ಅಪುಲಿಯಾ (ಇಟಲಿ): G-7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಜಾಗತಿಕ ವ್ಯವಹಾರಗಳಲ್ಲಿ ಆಫ್ರಿಕಾದ ಮಹತ್ವದ ಕುರಿತು ಒತ್ತಿಹೇಳುವ ಮೂಲಕ ಜಾಗತಿಕ ದಕ್ಷಿಣದ ರಾಷ್ಟ್ರಗಳ ಯೋಗಕ್ಷೇಮವನ್ನು ಪ್ರತಿಪಾದಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು. ಭಾರತದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಆಫ್ರಿಕನ್ ಯೂನಿಯನ್ G-20 ನ ಖಾಯಂ ಸದಸ್ಯತ್ವ ಪಡೆದ ಹೆಗ್ಗುರುತ ಕ್ಷಣವನ್ನು ಉಲ್ಲೇಖಿಸಿ ಅವರು ಆಫ್ರಿಕಾದೊಂದಿಗೆ ನಿಕಟ ಸಂಬಂಧವನ್ನು ಬೆಳೆಸಲು ಭಾರತದ ಆಶಯದ ಬಗ್ಗೆ ಒತ್ತಿ ಹೇಳಿದರು.
AI ಮತ್ತು ಎನರ್ಜಿ, ಆಫ್ರಿಕಾ ಮತ್ತು ಮೆಡಿಟರೇನಿಯನ್ ಕುರಿತು G7 ಔಟ್ರೀಚ್ ಅಧಿವೇಶನವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಅವರು, ಮಾನವ ಪ್ರಗತಿಯಲ್ಲಿ ತಂತ್ರಜ್ಞಾನದ ಪರಿವರ್ತಕ ಪಾತ್ರವನ್ನು ಒಳಗೊಂಡಂತೆ ವಿವಿಧ ವಿಷಯಗಳ ಕುರಿತು ಮಾತನಾಡಿದರು.
AI ಪಾರದರ್ಶಕ, ಸುರಕ್ಷಿತ ಬಗ್ಗೆ ಮೋದಿ ಮಾತು: ''ಮಾನವನ ಪ್ರಗತಿಗಾಗಿ ತಂತ್ರಜ್ಞಾನದ ವ್ಯಾಪಕ ಬಳಕೆ, ಮಾನವ ಜೀವನದ ವಿವಿಧ ಅಂಶಗಳಲ್ಲಿ ತಂತ್ರಜ್ಞಾನದ ಏರಿಕೆಯು ಸೈಬರ್ ಭದ್ರತೆಯ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದರು. ಭಾರತವು ತನ್ನ ಅಭಿವೃದ್ಧಿಯ ಪ್ರಯಾಣಕ್ಕಾಗಿ AI ಅನ್ನು ಹೇಗೆ ಬಳಸಿಕೊಳ್ಳುತ್ತಿದೆ ಎಂಬುದರ ಕುರಿತು ತಿಳಿಸಿದರು. AI ಪಾರದರ್ಶಕ, ಸುರಕ್ಷಿತ, ಪ್ರವೇಶಿಸಬಹುದಾದ ಮತ್ತು ಜವಾಬ್ದಾರಿಯುತವಾಗಿ ಉಳಿಯುವುದು ಮುಖ್ಯವಾಗಿದೆ'' ಎಂದು ಸಾಮಾಜಿಕ ಜಾಲತಾಣವಾದ ಎಕ್ಸ್‌ನ ಪೋಸ್ಟ್‌ನಲ್ಲಿ ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ. ಇಂಧನ ಕ್ಷೇತ್ರದಲ್ಲಿ ಲಭ್ಯತೆ, ಕೈಗೆಟುಕುವಿಕೆ ಮತ್ತು ಸ್ವೀಕಾರಾರ್ಹತೆಯ ಮೇಲೆ ಕೇಂದ್ರೀಕರಿಸಿದ ಭಾರತದ ವಿಧಾನವನ್ನು ಪ್ರಧಾನಿ ಮೋದಿ ವಿವರಿಸಿದರು.
"ಏಕ್ ಪೆಡ್ ಮಾ ಕೆ ನಾಮ್" ಅಭಿಯಾನ: ಪಕ್ಷಗಳ ಹವಾಮಾನ ಬದಲಾವಣೆ ಸಮ್ಮೇಳನ (COP) ಬದ್ಧತೆಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರೈಸುವ ಭಾರತದ ಬದ್ಧತೆ ಮತ್ತು ಮಿಷನ್ ಲೈಫ್ ತತ್ವಗಳ ಆಧಾರದ ಮೇಲೆ ಸುಸ್ಥಿರ, ಹಸಿರು ಯುಗಕ್ಕೆ ಪರಿವರ್ತನೆಗೊಳ್ಳುವ ಭಾರತದ ಪ್ರಯತ್ನಗಳ ಕುರಿತು ಹೇಳಿದರು. ಪರಿಸರ ಸುಸ್ಥಿರತೆ ಉತ್ತೇಜಿಸುವ ಮತ್ತು ಭವಿಷ್ಯದ ಪೀಳಿಗೆಗೆ ಗ್ರಹವನ್ನು ಹೆಚ್ಚು ವಾಸಯೋಗ್ಯವಾಗಿಸುವ ಗುರಿಯನ್ನು ಹೊಂದಿರುವ "ಏಕ್ ಪೆಡ್ ಮಾ ಕೆ ನಾಮ್" ಅಭಿಯಾನದ ಬಗ್ಗೆ ಪಿಎಂ ಮೋದಿ ಹೈಲೈಟ್ ಮಾಡಿದರು.
G-7ನ ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಅವರು, ಮ್ಯಾಕ್ರಾನ್, ಯುಕೆ ಪಿಎಂ ರಿಷಿ ಸುನಕ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾದರು. ಭಾರತವು ಗ್ರೂಪ್ ಆಫ್ ಸೆವೆನ್ (G7) ಶೃಂಗಸಭೆಯಲ್ಲಿ ಒಂದು ಔಟ್ರೀಚ್ ದೇಶವಾಗಿ ಭಾಗವಹಿಸುತ್ತಿದೆ. ಜೂನ್ 13ರಿಂದ 15 ರವರೆಗೆ ಇಟಲಿಯ ಅಪುಲಿಯಾ ಪ್ರದೇಶದ ಐಷಾರಾಮಿ ಬೋರ್ಗೊ ಎಗ್ನಾಜಿಯಾ ರೆಸಾರ್ಟ್‌ನಲ್ಲಿ ಶೃಂಗಸಭೆ ನಡೆಯುತ್ತಿದೆ.