉದುರುವಿಕೆಗೆ ಶಸ್ತ್ರಚಿಕಿತ್ಸೆ ಒಳಗಾಗಿದ್ದನ್ನು ತೋರಿಸಲಾಗಿದೆ. ಮೇಯಲ್ಲಿ ಚಿತ್ರ ಪ್ರದರ್ಶನವಾದ ಕೆಲವೇ ಗಂಟೆಗಳಲ್ಲಿ ಟ್ರಂಪ್​ ವಕೀಲರು ನಿರ್ಮಾಪಕ ವಿರುದ್ಧ ಮೊಕದ್ಧಮೆ ಹೂಡಿದ್ದರು. ಅಲ್ಲದೇ, ಈ ಚಿತ್ರವನ್ನು ಕಸವಾಗಿದ್ದು, ಮಾನಹಾನಿಯ ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿದರು.

ಅಮೆರಿಕದಲ್ಲಿ ಚಿತ್ರ ಬಿಡುಗಡೆ ಹೆಚ್ಚು ಕ್ಲಿಷ್ಟಕರ ಪರಿಸ್ಥಿತಿಯಿಂದ ಕೂಡಿದೆ. ಚಿತ್ರಕ್ಕೆ ಆರಂಭದಲ್ಲಿ ಟ್ರಂಪ್ ಪರ ಬಿಲಿಯನೇರ್ ಡಾನ್ ಸ್ನೈಡರ್ ಬಂಡವಾಳ ಹೂಡಿದ್ದರು. ವರದಿಗಳ ಪ್ರಕಾರ, ಈ ಚಿತ್ರದ ಬಗ್ಗೆ ಟ್ರಂಪ್​ ಅಸಮಾಧಾನ ಹೊಂದಿದ್ದು, ಇದನ್ನು ನಿರ್ಬಂಧಿಸಲು ಕೋರಿದ್ದಾರೆ. ಚಿತ್ರದಿಂದ ತಮ್ಮ ಹಣಕಾಸಿನ ಪಾಲನ್ನು ಅವರು ಹಿಂಪಡೆದಿದ್ದಾರೆ ಎಂದು ಹಾಲಿವುಡ್​ ವರದಿಗಳು ತಿಳಿಸಿವೆ.

ಚಿತ್ರ ಅಕ್ಟೋಬರ್​ 11ರಂದು ಬಿಡುಗಡೆ ಆಗುತ್ತಿದೆ ಎಂದು ಲಾಸ್​ ಏಂಜಲೀಸ್​ ಟೈಮ್ಸ್​ ತಿಳಿಸಿದೆ. ಟ್ರಂಪ್​ ಪಾತ್ರದಲ್ಲಿ ಸೆಬಾಸ್ಟಿಯನ್​ ಸ್ಟಾನ್​ ಬಣ್ಣ ಹಚ್ಚಿದ್ದು, ಕೇನ್ಸ್​ನಲ್ಲಿ ಅವರ ಅಭಿಯನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ಯಾಬ್ರಿಯಲ್​ ಶೆರ್ಮಾನ್​ ಚಿತ್ರಕಥೆ ಬರೆದಿದ್ದಾರೆ. ಸಣ್ಣ ಉದ್ಯೋಗ ನಿರ್ವಹಿಸುತ್ತಿದ್ದ ಟ್ರಂಪ್​ ಮಹಾತ್ವಕಾಂಕ್ಷೆಯೊಂದಿಗೆ ರಾಜಕೀಯ ಪ್ರವೇಶದವರೆಗಿನ ಕಥೆ ಇದು ಹೊಂದಿದೆ.

ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ 'ಎಕ್ಸ್' ಸಂದರ್ಶನದ ಮೇಲೆ ಸೈಬರ್​ ದಾಳಿ: ಮಸ್ಕ್ ಜೊತೆಗಿನ ಇಂಟರ್​ವ್ಯೂನಲ್ಲಿ ವಿರೋಧಿಗಳ ಬಗ್ಗೆ ಟ್ರಂಪ್​ ಮೃದು ಮಾತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.